ನೋಡ್ರಪ್ಪೋ ಕಿಚ್ಚ ಸುದೀಪ್‌ ಬಿಗ್ ಬಾಸ್‌ ಪ್ರೋಮೋ ಶೂಟ್‌ನಲ್ಲಿದ್ದಾರೆ; ನಿಟ್ಟುಸಿರು ಬಿಟ್ಟ ವೀಕ್ಷಕರು!

Published : Jan 23, 2021, 12:10 PM ISTUpdated : Jan 23, 2021, 12:27 PM IST
ನೋಡ್ರಪ್ಪೋ ಕಿಚ್ಚ ಸುದೀಪ್‌ ಬಿಗ್ ಬಾಸ್‌ ಪ್ರೋಮೋ ಶೂಟ್‌ನಲ್ಲಿದ್ದಾರೆ; ನಿಟ್ಟುಸಿರು ಬಿಟ್ಟ ವೀಕ್ಷಕರು!

ಸಾರಾಂಶ

ಬಿಗ್ ಬಾಸ್‌ ರಿಯಾಲಿಟಿ ಶೋ ಆರಂಭದ ಬಗ್ಗೆ ಸುಳಿವು ಕೊಟ್ಟ ಬ್ಯುಸನೆಸ್‌ ಹೆಡ್‌ ಪರಮೇಶ್ವರ ಗುಂಡ್ಕಲ್....  

ಬಿಗ್ ಬಾಸ್‌ ರಿಯಾಲಿಟಿ ಶೋ ಒಂದೊಳ್ಳೆ ಮನೋರಂಜನೆಯ ಕಾರ್ಯಕ್ರಮ. ಪ್ರತಿ ವರ್ಷವೂ ತಪ್ಪದೆ ನಡೆಯುತ್ತಿದ್ದ ಈ ರಿಯಾಲಿಟಿ ಶೋ ಕೊರೋನಾ ವೈರಸ್‌ನಿಂದ 2020ರ ಸೀಸನ್‌ಗೆ ಬ್ರೇಕ್‌ ಬಿದ್ದಿತ್ತು, ಆದರೀಗ 2021ರಲ್ಲಿ ಸೀಸನ್‌ 8 ಪ್ರಾರಂಭವಾಗುವ ಸುಳಿವು ಸಿಕ್ಕಿದೆ. ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಶುರುವಾಗಿದೆ. ಈ ವಿಚಾರದ ಬಗ್ಗೆ ಕಲರ್ಸ್‌ ಕನ್ನಡ ಬ್ಯುಸನೆಸ್ ಹೆಡ್‌ ಪರಮೇಶ್ವರ್ ಗುಂಡ್ಕಲ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್ಡೇಟ್ ನೀಡಿದ್ದಾರೆ. 

ಹೌದು ಸ್ವಾಮಿ, ಬಿಗ್‌ಬಾಸ್ ಶುರುವಾಗ್ತಿದೆ, ದೊಡ್ಮನೆಗೆ ಯಾರ್ಯಾರ್ ಹೋಗ್ತಾರೆ..? 

ಬಿಗ್ ಬಾಸ್‌ ಸೀಸನ್‌ 8 ಪ್ರೋಮೋ ಶೂಟ್ ಶುರುವಾಗಿದೆ. ಪರಮೇಶ್ವರ್ ಹಾಗೂ ಸುದೀಪ್‌ ಸೀನ್ ಚರ್ಚೆ ಮಾಡುತ್ತಿರುವ ಫೋಟೋ ಅಪ್ಲೋಡ್ ಮಾಡಿ 'ಬಿಗ್ ಬಾಸ್ ಪ್ರೋಮೋ ಶೂಟ್' ಎಂದು ಬರೆದು ಕೊಂಡಿದ್ದಾರೆ. ಇದರ ಜೊತೆಗೆ ಸುದೀಪ್ ಮತ್ತೊಂದು ಫೋಟೋ ಶೇರ್ ಮಾಡಿ, 'ಫೆಬ್ರವರಿಯಲ್ಲಿ ಕನ್ನಡ ಬಿಗ ಬಾಸ್ ಲಾಂಚ್ ಕಾರ್ಯಕ್ರಮ ನಡೆಯಲಿದೆ,' ಎಂದು ಸುಳಿವು ನೀಡಿದ್ದಾರೆ.

ಒಂದು ವರ್ಷ ಸೆಲೆಬ್ರಿಟಿಗಳು, ಒಂದು ವರ್ಷ ಕಾಮನ್ ಮ್ಯಾನ್ ಹೀಗೆ ಇಷ್ಟು ವರ್ಷದ ಸೀಸನ್ ನಡೆದುಕೊಂಡು ಬಂದಿದೆ. ಆದರೆ ಆರಂಭದಿಂದಲೂ ಈ ವರ್ಷ ತುಂಬಾನೇ ಸ್ಪೆಷಲ್ ಆಗಿರುತ್ತದೆ ಎಂದು ಹೇಳುತ್ತಿದ್ದ ತಂಡ, ಯಾರನ್ನೆಲ್ಲಾ ಆಯ್ಕೆ ಮಾಡಿದೆ ಎಂದು ಕಾದು ನೋಡಬೇಕಿದೆ. ಲಾಕ್‌ಡೌನ್‌ ಅವಧಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ ಕೆಲವರ ಹೆಸರು ಸ್ಪರ್ಧೆಗೆ ಕೇಳಿ ಬರುತ್ತಿವೆ. 

ರಾಧಕ್ಕ, ಸೋನು ಗೌಡ, ಡ್ರೋನ್ ಪ್ರತಾಪ್; ಬಿಗ್ ಬಾಸ್ ಮನೆಗೆ ಹೋಗೋರು ಯಾರು? 

ಒಟ್ಟಿನಲ್ಲಿ ಬಿಗ್ ಬಾಸ್‌ ಮನೆ ಪ್ರವೇಶಿಸುವವರೆಗೂ ಯಾರೆಲ್ಲಾ ಸ್ಪರ್ಧಿಸಲಿದ್ದಾರೆ ಅಂತ ಮಾತ್ರ ಗೊತ್ತಾಗೋಲ್ಲ, ಕೆಲವೇ ದಿನಗಳಲ್ಲಿ ಪ್ರೋಮೋ ವಿಡಿಯೋ ರಿಲೀಸ್ ಆಗಲಿದೆ. ಶೋ ಭರಪೂರ ಮನೋರಂಜನೆ ನೀಡುವುದರಲ್ಲಿ ಅನುಮಾನವೇ ಇರೋಲ್ಲ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನೀವು ಇಲ್ಲಿ ಇರೋದಕ್ಕೆ ಲಾಯಕ್ಕೇ ಇಲ್ಲ: ವಿನಯ್​ ಗೌಡ ಫೋಟೋಗೇ ಬೆಂಕಿ ಇಟ್ಟ Bigg Boss ಆಕಾಂಕ್ಷಿ
ಕರ್ಣ ಸೀರಿಯಲ್‌ ಬಿಟ್ಟ ನಮ್ರತಾ ಗೌಡ ಕಿರಣ್‌ ಜೊತೆ ಕಾಣಿಸಿಕೊಂಡ್ರು.. ಅಚ್ಚರಿಯ ಈ ಬೆಳವಣಿಗೆ ರಹಸ್ಯವೇನು?