ಟಿಬೇಟಿಯನ್ ಹುಡುಗಿಗೆ ಅವಕಾಶ ಯಾಕ್ಕೊಡ್ಬೇಕು?; ರೇಖಾ ದಾಸ್ ಮನದಾಳದ ಮಾತು!

By Suvarna NewsFirst Published Jan 23, 2021, 11:18 AM IST
Highlights

ಪುತ್ರಿ ಸಾತ್ವಿಕಾ ಜೊತೆಗೆ ಟಾಕ್‌ ಶೋನಲ್ಲಿ ಭಾಗಿಯಾಗಿದ್ದ ನಟಿ ರೇಖಾ ದಾಸ್. ಕನ್ನಡತಿ ಆಗಿದ್ದರೂ ಅವಕಾಶ ಪಡೆಯೋದು ಎಷ್ಟು ಕಷ್ಟ ಗೊತ್ತಾ? 
 

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರೀತಿ ಶನಿವಾರ ಹಾಗೂ ಭಾನುವಾರ ಪ್ರಸಾರವಾಗುವ 'ಚಾಟ್ ಕಾರ್ನರ್‌' ಮಾತುಕತೆ ಕಾರ್ಯಕ್ರಮದಲ್ಲಿ ಅದ್ಭುತ ಕಲಾವಿದೆ ರೇಖಾ ದಾಸ್ ಹಾಗೂ ಪುತ್ರಿ ಸಾತ್ವಿಕಾ ಭಾಗಿಯಾಗಿದ್ದರು. ನಿರೂಪಕ ಚಂದನ್ ಜೊತೆ ರೇಖಾ ಬಣ್ಣದ ಲೋಕದ ಆರಂಭದ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ.

ತಮಿಳುನಾಡಿನಲ್ಲಿ ಕನ್ನಡದ ನಟಿಗೆ ಡಾಕ್ಟರೇಟ್! 

ಸಿನಿಮಾ ಆಫರ್‌ ಸುಲಭವಲ್ಲ:
'ನನ್ನ ಸ್ನೇಹಿತರ ಸಹಾಯದಿಂದ ನನ್ನ ಮಗಳಿಗೆ ಆಫರ್ ಸಿಕ್ತು. ನಾನು ಹೇಳಿದ ತಕ್ಷಣವೇ ನನ್ನ ಮಾತಿಗೆ ಗೌರವ ಕೊಟ್ಟು ಅವಕಾಶ ನೀಡಿದರು. ಆದರೆ ನನ್ನ ಆರಂಭ ಹೀಗೆ ಇರಲಿಲ್ಲ. ಮೊದಲು ನಾಲ್ಕು ವರ್ಷ ನನಗೆ ಕನ್ನಡವೂ ಬರ್ತಾ ಇರಲಿಲ್ಲ. ಯಾರು ಏನೇ ಬೈದರೂ ಅರ್ಥ ಆಗುತ್ತಿರಲಿಲ್ಲ, ಆಗ ಇಂಡಸ್ಟ್ರಿಯಲ್ಲಿ ನನಗೆ ಸಿಕ್ಕಾಪಟ್ಟೆ ಅವಮಾನ ಮಾಡಿದ್ದ ಘಟನೆಗಳಿವೆ.  ನನ್ನ ಗುರುಗಳು ನೀಲಕಂಠ ಅಡಿಗ ಅವರ ಸಹಾಯದಿಂದ ನನಗೆ ಕೆಲವೊಂದು ಅವಕಾಶಗಳು ಸಿಕ್ತು. ನಾಯಕಿಯರ ಸ್ನೇಹಿತೆಯಾಗಿ ಸಿನಿಮಾಗಳಲ್ಲಿ ಅವಕಾಶ ಪಡೆದುಕೊಂಡೆ,' ಎಂದು ಮಾತನಾಡಿದ್ದಾರೆ.

ನಟ ಓಂ ಪ್ರಕಾಶ್- ರೇಖಾದಾಸ್ ಪುತ್ರಿ ಶ್ರಾವ್ಯಾ ಇಷ್ಟೊಂದು ಹಾಟ್ ಆದ್ರಾ? 

ನಾನು ಟಿಬೇಟಿಯನ್ ಅಲ್ಲ:
'ನಾನು ಕನ್ನಡ ಹುಡುಗಿಯಲ್ಲವೆಂದು ಹೇಳಿ ಎಲ್ಲರೂ ನನ್ನನ್ನು ಹಿಂದೆ ತಳ್ಳುತ್ತಿದ್ದರು. ನಾನು ಕನ್ನಡತಿ. ಹುಟ್ಟಿ ಬೆಳೆದದ್ದು ಇಲ್ಲೇ. ಆದರೆ ಏನೋ ನನಗೆ ನಾರ್ಥ್ ಇಂಡಿಯನ್ ಲುಕ್ ಇದೆ ಅಂತ ಬೇಡ ಅನ್ನುತ್ತಿದ್ದರು. 39 ವರ್ಷ ಹಿಂದೆ ನಡೆದ ಘಟನೆಗಳಿವು, ಈ ಅವಮಾನ ಬೇಕಾ? ಚಿತ್ರರಂಗ ಬೇಡ ಬಾ ಅಂತ ಅಮ್ಮ ಕರೆದುಕೊಂಡು ಹೋದರು. ಆಗ ನಾನು ಇಲ್ಲ ನಾನು ಕನ್ನಡ ಸಿನಿಮಾದಲ್ಲೇ ಮಾಡಬೇಕು, ಇವತ್ತು ಬೈತಾರೆ ನಾಳೆ ಅವರೇ ಹೊಗಳುತ್ತಾರೆ ಎಂಬ ಛಲದೊಂದಿಗೆ ಮತ್ತೆ ಸಿನಿಮಾ ಮಾಡೋಕೆ ಶುರು ಮಾಡಿದೆ. ಕ್ಯಾಮೆರಾ ಎದುರು ಎಲ್ಲರಿಗೂ ಡೈಲಾಗ್ ಇರುತ್ತಿತು ನನಗೆ ಮಾತ್ರ ಇರುತ್ತಿರಲಿಲ್ಲ. ಒಂದು ಅವಕಾಶ ಕೊಡಿ ನಾನು ಡೈಲಾಗ್‌ ಹೇಳ್ತಿನಿ ಅಂತ ಕೇಳಿದೆ, ಆಗ ಡೈರೆಕ್ಟರ್ ನನಗೊಂದು ಸವಾಲು ಹಾಕಿದರು. 'ನೀನು ಡೈಲಾಗ್ ಹೇಳಿದರೆ ಮುಂದೆ ನಿಲ್ಲುವಂತೆ ಮಾಡ್ತಿನಿ,' ಅಂದರು. ಅಲ್ಲಿದ್ದ ಹುಡುಗನ ಸಹಾಯ ಪಡೆದು ಆ ಸಾಲಿನ ಅರ್ಥ ತಿಳಿದುಕೊಂಡೆ. ಒಂದೇ ಟೇಕ್‌ನಲ್ಲಿ ಡೈಲಾಗ್ ಹೇಳಿದೆ. ಅಲ್ಲಿದ್ದ ಪ್ರತಿಯೊಬ್ಬರೂ ನನಗೆ ಚಪ್ಪಾಳೆ ತಟ್ಟಿದರು. ಯಾರೆಲ್ಲಾ ನನಗೆ ಅವಮಾನ ಮಾಡಿದರೋ, ಅವರೇ ನನಗೆ ಕರೆ ಮಾಡಿ ಅವಕಾಶ ಕೊಟ್ಟರು,'ಎಂದು ರೇಖಾ ಕಷ್ಟ ದಿನಗಳ ಬಗ್ಗೆ ಹಂಚಿಕೊಂಡಿದ್ದಾರೆ.

 

click me!