
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪ್ರಸಾರವಾಗುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿ ಪ್ರೇಕ್ಷಕರ ಚ್ಚು ಮೆಚ್ಚಿನ ಧಾರಾವಾಹಿಯಾಗಿದೆ. ವಿಭಿನ್ನವಾದ ಕಥೆ, ನಿರೂಪಣೆಯಿಂದ ನಂಬರ್ 1 ಸ್ಥಾನದಲ್ಲಿದೆ. 45 ವರ್ಷದ ಅನಿರುದ್ಧ್, 21 ವರ್ಷದ ಅನು ನಡುವೆ ಶುರುವಾಗುವ ಪ್ರೀತಿ, ಅವರಿಬ್ಬರ ನಡುವೆ ಇರುವ ಎರಡು ದಶಕಗಳ ನಡುವಿನ ಅಂತರ ಇವೆಲ್ಲವೂ ಕಾಮನ್ ಆದರೂ ಕಥೆಯಲ್ಲಿ ತಾಜಾತನವಿದೆ. ನಿರೂಪಣೆ ಅದ್ಭುತವೆನಿಸುವಂತಿದೆ. ಹಾಗಾಗಿ ಪ್ರತಿದಿನ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಗಿದೆ.
‘ಜೊತೆ ಜೊತೆಯಲಿ’ ಅನಿರುದ್ಧ್ ಒಂದು ದಿನದ ಸಂಭಾವನೆ ಇಷ್ಟೊಂದಾ?
ಅನು ಅನಿರುದ್ಧ್ ಗೆ ಸ್ಲಾಮ್ ಬುಕ್ ಬರೆಯಲು ಕೊಟ್ಟಿದ್ದಾಳೆ. ಅದರಲ್ಲಿ ಎಲ್ಲ ಕಾಲಂನನ್ನು ಅನಿರುದ್ಧ್ ತುಂಬುತ್ತಾ ಬರುತ್ತಾರೆ. ಅದರಲ್ಲಿ Marital status ಎನ್ನುವ ಕಾಲಂ ಬಂದಾಗ ಅನಿರುದ್ಧ್ ಪ್ಯಾನಿಕ್ ಆಗುತ್ತಾರೆ. ಸಿಟ್ಟು, ಬೇಸರ, ಏನೋ ಹಳೆ ನೆನಪು ಕಾಡಿದಾಗ ಆಗುವ ಸಂಕಟ ಎಲ್ಲವನ್ನೂ ಅನುಭವಿಸುತ್ತಾರೆ. ಅಂದರೆ ಮದುವೆ ಎಂಬ ಪದ ಅನಿರುದ್ಧ್ ಗೆ ಜಿಗುಪ್ಸೆ ಹುಟ್ಟಿಸುವಂತಿದೆ.
‘ಜೊತೆ ಜೊತೆಯಲಿ’ ಆರ್ಯವರ್ಧನ್ ಗೆ ಜೋಡಿಯಾದ ಅನು; ಯಾರಿವರು?
ಮದುವೆ ಅಂತ ಬಂದಾಗ ಬ್ಯಾಕ್ ಗ್ರೌಂಡಲ್ಲಿ ಬರುವ ಮ್ಯೂಸಿಕ್, ಫಾಸ್ಟಾಗಿ ಓಡುವ ಫ್ಲಾಶ್ ಬ್ಯಾಕ್ ವಿಡಿಯೋ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದೆ. ಹಾಗಾದ್ರೆ ಅನಿರುದ್ಧ್ ಗೆ ಈಗಾಗಲೇ ಮದುವೆ ಆಗಿದೆಯಾ? ದಾಂಪತ್ಯ ಮುರಿದು ಬಿದ್ದಿದೆಯಾ? ಲವ್ ಫೆಲ್ಯೂರ್ ಆಗಿರಬಹುದಾ? ಎಂಬ ಕುತೂಹಲ ಮೂಡಿಸಿದೆ.
ಏನಪ್ಪಾ! ಆರ್ಯವರ್ಧನ್ ಗೆ ಅನು ಮಾತ್ರ ಅಂದ್ಕೊಂಡ್ರೆ ಊರ್ ಹುಡ್ಗಿರೆಲ್ಲಾ ಫ್ಯಾನ್ಸ್!
ಇನ್ನೊಂದು ಕಡೆ ಸ್ಲಾಮ್ ಬುಕ್ ಬರೆದುಕೊಡುತ್ತಾರೆಂದು ಅನು ಕನಸು ಕಾಣುತ್ತಿದ್ದು ಅದರಲ್ಲಿನ ಮ್ಯಾರಿಟಲ್ ಸ್ಟೇಟಸ್ ಏನಾಗಿರಬಹುದು? ಎಂದು ಯೋಚಿಸುತ್ತಾಳೆ. ಅನು ಸ್ನೇಹಿತೆ ರಮ್ಯಾ, ಅನಿರುದ್ಧ್ ಸರ್ ಗೆ ಮದುವೆಯಾಗಿರಬಹುದಾ ಎಂದು ಹೇಳಿದ್ದು ಅನು ತಲೆಯಲ್ಲಿ ಹುಳ ಬಿಟ್ಟಂತಾಗಿದೆ. ಆರ್ಯವರ್ಧನ್ ಮೇಲೆ ಅನುಗೆ ಮನಸಾಗಿದ್ದು ಮದುವೆಯಾಗಿರಬಹುದು ಎಂಬುದನ್ನು ಅರಗಿಸಿಕೊಳ್ಳಲು ಕಷ್ಟವಾಗಿದೆ. ಪ್ರೇಕ್ಷಕರಿಗೂ ಕಷ್ಟವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.