
ಕಲರ್ ಫುಲ್ ಹೌಸ್‌ಗೆ ಕಲರ್ ಕಲರ್ ಕನಸು ಹೊತ್ತು ಬಂದ ನಟ-ನಟಿಯರಿಗೆ ಕೇಳಲಾಗದ ಪದವೆಂದರೆ 'Nomination'. ವಾರಕ್ಕೊಬ್ಬರು ಕ್ಯಾಪ್ಟನ್ ಆದರೆ ಇನ್ನೊಬ್ಬರು ನಾಮಿನೇಟ್ ಆಗುತ್ತಾರೆ. ಈ ಪ್ರಕ್ರಿಯೆಯಲ್ಲಿ ಯಾರು ಕ್ಯಾಪ್ಟನ್? ಯಾರು ಮನೆಯಿಂದ ಔಟ್? ಇಲ್ಲಿದೆ ನೋಡಿ.
ಬಿಗ್ ಬಾಸ್ ಮನೆಯಲ್ಲಿ ವಾರಕ್ಕೊಬ್ಬರು ಕ್ಯಾಪ್ಟನ್ ಆಗಿ ಆಯ್ಕೆ ಆಗುತ್ತಾರೆ ಮತ್ತೊಬ್ಬರು ನಾಮಿನೇಟ್ ಆಗುತ್ತಾರೆ. ಇದನ್ನು ವಿಭಿನ್ನ ಟಾಸ್ಕ್ ಮೂಲಕ ಬಿಗ್ ಬಾಸ್ ನಡೆಸಿಕೊಟ್ಟರು. ಮನೆ ಮಂದಿಯೆಲ್ಲಾ ಒಮ್ಮತದಿಂದ ಮೂವರನ್ನು ಸೆಲೆಕ್ಟ್ ಮಾಡಬೇಕಿತ್ತು. ಅವರು ಮನೆಯ ಗಾರ್ಡನ್ ಏರಿಯಾದಲ್ಲಿ ಇರುವ ಮೂರು ಪೆಟ್ಟಿಗೆ ಮುಂದೆ ನಿಂತು ಬೀಗ ಒಡೆಯಬೇಕು. ಈ ಪ್ರಕ್ರಿಯೆಯಲ್ಲಿ ಕುರಿ ಪ್ರತಾಪ್, ಭೂಮಿ ಶೆಟ್ಟಿ ಹಾಗೂ ಕಿಶನ್ ಆಯ್ಕೆಯಾದರು.
ಬಿಗ್ ಬಾಸ್ ಮನೆಯಲ್ಲಿ ಬಯಲಾಯ್ತು ಚೈತ್ರಾ ವಾಸುದೇವನ್ ಮದುವೆ ಗುಟ್ಟು!
ಈ ವೇಳೆ ಮೂರನೇ ಪೆಟ್ಟಿಗೆಯಲ್ಲಿ ನಿಂತಿದ್ದ ಪ್ರತಾಪ್ ಪೆಟ್ಟಿಗೆ ಮೇಲಿದ್ದ ಹಸಿರು ಹುಳವನ್ನು ನಂಬಿ ಶುಭ ಸೂಚನೆಯೆಂದು 'ಜೈ ಚಾಮುಂಡೇಶ್ವರಿ' ಎಂದೇಳುತ್ತಾ ಪೆಟ್ಟಿಗೆ ತೆರೆದರು. ಅದರಲ್ಲಿ ಕೈಗೆ ಸಿಕ್ಕಿದ್ದು ಮಾತ್ರ 'N-Nominated' ಎಂದು. ಎರಡನೇ ಪೆಟ್ಟಿಗೆ ತೆಗೆದ ಭೂಮಿ ಶೆಟ್ಟಿ ಅಲಿಯಾಸ್ ರಾಯಲ್ ಶೆಟ್ಟಿ ಮನೆಯ ಕ್ಯಾಪ್ಟನ್ ಆಗಿ ಆಯ್ಕೆ ಆದರು. ಹಾಗೂ ಕಿಶನ್ ಮೊದಲ ಪೆಟ್ಟಿಗೆ ತೆರೆದು ಇಮ್ಯೂನಿಟಿ ಪಡೆದುಕೊಂಡರು.
ಮೊದಲನೇ ವಾರಕ್ಕೆ ನೇರವಾಗಿ ನಾಮಿನೇಟ್ ಆದ ಕುರಿ ಪ್ರತಾಪ್ ಯಾವುದೇ ಬೇಸರವಿಲ್ಲದೇ ಒಪ್ಪಿಕೊಂಡರು. ಕುರಿ ಮುಖದಲ್ಲಿ ನಗು ನೋಡಿ ರವಿ ಬೆಳಗೆರೆ ಹಾಸ್ಯ ಚಟಾಕಿ ಹಾರಿಸಿದರು. 'ನಿನಗೆ N ಎಂದು ಬರಲು ಕಾರಣವಿದೆ. N ಅಂದ್ರೆ ನಾನ್-ವೆಜ್. ಕುರಿ ನೀನು ನಾನ್ ವೆಜ್ ಅದಿಕ್ಕೆ' ಎಂದು ತಮಾಷೆ ಮಾಡಿದರು.
BB7:ಕಾಗೆ ಹಾರಿಸೋ ಕಿನ್ನರಿಗ್ಯಾಕೆ 'Royal Shetty'ಪಟ್ಟ, ಬೀಡಿ ತಿನ್ನೋ ಚಟ?
ಮೊದಲನೇ ನಾಮಿನೇಟ್ ಆದ ಪಟ್ಟಿ:
- ರವಿ ಬೆಳಗೆರೆ
- ಚೃತ್ರಾ ವಾದುವೇವನ್
- ಚೈತ್ರಾ ಕೊಟ್ಟೂರ್
- ರಾಜು ತಾಳಿಕೋಟೆ
- ಕುರಿ ಪ್ರಥಾಪ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.