
ಸ್ಯಾಂಡಲ್‌ವುಡ್ ಯಂಗ್ ಮ್ಯಾನ್, ಚಾರ್ಮಿಂಗ್ ಹೀರೋ, ಇಂಡಿಯನ್ ಕ್ರಿಕೆಟರ್ ಎಂದೆಲ್ಲಾ ಪಟ್ಟ ಗಿಟ್ಟಿಸಿಕೊಂಡಿರುವ ಎಸ್. ನಾರಾಯಣ ಪುತ್ರ ಪಂಕಜ್ ನಾರಾಯಣ್ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಬಳಗವನ್ನೇ ಹೊಂದಿದ್ದಾರೆ.
BB7: 'ಅಗ್ನಿಸಾಕ್ಷಿ' ಮಾಸ್ಟರ್‌ಮೈಂಡ್ ಚಂದ್ರಿಕಾಗೆ ಹುಡುಗನನ್ನು ಹುಡುಕೋದೆ ಬೇಡ್ವಂತೆ!
ಬಿಗ್ ಬಾಸ್ ಆರಂಭಕ್ಕೂ ಮುನ್ನ ಸ್ಪರ್ಧಿಗಳ ಪಟ್ಟಿ ಬಗ್ಗೆ ಸಾಕಷ್ಟು ಊಹಾ-ಪೋಹಾ ಸುದ್ದಿಗಳು ಹರಿದಾಡುತ್ತಿದ್ದು ಅದರಲ್ಲಿ ಪಂಕಜ್ BB ಮನೆಗೆ ಪ್ರವೇಶಿಸುತ್ತಾರೆಂದು ಹರಿದಾಡುತ್ತಿತ್ತು, ಅಷ್ಟೇ ಏಕೆ ಯಾವುದೇ ಖಚಿತ ಮಾಹಿತಿ ಇಲ್ಲದಿದ್ದರೂ ಅಭಿಮಾನಿಗಳು ಫ್ಯಾನ್ ಪೇಜ್ ಕ್ರಿಯೇಟ್ ಮಾಡಿದ್ದರು. ಇದಪ್ಪಾ ಅಭಿಮಾನ ಅಂದ್ರೆ!
ಅಕ್ಟೋಬರ್ 13 ರಂದು ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮ ನಡೆದಿದ್ದು 18 ಸ್ಪರ್ಧಿಗಳು ಮನೆ ಪ್ರವೇಶಿಸಿದ್ದರು. ಕೊನೆ ಸ್ಪರ್ಧಿಯವರೆಗೂ ಪಂಕಜ್ ಹೋಗುತ್ತಾರಾ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಬೇಸರ ತಂದಿದೆ. ಕೆಲವೊಂದು ಪೇಜ್‌ನಲ್ಲಿ 'we want pankaj' ಎಂದು ಬಿಗ್ ಬಾಸ್‌ಗೆ ಬೇಡಿಕೆ ಇಡುತ್ತಿದ್ದಾರೆ. ಮನೆಯೊಳಗೆ ಪಂಕಜ್ ಹೋದರೂ, ಹೋಗದಿದ್ದರೂ ಟ್ರೋಲ್ ಪೇಜ್‌ಗಳಿಗೆ ಆಹಾರವಾಗುವುದಂತೂ ಗ್ಯಾರಂಟಿ.
'ಚೈತ್ರದ ಚಂದ್ರಮ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಪಂಕಜ್ ಸದ್ಯಕ್ಕೆ ಬಾಕ್ಸ್ ಆಫೀಸ್ ಸುಲ್ತಾನ್ ಅಭಿನಯದ 'ಒಡೆಯ' ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.