ವೀಕೆಂಡ್ ವಿತ್ ರಮೇಶ್ ಸೀಸನ್ 3ನೇ ಅತಿಥಿಯಾಗಿ ಖ್ಯಾತ ವೈದ್ಯರಾದ ಡಾ. ಸಿ ಎನ್ ಮಂಜುನಾಥ್ ಕಾಣಿಸಿಕೊಳ್ಳುತ್ತಿದ್ದಾರೆ. ಅವರನ್ನು ವೀಕೆಂಡ್ ಕುರ್ಚಿಯಲ್ಲಿ ನೋಡಲು ಪ್ರೇಕ್ಷಕರು ಸಂತಸ ಪಡುತ್ತಿದ್ದಾರೆ.
ವೀಕೆಂಡ್ ವಿತ್ ರಮೇಶ್ ಸೀಸನ್ 5 ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಈಗಾಗಲೇ ಇಬ್ಬರು ಅತಿಥಿಗಳು ವೀಕೆಂಡ್ ಕುರ್ಚಿ ಏರಿದ್ದಾರೆ. ಮೊದಲ ಅತಿಥಿಯಾಗಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಕಾಣಿಸಿಕೊಂಡಿದ್ದರು. ಎರಡನೇ ಅತಿಥಿ ಖ್ಯಾತ ಡಾನ್ಸರ್, ನೃತ್ಯ ನಿರ್ದೇಶಕ, ನಿರ್ದೇಶಕ, ನಟ ಪ್ರಭುದೇವ ಕಾಣಿಸಿಕೊಂಡಿದ್ದರು. 3ನೇ ವಾರದ ಅತಿಥಿ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಈ ವಾರದ ಅತಿಥಿಯಾಗಿ ಖ್ಯಾತ ವೈದ್ಯ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿರುವ ಡಾ.ಸಿ.ಎನ್. ಮಂಜುನಾಥ್ ಕಾಣಿಸಿಕೊಳ್ಳುತ್ತಿದ್ದಾರೆ. ವೀಕೆಂಡ್ ಕುರ್ಚಿಯಲ್ಲಿ ಡಾ.ಸಿ ಎನ್ ಮಂಜುನಾಥ್ ಅವರನ್ನು ನೋಡಿ ಪ್ರೇಕ್ಷಕರು ಪುಲ್ ಖುಷ್ ಆಗಿದ್ದಾರೆ.
ಡಾ.ಸಿ ಎನ್ ಮಂಜುನಾಥ್ ಅವರ ಸಂಚಿಕೆ ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಜೀ ಕನ್ನಡ ವಾಹಿನಿ ತನ್ನ ಸಾಮಾಜಿಕ ಜಾಲತಾಣದ ಅಧಿಕೃತ ಪೇಜ್‌ನಲ್ಲಿ ಗೆಸ್ಟ್ ಯಾರೆಂದು ಗೆಸ್ ಮಾಡಿ ಎಂದು ಪೋಸ್ಟ್ ಶೇರ್ ಮಾಡಿದ್ದಾರೆ. ಪೋಸ್ಟ್ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳು ಸರಿಯಾಗಿ ಕಾಮೆಂಟ್ ಮಾಡಿ, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಡಾ.ಸಿ ಎನ್ ಮಂಜುನಾಥ್ ಸಂಚಿಕೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಮಗನ ಸಾವು ನೆನೆದು ಭಾವುಕರಾದ ಪ್ರಭುದೇವ; ಈ ಬಗ್ಗೆ ಮಾತಾಡಲು ನಿರಾಕರಿಸಿದ ಡಾನ್ಸರ್
ಡಾ. ಸಿ.ಎನ್ ಮಂಜುನಾಥ್ ಮಾಜಿ ಪ್ರಧಾನಿ ದೇವೇಗೌಡರ ಅಳಿಯ. ಇವರು ತಮ್ಮ ವ್ಯಕ್ತಿತ್ವ, ಕೆಲಸ, ಶಿಸ್ತು, ಸೂಕ್ತ ನಿರ್ದೇಶನ, ಮಾರ್ಗದರ್ಶನ ಸೇರಿದಂತೆ ಉತ್ತಮ ಗುಣಗಳಿಂದ ಗುರುತಿಸಿಕೊಂಡಿರುವ ನೆಚ್ಚಿನ ನಿರ್ದೇಶಕರು. ವೈದ್ಯಕೀಯ ಕ್ಷೇತ್ರಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ವೀಕೆಂಡ್ ವಿತ್ ಕಾರ್ಯಕ್ರಮಕ್ಕೆ ಕೇವಲ ಸಿನಿಮಾ ಸಾಧಕರನ್ನು ಮಾತ್ರ ಕರೆತಾರುತ್ತಾರೆ, ಕನ್ನಡ ಮಾತಾಡೋಕ್ಕೆ ಬರದೇ ಇರುವವರನ್ನು ಕರೆತರುತ್ತೀರಾ ಎಂದು ಪ್ರೇಕ್ಷಕರು ಬೇಸರ ಹೊರಹಾಕುತ್ತಿದ್ದರು. ಆದರೆ ಈಗ ವೀಕೆಂಡ್ ಕುರ್ಚಿಯಲ್ಲಿ ಡಾ.ಸಿ ಎನ್ ಮಂಜುನಾಥ್ ಅವರನ್ನು ನೋಡಿ ಪ್ರೇಕ್ಷಕರು ಫುಲ್ ಖುಷ್ ಆಗಿದ್ದಾರೆ.
ಜೀ ಕನ್ನಡ ವಾಹಿನಿ ಶೇರ್ ಮಾಡಿರುವ ಪೋಸ್ಟ್‌ಗೆ ಅನೇಕರು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ. 'ಮಾಜಿ ಪ್ರಧಾನಿ ದೇವೇಗೌಡ ಅವರ ಅಳಿಯ Dr.ಮಂಜುನಾಥ್ ಸರ್', 'ನನ್ ಅಪ್ಪಾಜಿ ಗೆ ಅಂಜಿಯೋಗ್ರಾಮ್ ಮಾಡಿದ ಪಾಣ್ಯಾತ್ಮ', 'Dr ಮಂಜುನಾಥ್ ಸಾರ್, ಕನ್ನಡಿಗರ ಹೆಮ್ಮೆ...ಸೂಪರ್ ಸಾರ್'. ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಭುದೇವ ನೆಚ್ಚಿನ ಕನ್ನಡ ಹೀರೋ ಇವರೆ: ವೀಕೆಂಡ್ ಕಾರ್ಯಕ್ರಮದಲ್ಲಿ ಇಂಟ್ರಸ್ಟಿಂಗ್ ವಿಚಾರ ಬಹಿರಂಗ
ಈ ಸಂಚಿಕೆ ನೋಡಲು ಪ್ರೇಕ್ಷಕರು ಭಾರಿ ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ ಅವರ ಜೀವನ, ಅವರ ಬಗ್ಗೆ ಇಂಟ್ರಸ್ಟಿಂಗ್ ವಿಚಾರಗಳನ್ನು ತಿಳಿದುಕೊಳ್ಳಲು ಶನಿವಾರ ಮತ್ತು ಭಾನುವಾರದ ವರೆಗೂ ಕಾಯಲೇ ಬೇಕಿದೆ.