
ಕನ್ನಡ ಕಿರುತೆರೆ ನಟಿ ಅಮೃತಾ ರಾಮಮೂರ್ತಿ ಸೀರಿಯಲ್ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಅಗಿದ್ದಾರೆ. ಕೊರೋನಾ ಲಾಕ್‌ಡೌನ್ ಸಮಯದಿಂದ ಹಲವು ಬ್ರಾಂಡ್‌ಗಳ ಜೊತೆ ಸೇರಿಕೊಂಡು ಪ್ರಮೋಷನ್ ಮಾಡಿದರು. ಕೆಲವೊಬ್ಬರಿಂದ ಹಣ ಪಡೆಯದೆ ಪ್ರಚಾರ ಮಾಡಿಕೊಟ್ಟಿದ್ದಾರೆ, ಕೆಲವರಿಂದ ಹಣ ಪಡೆದು ಪ್ರಚಾರ ಮಾಡಿದ್ದಾರೆ. ಇದೇ ನಿಮ್ಮ ದುಡಿಮೆ, ಶೋಕಿ ಎಂದು ಕೊಂಕು ಮಾಡುತ್ತಿದ್ದವರಿಗೆ ಅಮೃತಾ ಸ್ಪಷ್ಟನೆ ನೀಡಿದ್ದಾರೆ.
ಪ್ರೆಗ್ನೆನ್ಸಿ ಸಮಯದಲ್ಲಿ ಸುಮಾರು ಸೀರೆಗಳು ಕೋಲಾಬೋರೆಷನ್ ಬಂತು. ಎಲ್ಲರೂ ಸೀರೆ ಕೊಟ್ಟು ಕಳುಹಿಸುತ್ತಾರೆ ಅದನ್ನು ನಾನು ಪ್ರಮೋಟ್ ಮಾಡಬೇಕಿತ್ತು ಅದಕ್ಕೆ ಹಣ ಕೊಡುತ್ತಿದ್ದರು. ಎಲ್ಲಾ ಮಹಿಳಾ ಉದ್ಯಮಿಗಳು ಸಂಪರ್ಕ ಮಾಡುತ್ತಿದ್ದರು ಹಲವರಿಗೆ ಫ್ರೀ ಆಗಿ ಮಾಡಿಕೊಟ್ಟಿದ್ದೀನಿ ಆದರೆ ಕರ್ನಾಟಕದಿಂದ ಹೊರಗಡೆ ಇರುವವರುಗೆ ಚಾರ್ಚ್ ಮಾಡಿದ್ದೀನಿ. ನಾನು ಒಂದು ಸೀರೆ ಪ್ರಮೋಟ್ ಮಾಡಿಕೊಟ್ಟರೆ ಅವರಿಗೆ 10-15 ಸೀರೆಗಳು ವ್ಯಾಪಾರ ಆಗುತ್ತಿತ್ತು. ಇವತ್ತಿಗೆ ನಾನು ಯಾರಿಂದಲೂ ಒಂದು ರೂಪಾಯಿ ತೆಗೆದುಕೊಳ್ಳುವುದಿಲ್ಲ ನನ್ನ ಖುಷಿಗೆ ಮಾಡುವುದು. ಸೋಷಿಯಲ್ ಮೀಡಿಯಾ ನನಗೆ ಬದುಕು ಕೊಡುತ್ತಿದೆ ಎಷ್ಟೋ ಜನರಿಗೆ ನನ್ನಿಂದ ಸಹಾಯ ಕೂಡ ಆಗಿದೆ. ನಾನು ಶೋಕಿಗೆ ಇದನ್ನು ಮಾಡುತ್ತಿರುವುದು ಎಂದು ಅದೆಷ್ಟೋ ಜನ ಪ್ರೆಗ್ನೆಂಟ್ ಇದ್ದಾಗ ಮಾತನಾಡಿದ್ದರು. ನನ್ನ ಜರ್ನಿ ಏನು ಎಂದು ನನಗೆ ಗೊತ್ತಿದೆ ಎಲ್ಲಿಯೂ ಹೇಳಿಕೊಳ್ಳುವ ಅಗತ್ಯವಿಲ್ಲ ಎಂದು ಕಲಾಮಾಧ್ಯಮ ಚಾನೆಲ್ ಸಂದರ್ಶನದಲ್ಲಿ ಅಮೃತಾ ಮಾತನಾಡಿದ್ದಾರೆ.
ಬೇಕಿದ್ರೆ ಇನ್ನೂ ಬಯ್ಯಿರಿ, ಟ್ರೋಲ್ ಮಾಡಿ ನಾನು ನೋಡ್ಕೊಂಡು ನಗುತ್ತೀನಿ ಅಷ್ಟೇ: ನಿವೇದಿತಾ ಗೌಡ ಬೋಲ್ಡ್ ಉತ್ತರ
ರಘು ಮತ್ತು ನನಗೆ ತುಂಬಾ ಜೋಡಿ ಶೋಗಳ ಆಫರ್‌ಗಳು ಬಂದಿದೆ ಅದರೆ ನಾವು ಅದನ್ನು ಒಪ್ಪಿಕೊಂಡಿಲ್ಲ. ಪ್ರತಿ ವರ್ಷ ಆಫರ್ ಬರುತ್ತದೆ ಒಪ್ಪಿಕೊಳ್ಳುವುದಿಲ್ಲ. ಗಂಡ ಹೆಂಡತಿ ನಡವೆ ಇರುವುದು ನಮ್ಮ ನಡುವೆನೇ ಇರಬೇಕು ಅದನ್ನು ಪಬ್ಲಿಕ್ ಮಾಡಬಾರದು ಅನ್ನೋದು ನಮ್ಮ ನಿರ್ಧಾರ. ಎಷ್ಟೇ ಎಮೋಷನಲ್ ಆಗಿ ಬಂದರೂ ನಮ್ಮ ನಮ್ಮ ಜೀವನದ ಬಗ್ಗೆ ಎಲ್ಲಿಯೂ ಬಿಟ್ಟು ಕೊಡಬಾರದು. ಒಂದು ಬ್ಯುಸಿನೆಸ್‌ಗೆ ಕೈ ಇಟ್ಟರು ಅದರಿಂದ ಒಡೆತ ಬಿತ್ತು ಆಗ ಸೋಷಿಯಲ್ ಮೀಡಿಯಾದಲ್ಲಿ ಹೆಜ್ಜೆ ಇಡಲು ಶುರು ಮಾಡಿದ್ದೆ. ಕೆಲವು ಶೋಗಳಲ್ಲಿ ಹೇಳಿಕೊಂಡಿದ್ದಾರೆ ನನ್ನಿಂದ ಅವಳು ಕೆಲಸ ಮಾಡಲು ಶುರು ಮಾಡಿದಳು ಎಂದು. ತಲೆ ಕೆಡಿಸಿಕೊಳ್ಳಬೇಡ ಈಗ ದುಡಿಯುವ ವಯಸ್ಸು ಕಷ್ಟ ಪಟ್ಟು ದುಡಿದು ಚೆನ್ನಾಗಿ ಬೆಳೆಯೋಣ ಅಂತ ರಘುಗೆ ಹೇಳಿದ್ದೀನಿ ಎಂದು ಅಮೃತಾ ಹೇಳಿದ್ದಾರೆ.
ಹೊಗೇನಕಲ್ ಜಲಪಾತದಲ್ಲಿ ಬಿದ್ದ ಜಯಮಾಲಾರನ್ನು ಉಳಿಸಿದ್ದು ರಾಜ್‌ಕುಮಾರ್; ಸತ್ತೇ ಹೋಗುತ್ತಿದ್ದೆ ಎಂದ ನಟಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.