ಲಕ್ಷ್ಮೀ ನಿವಾಸ: ದುಡ್ಡು ಕೊಡಲು ಬಂದ ಚೆಲುವಿಗೆ ಹೀಗೆ ಹೇಳೋದಾ ವೀಣಕ್ಕ?

By Bhavani Bhat  |  First Published Sep 5, 2024, 12:18 PM IST

ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಚೆಲುವಿ ಮದುವೆಯಾಗಿ ತುಂಬು ಕುಟುಂಬಕ್ಕೆ ಬಂದಿದ್ದಾಳೆ. ಅವಳು ಮನೆ ಖರ್ಚಿಗೆ ಅಂತ ದುಡ್ಡು ಕೊಡೋಕೆ ಬಂದ್ರೆ ವೀಣಕ್ಕ ಹೀಗೆ ಹೇಳೋದಾ?


ಲಕ್ಷ್ಮೀ ನಿವಾಸ ಸೀರಿಯಲ್ ಟಿಆರ್‌ಪಿಯಲ್ಲಿ ಟಾಪ್ 5 ಸ್ಥಾನ ಬಿಟ್ಟು ಹೋಗಿಲ್ಲ. ಮಿಡಲ್ ಕ್ಲಾಸ್ ಫ್ಯಾಮಿಲಿ ಸ್ಟೋರಿಯನ್ನು ರಸವತ್ತಾಗಿ ಕಟ್ಟಿಕೊಡ್ತಿರೋ ಈ ಸೀರಿಯಲ್ ಒಂಥರ ಮನೆ ಮನೆ ಕಥೆ ಥರನೇ ಇದೆ ಅಂತ ಮೆಚ್ಕೊಳ್ತಾರೆ ವೀಕ್ಷಕರು. ಈ ಸೀರಿಯಲ್‌ನಲ್ಲಿ ನಾಲ್ಕಾರು ಕಥೆಯ ಎಳೆಗಳಿವೆ. ಇದನ್ನೊಂದು ಮಹಾ ಧಾರಾವಾಹಿ ಅನ್ನಬಹುದು. ಸದ್ಯ ಈ ಸೀರಿಯಲ್‌ನಲ್ಲಿ ದೊಡ್ಡ ಮನೆಗೆ ಮತ್ತೊಂದು ಜೀವದ ಎಂಟ್ರಿ ಆಗಿದೆ. ಅದು ಮತ್ಯಾರೂ ಅಲ್ಲ. ಚೆಲುವಿ. ಹೂ ಮಾರುತ್ತಿದ್ದ ಚೆಲುವಿ ಜೊತೆ ಸಾಥ್ ಕೊಡ್ತಿದ್ದದ್ದು ಅಂಧೆ ತಾಯಿ, ಕುಳ್ಳಪ್ಪ ಮತ್ತು ಬಾಯಿ ಬರದ ವೆಂಕಿ. ಮೊದಲಿಂದಲೂ ವೆಂಕಿ ಮತ್ತು ಚೆಲುವಿ ನಡುವೆ ಕ್ರಶ್ ಇತ್ತು. ಅದು ಪ್ರೀತಿಯಾಗಿ, ಆಮೇಲೆ ಮದುವೆಯಾಗಿ ಪರಿವರ್ತನೆಯಾಗಲು ಕಾರಣ ಸನ್ನಿವೇಶ. ಸಾಲ ಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ ಚೆಲುವಿಯನ್ನು ರಕ್ಷಿಸಿದ್ದು ಮೂಕ ವೆಂಕಿ. ಆಕೆಯನ್ನು ಕಾಪಾಡುವ ಆವೇಶದಲ್ಲೇ ದೇವಸ್ಥಾನಕ್ಕೆ ಕರೆದುಕೊಂಡು ಬಂದು ತಾಳಿಯನ್ನೂ ಕಟ್ಟಿಬಿಟ್ಟಿದ್ದಾನೆ. ಆಮೇಲೆ ತನ್ನ ಮದುವೆಗೆ ಕರೆದುಕೊಂಡು ಬಂದು ತನ್ನ ಪತ್ನಿಯಾಗಿ ಮನೆಯವರಿಗೆ ಮನದಟ್ಟು ಮಾಡಿದ್ದಾನೆ. ಇದು ಮನೆಮಂದಿಗೆ ಶುರುವಿಗೆ ಶಾಕ್ ತಂದರೂ ಆಮೇಲೆ ಒಳ್ಳೆ ಮನಸ್ಸಿನ ಮಂದಿ ಒಪ್ಪಿಕೊಂಡಿದ್ದಾರೆ.

ಆದರೆ ಸಿಡುಕ ಮಗ ಸಂತೋಷನಿಗೆ ಮಾತ್ರ ಮನೆಗೆ ಮತ್ತೊಬ್ಬರು ಬಂದಿರೋದಕ್ಕೆ ಸ್ಪಲ್ಪವೂ ಸಂತೋಷ ಇಲ್ಲ. ಇದರಿಂದಾಗಿ ಭಾರ ಹೆಚ್ಚಾಗ್ತಿದೆ. ಎಲ್ಲ ದಂಡಪಿಂಡಗಳಿಂದಲೇ ಮನೆ ತುಂಬಿಕೊಂಡಿದೆ ಎನ್ನುವ ರೀತಿ ಆತ ಕೆಟ್ಟದಾಗಿ ಬಿಹೇವ್ ಮಾಡಿದ್ದಾನೆ. ಮಾತ್ರವಲ್ಲ, ಸದಾ ವೆಂಕಿ ಮತ್ತು ಚೆಲುವಿಯನ್ನು ಚುಚ್ಚಿ ಚುಚ್ಚಿ ಮಾತನಾಡಿದ್ದಾನೆ. ಮನೆಗೆ ಬಂದ ಮದುಮಕ್ಕಳನ್ನು ಕೀಳಾಗಿ ಕಂಡಿದ್ದಾನೆ. ಸಂತೋಷನ ಈ ವರ್ತನೆ ನೆಟ್ಟಿಗರಲ್ಲಿ ಆಕ್ರೋಶ ಹುಟ್ಟುಹಾಕಿದೆ.

Tap to resize

Latest Videos

Puttakkana Makkalu : ವಿನುತಾ ಜೊತೆ ಮುರಳಿ‌ ಮದ್ವೆ... ಸಹನಾಗೆ ಕಾಳಿನೇ ಬೆಸ್ಟ್ ಜೋಡಿ ಅಂತಿದ್ದಾರೆ ಜನ

ಸೋಶಿಯಲ್ ಮೀಡಿಯಾದಲ್ಲಿ ವೀಕ್ಷಕರು ಈ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ತಂದೆಯ ಮೇಲೂ ಸಂತೋಷನ ಸಿಡುಕುತನ ನಿಂತಿಲ್ಲ. ಶ್ರೀನಿವಾಸ್ ಆಡೋ ಓಡಿಸುತ್ತಿರೋದು ಇವನಿಗೆ ಇಷ್ಟವೇ ಇಲ್ಲ. ಹೀಗಾಗಿ ಅವನು ಸಂದರ್ಭ ಸಿಕ್ಕಾಗಲೆಲ್ಲ ತಂದೆಗೆ ಬಾಯಿಗೆ ಬಂದ ಹಾಗೆ ಬೈತಿದ್ದಾನೆ. ಹಿಂದೊಮ್ಮೆಲೂ ಊಟ ಮಾಡುವಾಗ ಶ್ರೀನಿವಾಸ್‌ಗೆ ಸಂತೋಷ್ ಬಾಯಿಗೆ ಬಂದ ಹಾಗೆ ಮಾತನಾಡಿದ್ದ. ಇದೀಗ ಮದುವೆಯಾಗಿ ಬಂದ ಮುಗ್ಧ ಹುಡುಗಿ ಚೆಲುವೆಯ ಬಗೆಗೂ ವಿಷ ಕಾರಿದ್ದಾನೆ.

ಸಂತೋಷನ ಈ ವರ್ತನೆ ಒಳ್ಳೆ ಮನಸ್ಸಿನ ವೀಣಾಗೆ ಬೇಸರ ತಂದಿದೆ. ಆಕೆ ಶುರುವಿನಿಂದಲೂ ಸಂತೋಷನಿಗೆ ಬುದ್ಧಿ ಮಾತು ಹೇಳುತ್ತಲೇ ಇದ್ದಾಳೆ. ಆದರೆ ಆತ ಯಾರ ಮಾತನ್ನೂ ಕಿವಿಗೇ ಹಾಕಿಕೊಳ್ಳದ ಪರಮ ಸ್ವಾರ್ಥಿ. ಇದೀಗ ಈ ಸಿಡುಕ ಸಂತೋಷ ತನ್ನ ಬಗ್ಗೆ ಮಾತನಾಡಿದ್ದು ಚೆಲುವಿಯ ಮನಸ್ಸಿಗೆ ಬಹಳ ನೋವಾಗಿದೆ. ಆತ ಊಟ ಮಾಡುವಾಗ ಚೆಲುವಿ ಈ ಮನೆಗೆ ದಂಡಪಿಂಡ ಎನ್ನುವ ರೀತಿ ಮಾತನಾಡಿದ್ದ. ಇದರಿಂದ ಬೇಜಾರಾದ ಚೆಲುವಿ ಮದುವೆಯಾದ ಮೂರೇ ದಿನಕ್ಕೆ ಅತ್ತೆಗೆ ದುಡ್ಡು ಕೊಡಲು ಹೊರಡುತ್ತಾಳೆ.

ಸೀತಾರಾಮ: ರಾಮನ ಮಾಜಿ ಗೆಳತಿ ಸಿಹಿ ಚಿಕ್ಕಮ್ಮ; ಹಾಗಾದ್ರೆ ಸೀತಮ್ಮಗೂ ಚಾಂದಿನಿಗೆ ಏನು ಸಂಬಂಧ!

ಆದರೆ ಆ ಹೊತ್ತಿಗೆ ಲಕ್ಷ್ಮೀ ಮನೆಯಲ್ಲಿ ಇಲ್ಲದ ಕಾರಣ ವೀಣಾ ಕಣ್ಣಿಗೆ ಬೀಳುತ್ತಾಳೆ. ಅವಳಿಗೆ ಕೂಡಲೇ ಹೊಳೆಯುತ್ತದೆ. ತನ್ನ ಗಂಡನ ವರ್ತನೆಗೆ ಬೇಸತ್ತು ಚೆಲುವಿ ಈ ಕೆಲಸ ಮಾಡುತ್ತಿದ್ದಾಳೆ ಅಂತ. ಅದಕ್ಕಾಗಿ ಆಕೆಯನ್ನು ತಡೆದು ಗಂಡನ ಪರವಾಗಿ ಕ್ಷಮೆ ಕೇಳುತ್ತಾಳೆ. ದುಡ್ಡನ್ನು ಅವಳೇ ಇಟ್ಟುಕೊಳ್ಳುವಂತೆ ಹೇಳುತ್ತಾಳೆ. ವೀಣಕ್ಕನ ಈ ನಡೆಗೆ ವೀಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!