Latest Videos

ರಾಮ ಕರಿಮಣಿ ಕಟ್ಟಾಗೋಯ್ತು! ಆದರೂ ಸೀತೆಯ ಬದುಕಲ್ಲಿ ಮತ್ತೆ ಬರ ಸಿಡಿಲು- ಯಾರೀ ಹೊಸ ಲೇಡಿ?

By Suchethana DFirst Published Jun 17, 2024, 6:07 PM IST
Highlights

ಸೀತಾರಾಮ ಸೀರಿಯಲ್​ ಕುತೂಹಲ ಹಂತ ತಲುಪಿದೆ. ಚಿನ್ನದ ಅಂಗಡಿಯಲ್ಲಿ ರಾಮ್​ ಸೀತಾಳಿಗೆ ಕರಿಮಣಿ ಕಟ್ಟಿದ್ದಾನೆ. ಆದರೆ ಇದರ ನಡುವೆಯೇ ಇನ್ನೊಂದು ಟ್ವಿಸ್ಟ್​ ಬಂದಿದೆ. ಏನದು?
 

ಸೀತಾರಾಮ ಕಲ್ಯಾಣಕ್ಕೆ ವೀಕ್ಷಕರು ಬಹಳ ಕಾತರದಿಂದ ಕಾಯ್ತಿರೋ ಕಾಲ ಕೂಡಿ ಬರುವ ಘಳಿಗೆ ಇದು. ಹಲವು ಅಡೆತಡೆಗಳನ್ನು ಎದುರಿಸಿ ಇವರಿಬ್ಬರ ನಿಶ್ಚಿತಾರ್ಥ ನಡೆದಿದೆ. ಮದುವೆಗೆ ಅಡ್ಡಗಾಲು ಹಾಕಲು ನೋಡಿದ್ದ ಭಾರ್ಗವಿಯ ಕುತಂತ್ರ ಫಲಿಸಲಿಲ್ಲ. ಈಗ ಮದುವೆಯ ತಯಾರಿ ಭರ್ಜರಿಯಾಗಿಯೇ ನಡೆಯುತ್ತಿದೆ. ಆದರೆ ಇದೇ ಹೊತ್ತಲ್ಲಿ ಸೀತಾಳ ಬಾಳಿನಲ್ಲಿ ಮತ್ತೊಂದು ಬರಸಿಡಿಲು ಬಡಿದಿದೆ. ಮದುವೆ ಆಗುತ್ತಾ ಇಲ್ಲವೋ ಎನ್ನುವ ಚಿಂತೆ ಶುರುವಾಗಿದೆ. ನೂರೆಂಟು ವಿಘ್ನಗಳನ್ನು ಎದುರಿಸಿ ಮದುವೆಯಾಗುವ ಹೊತ್ತಲ್ಲೇ ಇನ್ನೊಂದು ಆತಂಕ ಸೀತಾಳನ್ನು ಮನೆ ಮಾಡುತ್ತಿದೆ. ಸೀತಾ ಎದೆ ಝಲ್ಲೆಂದು ಹೋಗಿದೆ, ಅವಳ ಬಾಳಲ್ಲಿ ಬರಸಿಡಿಲು ಬಡಿದಂತಾಗಿದೆ!

ಹೌದು. ಮಂಗಳಸೂತ್ರ ಸೆಲೆಕ್ಷನ್​ಗೆಂದು ಭಾರ್ಗವಿ, ಸೀತಾ, ರಾಮ ಎಲ್ಲಾ ಚಿನ್ನದ ಅಂಗಡಿಗೆ ಹೋಗಿದ್ದಾರೆ. ಅಲ್ಲಿರುವ ಮಂಗಳಸೂತ್ರವನ್ನು ನೀನೆ ಸೆಲೆಕ್ಟ್​ ಮಾಡಬೇಕು ಎಂದಿದ್ದಾಳೆ ಭಾರ್ಗವಿ. ಸೀತಾಳಿಗೆ ಈ ದುಬಾರಿ ಒಡವೆ ನೋಡಿ ಸುಸ್ತಾಗಿ ಹೋಗಿದೆ. ಅಷ್ಟೊತ್ತಿಗಾಗಲೇ ರಾಮ್​  ಬಂದು ನಾನೇ ಸೆಲೆಕ್ಟ್​ ಮಾಡುತ್ತೇನೆ ಎಂದು ಒಂದು ಮಂಗಳಸೂತ್ರವನ್ನು ಸೆಲೆಕ್ಟ್​  ಮಾಡಿ ಸೀತಾಳ ಎದುರಿಗೆ ಹಿಡಿದಿದ್ದಾನೆ. ಅಷ್ಟೊತ್ತಿಗಾಗಿ ಹೊಸ ಮುಖದ ಪ್ರವೇಶವಾಗಿದೆ. ಅನಂತ ಲಕ್ಷ್ಮಿಯವರ ಕುರಿತು ರಾಮ್​ ಹತ್ರ ಹೇಳಬೇಕಾ ಎಂದು ಯುವತಿಯೊಬ್ಬಳು ತನ್ನಷ್ಟಕ್ಕೇ ತಾನು ಮಾತನಾಡಿಕೊಂಡಿದ್ದಾಳೆ. ಅವಳನ್ನು ನೋಡಿದ ಸೀತಾಳಿಗೆ ಶಾಕ್​ ಆಗಿ ಹೋಗಿದೆ. 

ಈ ರಾಮ್​ದು ಅತಿಯಾಯ್ತು ಅನ್ನಿಸ್ತಿಲ್ವಾ? ಎಲ್ಲದಕ್ಕೂ ಲಿಮಿಟ್​ ಇದ್ರೆ ಚೆಂದ... ಫ್ಯಾನ್ಸ್​ ಗರಂ

ಅಷ್ಟರಲ್ಲಿಯೂ ಇದ್ಯಾವುದರ ಅರಿವು ಇಲ್ಲದ ರಾಮ್​ ಕರಿಮಣಿಯೊಂದನ್ನು ಸೀತಾಳ ಎದುರಿಗೆ ಹಿಡಿದಿದ್ದಾನೆ. ಆತಂಕದಲ್ಲಿರುವ ಸೀತಾ, ರಾಮ್​ನನ್ನು ನೋಡಿ ನೀವು ನನ್ನ ಕೈಬಿಡಲ್ಲ ತಾನೇ ಎಂದಿದ್ದಾಳೆ. ಅಷ್ಟೊತ್ತಿಗಾಗಲೇ ಮಂಗಳಸೂತ್ರ ಸೀತಾಳ ಕುತ್ತಿಗೆ ಸುತ್ತಿದೆ. ಅಲ್ಲೇ ರಾಮ್​ ಅದಕ್ಕೆ ಗಂಟನ್ನೂ ಹಾಕಿದ್ದಾನೆ. ಹಾಗೆ ನೋಡಿದರೆ ಕರಿಮಣಿ ಮಾಲೀಕ ರಾಮ್​ ಆಗಿ ಹೋಗಿದೆ. ಆದರೆ ಅಲ್ಲಿಗೆ ಬಂದಿರುವವಳು ಯಾರು? ಅವಳು ಹೇಳ್ತಿರೋ ಅನಂತಲಕ್ಷ್ಮಿ ಯಾರು? ಸೀತಾಳ ಹಿನ್ನೆಲೆ ಏನು ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ.

ಅಷ್ಟಕ್ಕೂ ಸೀತಾ ಮತ್ತು ಸಿಹಿಯ ಹಿನ್ನೆಲೆಯನ್ನು ಇದುವರೆಗೆ ಗುಟ್ಟಾಗಿ ಇಡಲಾಗಿದೆ. ಸಿಹಿಯ ಅಪ್ಪ ಯಾರು? ನಿಜಕ್ಕೂ ಸಿಹಿ ಸೀತಾಳ ಮಗಳೇನಾ? ಹಾಗೊಂದು ವೇಳೆ ಹೌದಾಗಿದ್ದರೆ ಸೀತಾಳ ಗಂಡ ಯಾರು? ಅವನು ಬದುಕಿದ್ದಾನಾ? ಡಿವೋರ್ಸ್​ ಆಗಿದ್ಯಾ? ಸತ್ತು ಹೋಗಿದ್ದಾನಾ ಯಾವುದಕ್ಕೂ ಇದುವರೆಗೆ ಸೀರಿಯಲ್​ನಲ್ಲಿ ಉತ್ತರ ಸಿಗಲಿಲ್ಲ. ಸಿಹಿಯ ಹುಟ್ಟಿನ ರಹಸ್ಯ ಇನ್ನುಮುಂದೆ ತನ್ನಿಂದ ಮುಚ್ಚಿಟ್ಟುಕೊಳ್ಳಲು ಸಾಧ್ಯವಾಗ್ತಿಲ್ಲ ಎಂದು ಹಲವು ಬಾರಿ ಸೀತಾ ಅಂದುಕೊಂಡು ರಾಮ್​ಗೆ ವಿಷಯ ತಿಳಿಸಲು ಹೋಗಿದ್ದಳು. ಆದರೆ ನಿನ್ನ ಇತಿಹಾಸ ನನಗೆ ಬೇಡ, ಸಿಹಿಯ ಬಗ್ಗೆ ತಿಳಿದುಕೊಂಡು ನನಗೆ ಏನೂ ಆಗುವುದು ಇಲ್ಲ, ಅವಳು ಎಂದಿಗೂ ನನ್ನ ಮಗಳೇ ಎಂದಿದ್ದಾನೆ ರಾಮ್​. ಇದರ ನಡುವೆಯೇ ಆ ಯುವತಿಯನ್ನು ನೋಡಿ ಸೀತಾ ಗಾಬರಿಯಾಗಿದ್ದು ಯಾಕೆ, ಅವಳು ಯಾರು, ಮತ್ತೊಮ್ಮೆ ಏನಿದು ಬರಸಿಡಿಲು ಎನ್ನುವುದು ವೀಕ್ಷಕರ ಮುಂದಿರುವ ಪ್ರಶ್ನೆ. 

ನಾನು ಮಾಡುವ ಡ್ಯಾನ್ಸ್​ ಯಾವುದು ಅಂತ ಗೆಸ್​ ಮಾಡ್ತೀರಾ? ಚಾಲೆಂಜ್​ ಕೊಟ್ಟ ಸೀತಾರಾಮ ಸಿಹಿ


click me!