
ಇಡೀ ಕರ್ನಾಟಕವೇ ಡಿ ಗ್ಯಾಂಗ್ ಮಾಡಿರುವ ಪ್ರಕರಣದ ಬಗ್ಗೆ ಚರ್ಚೆ ಮಾಡುತ್ತಿದ್ದರೆ, ಬಿಗ್ ಬಾಸ್ ಆರ್ಯವರ್ಧನ್ ಗುರೂಜಿ ಮತ್ತೊಂದು ರೀತಿಯಲ್ಲಿ ಲೆಕ್ಕಾಚಾರ ಹಾಕುತ್ತಿದ್ದಾರೆ. ಈ ಹಿಂದೆ ರಾಜ ರಾಜೇಶ್ವರಿ ನಗರ ಸರಿ ಇಲ್ಲ ವಾಸ್ತು ಸಮಸ್ಯೆ ಇದೆ ಎಂದಿದ್ದ ವಿಡಿಯೋ ವೈರಲ್ ಆಗಿತ್ತು. ರೇಣುಕಾಸ್ವಾಮಿ ಪ್ರಕರಣ ದೊಡ್ಡದಾಗುತ್ತಿದ್ದಂತೆ ಮತ್ತೊಮ್ಮೆ ಈ ಹೇಳಿಕೆ ವೈರಲ್ ಆಗುತ್ತಿದೆ. ಸಮಸ್ಯೆ ಏನೆಂದು ವಿವರಿಸಿದ ದರ್ಶನ್....
'ದರ್ಶನ್ ಅನ್ನೋ ಹೆಸರಿಗೆ 21 ನಂಬರ್ ಬರುತ್ತದೆ ಅದು ದೊಡ್ಡ ಡಿಸ್ಟರ್ಬ್. ಹುಟ್ಟು ದಿನಾಂಕಕ್ಕೆ ಇದು ಫುಲ್ ವಿರುದ್ಧ ನಂಬರ್ ಆಗಿರುತ್ತದೆ ಹೀಗಾಗಿ ಆತನ ಬಳಿ ಎಲ್ಲಾ ಇರುತ್ತದೆ ಆದರೆ ನೆಮ್ಮದಿ ಇರುವುದಿಲ್ಲ. ಈ ವರ್ಷದಲ್ಲಿ 6 ಮತ್ತು 16 ಸಂಖ್ಯೆ ಆಗಿ ಬರುವುದಿಲ್ಲ. ಆರ್‌ಆರ್ ನಗರದಲ್ಲಿ ವಾಸ್ತು ಇಲ್ಲ ಹೀಗಾಗಿ ಅಲ್ಲಿ ವಾಸಿಸುತ್ತಿರುವ ಯಾರಿಗೂ ನೆಮ್ಮದಿ ಇಲ್ಲ. ಅಲ್ಲಿ ಇರುವ ಸಿನಿಮಾ ನಟರು, ಜನರು, ರಾಜಕಾರಣಿಗಳು ಹಾಗೂ ಮಾಧ್ಯಮಗಳ CEO ಆಗಿರುವವರಿಗೂ ಕೂಡ ಫುಲ್ ಡಿಸ್ಟರ್ಬ್ ಆಗಿದ್ದಾರೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಆರ್ಯವರ್ಧನ್ ಮಾತನಾಡಿದ್ದಾರೆ.
ಆ ಹೀರೋ ಜೊತೆ ಸಿನಿಮಾ ಮಾಡಲ್ಲ ಅಂತ ಹೇಳಿಲ್ಲ, ಪೇಮೆಂಟ್ ಕಡಿಮೆ ಕೊಡ್ತಾರೆ: ಆಶಿಕಾ ರಂಗನಾಥ್
'ದರ್ಶನ್ ಜಾತದಲ್ಲಿ ಶನಿ ಇರುವ ಕಾರಣ ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ಜಾತಕದ 10ನೇ ಮನೆಯಲ್ಲಿ ಸೂರ್ಯ ಇರುವ ಕಾರಣ ರಾಜಕೀಯದಲ್ಲಿ ಆಸಕ್ತಿ ಕಾಣಿಸುತ್ತದೆ ಹೀಗಾಗಿ ಮತ್ತೊಬ್ಬರಿಗೆ ಪ್ರಚಾರ ಮಾಡಲಿದ್ದಾರೆ... ಮಾಡಿದ್ದಾರೆ. ಈ ವರ್ಷ ಸಣ್ಣ ಸೋಲು, ಸಣ್ಣ ಸಕ್ಸಸ್ ಮತ್ತು ಸಣ್ಣ ದುಖಃ ಎಲ್ಲವೂ ನೋಡುತ್ತಾರೆ. ದರ್ಶನ್ ಜಾತಕದಲ್ಲಿ ಉಚ್ಚಶುಕ್ರ ಗ್ರಹ ಇದೆ ಹೀಗಾಗಿ ಯಾವಾಗಲೂ ಹೆಣ್ಣು ಮಕ್ಕಳಿಂದ ತಲೆ ನೋವು ಹೆಚ್ಚಿರುತ್ತದೆ. ಅವರ ಕಥೆ ಹೆಣ್ಣಿನ ಹಿಂದೆ ಹೋಗುತ್ತೆ ,ಕಥೆನೂ ಹೆಣ್ಣು ಆಗುತ್ತಾ..ಒಟ್ಟಾರೆ ಜೀವನದಲ್ಲಿ ಹೆಣ್ಣು ದೊಡ್ಡ ಶತ್ರು' ಎಂದು ಅರ್ಯವರ್ಧನ್ ಹೇಳಿದ್ದಾರೆ.
ಬದನೆಕಾಯಿ- ಗೋಬಿ ತಿಂದ್ರೆ ಗುಳ್ಳೆ ಮತ್ತೆ ಇನ್ಫೆಕ್ಷನ್ ಆಗುತ್ತೆ: ಕಾಯಿಲೆ ಎಂದು ಕಾಲೆಳೆದವರಿಗೆ ಉತ್ತರ ಕೊಟ್ಟ ಧನುಶ್ರೀ
'ಆಗಾಗ ಆರೋಗ್ಯ ಸಮಸ್ಯೆಗಳು ಬರುತ್ತದೆ ಬಿಪಿ ಶುಗರ್ ಕೂಡ ದೊಡ್ಡದಾಗಬಹುದು. ಇನ್ನು ಬುಧ ಮತ್ತು ಕುಜ ವಿಶ್ಲೇಷಣೆ ಇರುವುದರಿಂದ ಆತನ ಜೀವನದಲ್ಲಿ ಸ್ಕ್ರೋಕ್ ಸಂಬಂಧಿಸಿದಂತೆ ಏನಾದರೂ ಆಗಬಹುದು. ಮದುವೆ ಜೀವನ ಚೆನ್ನಾಗಿದ್ದರೂ ಆಗಾಗ ಗೊಂದಲ ಮತ್ತು ಜಗಳ ಇದ್ದೇ ಇರುತ್ತದೆ. ಪವಿತ್ರಾ ಗೌಡ ಮತ್ತು ದರ್ಶನ್ ಮುಂದಿನ ದಿನಗಳಲ್ಲಿ ಡಿಸ್ಟರ್ಬ್ ಆಗಬಹುದು ಚೆನ್ನಾಗಿ ಇರುವುದಿಲ್ಲ. ಸ್ತ್ರೀ ಸಮಸ್ಯೆ ಜಾಸ್ತಿ ಇರುತ್ತದೆ' ಎಂದಿದ್ದಾರೆ ಆರ್ಯವರ್ಧನ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.