Ramachari: ಶರ್ಮಿಳಾ ಕೊಲೆಗೆ ಮಾನ್ಯತಾ ಪ್ಲಾನ್, ಆದರೆ ಬಲಿಯಾಗ್ತಿರೋದು ಚಾರು!

Published : Oct 16, 2022, 11:33 AM IST
Ramachari: ಶರ್ಮಿಳಾ ಕೊಲೆಗೆ ಮಾನ್ಯತಾ ಪ್ಲಾನ್, ಆದರೆ ಬಲಿಯಾಗ್ತಿರೋದು ಚಾರು!

ಸಾರಾಂಶ

'ರಾಮಾಚಾರಿ' ಸೀರಿಯಲ್‌ನಲ್ಲಿ ಚಾರು ಮತ್ತೊಮ್ಮೆ ಜೀವ ಕಳೆದುಕೊಳ್ಳುವ ಭೀತಿಯಲ್ಲಿದ್ದಾಳೆ. ಅವಳ ತಾಯಿ ಮಾನ್ಯತಾ ತನ್ನ ಸವತಿ ಶರ್ಮಿಳಾ ಕೊಲೆಗೆ ಸುಪಾರಿ ಕೊಟ್ರೆ ಅದು ಅವಳ ಮಗಳು ಚಾರುವನ್ನೇ ಬಲಿ ಪಡೆಯಲು ಮುಂದಾಗಿದೆ. ಇದಕ್ಕೇ ವಿಧಿಯಾಟ ಅನ್ನೋದಲ್ವಾ, ಅಷ್ಟಕ್ಕೂ ಅಲ್ಲೇನಾಗ್ತಿದೆ?

ರಾಮಾಚಾರಿ ಸೀರಿಯಲ್‌ನಲ್ಲಿ ಈ ಹಿಂದೆಯೂ ಚಾರು ಸಾವಿನಂಚಿಗೆ ಹೋಗಿ ವಾಪಾಸ್‌ ಬಂದಿದ್ದಳು. ಈಗ ಮತ್ತೆ ಅವಳಮ್ಮನ ಸಂಚು, ಅವಳ ದರ್ಪಕ್ಕೆ ಅವಳೇ ಬಲಿಯಾಗ್ತಿದ್ದಾಳೆ. ಹಿಂದೆಯೂ ಇಂಥಾ ಸನ್ನಿವೇಶ ಎದುರಾದರೂ ಚಾರು ಪಾಠ ಕಲಿತಿಲ್ಲ. ಮತ್ತೆ ದರ್ಪ, ನೀಚತನದಿಂದ ವರ್ತಿಸಿದ್ದಾಳೆ. ರಾಮಾಚಾರಿ ರಾತ್ರಿ ಹಗಲು ಕಷ್ಟಪಟ್ಟು ಮಾಡಿದ ಪ್ರಾಜೆಕ್ಟ್‌ ಆತನಿಗೆ ಬಹಳ ಮಹತ್ವದ್ದಾಗಿತ್ತು. ಇದರಲ್ಲಿ ಬರುವ ಹಣದಿಂದ ಆತ ತನ್ನ ಅತ್ತಿಗೆ ಅಪರ್ಣಾ ಕ್ಯಾನ್ಸರ್‌ ಆಪರೇಶನ್‌ ಮಾಡಿಸಬೇಕಿತ್ತು. ಆದರೆ ಚಾರು ರಾಮಾಚಾರಿಯ ಈ ಪ್ರಾಜೆಕ್ಟ್‌ಅನ್ನು ಕದ್ದು ಆತನ ಸಿಸ್ಟಮ್‌ನಲ್ಲಿ ಇದ್ದದ್ದನ್ನು ಡಿಲೀಟ್‌ ಮಾಡಿ ತಾನೇ ಪ್ರೆಸೆಂಟ್‌ ಮಾಡಿದ್ದಾಳೆ. ತನ್ನ ಈ ನಾಚಿಕೆಗೇಡಿನ ಕೆಲಸಕ್ಕೆ ಅವಳಲ್ಲಿ ಸಣ್ಣ ಗಿಲ್ಟ್‌ ಸಹ ಇಲ್ಲ. ಇತ್ತ ರಾಮಾಚಾರಿ ಅತ್ತಿಗೆ ಅಪರ್ಣಾ ಆಪರೇಶನ್‌ಗೆ ದುಡ್ಡು ಹೊಂದಿಸಲು ರಾಮಾಚಾರಿ ಇನ್ನಿಲ್ಲದ ಹಾಗೆ ಕಷ್ಟಪಡುತ್ತಿದ್ದಾನೆ. ಆದರೆ ಅದು ಸಾಧ್ಯವಾಗ್ತಿದೆ. ಇದರ ನಡುವೆಯೇ ಶರ್ಮಿಳಾಳನ್ನು ಕೊಲ್ಲಲು ಮಾನ್ಯತಾ ಸುಪಾರಿ ಕೊಟ್ಟಿದ್ದಾಳೆ. ಆದರೆ ತಾನು ಹೆಣೆದ ಬಲೆಯಲ್ಲಿ ಸ್ವಂತ ತನ್ನ ಮುದ್ದಿನ ಮಗಳೇ ಬಿದ್ದಿರುವುದು ಅವಳ ಗಮನಕ್ಕೆ ಬಂದಿಲ್ಲ.

ಮಾನ್ಯತಾ ಹೇಗೆ ವ್ಯವಸ್ಥಿತವಾಗಿ ಶರ್ಮಿಳಾ ಕೊಲೆ ಆಗ್ಬೇಕು ಅನ್ನೋದನ್ನು ಹೇಳಿದ್ದಾಳೆ. 'ಕರೆಕ್ಟಾಗಿ ಎಂಟು ಗಂಟೆಗೆ ಮನೆ ಹತ್ರ ಬಂದರೆ ಒಬ್ಬ ಹೆಣ್ಣು ಕಾರು ಹತ್ತುತ್ತಾಳೆ. ಅವಳೇ ಎಲ್ಲಿ ಹೋಗ್ಬೇಕು ಅನ್ನೋದನ್ನೂ ಹೇಳ್ತಾಳೆ. ಆ ಜಾಗ ಗೊತ್ತಿದೆ ಅಂತ ಹೇಳ್ಬೇಕು. ನಾನೊಂದು ಲೊಕೋಶನ್‌ ವಾಟ್ಸಾಪ್‌ ಮಾಡ್ತೀನಿ, ಆ ದಾರಿಯಲ್ಲಿ ಹೋಗ್ಬೇಕು, ಅವ್ರೇನಾದ್ರೂ ಈ ಬಗ್ಗೆ ಪ್ರಶ್ನೆ ಮಾಡಿದರೆ ರೆಗ್ಯುಲರ್ ರಸ್ತೆಯಲ್ಲಿ ಮರ ಬಿದ್ದಿದೆ. ಅದಕ್ಕೆ ಈ ದಾರಿಯಲ್ಲಿ ಹೋಗ್ತಿದ್ದೇವೆ ಅಂತ ಹೇಳ್ಬೇಕು. ಅಲ್ಲೊಂದು ಕಡೆ ಮರಕ್ಕೆ ಕೆಂಪು ಬಟ್ಟೆ ಕಟ್ಟಿರುತ್ತೆ. ಅದೇ ಸಿಗ್ನಲ್‌ ಅಲ್ಲೇ ಕಾರು ನಿಲ್ಲಿಸಬೇಕು. ಡೀಸೆಲ್‌ ಖಾಲಿಯಾಗಿದೆ, ಹತ್ತು ನಿಮಿಷ, ಹೋಗಿ ತಗೊಂಡು ಬರ್ತೀನಿ ಅಂತ ನೀನು ಇಳಿದು ಹೋಗು. ಹತ್ತು ನಿಮಿಷ ಬಿಟ್ಟು ಬರುವಾಗ ಆ ಹೆಣ್ಣು ಕಾರಲ್ಲಿರಲ್ಲ. ನೀನು ವಾಪಾಸ್ ಕಾರು ಡ್ರೈವ್ ಮಾಡುತ್ತಾ ಬರಬೇಕು' ಅಂತ ಹೇಳಿ ಯೋಗ ಕಾರ್ಯಕ್ರಮಕ್ಕೆ ಹೊರಟು ಬಿಡ್ತಾಳೆ.

Jothe jotheyali : ತನ್ನ ಹೆಸರನ್ನು ಆರ್ಯವರ್ಧನ್ ಎಂದು ಎಂಟ್ರಿ ಮಾಡೇಬಿಟ್ಟ ಸಂಜು!

ಶರ್ಮಿಳಾ ಕಾಡು ಮಧ್ಯೆ ಇರುವ ದೇವಿ ದೇವಸ್ಥಾನಕ್ಕೆ ಪೂಜೆ ಮಾಡಿಸಲು ಹೊರಡುತ್ತಾಳೆ. ಆದರೆ ಅದೇ ಹೊತ್ತಿಗೆ ಚಾರುವೂ ರೆಸಾರ್ಟ್ (Resort)ಗೆ ಪಾರ್ಟಿಗೆ ಅಂತ ಹೊರಡ್ತಾಳೆ. ಅವಳು ಹೊರಟಾಗ ತಾನೇ ಮನೆ ಕಾರಲ್ಲಿ ಹೋಗೋದಾಗಿ ಹೇಳ್ತಾಳೆ. ಶರ್ಮಿಳಾ ಬೇಕಿದ್ರೆ ಕ್ಯಾಬಲ್ಲಿ ಹೋಗಲಿ ಅಂತ ಕೊಬ್ಬಿನ ಮಾತಾಡ್ತಾಳೆ. ಹೊರಗೆ ಮಾನ್ಯತಾ ಹೇಳಿದ ಡ್ರೈವರ್‌(Driver) ಕಾದು ನಿಂತಿದ್ದಾನೆ. ಚಾರು ಕಾರು ಹತ್ತಿದ್ದೇ ಹೊರಟಿದ್ದಾನೆ. ಕಾಡಿನ ದಾರಿಯ ಕಡೆ ಕಾರು ಹೊರಳಿದಾಗ ಚಾರುವಿಗೆ ಭಯವಾಗುತ್ತೆ. ಯಾವ ಕಡೆ ಹೋಗ್ತಿದ್ದೀವಿ, ಲೊಕೇಶನ್(Location) ಗೊತ್ತಿದೆ ತಾನೆ ಅಂತ ವಿಚಾರಿಸುತ್ತಾಳೆ. ಲೊಕೇಶನ್ ಗೊತ್ತಿದೆ, ಆ ಕಡೆ ಮರ ಬಿದ್ದಿದೆ. ಇದೊಂದು ಶಾರ್ಟ್ ಕಟ್(Short cut) ಅನ್ನುತ್ತಾ ಕಾಡಿನ ದಾರಿಯಲ್ಲಿ ಹೋಗ್ತಿರುತ್ತಾನೆ.

ಲಕ್ಷಣ: ಮಹಾಕಾಳಿಯಂತೆ ಬಂದ್ಲು ನೋಡಿ ಡೆವಿಲ್‌ ಭಾರ್ಗವಿ, ಚಂದ್ರಶೇಖರ್‌ ವಂಶ ಸರ್ವನಾಶ ಮಾಡ್ತಾಳಂತೆ!

ಶರ್ಮಿಳಾ ಪೂಜೆ ಮಾಡಿಸ್ತಿರೋದು ರಾಮಾಚಾರಿಯಿಂದ. ಆತನೂ ಅಲ್ಲಿಗೆ ಹೊರಟು ಬಂದಿದ್ದಾನೆ. ದೇವಸ್ಥಾನದ ಪಕ್ಕ ಅಜ್ಜಿಯೊಬ್ಬಳು ಕಸ ಗುಡಿಸುತ್ತಿದ್ದಾಳೆ. ಅವಳು ರಾಮಾಚಾರಿ ಪರಿಚಯದವಳೇ. ರಾಮಾಚಾರಿ ಅವಳಿಗೆ ಉಪ್ಪಿನಕಾಯಿ ಕೊಟ್ಟು ಅವಳ ಜೊತೆ ಮಾತಾಡುತ್ತಿರುವಾಗಲೇ ಹುಲಿಯ ಘರ್ಜನೆ ಕೇಳುತ್ತೆ. ಆಗ ಅಜ್ಜಿ, ಹೆಣ್ಣು ಹುಲಿಯ ಹೆರಿಗೆಯ ಸಮಯ, ಅದಕ್ಕೆ ಕೂಗು ಜೋರಾಗಿದೆ ಎನ್ನುತ್ತಾಳೆ. ಅವಳಿಗೆ ಹುಲಿಯ ಬಗ್ಗೆ ಭಯ ಇಲ್ಲ.

ಆದರೆ ಇಂಥಾ ಹೊತ್ತಲ್ಲಿ ಚಾರು ಇನ್ನೊಂದೆಡೆ ಕಾರಲ್ಲಿ ಬರುತ್ತಿದ್ದಾಳೆ. ಇದಕ್ಕೂ ಮುನ್ನ ರೌಡಿಗಳು ಅಲ್ಲಿ ಕೆಂಪು ಬಟ್ಟೆ ಕಟ್ಟಿದ್ದಾರೆ. ಆ ಜಾಗವನ್ನು ಕಾರು ಸಮೀಪಿಸುತ್ತಿದೆ. ಚಾರು ಅಮ್ಮ ಮಾನ್ಯತಾ ಮಾಡಿರುವ ಮನೆಹಾಳು ಕೆಲಸಕ್ಕೆ ಅವಳ ಮಗಳೇ ಬಲಿಯಾಗುವ ಸನ್ನಿವೇಶ(Situation) ಹತ್ತಿರದಲ್ಲಿದೆ. ಚಾರುವನ್ನು ಈ ಬಾರಿಯೂ ರಾಮಾಚಾರಿ ಕಾಪಾಡ್ತಾನ, ಅವಳ ಕಥೆ ಏನಾಗುತ್ತೆ ಅನ್ನೋದೇ ಇಂಟರೆಸ್ಟಿಂಗ್‌(Interesting) ವಿಚಾರ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare: ಅಜ್ಜಿ-ಮೊಮ್ಮಕ್ಕಳ ಮಿಲನದ ಅಪೂರ್ವ ಮಿಲನ; ವೀಕ್ಷಕರು ನಿರೀಕ್ಷಿಸುತ್ತಿದ್ದ ಘಳಿಗೆ ಬಂತು, ಆದ್ರೆ...
ಬಿಗ್ ಬಾಸ್ 19 ವಿನ್ನರ್ ಹೆಸರು ಆನ್‌ಲೈನ್‌ನಲ್ಲಿ ಲೀಕ್? ಹರಿದಾಡುತ್ತಿದೆ ಸ್ಕ್ರೀನ್‌ಶಾಟ್