ಹೊಂಗನಸು : ಶಾರ್ಟ್ ಫಿಲಂ ಶೂಟ್‌ನಲ್ಲಿ ರಿಷಿ, ವಸು ರೊಮ್ಯಾಂಟಿಕ್‌ ಸೀನ್‌

Published : Oct 16, 2022, 11:30 AM IST
ಹೊಂಗನಸು : ಶಾರ್ಟ್ ಫಿಲಂ ಶೂಟ್‌ನಲ್ಲಿ ರಿಷಿ, ವಸು ರೊಮ್ಯಾಂಟಿಕ್‌ ಸೀನ್‌

ಸಾರಾಂಶ

ಹೊಂಗನಸು ಸೀರಿಯಲ್‌ ನಲ್ಲಿ ವಸುಧರಾ ಮತ್ತು ರಿಷಿ ಎಂಬ ಕ್ಯೂಟ್‌ ಜೋಡಿಯ ಪ್ರೀತಿ, ಮುನಿಸು, ವಿರಹ ಎಲ್ಲರಿಗೂ ಇಷ್ಟವಾಗುತ್ತಿದೆ. ಸಿಟ್ಟಿನ, ಇಗೋದ ಹುಡುಗ ರಿಷಿ ಮತ್ತು ಸ್ಟೂಡೆಂಟ್ ವಸು ಶಾರ್ಟ್ ಫಿಲಂನಲ್ಲಿ ಆಕ್ಟಿಂಗ್ ನೆವದಲ್ಲಿ ಅರಿವಿಲ್ಲದ ಹಾಗೆ ಪ್ರೀತಿಯಲ್ಲಿ ಕಳೆದುಹೋಗಿದ್ದಾರೆ. ಸೀರಿಯಲ್‌ನ ಈ ಭಾಗ ಈ ಸೀರಿಯಲ್‌ ಫ್ಯಾನ್ಸ್‌ಗೆ ಸಖತ್ ಇಷ್ಟವಾಗಿದೆ.  

ಹೊಂಗನಸು ಸೀರಿಯಲ್‌ (honganasu serail) ಸ್ಟಾರ್ ಸುವರ್ಣದಲ್ಲಿ (star suvarna) ಪ್ರಸಾರವಾಗ್ತಿದೆ. ಹಾಟ್‌ಸ್ಟಾರ್ ಓಟಿಟಿಯಲ್ಲೂ (OTT hotstar) ಇದನ್ನು ನೋಡಬಹುದು. ವಸುಧರಾ ಎಂಬ ಹುಡುಗಿಯನ್ನು ತನ್ನ ಬಾವನನ್ನೇ ಮದುವೆ ಆಗುವಂತೆ ಆಕೆಯ ತಂದೆಯೇ ಬಲವಂತ ಮಾಡುತ್ತಾರೆ. ಸ್ವಂತ ತಂದೆಯ ಭಯ, ಒಲ್ಲದ ಮದುವೆಯಿಂದ ಹೊರಬರಲು ಅವಳು ಜಗತಿಯ ಆಶ್ರಯ ಪಡೆಯುತ್ತಾಳೆ. ಜಗತಿಯದೇ ಮತ್ತೊಂದು ಕತೆ. ಕಾಲೇಜಿಗೆ ಸೇರುವ ವಸುಗೆ ಸಿಟ್ಟಿನ ಮೂಲಕವೇ ಪರಿಚಯವಾದವನು ರಿಷಿ. ಆತ ಆಕೆ ಓದುವ ಕಾಲೇಜಿನ ಎಂಡಿ. ಜೊತೆಗೆ ಪಾಠವನ್ನೂ ಮಾಡುವ ಲೆಕ್ಚರರ್‌. ಸನ್ನಿವೇಶಗಳೇ ಅವರಿಬ್ಬರನ್ನೂ ಹತ್ತಿರ ತರುತ್ತದೆ. ಬಾಯಿ ಮಾತಲ್ಲಿ ತಮ್ಮ ಲೆಕ್ಚರರ್‌ ಸ್ಟೂಡೆಂಟ್ ಸಂಬಂಧ ಅಂದರೂ ಅವರಿಬ್ಬರ ನಡುವೆ ಬೇರೇನೋ ಆಕರ್ಷಣೆ ಇದೆ. ಎಷ್ಟೋ ಸಲ ಅವರಿಬ್ಬರೂ ಆ ಭಾವನೆಯನ್ನು ಅವಾಯ್ಡ್‌ ಮಾಡಲು ನೋಡ್ತಾರೆ. ರಿಷಿ ಅಂತೂ ತನ್ನ ಸಿಟ್ಟು, ಇಗೋ, ಕಟು ಮಾತುಗಳ ಮೂಲಕ ವಸುಗೆ ನೋವಾಗುವಂತೆ ಮಾತಾಡುತ್ತಾನೆ. ಆದರೂ ಚಟಪಟ ಅರಳು ಹರಿದಂತೆ ಮಾತಾಡುವ ವಸುವನ್ನು ಒಳಗೊಳಗೇ ಹೃದಯದಲ್ಲಿಟ್ಟು ಪ್ರೀತಿಸುತ್ತಾನೆ. ಅವಳ ಚಿತ್ರವನ್ನೂ ಡ್ರಾಯಿಂಗ್ ಮಾಡಿದ್ದಾನೆ. ಇನ್ನೊಂದೆಡೆ ಇವರಿಬ್ಬರ ಪ್ರೀತಿ ಶಾರ್ಟ್ ಫಿಲಂ ಮೂಲಕ ಮತ್ತೊಂದು ರೀತಿ ರಿವೀಲ್ ಆಗಿದೆ. 

ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸೋ ಶಾರ್ಟ್ ಫಿಲಂ ಕಾಲೇಜಿನ ಮಹತ್ವದ ಪ್ರಾಜೆಕ್ಟ್‌. ಇದರ ಇನ್‌ಚಾರ್ಜ್ ಜಗತಿ. ಈಕೆ ರಿಷಿಯ ನಿಜ ಅಮ್ಮನಾದರೂ ದೊಡ್ಡಮ್ಮ ಬೆಳೆಸಿದ ದ್ವೇಷದಿಂದ, ಆಕೆ ತನ್ನ ಹಾಗೂ ತಂದೆ ಮಹೇಂದ್ರನಿಂದ ದೂರವಾದ ಕಾರಣಕ್ಕೆ ರಿಷಿ ಅವಳನ್ನು ದ್ವೇಷಿಸುತ್ತಾನೆ. ಆದರೆ ಜಗತಿಗೆ ಮಗನಲ್ಲಿ ಬೆಟ್ಟದಷ್ಟು ಪ್ರೀತಿ. ರಿಷಿಗೆ ಜಗತಿ ತನ್ನ ತಂದೆ ಮಹೇಂದ್ರನ ಜೊತೆಗೂ ಕ್ಲೋಸ್‌ ಆಗಿರೋದು ಇಷ್ಟ ಇಲ್ಲ. ಆದರೆ ಈ ಶಾರ್ಟ್ ಫಿಲಂ ಕಾರಣಕ್ಕೆ ಆತ ಜಗತಿಯ ಬಗ್ಗೆ ಕೊಂಚ ಮೃದು ಧೋರಣೆ ತಳೆದಿದ್ದಾನೆ. ಆಕೆಗೆ ಗೌರವ ನೀಡುತ್ತಿದ್ದಾನೆ. ಶಾರ್ಟ್ ಫಿಲಂನಲ್ಲಿ ಮೊದಲಿಗೆ ಗೌತಮ್‌ ಮತ್ತು ವಸು ನಟಿಸೋದು ಅಂತಿರುತ್ತೆ. ಟೀಚರ್‌ ಡ್ರೆಸ್‌ನಲ್ಲಿ ವಸುವನ್ನು ನೋಡಿ ರಿಷಿ ಹೃದಯ ಬಾಯಿಗೆ ಬಂದಿದೆ. ತಡೆಯಲಾರದೇ ಆತ ಮೆಚ್ಚುಗೆಯ ಮಾತು ಹೇಳುತ್ತಾನೆ. ರಿಷಿಯ ಮೆಚ್ಚುಗೆ ವಸುಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಆದರೆ ಏನು ಮಾಡಿದರೂ ಗೌತಮ್‌ ನಟನೆ ಓಕೆ ಆಗ್ತಿಲ್ಲ. ಡೈರೆಕ್ಟರ್ ಪದೇ ಪದೇ ಕಂಪ್ಲೇಂಟ್‌ ಮಾಡುತ್ತಾರೆ.

Kannadathi serial: ರತ್ನಮಾಲಾ ಸ್ಥಾನಕ್ಕೆ ಬಂದೇ ಬಿಟ್ಲು ಭುವಿ! ಇನ್ಮೇಲೆ ಸ್ಟೋರಿನೇ ಚೇಂಜ್..

ವಿಧಿಯಿಲ್ಲದೇ ರುಷಿ ತಾನೇ ಹೇಗೆ ಆಕ್ಟಿಂಗ್ ಮಾಡಬೇಕು ಅಂತ ಗೌತಮ್‌ಗೆ ತಿಳಿಸಿಕೊಡಲು ಮುಂದಾಗಿದ್ದಾನೆ. ರಿಷಿ ಗಂಡನಾಗಿ, ವಸು ಹೆಂಡತಿಯಾಗಿ ನಟಿಸಬೇಕಿದೆ. ರಿಷಿ ಸಹಜವಾಗಿದ್ದರೂ ವಸುಗೆ ಗಂಡನಂತೆ ರಿಷಿಯನ್ನು ಸಂಭೋಧಿಸುವುದು ತ್ರಾಸವಾಗಿದೆ. ಟೇಕ್‌ನಲ್ಲಿ ತಡವರಿಸುತ್ತಾಳೆ. ಕೊನೆಗೆ ತನ್ನಲ್ಲಿ ಧೈರ್ಯ ತುಂಬಿಕೊಂಡು ನಟಿಸಲು ಮುಂದಾಗುತ್ತಾಳೆ. ರಿಷಿಯೂ ರೊಮ್ಯಾಂಟಿಕ್‌ ಗಂಡನಾಗಿ ನಟಿಸುತ್ತಾನೆ. ಅವಳ ಭುಜವನ್ನು ಬಳಸಿ ಡೈಲಾಗ್‌ ಹೇಳುವಾಗ ಗೌತಮ್‌ ಜಲಸ್‌ನಲ್ಲಿ ಒದ್ದಾಡಿದರೆ ಜಗತಿ ಮತ್ತು ಮಹೇಂದ್ರ ಮುಸಿ ನಕ್ಕಿದ್ದಾರೆ. ಮಹೇಂದ್ರ ತನ್ನ ಮೊಬೈಲ್‌ನಲ್ಲೂ ಇದನ್ನು ಶೂಟ್ ಮಾಡ್ತಾರೆ. ಒಂದು ಹಂತದಲ್ಲಿ ಇವರಿಬ್ಬರೂ ತಾವು ಆಕ್ಟಿಂಗ್‌ ಮಾಡುತ್ತಿದ್ದೀವಿ ಅನ್ನೋದನ್ನೂ ಮರೆತು ಸಹಜವಾಗಿ ಗಂಡ ಹೆಂಡತಿಯೇ ಆಗಿ ಬಿಡುತ್ತಾರೆ. ಡೈರೆಕ್ಟರ್ ಕಟ್ ಅಂದಾಗ ಇಬ್ಬರೂ ಮರಳಿ ಲೋಕಕ್ಕೆ ಬರುತ್ತಾರೆ. ಸಣ್ಣ ನಾಚಿಕೆ, ಮುಜುಗರ ಇಬ್ಬರಲ್ಲೂ ಎದ್ದು ಕಾಣುತ್ತದೆ. 

ಲಕ್ಷಣ: ಮಹಾಕಾಳಿಯಂತೆ ಬಂದ್ಲು ನೋಡಿ ಡೆವಿಲ್‌ ಭಾರ್ಗವಿ, ಚಂದ್ರಶೇಖರ್‌ ವಂಶ ಸರ್ವನಾಶ ಮಾಡ್ತಾಳಂತೆ!ಲಕ್ಷಣ: ಮಹಾಕಾಳಿಯಂತೆ ಬಂದ್ಲು ನೋಡಿ ಡೆವಿಲ್‌ ಭಾರ್ಗವಿ, ಚಂದ್ರಶೇಖರ್‌ ವಂಶ ಸರ್ವನಾಶ ಮಾಡ್ತಾಳಂತೆ!

ಗೌತಮ್‌ಗೆ ಹೇಳಿಕೊಡುವ ನೆವದಲ್ಲಿ ಶಾರ್ಟ್ ಫಿಲಂ ಉದ್ದಕ್ಕೂ ರುಷಿಯೇ ನಟಿಸಿದ್ದಾನೆ. ಎಲ್ಲರೂ ರಿಷಿಯ ಸೀನ್‌ಗೆ ಚಪ್ಪಾಳೆ ಹೊಡೆದಿದ್ದಾರೆ. ನೋಡಿದರೆ ಗೌತಮ್‌ ಇಲ್ಲಿ ಬಕ್ರಾ ಆಗಿರೋದು ಗೊತ್ತಾಗುತ್ತೆ. ಈ ಎಪಿಸೋಡ್‌ಗಳು ಮಾತ್ರ ಮಜಾ ಕೊಡುತ್ತವೆ. ರಿಷಿಯಾಗಿ ಮುಕೇಶ್‌, ವಸುವಾಗಿ ರಕ್ಷಾ, ಜಗತಿಯಾಗಿ ಜ್ಯೋತಿ ರೈ ನಟಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಗಿಲ್ಲಿ ನಟನ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇಡು ತೀರಿಸಿಕೊಳ್ಳಲು ರೆಡಿಯಾದ ರಘು; ಪ್ಲ್ಯಾನ್‌ ಏನು?
Bigg Boss: 'ಜುಂ ಜುಂ ಮಾಯಾ, ಪ್ರಾಯ ಬಂದ್ರೆ..' ಗಿಲ್ಲಿ- ಅಶ್ವಿನಿ ರೊಮಾನ್ಸ್​, ಕಾವ್ಯಾನ ಕಣ್ಣು ಮುಚ್ರಪ್ಪೋ ಪ್ಲೀಸ್​