Ramachari Serial: ಶೈಲೂನ ದೇವ್ರೇ ಕಾಪಾಡಿದ, ರಾಮಾಚಾರಿಯನ್ನು ಮದುವೆ ಆಗಲು ಅಜ್ಜಿಯ ಆಫರ್‌

Published : Dec 24, 2022, 04:50 PM IST
Ramachari Serial: ಶೈಲೂನ ದೇವ್ರೇ ಕಾಪಾಡಿದ, ರಾಮಾಚಾರಿಯನ್ನು ಮದುವೆ ಆಗಲು ಅಜ್ಜಿಯ ಆಫರ್‌

ಸಾರಾಂಶ

ರಾಮಾಚಾರಿ ಸೀರಿಯಲ್‌ನಲ್ಲಿ ಚಾರು ಈಗ ಶೈಲೂವಾಗಿ ರಾಮಾಚಾರಿಯನ್ನ, ಆತನ ಮನೆಯವರನ್ನು ಇಂಪ್ರೆಸ್ ಮಾಡಲು ಟ್ರೈ ಮಾಡುತ್ತಿದ್ದಾಳೆ. ಈ ನಡುವೆ ಶೈಲು, ಚಾರು ಒಬ್ಬರೇ ಅನ್ನೋದು ಇನ್ನೇನು ರಾಮಾಚಾರಿ ಅಜ್ಜಿ ಮತ್ತು ತಂಗಿಗೆ ಗೊತ್ತಾಗ್ಬೇಕು ಅನ್ನೋವಾಗ ದೇವರೆ ಆಕೆಯನ್ನು ಕಾಯ್ದಿದ್ದಾರೆ. ಅಜ್ಜಿ ರಾಮಾಚಾರಿಯನ್ನು ಮದುವೆ ಆಗೋ ಆಫರ್‌ ಅನ್ನು ಶೈಲೂಗೆ ನೀಡಿದ್ದಾರೆ.

ಕಲರ್ಸ್ ಕನ್ನಡದಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ ರಾಮಾಚಾರಿ. ಇದರಲ್ಲಿ ರಾಮಾಚಾರಿ ಮತ್ತು ಚಾರುಲತಾ ಟಾಮ್‌ ಆಂಡ್‌ ಜೆರ್ರಿ ಥರ ಕಚ್ಚಾಡುತ್ತಿದ್ದವರು. ಇನ್ನೊಂದೆಡೆ ಒಳ್ಳೆಯ ಹುಡುಗ, ಸಂಸ್ಕಾರವಂತ ರಾಮಾಚಾರಿಯನ್ನೇ ಟಾರ್ಗೆಟ್‌ ಮಾಡುತ್ತಾ ಒಂದಲ್ಲ ಒಂದು ರೀತಿ ಕಾಟ ಕೊಡುತ್ತಿದ್ದಳು. ಅದು ಒಮ್ಮೊಮ್ಮೆ ರಾಮಾಚಾರಿ ಪ್ರಾಣಕ್ಕೆ ಸಂಚಕಾರ ತಂದದ್ದೂ ಇತ್ತು. ಯಾವಾಗ ಚಾರುಲತಾ ತಾಯಿ ಮಾನ್ಯತಾ ತನ್ನ ಸವತಿ ಶರ್ಮಿಳಾಳ ಕೊಲೆಗೆ ಸ್ಕೆಚ್‌ ಹಾಕಿದ್ದಾಳೆ. ಆದರೆ ಆಕೆ ಬೀಸಿದ ಬಲೆಗೆ ಆಕೆಯ ಮಗಳು ಚಾರುಲತಾಳೇ ಬಲಿಯಾಗಬೇಕಿದ್ದಾಗ ಅದರಿಂದ ಚಾರುವನ್ನು ಪಾರು ಮಾಡಿದ್ದೇ ರಾಮಾಚಾರಿ. ಆದರೆ ರಾಮಾಚಾರಿ ಮಾಡಿದ್ದ ಪ್ರಾಜೆಕ್ಟ್‌ ಅನ್ನು ಕದ್ದು ತನ್ನದೆಂದೇ ಪ್ರೆಸೆಂಟ್‌ ಮಾಡಿದ್ದಳು ಚಾರು. ಇದರಿಂದ ಹಣ ಬಂದರೆ ತನ್ನ ಅತ್ತಿಗೆಯನ್ನು ಉಳಿಸಿಕೊಳ್ಳಬಹುದೆಂದುಕೊಂಡಿದ್ದ ರಾಮಾಚಾರಿಗೆ ಇದರಿಂದ ಆಘಾತವಾಗಿದೆ. ಹಣವಿಲ್ಲದೇ ಚಿಕಿತ್ಸೆ ಸಿಗದೇ ಅತ್ತಿಗೆ ಅಪರ್ಣಾ ತೀರಿಕೊಂಡಿದ್ದಾಳೆ. ಕೊನೆಗೂ ರಾಮಾಚಾರಿಗೆ ಸತ್ಯ ಗೊತ್ತಾಗಿದೆ. ಆತನಿಗೆ ಚಾರು ಮೇಳೆ ಸಿಟ್ಟಿದೆ.

ಜೀವ ಪಣವಿಟ್ಟು ತನ್ನನ್ನು ಸೇವ್‌ ಮಾಡಿದ ರಾಮಾಚಾರಿ ಮೇಲೆ ಚಾರುವಿಗೆ ಪ್ರೇಮವಾಗಿದೆ. ಆದರೆ ಚಾರಿಗೆ ಚಾರು ಮೇಲೆ ಕೋಪ ಇದೆ. ಆತನ ಮನೆಯವರಿಗೂ ಚಾರು ಮೇಲೆ ಬಹಳ ಸಿಟ್ಟಿದೆ. ಆತನ ರಾಮಾಚಾರಿ ಬಳಿ ಮಾತನಾಡಲು ಶೈಲು ಎಂದುಕೊಂಡು ಓಡಾಡುತ್ತಿದ್ದಾಳೆ. ಈ ಶೈಲುವಿನ ವೇಷದಲ್ಲಿ ಚಾರಿ ಜೊತೆ ಸುಖ ದುಃಖ ಮಾತಾಡ್ತಾಳೆ. ಆತನ ತಂಗಿಯನ್ನೂ ಸೇವ್‌ ಮಾಡಿದ್ದಾಳೆ. ಚಾರಿ ಮನೆಯವರೆಲ್ಲ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ. ಬದಲಾದ ಚಾರು ರೂಪದ ಬಗ್ಗೆ ಸದ್ಯ ರಾಮಾಚಾರಿಗಾಗಲೀ, ಆತನ ಮನೆಯವರಿಗಾಗಲೀ ಸುಳಿವು ಸಿಕ್ಕಿಲ್ಲ. ಇಂಥಾ ಟೈಮಲ್ಲೇ ದೇವಸ್ಥಾನದಲ್ಲಿ ಚಾರು ಅಜ್ಜಿಗೆ ಮುಖಾಮುಖಿ ಆಗಿದ್ದಾಳೆ. ಎಲ್ಲಿ ತಾನೇ ಚಾರು ಅನ್ನೋ ಸತ್ಯ ತಿಳಿದುಬಿಡುತ್ತೋ ಅಂತ ಭಯ ಪಟ್ಟಿದ್ದಾಳೆ. ಆ ಸಮಯದಲ್ಲಿ ದೇವರೇ ಅವಳನ್ನು ಕಾಪಾಡಿದ್ದಾನೆ. ಪುರೋಹಿತರ ಕೈಯಿಂದ ಅರಶಿನ ಕುಂಕುಮದ ಬಟ್ಟಲು ಜಾರಿ ಅದರಲ್ಲಿರೋ ಅರಶಿನ ಕುಂಕುಮ ಚಾರು ಮೇಲೆ ಬಿದ್ದಿದೆ.

ಗೆಳೆಯರಿಂದಲೇ ನೋವುಂಡ ರಾಮಾಚಾರಿ ಹೀರೋ! ರಿತ್ವಿಕ್‌ಗಾದ ಅವಮಾನ ಏನು?

ಅಜ್ಜಿಗೆ ಚಾರು ರೂಪ ಗೊತ್ತಾಗಿಲ್ಲ. ಶೈಲೂ ಒಳ್ಳೆತನ, ಸಂಸ್ಕಾರ ನೋಡಿ ಅಜ್ಜಿಗೆ ಬಹಳ ಖುಷಿ ಆಗಿದೆ. ಎಷ್ಟು ಅಂದರೆ ಚಾರಿ ಅಜ್ಜಿ ಕಡೆಯಿಂದ ಶೈಲೂ ಅಂದರೆ ಚಾರುಗೆ ಮದುವೆ ಆಫರ್ ಬಂದಿದೆ. ಶೈಲುಳನ್ನು ದೇವಸ್ಥಾನದಲ್ಲಿ ನೋಡಿದ ಅಜ್ಜಿ, ಆಕೆಯ ನಡೆ-ನುಡಿ ಇಷ್ಟ ಪಟ್ಟಿದ್ದಾಳೆ. ಅಜ್ಜಿ ನನ್ನ ಮೊಮ್ಮಗ ರಾಮಾಚಾರಿಯನ್ನು ಮದುವೆ ಆಗು ಎಂದು ಆಫರ್ ನಿಡ್ತಾಳೆ.

ರಾಮಾಚಾರಿ ಧಾರಾವಾಹಿಯಲ್ಲಿ ಶೈಲು ಅನ್ನುವ ಹೊಸ ಹೆಸರು ಕೇಳಿ ಬರುತ್ತಿದೆ. ಅದು ಹೊಸ ಪಾತ್ರ(Role) ಅಲ್ಲ. ಶೈಲು ಎನ್ನುವುದು ಚಾರು ಸೃಷ್ಟಿ ಮಾಡಿರೋದು. ರಾಮಾಚಾರಿಯನ್ನು ಮಾತನಾಡಿಸಲು ಶೈಲು ಎಂದು ಹೇಳಿಕೊಂಡಿದ್ದಾಳೆ. ಬೇರೆ ನಂಬರ್ ನಿಂದ ಶೈಲು ಎಂದು ಹೇಳಿ, ಅವನ ಜೊತೆ ಮಾತನಾಡುತ್ತಾಳೆ. ರಾಮಾಚಾರಿ ಮನೆಯವರಿಗೆ ಚಾರು ಕಂಡ್ರೆ ಆಗಲ್ಲ. ಆದ್ರೆ ಶೈಲು ಅಂದ್ರೆ ಎಲ್ಲರಿಗೂ ತುಂಬಾ ಪ್ರೀತಿ. ಶೈಲುಳನ್ನು ದೇವಸ್ಥಾನದಲ್ಲಿ ನೋಡಿದ ಅಜ್ಜಿ, ಆಕೆಯ ನಡೆ-ನುಡಿ ಇಷ್ಟ ಪಟ್ಟಿದ್ದಾಳೆ. ಅದಕ್ಕೆ ಶೈಲು ನಿನಗೆ ಮನೆಯಲ್ಲಿ ಗಂಡು ಹುಡುಕುತ್ತಾ ಇದ್ದಾರಾ ಎನ್ನುತ್ತಾರೆ. ಆಕೆ ಇಲ್ಲ ಅಂತಾಳೆ. ಅದಕ್ಕೆ ಅಜ್ಜಿ ನನ್ನ ಮೊಮ್ಮಗ ರಾಮಾಚಾರಿಯನ್ನು ಮದುವೆ ಆಗು ಎಂದು ಆಫರ್ ನಿಡ್ತಾಳೆ. ಚಾರು ಖುಷಿಯಿಂದ ನಾಚಿಕೊಂಡು ಹೋಗುತ್ತಾಳೆ.

ಗಟ್ಟಿಮೇಳದಲ್ಲಿ ವಿಲನ್ನೇ ಚೇಂಜ್! ನಮಗೆ ಹಳೇ ಸುಹಾಸಿನಿನೇ ಬೇಕು ಅಂತಿದ್ದಾರೆ ವೀಕ್ಷಕರು

ಚಾರು ರಾಮಾಚಾರಿ ಪ್ರೀತಿ ಪಡೆಯಲು ಒದ್ದಾಡುತ್ತಿದ್ದಾಳೆ. ಅವನ ಹಿಂದೆ ಹಿಂದೆ ಓಡಾಡುತ್ತಿದ್ದಾಳೆ. ಅವನು ಅವಳನ್ನು ತಿರುಗಿಯೂ ನೋಡ್ತಾ ಇಲ್ಲ. ಆದ್ರೆ ಶೈಲು ಅಂದ್ರೆ ಮಾತ್ರ, ರಾಮಾಚಾರಿ, ಅವರ ಮನೆಯವರಿಗೂ ಇಷ್ಟ. ಪ್ರೀತಿ(Love) ಮಾಡೋ ಹುಡುಗನ ಮದುವೆ ಆಫರ್ ಬಂದಿದ್ದಕ್ಕೆ ಚಾರು ಖುಷಿ ಆಗಿದ್ದಾಳೆ. ಮುಂದೆ ಸತ್ಯ ತಿಳಿದಾಗ, ರಾಮಾಚಾರಿ ಮತ್ತು ಮನೆಯವರ ರಿಯಾಕ್ಷನ್(Reaction) ಹೇಗಿರುತ್ತೆ? ಚಾರು ಹೊಸ ಗೇಮ್‌ ಪ್ಲಾನ್ ಏನು ಅನ್ನೋದು ಕುತೂಹಲ ಮೂಡಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Karna Serial: ಮೋಸಗಾತಿಯ ಬಲೆಗೆ ಬಿದ್ದ ನಿಧಿ Red Light ಏರಿಯಾದಲ್ಲಿ ಸಿಕ್ಕಾಕ್ಕೊಂಡ್ಲು! ಮುಂದೇನು?
ಗಂಡ-ಹೆಂಡ್ತಿ ಮಲಗಿದ್ರೂ ಬೆಡ್​ರೂಂ ಯಾವಾಗ್ಲೂ ಯಾಕೆ ಓಪನ್​ ಇರ್ಬೇಕು ಗೊತ್ತಾ? ಸೀರಿಯಲ್​ ಪ್ರೇಮಿಗಳು ಉತ್ತರಿಸ್ತಾರೆ ಕೇಳಿ!