
ಕಲರ್ಸ್ ಕನ್ನಡದಲ್ಲಿ ಪ್ರತಿ ರಾತ್ರಿ 9ಕ್ಕೆ ಪ್ರಸಾರವಾಗ್ತಿರೋ ಸೀರಿಯಲ್ ರಾಮಾಚಾರಿ. ಇದರಲ್ಲಿ ರಾಮಾಚಾರಿ ಮತ್ತು ಚಾರುಲತಾ ದ್ವೇಷದ ಕಥೆ ಇಲ್ಲೀವರೆಗೆ ಪ್ರಸಾರ ಆಗ್ತಿತ್ತು. ಆದರೆ ಈಗ ಕೊಂಚ ಬದಲಾದ ಹಾಗೆ ಕಾಣ್ತಿದೆ. ಏಕೆಂದರೆ ಸದ್ಯಕ್ಕೀಗ ಚಾರುವಿನ ನಿಧನವಾಗಿದೆ. ಹಾಗೆಂದು ಎಲ್ಲರೂ ತಿಳಿದುಕೊಂಡಿದ್ದಾರೆ. ಜೊತೆಗೆ ಡಾಕ್ಟರ್ ನೀಡಿರುವ ಡೆತ್ ಸರ್ಟಿಫಿಕೇಟ್ ಚಾರು ತಾಯಿ ಮಾನ್ಯತಾ ಕೈ ಸೇರಿದೆ. ತಮ್ಮ ಏಕೈಕ ಮಗಳನ್ನು ಕಳೆದುಕೊಂಡ ಸಂಕಟದಲ್ಲಿ ಆಕೆಗೆ ಏನು ಮಾಡಲೂ ತೋಚುತ್ತಿಲ್ಲ. ತಾನೇ ತನ್ನ ಕೈಯಾರೆ ಮಗಳನ್ನು ಸಾಯಿಸಿದ ಅಪರಾಧಿ ಭಾವದಲ್ಲಿ ಆಕೆ ಇದ್ದಾಳೆ. ಈ ಪರಿಸ್ಥಿತಿ ಆಕೆಯನ್ನು ಬದಲಿಸುತ್ತಾ? ಅಥವಾ ಮುಂದೆಯೂ ಈಕೆ ಹೀಗೇ ಮುಂದುವರಿಯುತ್ತಾಳಾ ಎಂಬ ಪ್ರಶ್ನೆ ಬರುತ್ತದೆ. ಉದ್ಯಮಿ ಜೈಶಂಕರ್ ಅವರ ಇಬ್ಬರು ಪತ್ನಿಯರಲ್ಲಿ ಹಿರಿಯವಳು ಮಾನ್ಯತಾ. ಕೆಟ್ಟ ಸ್ವಭಾವದ ಹೆಂಗಸು, ಇವರ ಮಗಳು ಚಾರು ಕೊಬ್ಬಿನ ಹುಡುಗಿ. ರಾಮಾಚಾರಿಗೆ ಚಾರುವಿನ ಒಳ್ಳೆಯತನವೂ ಗೊತ್ತು, ಕೆಟ್ಟತನವೂ ಗೊತ್ತು. ಆದರೆ ಆತನಿಗೆ ಹೇಗಾದರೂ ಆಕೆಯ ಒಳ್ಳೆಯತನವನ್ನು ಹೊರ ತೆಗೆಯಬೇಕು, ಕೆಟ್ಟತನವನ್ನು ಕಡಿಮೆ ಮಾಡಬೇಕೆಂಬ ಆಸೆ. ಆದರೆ ಎಂಥಾ ಸಂದರ್ಭದಲ್ಲೂ ಪಾಠ ಕಲಿಯದ ಚಾರು ಇದೀಗ ಸಾವಿನಂಚಿಗೆ ಹೋಗಿದ್ದಾಳೆ.
ಕಾಡಿನಲ್ಲಿ ಪಾಳುಬಿದ್ದ ಕಟ್ಟಡದಲ್ಲಿ ಮೂರು ದಿನ ಅನ್ನ ನೀರಿಲ್ಲದೇ ಬಿದ್ದಿದ್ದ ಚಾರುವನ್ನು ದೈತ್ಯನಿಂದ ಪಾರು ಮಾಡಿ ರಾಮಾಚಾರಿ ಆಸ್ಪತ್ರೆಗೆ ಸೇರಿಸಿದ್ದಾನೆ. ಆದರೆ ಚಾರುವನ್ನು ಉಳಿಸಿಕೊಳ್ಳೋದು ವೈದ್ಯರಿಗೆ ಸವಾಲಾಗಿತ್ತು. ಡಾಕ್ಟರ್ ಚಾರು ಬದುಕೋದು ಕಷ್ಟ ಅಂದಿದ್ದರು. ಕೊನೆಯಲ್ಲಿ ಅವರ ಪ್ರಯತ್ನಗಳೆಲ್ಲ ಕೈಜಾರಿ ಚಾರುವಿನ ನಿಧನವನ್ನೂ ಘೋಷಿಸಿದ್ದರು. ಅಷ್ಟಾದ ಮೇಲೆ ಎಲ್ಲರೂ ಚಾರು ಸತ್ತಿದ್ದಾಳೆ ಎಂದು ಭಾವಿಸಿದ್ದಾರೆ. ಆದರೆ ರಾಮಾಚಾರಿಗೆ ಆಶಾಕಿರಣ ಕಂಡಿದೆ.
Jothe jotheyali : ಪತ್ನಿಯನ್ನೇ ಮರೆಯಲು ಹೇಗೆ ಸಾಧ್ಯ? ಅನುಮಾನದ ಸುಳಿಯಲ್ಲಿ ಸಂಜು
ಹಾಗೆ ನೋಡಿದರೆ ರಾಮಾಚಾರಿ ಚಾರು ಮುಂದೆ ಕೂತು ಹಳೆಯದನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕಿದ್ದಾನೆ. ಮನೆಯವರಿಗಿಂತ ಹೆಚ್ಚು ಅತ್ತಿದ್ದಾನೆ. ಡಾಕ್ಟರ್ ಐಸಿಯುನಲ್ಲಿ ಚಾರುಗೆ ಎಷ್ಟೇ ಚಿಕಿತ್ಸೆ ನೀಡಿದ್ರೂ ಚಾರು ಯಾವುದಕ್ಕೂ ಸ್ಪಂದಿಸಿರಲಿಲ್ಲ. ಅದಕ್ಕೆ ಚಾರು ಬದುಕುವುದಿಲ್ಲ ಎಂದಿದ್ದರು. ಮನೆಯವರು, ರಾಮಾಚಾರಿ, ಚಾರು ಬದುಕಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದರು. ಆದ್ರೆ ಚಾರು ಬದುಕಿಲ್ಲ.
ರಾಮಾಚಾರಿ ಅಳುತ್ತಿದ್ದ ರೀತಿ ನೋಡಿ ಅಲ್ಲಿದ್ದ ನರ್ಸ್ ಗೆ ಅನುಮಾನ ಬಂದಿದೆ. "ನೀವು ಇವರನ್ನು ಲವ್(Love) ಮಾಡುತ್ತಿದ್ರಾ? ನಿಮ್ಮ ಪ್ರೀತಿ ವಿಷ್ಯ ಇವರಿಗೆ ಹೇಳಿದ್ರಾ? ಐ ಲವ್ ಯು ಅಂತ ಒಮ್ಮೆಯಾದ್ರೂ ಹೇಳಿದ್ರಾ' ಎಂದು ಕೇಳ್ತಾಳೆ. ರಾಮಾಚಾರಿ ಚಾರುಳನ್ನು ಅಷ್ಟು ಮಿಸ್ ಮಾಡಿಕೊಳ್ತಿದ್ದಾನೆ. ಇಂಥಾ ರಾಮಾಚಾರಿಯ ಪ್ರೀತಿಗೆ ದೇವರು ಕೊನೆಗೂ ಕರಗಿದ್ದಾನೆ. ಚಾರು ತಾನು ಬದುಕಿರುವ ಸೂಚನೆ ನೀಡಿದ್ದಾಳೆ. ರಾಮಾಚಾರಿಗೆ ಚಾರು ಕಣ್ಣೀರು(Tears) ಕಾಣಿಸಿದೆ. ಚಾರುವಿನ ಮೃತಪಟ್ಟಿದೆ ಎನ್ನಲಾದ ದೇಹ(Body)ವನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗಲು ರೆಡಿ ಮಾಡ್ತಿದ್ದರು. ಆಗ ಚಾರು ಕಣ್ಣಲ್ಲಿ ನೀರು ಬಂದಿರುವುದನ್ನು ರಾಮಾಚಾರಿ ಗಮನಿಸುತ್ತಾನೆ. ಅಲ್ಲಿರುವ ನರ್ಸ್ ಗೆ ಕೇಳುತ್ತಾನೆ. ಸತ್ತವರ ಕಣ್ಣಲ್ಲಿ ನೀರು ಬರುತ್ತಾ ಅಂತ. ಆಕೆ ಇಲ್ಲ ಎನ್ನುತ್ತಾಳೆ. ಅದಕ್ಕೆ ಚಾರು ಸತ್ತಿಲ್ಲ. ಬದುಕಿದ್ದಾಳೆ. ಡಾಕ್ಟರ್ ಚಿಕಿತ್ಸೆ(Treatment) ನೀಡಿ ಎಂದು ರಾಮಾಚಾರಿ ಚಡಪಡಿಸುತ್ತಿದ್ದಾನೆ.
Kannadathi: ರತ್ನಮಾಲಾ ಕಂಪನಿಯ ಹೊಸ ಎಂಡಿ ಹರ್ಷ ಕುಮಾರ್! ಅದರೆ ಇದೆಷ್ಟು ದಿನ?
ಇಷ್ಟೆಲ್ಲ ಆದರೂ ಕೊನೆಗೂ ರಾಮಾಚಾರಿ ಪಾಲಿಗೆ ಚಾರು ಉಳಿದಿದ್ದಾಳೆ. ರಾಮಾಚಾರಿಯ ಪ್ರೀತಿ, ಪ್ರಾರ್ಥನೆ(Prayer) ಫಲ ಕೊಟ್ಟಿದೆ. ಚಾರು ಬದುಕಿರುವ ಸೂಚನೆ(Signal) ಸಿಕ್ಕಿದೆ. ಆದರೆ ಇದೆಲ್ಲ ಸಾಧ್ಯವಾದದ್ದು ರಾಮಾಚಾರಿಯಿಂದ. ಇದು ಮುಂದಾದರೂ ಚಾರುವಿಗೆ ತಿಳಿಯುತ್ತಾ? ಅವಳು ರಾಮಾಚಾರಿ ಮೇಲಿನ ದ್ವೇಷ ಕಡಿಮೆ ಮಾಡ್ತಾಳಾ? ರಾಮಾಚಾರಿ ಪ್ರೀತಿ ಈಗಲಾದರೂ ಹೊರಬರುತ್ತಾ ಅನ್ನುವುದನ್ನು ಕಾದು ನೋಡಬೇಕು.
ರಾಮಾಚಾರಿಯಾಗಿ ರುತ್ವಿಕ್ ಕೃಪಾಕರ್, ಚಾರುಲತಾ ಪಾತ್ರದಲ್ಲಿ ಮೌನಾ ಗುಡ್ಡೆ ಮನೆ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.