Lakshana serial: ಕಿಚನ್ ನಲ್ಲಿ ಭೂಪತಿ ಸಿಎಸ್‌, ಹಬ್ಬದಡುಗೆ ಇವ್ರದ್ದೇ ಅಂತೆ!

Published : Feb 23, 2023, 11:47 AM ISTUpdated : Feb 23, 2023, 12:34 PM IST
Lakshana serial: ಕಿಚನ್ ನಲ್ಲಿ ಭೂಪತಿ ಸಿಎಸ್‌, ಹಬ್ಬದಡುಗೆ ಇವ್ರದ್ದೇ ಅಂತೆ!

ಸಾರಾಂಶ

ಸೀರಿಯಸ್ ಆಗಿ ಸಾಗ್ತಿದ್ದ ಲಕ್ಷಣ ಸೀರಿಯಲ್‌ನಲ್ಲಿ ಅಪರೂಪಕ್ಕೆ ಫನ್‌ ಎಪಿಸೋಡ್ ಪ್ರಸಾರವಾಗಿದೆ. ಸೂಪರ್ ಶೆಫ್ ಭೂಪತಿ ಹಬ್ಬದಡುಗೆ ಮಾಡಲಿಕ್ಕೆ ಅಂತ ಕಿಚನ್ ಸೇರ್ಕೊಂಡಿದ್ದಾನೆ. ಮಾವ ಚಂದ್ರಶೇಖರ್ ಅಳಿಯನಿಗೆ ಅಸಿಸ್ಟೆಂಟ್ ಆಗಿದ್ದಾರೆ.

ಲಕ್ಷಣ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ. ವಿಜಯಲಕ್ಷ್ಮೀ ಈ ಸೀರಿಯಲ್ ನಾಯಕಿ. ಜಗನ್ನಾಥ್ ಚಂದ್ರಶೇಖರ್ ಹೀರೋ. ಈ ಸೀರಿಯಲ್‌ಗೆ ಇದೀಗ ಹೊಸ ತಿರುವು ಸಿಕ್ಕಿದೆ. ಇಷ್ಟ ದಿನ ನಕ್ಷತ್ರ ಹಾಗೂ ಚಂದ್ರಶೇಖರ್ ಕಂಡ್ರೆ ಭೂಪತಿಗೆ ಸಿಟ್ಟು, ದ್ವೇಷ ಇತ್ತು. ತನ್ನ ಹಾಗೂ ನಕ್ಷತ್ರ ಮದುವೆ ವಿಚಾರದಲ್ಲಿ ಇಬ್ಬರೂ ಮೋಸ ಮಾಡಿದ್ದಾರೆ ಅನ್ನೋದು ಭೂಪತಿ ಭಾವನೆಯಾಗಿತ್ತು. ಆದರೆ ತಾನು ಅಂದುಕೊಂಡದ್ದೆಲ್ಲ ನಿಜವಲ್ಲ ಅನ್ನೋ ಸತ್ಯದ ಅರಿವು ಭೂಪತಿಗಾಗಿದೆ. ಮದುವೆ ವಿಷಯದಲ್ಲಿ ನಕ್ಷತ್ರ ಮೋಸ ಮಾಡಿಲ್ಲ ಅನ್ನೋದು ಗೊತ್ತಾಗಿದೆ. ಹಾಗೇ, ಚಂದ್ರಶೇಖರ್ ತಪ್ಪು ಮಾಡಿದ್ದರೂ ಅದು ಅಷ್ಟು ಕಾಲ ನೋವನುಭವಿಸಿದ್ದ ತನ್ನ ಮಗಳು ಇದರಿಂದಾದರೂ ಖುಷಿಯಾಗಿರಲಿ ಎಂಬ ಕಾರಣಕ್ಕೆ ಎಂಬುದೂ ಭೂಪತಿ ಅರಿವಿಗೆ ಬಂದಿದೆ. ತಂದೆಯ ಪ್ರೇಮವಷ್ಟೇ ಸಿಎಸ್ ಮಾಡಿದ ಈ ಕೆಲಸದ ಹಿಂದಿರುವುದು ಗಮನಿಸಿ ಭೂಪತಿ ಅವರನ್ನು ಕ್ಷಮಿಸಿದ್ದಾನೆ. ಮಾವ ಎಂದು ಕರೆಯುವ ಮೂಲಕ ಹೊಸ ಸಂಬಂಧಕ್ಕೆ ನಾಂದಿ ಹಾಡಿದ್ದಾನೆ.

ಹಬ್ಬಕ್ಕೆ ನಕ್ಷತ್ರ ಭೂಪತಿ ಸಿಎಸ್ ಮನೆಗೆ ಬಂದಿದ್ದಾರೆ. ಇಲ್ಲೀವರೆಗೆ ನಕ್ಷತ್ರ ಭೂಪತಿ ಅಲ್ಲಿಗೆ ಬರುತ್ತಿದ್ದರೂ ಈ ಬಾರಿ ನಿಜವಾದ ಮನಃಪೂರ್ವಕವಾಗಿ ಗಂಡ ಹೆಂಡಿರಾಗಿ ಬರುತ್ತಿರುವುದು ಅವರಿಗೆ ಖುಷಿ ಕೊಟ್ಟಿದೆ. ಆ ಖುಷಿಯಲ್ಲಿ ಅವರಿಗೆ ಇನ್ನೊಂದು ಸ್ವೀಟ್ ಸರ್ಪೈಸ್ ಭೂಪತಿ ಕೊಟ್ಟಿದ್ದಾನೆ. ಅವರನ್ನು ಗೌರವದಿಂದ ಮಾವ ಎಂದು ಕರೆದಿದ್ದಾನೆ. ಇದು ಚಂದ್ರಶೇಖರ್ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದೆ. ಇದೇ ಹೊತ್ತಿಗೆ ನಕ್ಷತ್ರ ಸಾಕುತಾಯಿಯೂ ಬಂದಿದ್ದಾರೆ. ಎಲ್ಲ ಹೆಂಗಸರು ಹಬ್ಬದ ತಯಾರಿಯಲ್ಲಿರುವಾಗ ಭೂಪತಿಗೆ ಮಜವಾದ ಐಡಿಯಾ ಬಂದಿದೆ. ಅದು ಹಬ್ಬದಡುಗೆ ಮಾಡೋದು. ಯೆಸ್, ಈ ಸಲ ಹಬ್ಬಕ್ಕೆ ಭೂಪತಿ ಅಡುಗೆ ಸ್ಪೆಷಲ್. ಶುರುವಲ್ಲಿ ಹೆಂಗಸರು ಇದಕ್ಕೆ ನಖರಾ ಮಾಡಿದರೂ ಭೂಪತಿ ಒಪ್ಪಿಸಿದ್ದಾನೆ.

Lakshana serial: ಮಗಳು ಅಳಿಯ ಜೊತೆಯಾಗಿ ಬಂದರು, ಮೊಗದಲ್ಲಿ ನಗುವಿದ್ದರೂ ಸಿಎಸ್‌ಗೇನೋ ಆತಂಕ!

ಸಾಕ್ಷಾತ್ ನಳ ಮಹಾರಾಜನಂತೆ ಭೂಪತಿ ಅಡುಗೆ ಮನೆಗೆ ಎಂಟ್ರಿ ಕೊಟ್ಟಿದ್ದಾನೆ. ಹಾಗೆ ನೋಡಿದರೆ ಭೂಪತಿ ಮತ್ತು ನಕ್ಷತ್ರ ಪರಿಚಯವಾದದ್ದೇ ಇಂಥ ಅಡುಗೆಯ ನೆವದಲ್ಲಿ. ಆಗ ಮಾರುವೇಷದಲ್ಲಿ ಭೂಪತಿ ಅಡುಗೆ ಭಟ್ಟನಾಗಿ ತನ್ನ ಅಡುಗೆ ಮಾಡುವ ಆಸೆ ತೀರಿಸಿಕೊಳ್ಳುತ್ತಿದ್ದಾಗ ನಕ್ಷತ್ರ ಹೊಟ್ಟೆ ಪಾಡಿಗೆ ಸಹಾಯಕಿಯಾಗಿ ಅಲ್ಲಿಗೆ ಬಂದಿದ್ದಳು. ಅಲ್ಲೇ ಅವರಿಬ್ಬರ ಪರಿಚಯ, ಕಿತ್ತಾಟ ಎಲ್ಲ ಆಗಿತ್ತು. ಆಮೇಲೆ ಭೂಪತಿ ಎಂಥಾ ಶ್ರೀಮಂತ(Rich) ಅನ್ನೋದು ನಕ್ಷತ್ರಕ್ಕೆ ಗೊತ್ತಾಗಿತ್ತು. ಆದರೆ ಅಷ್ಟರಲ್ಲಾಗಲೇ ಅವಳು ಭೂಪತಿಗೆ ಮನಸ್ಸು ಕೊಟ್ಟಿದ್ದಳು, ಭೂಪತಿ ಮದುವೆ ಶ್ವೇತಾ ಜೊತೆ ಫಿಕ್ಸ್(Fix) ಆಗಿತ್ತು.

ಇದೀಗ ಮತ್ತೆ ಭೂಪತಿ ಅಡುಗೆ ಮನೆಗೆ ಎಂಟ್ರಿ ಕೊಟ್ಟಿದ್ದಾನೆ. ಅಳಿಯನ ಜೊತೆಗೆ ತಾನೂ ಅಡುಗೆ ಮಾಡೋದಾಗಿ ಸಿಎಸ್ ಕೂಡ ಕಿಚನ್(Kitchen) ಪ್ರವೇಶ ಮಾಡಿದ್ದಾರೆ. ಮೊದಲ ಸಲ ಸಿಎಸ್ ಕಿಚನ್ ಗೆ ಎಂಟ್ರಿ(Entry) ಕೊಡ್ತಿರೋದು ಕಂಡು ಭೂಪತಿ ಕಿಚಾಯಿಸಿದ್ದಾನೆ. ಮಾವ ಇಲ್ಲಿ ಅಳಿಯನಿಗೆ ಅಸಿಸ್ಟೆಂಟ್(Assistent) ಆಗಿದ್ದಾರೆ. ಸೋ, ಮಾವ ಅಳಿಯನ ನಳಪಾಕ ಸವಿಯಲು ಹೆಂಗಸರೆಲ್ಲ ಕಾಯುತ್ತಿರೋದಷ್ಟೇ ಅಲ್ಲ ಮರೆಯಲ್ಲಿ ನಿಂತು ಇವರ ಅಡುಗೆಯ ಮಜಾ ಸವಿಯುತ್ತಿದ್ದಾರೆ. ಆದ್ರೆ ಶಿವರಾತ್ರಿ ದಿನ ಉಪವಾಸ ಮಾಡ್ಬೇಕಲ್ವಾ, ನಿಮ್ದೇನಿದು ಹಬ್ಬದಡುಗೆ ಅಂತ ವೀಕ್ಷಕರಲ್ಲಿ ಕೆಲವರು ಕಮೆಂಟ್ ಮಾಡಿದ್ದಾರೆ. ಆದರೆ ಸಿಎಸ್ ಸಹ ಅಡುಗೆ ಮನೆ ಪ್ರವೇಶಿಸಿರೋದು ನೋಡಿದ್ರೆ ಬಹುಶಃ ಮನೆಯವ್ರಿಗೆಲ್ಲ ಉಪವಾಸವೇ ಇರ್ಬೇಕು ಅನ್ನೋ ಮಾತೂ ಕೇಳಿಬರ್ತಿದೆ.

ಗಂಡನಿಗಾಗಿ ಮೂಗು ಚುಚ್ಚಿಸಿಕೊಂಡ ನಟಿ ರಶ್ಮಿ ಪ್ರಭಾಕರ್; ವಾವ್ ಎಂದ ಫ್ಯಾನ್ಸ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪತ್ನಿ, ಮಗಳ ಜೊತೆ ಹೋಗಿ ಮನೆಗೆ ಹೊಸ ಕಾರ್‌ ತಂದ Amruthadhaare Serial ನಟ ರಾಜೇಶ್‌ ನಟರಂಗ!
BBK 12: ಟೈಮ್‌ ಬಂದೇಬಿಡ್ತು, ಅಂದು ಹೊಟ್ಟೆ ಉರಿಸಿದ್ದ ರಘು; ಚಕ್ರಬಡ್ಡಿ ಸಮೇತ ವಾಪಸ್‌ ಕೊಟ್ಟ ಗಿಲ್ಲಿ ನಟ