ಪುಟ್ಟಕ್ಕನ ಮಕ್ಕಳು: ಖೋ ಖೋ ಚಾಂಪಿಯನ್ ಪುಟ್ಟಕ್ಕನ ಕತೆ ಮಗಳೆದುರು ರಿವೀಲಾಯ್ತು, ಮುಂದೈತೆ ಹಬ್ಬ!

By Suvarna NewsFirst Published Aug 29, 2022, 1:39 PM IST
Highlights

ಪುಟ್ಟಕ್ಕನ ಮಕ್ಕಳು ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಸೀರಿಯಲ್‌. ಈ ಬಾರಿ ಟಿ ಆರ್ ಪಿಯಲ್ಲಿ ನಂಬರ್ 1 ಸ್ಥಾನದಲ್ಲಿದೆ. ಇದೀಗ ತನ್ನ ತಾಯಿ ಪುಟ್ಟಕ್ಕ ಎಂಥಾ ವ್ಯಕ್ತಿ ಆಗಿದ್ದಳು ಅನ್ನೋದು ಮಗಳು ಸುಮಾಗೆ ಗೊತ್ತಾಗಿದೆ. ಮುಂದೈತೆ ಪುಟ್ಟಕ್ಕನ ಖೋ ಖೋ ಕರಾಮತ್ತು ಅನ್ನೋ ನಿರೀಕ್ಷೆ ವೀಕ್ಷಕರಲ್ಲಿದೆ.

'ಪುಟ್ಟಕ್ಕನ ಮಕ್ಕಳು' ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರ ರಾತ್ರಿ 7.30 ಕ್ಕೆ ಪ್ರಸಾರವಾಗುತ್ತಿರುವ ಸೀರಿಯಲ್‌. ಒಂಟಿ ಹೆಂಗಸು, ಗಟ್ಟಿಗಿತ್ತಿ, ಮಾನವೀಯತೆಯ ಪುಟ್ಟಕ್ಕ ತನ್ನ ಪುಟ್ಟ ಹೊಟೇಲಿನಿಂದಲೆ ಮೂವರು ಹೆಣ್ಣುಮಕ್ಕಳನ್ನು ಬೆಳೆಸುವ ಕತೆ. ಇದು ಈಗ ಟಿವಿ ಸೀರಿಯಲ್‌ಗಳಲ್ಲೇ ಅತೀ ಹೆಚ್ಚು ಟಿ ಆರ್ ಪಿ ಇರುವ ಧಾರಾವಾಹಿ. ಪುಟ್ಟಕ್ಕನ ಪಾತ್ರಕ್ಕೆ ಜೀವ ತುಂಬಿರುವ ಉಮಾಶ್ರೀ ನಟನೆಯನ್ನು ವೀಕ್ಷಕರು ತುಂಬು ಮನಸ್ಸಿಂದ ಮೆಚ್ಚಿಕೊಂಡಿದ್ದಾರೆ. ಈ ಸೀರಿಯಲ್ ಕತೆಯೂ ಕುತೂಹಲ ಹೆಚ್ಚಿಸುವಂತಿದೆ. ಕಾಲೇಜು ಓದುವ ತನ್ನ ಮಗಳು ಸುಮಿ ಮತ್ತು ತಂಡಕ್ಕೆ ಇದೀಗ ಪುಟ್ಟಕ್ಕ ತಾನೇ ಕೋಚ್ ಆಗಲು ಹೊರಟಿದ್ದಾಳೆ. ಆದರೆ ಅವಳ ಸಾಮರ್ಥ್ಯದ ಬಗ್ಗೆ ತಿಳಿಯದ ಅವಳ ಮಗಳು ಸುಮಾ ಅಮ್ಮ ಕೋಚ್ ಅನ್ನೋದನ್ನು ಧಿಕ್ಕರಿಸಿದ್ದಾಳೆ. ಪುಟ್ಟಕ್ಕನಿಗೆ ನೋವಾಗುವಂತೆ ಮಾತಾಡಿದ್ದಾಳೆ. 'ಅಡುಗೆ ಮಾಡಿದ ಹಾಗಲ್ಲ ಖೋ ಖೋ ಆಡೋದು' ಅಂತೆಲ್ಲ ಮಾತಾಡಿ ಅವರನ್ನು ಹೀಯಾಳಿಸಿದ್ದಾಳೆ. ಆದರೆ ಕೊನೆಗೂ ಅವಳಿಗೆ ತನ್ನಮ್ಮ ತಾನಂದುಕೊಂಡಷ್ಟು ಸರಳ ಅಲ್ಲ, ಅವಳ ಹಿಂದೆಯೂ ಕತೆ ಇದೆ. ಅವಳಿಗೆ ಖೋ ಖೋ ಅನ್ನೋದು ನೀರು ಕುಡಿದಷ್ಟೇ ಸಲೀಸು ಅನ್ನೋದು ಶಾಂತಕ್ಕನ ಮೂಲಕ ಗೊತ್ತಾಗಿದೆ.

ಹಾಗೆ ನೋಡಿದರೆ ಪುಟ್ಟಕ್ಕನ ಮಗಳು ಸುಮಾ ಅಮ್ಮನನ್ನೆ ಪ್ರಶ್ನೆ ಮಾಡುತ್ತಿದ್ದು ಅವಳ ಮುಗ್ಧತೆ, ಅಮ್ಮನ ಬಗ್ಗೆ ಏನೂ ತಿಳಿಯದ್ದನ್ನು ಸೂಚಿಸುತ್ತದೆ. 'ಯಾವ ಉದ್ದೇಶದಿಂದ ನಮಗೆ ಖೋ-ಖೋ ಕೋಚ್ ಆಗಿ ಬರುತ್ತಿದ್ದಿಯಾ. ಈ ಗ್ರೌಂಡ್ ನಲ್ಲಿ ಆಗಿದ್ದು ಓಕೆ ಎಲ್ಲಾದರೂ ಕಾಲೇಜು ಗ್ರೌಂಡ್ ನಲ್ಲಿ ಹೀಗೆಲ್ಲ ಆಗುತ್ತಿದ್ದರೆ ನಿನ್ನ ಮಾನ ಮರ್ಯಾದೆ ಏನಾಗುತ್ತಿತ್ತು ಗೊತ್ತಾ ಎಂದೆಲ್ಲ ಹೇಳಿ ಸುಮಾ ಪುಟ್ಟಕ್ಕನನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. 'ಖೋ-ಖೋ ಆಟ ಎಂದರೆ ಏನು ಅನ್ನೋದಾದರೂ ನಿನಗೆ ಗೊತ್ತಾ. ಕೋಚ್ ಆಗುತ್ತೇನೆ ಎಂದು ಹೇಳುತ್ತಿಯಾ, ಏನಮ್ಮಾ ಇದೆಲ್ಲ' ಎಂದು ಬಯ್ಯುತ್ತಾಳೆ. ಅಡಿಗೆ ಮಾಡಿದಷ್ಟೂ ಸುಲಭ ಅಲ್ಲ ಆಟ ಆಡೋದು ಎಂದು ಹೇಳಿದ ಮಾತಿನಿಂದ ಪುಟ್ಟಕ್ಕನ ಸಹವರ್ತಿ ಶಾಂತಮ್ಮನಿಗೆ ಬೇಸರವಾಗುತ್ತದೆ. ಬಳಿಕ ಶಾಂತಮ್ಮ ಜೋರಾಗಿ ಹೇಳುತ್ತಾರೆ. 'ಪುಟ್ಟಕ್ಕನ ಬಗ್ಗೆ ಏನಾದರೂ ನಿಮಗೆ ಗೊತ್ತಿದೆಯಾ. ಆಕೆಯ ಆಸೆ ಗೊತ್ತಿದೆಯಾ. ಅವಳನ್ನು ಯಾರು ಅಂದುಕೊಂಡಿದ್ದೀರಿ' ಎಂದು ಹೇಳುತ್ತಾಳೆ. ಅದಕ್ಕೆ ಸುಮಾ ಸುಮ್ಮನಾಗುತ್ತಾರೆ. ಇದರಿಂದ ಸಹನಾ ಸ್ನೇಹಾಗೂ ಕುತೂಹಲ ಮೂಡುತ್ತದೆ.

ಬಿಗ್ ಬಾಸ್ ತೆಲುಗು: ಅತೀ ಹೆಚ್ಚು ಸಂಭಾವನೆ ಪಡೆದ ನಟ ನಾಗಾರ್ಜುನ್

ಶಾಂತಕ್ಕ ಹೇಳುತ್ತಾರೆ, 'ಪುಟ್ಟಕ್ಕ ಇಡೀ ಹಳ್ಳಿ ಜನಕ್ಕೆ ಖೋ-ಖೋ ಹೇಳಿಕೊಟ್ಟವರು. ಆಕೆಯ ಹಳೆಯ ಟ್ರಂಕ್ ಅನ್ನು ತೆರೆದು ಒಮ್ಮೆ ಪರೀಕ್ಷೆ ಮಾಡಿ ನೋಡಿ ಪ್ರಮಾಣ ಪತ್ರ ಎಲ್ಲಾ ಸಿಗುತ್ತದೆ' ಎಂದು ಹೇಳುತ್ತಾಳೆ. ಖೋ-ಖೋದಲ್ಲಿ ಏಷ್ಟು ಜನ ಇರಬೇಕಿತ್ತು. ಯಾರೆಲ್ಲ ಇರಬೇಕು ಏನು ಎಂದು ಕೇಳುತ್ತಿದ್ದ ಸುಮಾ ಇದ್ಯಾಕೋ ಶಾಂತಕ್ಕನ ಮಾತಿನಿಂದ ಸುಮ್ಮನಾಗಿದ್ದಾರೆ. ಪುಟ್ಟಕ್ಕ ದೊಡ್ಡ ತಂಡ ಕಟ್ಟಿ ಪದಕವನ್ನು ಗೆದ್ದಿದ್ದಾರೆ. ಪುಟ್ಟಕ್ಕ ಖೋ-ಖೋ ಆಟದಲ್ಲಿ ಯಾರೇ ಎದುರಾಳಿ ಸಿಕ್ಕರೂ ಅವರೆಲ್ಲ ಪುಟ್ಟಕ್ಕನ ಬೇಟೆಯೇ. ಏಷ್ಟು ಚೆನ್ನಾಗಿ ಖೋ ಖೋ ಆಟವನ್ನು ಆಡಿ ಜನರ ಮನ ಗೆಲ್ಲುತ್ತಾರೆ. ಅಡಿಗೆ ಮನೆಯಲ್ಲಿ ಬೇಯ್ಯುವ ಪುಟ್ಟಕ್ಕ ಮಾತ್ರ ಗೊತ್ತಿರೋದು ಅದರಾಚೆಗೆ ಇರುವ ಆಕೆ ಕಥೆ ಬಗ್ಗೆ ಎನು ತಿಳಿದೇ ಇಲ್ಲ. ಹತ್ತೂರನ್ನು ಮೀರಿಸುವ ಖೋ-ಖೋ ಆಟಗಾರ್ತಿ ಪುಟ್ಟಕ್ಕ. ಆಟ ಆಡಿ ಗೆದ್ದು ಊರಿಗೆ ಹೆಸರು ಮಾಡಿ ಕೊಟ್ಟ ಪುಟ್ಟಕ್ಕ. ತನ್ನ ಮಕ್ಕಳಿಗೋಸ್ಕರ ಮನೆಗೋಸ್ಕರ ಪುಟ್ಟಕ್ಕ ಆಕೆಯ ಜನುಮವನ್ನು ತೆಯ್ದು ಬಿಟ್ಟಿದ್ದಾಳೆ. ಈ ವಿಚಾರವೆಲ್ಲ ಇದೀಗ ಸುಮಾಗೆ ಗೊತ್ತಾಗಿದೆ.

ಲೂಸಿಯಾ ಪವನ್‌ ಕುಮಾರ್‌ ಜತೆ ಸಿನಿಮಾ ಮಾಡುತ್ತೇನೆ: ವಿಕ್ರಮ್‌

ಇನ್ನಾದರೂ ಸುಮಾ ಕೋಚ್ ಆಗಿ ಅಮ್ಮನನ್ನು ಸ್ವೀಕರಿಸುತ್ತಾಳ ಎಂಬುವುದನ್ನು ನೋಡಬೇಕಿದೆ. ಅಮ್ಮನಿಗೆ ಎಲ್ಲರೆದುರು ಅವಮಾನ ಮಾಡಿರುವುದು ಅಲ್ಲದೆ ಅಮ್ಮನ ಕನಸನ್ನು ನನಸು ಮಾಡುವತ್ತ ಗಮನ ಹರಿಸುತ್ತಾಳ ಎಂಬುದನ್ನು ಕಾದು ನೋಡಬೇಕಿದೆ.

click me!