Kannadathi: ಅಮ್ಮಮ್ಮನ ಕೊಲೆ ಯತ್ನದ ಕೇಸ್‌ ಸಾನ್ಯಾ ಮೇಲೆ ಬೀಳೋ ಕ್ಷಣ ಹತ್ತಿರದಲ್ಲಿದೆ!

Published : Oct 29, 2022, 04:04 PM IST
Kannadathi: ಅಮ್ಮಮ್ಮನ ಕೊಲೆ ಯತ್ನದ ಕೇಸ್‌ ಸಾನ್ಯಾ ಮೇಲೆ ಬೀಳೋ ಕ್ಷಣ ಹತ್ತಿರದಲ್ಲಿದೆ!

ಸಾರಾಂಶ

ಕನ್ನಡತಿಯಲ್ಲಿ ಸಾನ್ಯಾ ಅಮ್ಮಮ್ಮನ ಕೊಲೆ ಮಾಡುವ ಯತ್ನ ಮಾಡಿದ ವೀಡಿಯೋಗೆ ಮರುಜೀವ ಬರೋ ಎಲ್ಲ ಸೂಚನೆಗಳೂ ಸಿಕ್ಕಿವೆ. ಹೀಗಾದರೆ ಸಾನ್ಯಾ ಜೈಲು ಸೇರುವ ಗಳಿಗೆ ದೂರವಿಲ್ಲ.

ಕನ್ನಡತಿ ಸೀರಿಯಲ್‌ನಲ್ಲಿ ಒಂದಿಷ್ಟು ಟ್ವಿಸ್ಟ್ ಮತ್ತು ಟರ್ನ್ ಗಳ ಬಳಿಕ ಇದೀಗ ಮಹತ್ವದ ಕಥೆಯೊಂದು ಮುನ್ನೆಲೆಗೆ ಬರುತ್ತಿದೆ. ಮುಚ್ಚಿ ಹೋದಂತಿದ್ದ ಪ್ರಕರಣಕ್ಕೆ ಮರುಜೀವ ಬರುತ್ತಿದೆ. ಹರ್ಷ ಭುವಿ ಮದುವೆಗೆ ಪ್ರಮುಖ ಅಡ್ಡಿಯಾದದ್ದು ಸಾನ್ಯಾ ಮತ್ತು ವರೂಧಿನಿ. ವರೂಧಿನಿಗೆ ಹರ್ಷನ ಮೇಲೆ ಕಣ್ಣಾದರೆ ಸಾನ್ಯಾಗೆ ಆಸ್ತಿ ಮೇಲೆ ಕಣ್ಣು. ಹರ್ಷನ ಮದುವೆ ಆದರೆ ರತ್ನಮಾಲಾಳ ಅಧಿಕಾರವೆಲ್ಲ ಭುವಿಗೆ ಹೋಗುತ್ತೆ ಅನ್ನೋ ಸಿಟ್ಟಲ್ಲಿ ಅವಳು ಮಾಡಿದ ಕೆಲಸ ಒಂದೆರಡಲ್ಲ. ಒಂದು ಹಂತದಲ್ಲಿ ಹರ್ಷನ ಮದುವೆ ಆದದ್ದೇ ಅಮ್ಮಮ್ಮ ಸಾವು ಬದುಕಿನ ಮಧ್ಯೆ ಹೋರಾಡಿದರು. ಆಗ ಅವರನ್ನು ಅನಿವಾರ್ಯವಾಗಿ ಅಮೆರಿಕಾಗೆ ಕಳಿಸಬೇಕಾಯ್ತು. ಈ ವೇಳೆ ಆಂಬ್ಯುಲೆನ್ಸ್‌ನಲ್ಲಿ ಏರ್‌ಪೋರ್ಟ್ ವರೆಗೂ ಹೋದ ಸಾನ್ಯಾ ಅಮ್ಮಮ್ಮನಿಗೆ ಚಿತ್ರಹಿಂಸೆ ಕೊಟ್ಟಳು. ಅವರ ಆಕ್ಸಿಜನ್‌ ಪೈಪ್‌ ಕಿತ್ತುಹಾಕಿ ಉಸಿರಿಗೆ ಒದ್ದಾಡುವ ಹಾಗೆ ಮಾಡಿದಳು. ಅಮ್ಮಮ್ಮನಿಗೆ ಬಾಯಿಗೆ ಬಂದದ್ದನ್ನೆಲ್ಲ ಹೇಳಿದಳು. ಆದರೆ ಯಾವಾಗ ಅಮ್ಮಮ್ಮ ಚಿಕಿತ್ಸೆ ಮುಗಿಸಿ ಅಮೆರಿಕಾದಿಂದ ಬಂದರೋ ಆಗ ಅವರು ಸಾನ್ಯಾಳಿಗೆ ಅವಳು ಮಾತಾಡಿದ ಅಷ್ಟನ್ನೂ, ಆಂಬ್ಯುಲೆನ್ಸ್‌ನಲ್ಲಿ ಆದ ಘಟನೆಯನ್ನೂ ತನ್ನ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡದ್ದನ್ನು ತೋರಿಸಿದರು.

ಆ ಬಳಿಕ ಹಲ್ಲುಕಿತ್ತ ಹಾವಿನಂತಾಗಿದ್ದ ಸಾನ್ಯಾಳ ಎಂಡಿ ಪೋಸ್ಟನ್ನು ಹರ್ಷ ತೆಗೆದುಕೊಂಡ. ಅಮ್ಮಮ್ಮನ ಅನಾರೋಗ್ಯದ ನೆವದಲ್ಲಿ ಆಕೆಯ ಉತ್ತರಾಧಿಕಾರಿ ತಾನೇ ಎಂದು ಈ ಕೆಲಸ ಮಾಡಿದ. ಅಮ್ಮಮ್ಮ ಕೊಂಚ ಆರಾಮಾದಾಗ ಆಸ್ತಿ, ಅಧಿಕಾರದ ಬಗ್ಗೆ ರತ್ನಮಾಲಾ ಬಳಿ ಮನಸ್ಸಲ್ಲಿ ಇದ್ದದ್ದನ್ನೆಲ್ಲ ಹೇಳಿದ. ಆತನ ಮಾತು ಮುಗಿಯೋ ಮೊದಲೇ ಅಮ್ಮಮ್ಮ ಕೋಮಾಗೆ ಹೋಗಿದ್ದಾರೆ. ಆದರೆ ಅದಕ್ಕೂ ಮುನ್ನ ಆಸ್ತಿ ವಿಚಾರ, ಅಧಿಕಾರದ ವಿಚಾರದಲ್ಲಿ ಹರ್ಷ ಮಾತನಾಡಿದ್ದನ್ನು ಕೇಳಿ ಶಾಕ್ ಆಗಿದ್ದಾರೆ. ತಾನೇ ಮಾಲಾ ಸಂಸ್ಥೆಗೆ ಎಂ.ಡಿ. ಎಂದು ಘೋಷಿಸಿಕೊಂಡಿರುವ ಹರ್ಷನ ಆತುರದ ನಿರ್ಧಾರ ರತ್ನಮಾಲಾಗೆ ಶಾಕ್ ತರಿಸಿದೆ. ಆಕೆ ಪ್ರಜ್ಞಾಹೀನಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾಳೆ.

ಸುಂದರ ಹಾಡೊಂದರ ಮೂಲಕ ಅಮ್ಮ ಮಗನ ಪ್ರೀತಿಯನ್ನು ತೋರಿಸಿರುವುದು ವೀಕ್ಷಕರ ಕಣ್ಣಂಚು ಒದ್ದೆ ಮಾಡುತ್ತಿದೆ. ಮಾತ್ರವಲ್ಲ, ಅಮ್ಮಮ್ಮನ ಕೊನೆಯ ಎಪಿಸೋಡ್‌ಗಳಿವು ಅನ್ನೋದು ರಿವೀಲ್‌ ಆಗುತ್ತದೆ. ಬಹಳ ಭಾವನಾತ್ಮಕವಾದ ಈ ಪ್ರೋಮೋಗೆ ವೀಕ್ಷಕರು ಕಣ್ಣೀರಾಗಿದ್ದಾರೆ.

 

ಕೋಮಾಗೆ ಹೋದ ಮೇಲೆ ಅಮ್ಮಮ್ಮ ಬದುಕೋದು ಅನುಮಾನ ಎನ್ನುವ ಸ್ಥಿತಿ ಇದೆ. ಸಾನಿಯಾ ಇನ್ನೂ ಎಂಡಿ ಪಟ್ಟದ ಆಸೆ ಬಿಟ್ಟಿಲ್ಲ. ಎಂ.ಡಿ. ಪಟ್ಟ ಹೋದ ಬೇಸರ ಆಕೆಯನ್ನು ಕಾಡುತ್ತಿದೆ.

Kannadathi: ಕೋಮಾದಲ್ಲಿ ಅಮ್ಮಮ್ಮ, ರತ್ನಮಾಲಾ ಕಥೆ ಇಲ್ಲಿಗೆ ಮುಕ್ತಾಯವಾ?

ಈ ನಡುವೆ ಅಮ್ಮಮ್ಮನಿಗೆ ಒಮ್ಮೊಮ್ಮೆ ಪ್ರಜ್ಞೆ ಬರುತ್ತಿದೆ. ಆದರೆ ಮೊಬೈಲ್ ನೋಡಿ ಆಕೆ ಪ್ರಜ್ಞೆ ತಪ್ಪುತ್ತಿದ್ದಾರೆ. ಮೊಬೈಲ್ ನೋಡಿ ರತ್ನಮಾಲಾ ಎಚ್ಚರ ತಪ್ಪುತ್ತಿದ್ದಾಳೆ ಎಂಬ ವಿಚಾರದಲ್ಲಿ ಹರ್ಷನಿಗೆ ಅನುಮಾನ ಬಂದಿದೆ. ತನಗೆ ತಿಳಿಯದ ರಹಸ್ಯವೇನೋ ಮೊಬೈಲ್​ನಲ್ಲಿ ಇದೆ ಎಂದು ಹರ್ಷನಿಗೆ ಗೊತ್ತಾಗಿದೆ. ರತ್ನಮಾಲಾ ಮೊಬೈಲ್​ಗಾಗಿ ಹರ್ಷ ಹುಡುಕಾಟ ನಡೆಸಿದ್ದಾನೆ. ಇನ್ನೊಂದೆಡೆ ಭುವಿ ಮನೆಗೆ ಬಂದು ಅಮ್ಮಮ್ಮ ತನ್ನ ಬಳಿ ಜೋಪಾನವಾಗಿಡಲು ಹೇಳಿದ್ದ ಅವರ ಹಳೆ ಮೊಬೈಲ್ ತೆಗೆದಿದ್ದಾಳೆ. ಅದಕ್ಕೂ ಮುನ್ನ

ಭುವಿಯ ಬಳಿ ಅಮ್ಮಮ್ಮನ ಮೊಬೈಲ್ ಇದೆ ಎಂಬ ವಿಚಾರ ಮಾವ ಸುದರ್ಶನ್ ನಿಂದ ಸಾನಿಯಾ ಗೆ ಗೊತ್ತಾಗಿದೆ. ಸಾನಿಯಾ ಭುವಿಯ ರೂಂನಲ್ಲಿ ಹುಡುಕಾಡಿದ್ದಾಳೆ. ಆದರೆ, ಎಲ್ಲಿಯೂ ಆಕೆಗೆ ಮೊಬೈಲ್ ಸಿಕ್ಕಿಲ್ಲ. ಭುವಿ ರೂಂಗೆ ಬರುವ ಹೊತ್ತಲ್ಲೇ ಸಾನಿಯಾ ಅಲ್ಲಿಂದ ಕಾಲ್ಕಿತ್ತಿದ್ದಾಳೆ. ಭುವಿ ತೆಗೆದುಕೊಂಡಿರುವ ಅಮ್ಮಮ್ಮನ ಫೋನ್‌ನಲ್ಲೇ ಸಾನ್ಯಾ ಅಮ್ಮಮ್ಮನನ್ನು ಕೊಲೆ ಮಾಡಲು ಯತ್ನಿಸಿದ ವೀಡಿಯೋ ಇದೆ. ಹರ್ಷ ಈ ಮೊಬೈಲ್‌ನ ಪಾಸ್‌ವರ್ಡ್(Password) ​ಗಾಗಿ ಪ್ರಯತ್ನಿಸಿದ್ದಾನೆ. ಆದರೆ, ಯಾವುದೂ​ ಕೂಡ ಸೆಟ್‌(Set)​ ಆಗಿಲ್ಲ. ಇದನ್ನೆಲ್ಲ ನೋಡುತ್ತಿರುವ ಸಾನ್ಯಾ ಭಯ, ಆತಂಕದಲ್ಲಿ ಒದ್ದಾಡುತ್ತಿದ್ದಾಳೆ.

Kannadathi : ಡಿವೋರ್ಸ್ ಪೇಪರ್‌ಗೆ ಸೈನ್ ಮಾಡೇ ಬಿಟ್ರು ಹರ್ಷ ಭುವಿ, ಮುಂದೇನು?

ಸದ್ಯಕ್ಕೀಗ ಹರ್ಷ ಏನಾದರೂ ಮಾಡಿ ಮೊಬೈಲ್(Mobile) ಓಪನ್ ಮಾಡಿದರೆ ಸಾನ್ಯಾಗೆ ಉಳಿಗಾಲವಿಲ್ಲ. ಈ ವೀಡಿಯೋ(Vedio) ಹೊರಬರುವ ಸೂಚನೆ ಸಿಕ್ಕಿದೆ. ಒಂದುವೇಳೆ ಹಾಗೇನಾದರೂ ಆದರೆ ಸಾನ್ಯಾ ಜೈಲಿ(Jail)ಗೆ ಹೋಗಬಹುದು. ಮಾಲಾ ಸಂಸ್ಥೆಯ ಒಡತಿ ರತ್ನಮಾಲಾ ಕೊಲೆ(Murder) ಯತ್ನದ ಕೇಸ್‌ನಿಂದ ಆಕೆ ಹೊರಬರಲು ಸಾಧ್ಯವಾಗದೆ ಹೋಗಬಹುದು. ಮುಂದೇನಾಗುತ್ತೆ ಅನ್ನೋದನ್ನು ಕಾದು ನೋಡಬೇಕು. ರತ್ನಮಾಲಾ ಪಾತ್ರದಲ್ಲಿ ಚಿತ್ಕಳಾ, ಹರ್ಷನಾಗಿ ಕಿರಣ್‌ ರಾಜ್‌, ಭುವಿಯಾಗಿ ರಂಜನಿ ರಾಘವನ್‌, ಸಾನ್ಯಾ ಪಾತ್ರದಲ್ಲಿ ಆರೋಹಿ ನೈನಾ, ವರೂಧಿನಿಯಾಗಿ ಸಾರಾ ಅಣ್ಣಯ್ಯ ನಟಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?
Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ