Weekend With Ramesh 5: ಈ ವಾರ ವೀಕೆಂಡ್ ಕುರ್ಚಿ ಏರಿದ ಸಾಧಕರು ಯಾರೆಂದು ಗೆಸ್ ಮಾಡಿ?

By Shruthi KrishnaFirst Published May 9, 2023, 1:02 PM IST
Highlights

Weekend With Ramesh 5: ಈ ವಾರ ವೀಕೆಂಡ್ ಕುರ್ಚಿಯಲ್ಲಿ ಇಬ್ಬರು ಸಾಧಕರು ಕಾಣಿಸಿಕೊಳ್ಳುತ್ತಿದ್ದಾರೆ. ಯಾರೆಂದು ಗೆಸ್ ಮಾಡಿ ಅಂತ ಜೀ ಕನ್ನಡ ವಾಹಿನಿ ಫೋಟೋ ಶೇರ್ ಮಾಡಿದೆ. 

ವೀಕೆಂಡ್ ವಿತ್ ರಮೇಶ್ ಈ ವಾರದ ಅತಿಥಿ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು.  ಇದೀಗ ಆ ಕುತೂಹಲಕ್ಕೆ ತೆರೆಬಿದ್ದಿದೆ. ಈ ವಾರ ಕೂಡ ವಿಶೇಷವಾದ ಸಾಧಕರು ವೀಕೆಂಡ್ ಕುರ್ಚಿ ಏರುತ್ತಿದ್ದಾರೆ. ವೀಕೆಂಡ್ ವಿತ್ ರಮೇಶ್ ಸೀಸನ್ 5ರಲ್ಲಿ ಈಗಾಗಲೇ ಅನೇಕ ಅತಿಥಿಗಳು ಕಾಣಿಸಿಕೊಂಡಿದ್ದಾರೆ. ಇದೀಗ ಮುಂದಿನ ವಾರದ ಸಾಧಕರನ್ನು ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ. ಇದೀಗ ಆ ಕುತೂಹಲಕ್ಕೆ ತೆರೆಬಿದ್ದಿದೆ. ಸದ್ಯ ಜೀ ಕನ್ನಡ ವಾಹಿನಿ ಈ ವಾರ ಸಾಧಕರ ಕುರ್ಚಿ ಏರುವ ಅತಿಥಿಗಳು ಯಾರು ಎಂದು ಗೆಸ್ಟ್ ಮಾಡಿ ಅಂತ ಪೋಸ್ಟ್ ಶೇರ್ ಮಾಡಿದೆ. ಅಂದಹಾಗೆ ಈ ವಾರ ಕೂಡ ಇಬ್ಬರೂ ಅತಿಥಿಗಳು ಕಾಣಿಸಿಕೊಂಡಿದ್ದಾರೆ. 

ಮುಂದಿನ ವಾರ ಕೆಂಪು ಕುರ್ಚಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು 'ಒಬ್ಬರು ಡಾನ್ಸ್ ಲೋಕದ ಚಿನ್ನ, ಮತ್ತೊಬ್ಬರು ಇವರ ಮಾತು ಕೋಳೋದೆ ಚೆನ್ನ' ಯಾರೆಂದು ಗೆಸ್ ಮಾಡಿ ಅಂತ ಜೀ ವಾಹಿನಿ ಬ್ಲರ್ ಫೋಟೋ ಶೇರ್ ಮಾಡಿದೆ. ಅಂದಹಾಗೆ ಇವರು ಮಾತ್ಯರು ಅಲ್ಲ ಒಬ್ಬರು ಖ್ಯಾತ ನೃತ್ಯ ನಿರ್ದೇಶಕ ಚಿನ್ನ ಪ್ರಕಾಶ್ ಹಾಗೂ ಮತ್ತೊಬ್ಬರು ಥಟ್ ಅಂತ ಹೇಳಿ ಕಾರ್ಯಕ್ರಮದ ನಿರೂಪಕ ಡಾ.ನಾ.ಸೋಮೇಶ್ವರ್. ಇಬ್ಬರ ಹೆಸರನ್ನು ಅಭಿಮಾನಿಗಳು ಸರಿಯಾಗಿ ಗುರುತಿಸಿ ಕಾಮೆಂಟ್ ಮಾಡುತ್ತಿದ್ದಾರೆ.

ಇಬ್ಬರನ್ನು ವೀಕೆಂಡ್ ಕಾರ್ಯಕ್ರಮದಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಅಲ್ಲದೇ ಮೆಚ್ಚುಗೆಯ ಕಾಮೆಂಟ್ ಹರಿದು ಬರುತ್ತಿದೆ. ಈಗ ಕುರ್ಚಿಗೊಂದು ಘನತೆ ಬಂತು ಎಂದು ಹೇಳಿದ್ದಾರೆ. ಈ ಇಬ್ಬರ ಬಗ್ಗೆ ಇನ್ನು ಹೆಚ್ಚು ತಿಳಿದುಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಮುಂದಿನ ಶನಿವಾರ ಮತ್ತು ಭಾನುವಾರದವರೆಗೂ ಕಾಯಲೇ ಬೇಕು.

ಚಿನ್ನಿ ಪ್ರಕಾಶ್

1962 ರ ರಾಕಿ ಹಿಂದಿ ಸಿನಿಮಾ ಮೂಲಕ ವೃತ್ತಿ ಜೀವನ ಪ್ರಾರಂಭಿಸಿದ ಚಿನ್ನಿ ಪ್ರಕಾಶ್ ಅನೇಕ ಭಾಷೆಯಗಳಲ್ಲಿ ಕೆಲಸ ಮಾಡಿದ್ದಾರೆ. ಹಿಂದಿ, ತೆಲುಗು , ತಮಿಳು ಹಾಗೂ ಕನ್ನಡ ಸೇರಿದಂತೆ ಅನೇಕ ಘಾಟಾನುಘಟಿ ಕಲಾವಿದರಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ನೃತ್ಯ ನಿರ್ದೇಶಕರಾಗಿ ಕೆಲಸ ಮಾಡುವ ಜೊತೆಗೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೂ ಒಂದು ಸಿನಿಮಾಗೆ ಆಕ್ಷನ್ ಕಟ್ ಕೂಡ ಹೇಳಿದ್ದಾರೆ.

ಕನ್ನಡಿಗರ ಮನ ಗೆದ್ದ ಡಾಲಿ ಧನಂಜಯ್ 'ವೀಕೆಂಡ್ ವಿತ್ ರಮೇಶ್' ಎಪಿಸೋಡ್‌ಗೆ ಸಿಕ್ಕ ಟಿವಿಆರ್ ಎಷ್ಟು?

ಡಾ. ಸೋಮೇಶ್ವರ್

ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಥಟ್ ಅಂತ ಹೇಳಿ ಕನ್ನಡ ಕ್ವಿಜ್ ಕಾರ್ಯಕ್ರಮದ ರೂವಾರಿಯಾಗಿ ಪ್ರಸಿದ್ಧರಾಗಿದ್ದಾರೆ. ಫ್ರತಿದಿನ ತಪ್ಪದೆ 'ಉತ್ಸಾಹ ಹಾಗೂ ಕ್ರಮಬದ್ಧತೆ'ಯಿಂದ ನಡೆಸಿಕೊಂಡು ಬರುತ್ತಿರುವ ಈ ಕಾರ್ಯಕ್ರಮ 4000 ಕಂತುಗಳನ್ನು ದಾಟಿ ಮುಂದೆ ಸಾಗುತ್ತಿದೆ. ಇದು ಭಾರತದ ಟೆಲಿವಿಷನ್ ಇತಿಹಾಸದಲ್ಲೇ ಒಂದು ದಾಖಲೆಯನ್ನು ಸೃಷ್ಟಿಸಿದೆ. ವೃತ್ತಿಯಿಂದ ವೈದ್ಯರಾಗಿರುವ ಸೋಮೇಶ್ವರ ಅವರು ಒಂದು ಫಾರ್ಮಸ್ಯೂಟಿಕಲ್ ಕಂಪೆನಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸಿದರು. ವೈದ್ಯ ವೃತ್ತಿ ಜೊತೆಗೆ ಲೇಖಕರಾಗಿ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ಇವರನ್ನು ಸಾಧಕರ ಕುರ್ಚಿಯಲ್ಲಿ ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!