
ಬಿಗ್ ಬಾಸ್ ಶೋನಿಂದ ಹೊರಬಿದ್ದ ಮಾಳು ನಿಪನಾಳ
ಈ ಬಾರಿಯ, ಸದ್ಯ ನಡೆಯುತ್ತಿರುವ 'ಬಿಗ್‌ಬಾಸ್ ಕನ್ನಡ-12' ಸ್ಪರ್ಧಿಗಳಲ್ಲಿ ಒಬ್ಬರಾದ ಮಾಳು ನಿಪನಾಳ (Malu Nipanal) ದೊಡ್ಮನೆಯಿಂದ ಹೊರಬಂದಿರೋದು ಗೊತ್ತೇ ಇದೆ. ಬಿಗ್ ಬಾಸ್ ಮನೆಯಿಂದ ಔಟ್ ಆಗಿರೋ ಮಾಳು ಅವರು ನಿರಂತರವಾಗಿ ಮಾದ್ಯಮಗಳಿಗೆ ಸಂದರ್ಶನ ಕೊಡುತ್ತಾ ಬ್ಯುಸಿ ಆಗಿದ್ದಾರೆ.. ಮೀಡಿಯಾ ಜೊತೆ ಮಾತನಾಡುತ್ತಾ ಮಾಳು ಅವರು ಕೆಲವೊಂದು ಸ್ಟೇಟ್‌ಮೆಂಟ್ ನೀಡಿ ಗಿಲ್ಲಿ ಫ್ಯಾನ್ಸ್ ಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ..
ಹೌದು, ಗಾಯಕ ಮಾಳು ನಿಪನಾಳ ಅವರು 'ಈ ಬಾರಿ ಬಿಗ್‌ಬಾಸ್‌ನಲ್ಲಿ ಯಾರೇ ಗೆದ್ದರೆ ನಾನು ಸಹಿಸುವುದಿಲ್ಲ' ಎಂದು ಹೇಳುವ ಮೂಲಕ ಎಲ್ಲಾ ಸ್ಪರ್ಧಿಗಳ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. 'ನಾನು ಮನೆಯಿಂದ ಹೊರ ಬಂದಿದಕ್ಕೆ ಇಡೀ ಉತ್ತರ ಕರ್ನಾಟಕವೇ ಅಳುತ್ತಿದೆ. ಬಿಗ್‌ಬಾಸ್‌ನಲ್ಲಿ ಚೆನ್ನಾಗಿ ಆಡದವರನ್ನೇ ಉಳಿಸಿಕೊಳ್ಳಲಾಗ್ತಿದೆ' ಎಂದು ಆರೋಪಿಸಿರುವ ಮಾಳು ಇದೀಗ ಹಲವರ ಆಕ್ರೋಶಕ್ಕೂ ಕಾರಣರಾಗಿದ್ದಾರೆ. ಹಲವರು ಮಾಳು ಅವರ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸೋಶಿಯಲ್ ಮೀಡಿಯಾಗಳಲ್ಲಿ ಮಾಳು ನಿಪನಾಳ ಅವರು ಆಗರ್ಭ ಶ್ರೀಮಂತ ಅನ್ನೋ ಸುದ್ದಿ ಕೇಳಿಬಂದಿದೆ.. ತಮ್ಮ ಆಸ್ತಿ ಬಗ್ಗೆ ಸಂದರ್ಶಕರು ಕೇಳಿದ್ದಕ್ಕೆ ಉತ್ತರಿಸಿರುವ ಮಾಳು ಹೀಗೆ ಹೇಳಿದ್ದಾರೆ- "ನಾನು ಗಳಿಸಿದ್ದು ರಗಡ್ ಇತ್ತು. ಆದರೆ, ಕಳ್ಕೊಂಡಿದ್ದು ಭಾರೀ ಇದೆ. ಒಂದು ಇಶ್ಯೂ ಆಯ್ತು. ಹಾಗಾಗಿ, ನಾನು ಏನನ್ನೂ ಉಳಿಸಿಕೊಂಡಿಲ್ಲ. ಅದರಿಂದ ನಾನು ಉಳಿದುಕೊಳ್ಳುವುದು ನನಗೆ ಆಗ ಬಹಳ ಮುಖ್ಯವಾಗಿತ್ತು. ಅದು ನನ್ನ ಹೆಸರಿಗೆ ಧಕ್ಕೆ ಬರುವಂತಹದ್ದಿತ್ತು. ದುಡ್ಡು ಮಾಡಿದ್ದೆ, ಜೊತೆಗೆ ಲಾಸ್ ಕೂಡ ಮಾಡಿಕೊಂಡಿದ್ದೇನೆ' ಎಂದು ನೇರವಾಗಿಯೇ ಹೇಳಿದ್ದಾರೆ.
ಇನ್ನು, ಬಿಗ್ ಬಾಸ್ ಶೋನಿಂದ ಇಷ್ಟು ಬೇಹ ತಾವು ಹೊರಬಂದಿದ್ದಕ್ಕೆ ಮಾಳು ಅವರು ತೀರಾ ಬೇಸರ ವ್ಯಕ್ತಪಡಿಸಿದ್ದಾರೆ. 'ನಾನು ಇಷ್ಟು ಬೇಗ ಹೊರಬರುವಂಥ ಸ್ಪರ್ಧಿಯೇ ಅಲ್ಲ.. ನಾನು ಯಾಕೇ ಹೊರ ಬಂದೆ ಅಂತಾ ಈಗಲೂ ನನಗೆ ನಿಜವಾಗಿಯೂ ಅರ್ಥವಾಗ್ತಿಲ್ಲ.. ನಮ್ಮ ಅಭಿಮಾನಿಗಳು ನನ್ನನ್ನ ಉಳಿಸಿಕೊಳ್ಳಲು ಶತಪ್ರಯತ್ನ ಮಾಡಿದ್ದಾರೆ ಆದರೂ, ನಾನು ಯಾಕೆ ಹೊರಗಡೆ ಬಂದೆ ಅನ್ನೋ ಪ್ರಶ್ನೆ ಅವರಿಗೂ ಹಾಗೂ ನನಗೂ ಒಟ್ಟಿಗೇ ಕಾಡ್ತಿದೆ..
ನಾನು ಹೊರ ಬರುವಂಥ ತಪ್ಪೇನು ಮಾಡಿದೆ ಎಂದು ಈಗಲೂ ನಾನು ತುಂಬಾನೇ ಯೋಚಿಸುತ್ತಿದ್ದೇನೆ' ಎಂದು ಹೇಳುವ ಮೂಲಕ ಮಾಳು ಅವರು ಬಿಗ್‌ಬಾಸ್ ಶೋ ವಿರುದ್ಧವೇ ಬೇಸರ ಹೊರಹಾಕಿದ್ದಾರೆ. ಮುಂದೇನಿರಬಹುದು ಅವರ ನಡೆ ಎಂಬುದು ಇದೀಗ ತೀವ್ರ ಕುತೂಹಲ ಕೆರಳಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.