Karna Serial Update: ಕರ್ಣ, ನಿತ್ಯಾಗೆ ಮಹಾ ಕುತಂತ್ರಿಗಳ ಸತ್ಯ ಗೊತ್ತಾಯ್ತು; ಇನ್ನಿದೆ ಅಸಲಿ ಹಬ್ಬ

Published : Dec 30, 2025, 07:44 AM IST
karna serial

ಸಾರಾಂಶ

Karna Kannada Serial Episode: ಕರ್ಣ ಧಾರಾವಾಹಿಯಲ್ಲಿ ನಿತ್ಯಾಳನ್ನು ಕೊಲ್ಲಲು ಸಂಜಯ್‌ ಪ್ಲ್ಯಾನ್‌ ಮಾಡಿದ್ದನು. ಕೊನೆಗೂ ಕರ್ಣ ಬಂದು, ಅವಳನ್ನು ಕಾಪಾಡಿದ್ದಾನೆ. ಹೀಗಿರುವಾಗ ಆ ಮಗು ಬದುಕಲಿದೆಯಾ ಎಂಬ ಪ್ರಶ್ನೆ ಕಾಡಿದೆ. ಇನ್ನೊಂದು ಕಡೆ ಕರ್ಣ, ನಿತ್ಯಾಗೆ ಸತ್ಯದ ಅರಿವು ಆಗುವ ಸಮಯ ಬಂದಂತೆ ಕಾಣ್ತಿದೆ. 

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ಕರ್ಣ ಧಾರಾವಾಹಿಯಲ್ಲಿ ( Karna Serial ) ನಿತ್ಯಾ ಹಾಗೂ ನಿತ್ಯಾ ಮಗುವನ್ನು ಕೊಲ್ಲೋಕೆ ಸಂಜಯ್‌ ಮುಂದಾಗಿದ್ದನು. ಆದರೆ ಕರ್ಣ ಬಂದು ಅವಳನ್ನು ಬಚಾವ್‌ ಮಾಡಿದ್ದಾನೆ. ಹಾಗಾದರೆ ಮುಂದೆ ಏನಾಗುವುದು?

ಕಪಾಳಕ್ಕೆ ಹೊಡೆದ ರಮೇಶ್

ನಿತ್ಯಾ ಹಾಗೂ ನಿತ್ಯಾ ಮಗುವನ್ನು ಕೊಲ್ಲಬೇಕು ಎಂದು ಸಂಜಯ್‌ ಅವಳಿಗೆ ಜ್ಯೂಸ್‌ನಲ್ಲಿ ಗರ್ಭಪಾತದ ಮಾತ್ರೆ ಮಿಕ್ಸ್‌ ಮಾಡಿ ಕುಡಿಸಿದ್ದನು. ನಿತ್ಯಾ ಸತ್ತರೆ, ಅವಳಿಗೋಸ್ಕರ ನಾಲ್ಕು ದಿನ ಕಣ್ಣೀರು ಹಾಕಿ ಎಲ್ಲರೂ ಸುಮ್ಮನಾಗುತ್ತಾರೆ ಎಂದು ರಮೇಶ್, ತನ್ನ ಮಗ ಸಂಜಯ್‌ ಕಪಾಳಕ್ಕೆ ಹೊಡೆದಿದ್ದಾನೆ. ಕರ್ಣ, ನಿಧಿ ಬದುಕಿದ್ದೂ ಸಾಯೋ ಥರ ನೋವು ಅನುಭವಿಸಬೇಕು ಎನ್ನೋದು ರಮೇಶ್‌ ಉದ್ದೇಶ.

ಜ್ಯೂಸ್‌ ಕುಡಿಸಿದವರು ಯಾರು?

ನಿತ್ಯಾ ಮಗುವನ್ನು ಕೊಲ್ಲಲೋ ಯಾರೋ ಪ್ರಯತ್ನಪಟ್ಟಿದ್ದಾರೆ ಎನ್ನೋದು ಕರ್ಣನಿಗೆ ಗೊತ್ತಾಯ್ತು. ವಾಹಿನಿಯು ರಿಲೀಸ್‌ ಮಾಡಿದ ಪ್ರೋಮೋದಲ್ಲಿ ನಿತ್ಯಾ ಹಾಗೂ ಕರ್ಣ ಸೇರಿಕೊಂಡು, ಜ್ಯೂಸ್‌ ಹಿಂದಿರೋರು ಯಾರು ಎಂದು ಕಂಡುಹಿಡಿಯುವ ಪ್ರಯತ್ನದಲ್ಲಿದ್ದಾರೆ.

ಸತ್ಯ ಬೇಧಿಸುವ ಪ್ರಯತ್ನ

ಅಂದಹಾಗೆ ನಿತ್ಯಾ ಮಗು ಉಳಿದುಕೊಂಡಿದೆ ಎಂದು ಕಾಣುತ್ತಿದೆ. ಮಗು ಸತ್ತಿದ್ದರೆ ನಿತ್ಯಾ ಕಣ್ಣೀರು ಹಾಕಿಕೊಂಡು ಕೂರುತ್ತಿದ್ದಳು. ಆದರೆ ಇಲ್ಲಿ ಕರ್ಣ, ನಿತ್ಯಾ ಸೇರಿಕೊಂಡು ಸತ್ಯವನ್ನು ಬೇಧಿಸುವ ಯತ್ನದಲ್ಲಿದ್ದಾರೆ. ಒಟ್ಟಿನಲ್ಲಿ ಕರ್ಣನೇ ನಿತ್ಯಾ ಮಗುವನ್ನು ಉಳಿಸಿರುವ ಸಾಧ್ಯತೆ ಹೆಚ್ಚಿದೆ.

ಒಂದಾದಮೇಲೆ ಒಂದು ಅಪಾಯಗಳು

ನಿತ್ಯಾ ಮನೆ ಸುಟ್ಟಿರೋದು, ತೇಜಸ್‌ ಕಿಡ್ನ್ಯಾಪ್‌ ಆಗಿರೋದು, ಈಗ ನಿತ್ಯಾಗೆ ಜ್ಯೂಸ್‌ ಕುಡಿಸಿರೋದು ಒಟ್ಟಿನಲ್ಲಿ ಒಂದಾದ ಮೇಲೆ ಒಂದರಂತೆ ಅಪಾಯಗಳು ಆಗುತ್ತಿವೆ. ಇದರ ಹಿಂದೆ ಯಾರದ್ದೋ ಕೈವಾಡ ಇದೆ ಎಂದು ಕಾಣುತ್ತಿದೆ ಎಂದು ಕರ್ಣ ಅನುಮಾನಪಟ್ಟಿದ್ದಾನೆ.

ಕರ್ಣನಿಗೆ ಅನುಮಾನ ಬಂತು

ಯಾರೋ ಬೇಕು ಅಂತ ನನಗೆ ಹೀಗೆ ಮಾಡುತ್ತಿದ್ದಾರೆ. ನಾನು ಯಾರಿಗೆ ಏನು ಮಾಡಿದ್ದೀನಿ? ಎಂದು ನಿತ್ಯಾ ಬೇಸರ ಪಟ್ಟುಕೊಂಡಿದ್ದಾಳೆ. ಬೇಕು ಅಂತಲೇ ಹೀಗೆ ಮಾಡಿರೋದು ಎನ್ನೋದು ಕರ್ಣನಿಗೆ ಗೊತ್ತಾಗಿದೆ. ಜ್ಯೂಸ್‌ ಕುಡಿಸಿದ ದಿನ ಮನೆಯಲ್ಲಿ ಯಾರು ಯಾರು ಇದ್ದರು ಎನ್ನೋದನ್ನು ಕರ್ಣ ತಿಳಿದುಕೊಂಡಿದ್ದಾನೆ, ಅವರಲ್ಲಿ ಒಬ್ಬರು ಈ ಕೆಲಸ ಮಾಡಿದ್ದಾರೆ ಎಂದು ಕರ್ಣನಿಗೆ ಅನುಮಾನ ಬಂದಿದೆ.

ಅಪಾಯದ ಹಿಂದೆ ಇರೋರು ಯಾರು?

ಅಂದಹಾಗೆ ಕರ್ಣನ ತಾಯಿ, ರಮೇಶ್‌ ಹೆಂಡತಿಗೆ ಇದರ ಹಿಂದಿನ ಸತ್ಯ ಏನು ಎಂದು ಗೊತ್ತಿದೆ. ಅದರ ಹಿಂದೆ ಯಾರಿದ್ದಾರೆ ಎಂದು ನನಗೆ ಗೊತ್ತಿದೆ ಎಂದು ಅವಳು ಹೇಳುತ್ತಾಳೆ. ರಮೇಶ್‌ ಮೇಲಿನ ಭಯಕ್ಕೆ ಅವಳು ಸತ್ಯ ಹೇಳೋದು ಡೌಟ್‌ ಎನ್ನಬಹುದು.

ಪಾತ್ರಧಾರಿಗಳು

ಕರ್ಣ-ಕಿರಣ್‌ ರಾಜ್‌

ನಿತ್ಯಾ-ನಮ್ರತಾ ಗೌಡ

ನಿಧಿ-ಭವ್ಯಾ ಗೌಡ

ರಮೇಶ್-‌ ಟಿಎಸ್‌ ನಾಗಾಭರಣ

ಗಾಯತ್ರಿ ಪ್ರಭಾಕರ್‌, ಆಶಾ ರಾಣಿ, ವರಲಕ್ಷ್ಮೀ, ಸಿಮ್ರನ್‌, ವಿನಯ್‌ ಕಶ್ಯಪ್‌ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಶ್ರುತಿ ನಾಯ್ಡು ನಿರ್ಮಾಣದ ಸೀರಿಯಲ್‌ ಇದಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss Kannada 12: ಕಣ್ಣೀರಿಟ್ಟು ರಕ್ಷಿತಾ ಕೇಳಿದ ಪ್ರಶ್ನೆಗೆ ಬಿಗ್‌ಬಾಸ್/ ಸುದೀಪ್ ಉತ್ತರ ಕೊಡ್ತಾರಾ?
BBK 12: ರಕ್ಷಿತಾ ಶೆಟ್ಟಿ ದನಿ ಅಡಗಿಸುವಷ್ಟು, ರೊಚ್ಚಿಗೆದ್ದು ಕೂಗಾಡಿದ ಸ್ಪಂದನಾ ಸೋಮಣ್ಣ! ಎಲ್ಲಿಂದ ಈ ಎನರ್ಜಿ?