ಬಿಗ್‌ಬಾಸ್‌ ಮನೆಯಲ್ಲಿ ಕಾವ್ಯ-ಗಿಲ್ಲಿ ನಟ ಎಂಗೇಜ್‌ಮೆಂಟ್‌ ಮಾತು, ವೈರಲ್‌ ಆದ ವಿಡಿಯೋ!

Published : Dec 31, 2025, 03:59 PM IST
BBK 12 Gilli Nata Kavya Shaiva

ಸಾರಾಂಶ

ಬಿಗ್‌ಬಾಸ್‌ ಸೀಸನ್‌ 12 ಅಂತಿಮ ಹಂತ ತಲುಪಿದ್ದು, ಸ್ಪರ್ಧಿಗಳಾದ ಕಾವ್ಯಾ ಮತ್ತು ಗಿಲ್ಲಿ ನಡುವಿನ ನಿಶ್ಚಿತಾರ್ಥದ ಮಾತುಕತೆ ಮನೆಯಲ್ಲಿ ನಡೆದಿದೆ. ಕಾವ್ಯಾಳ ಉಂಗುರವನ್ನು ಗಿಲ್ಲಿ ತೆಗೆದು ಹಾಕುವಾಗ ನಡೆದ ಈ ತಮಾಷೆಯ ಸಂಭಾಷಣೆ, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಬಿಗ್‌ಬಾಸ್‌ ಸೀಸನ್‌ 12 ಕೊನೇ ಹಂತಕ್ಕೆ ಕಾಲಿಡುತ್ತಿದೆ. ಈಗಾಗಲೇ ಬಿಗ್‌ಬಾಸ್‌ ಶೋನ ಕೊನೆಯ ವಾರದ ಕ್ಯಾಪ್ಟನ್‌ಗಾಗಿ ಟಾಸ್ಕ್‌ ಕೂಡ ಶುರುವಾಗಿದೆ. ಒಂದೆಡೆ ಬಿಗ್‌ ಬಾಸ್‌ ಗೆಲ್ಲೋದು ಹೇಗೆ ಅನ್ನೋ ಲೆಕ್ಕಾಚಾರ ಎಲ್ಲಾ ಸ್ಪರ್ಧಿಗಳ ತಲೆಯಲ್ಲಿದ್ದರೆ, ಬಿಗ್‌ಬಾಸ್‌ನ ಕ್ಯೂಟ್‌ ಜೋಡಿ ಕಾವ್ಯಾ ಹಾಗೂ ಗಿಲ್ಲಿ ನಡುವೆ ದೊಡ್ಮನೆಯಲ್ಲಿಯೇ ಎಂಗೇಜ್‌ಮೆಂಟ್‌ ಮಾತುಕತೆ ನಡೆದಿದೆ. ಹೌದು, ಜಂಟಿಯಾಗಿ ಬಿಗ್‌ಬಾಸ್‌ಗೆ ಒಳಹೊಕ್ಕ ದಿನದಿಂದಲೂ ಬಿಗ್‌ಬಾಸ್‌ ಅಭಿಮಾನಿಗಳಿಗೆ ಗಿಲ್ಲಿ, ಕಾವ್ಯಾ ಫೇವರಿಟ್‌ ಆಗಿ ಬಿಟ್ಟಿದ್ದಾರೆ. ಗಿಲ್ಲಿಯ ತಮಾಷೆಯ ಮಾತು, ಕಾವ್ಯಾಳ ಸಿಡುಕು ನೋಟ, ಸಿಟ್ಟಿನಿಂದಲೇ ಗಿಲ್ಲಿಯನ್ನು ಕೆಣಕುವ ಕಾವ್ಯಾಳ ಆಟ ಎಲ್ಲರಿಗೂ ಇಷ್ಟವಾಗಿದೆ.

ಆದರೆ, ಬಿಗ್‌ಬಾಸ್‌ ಮುಂದಿನ ದಿನಗಳು ಹೀಗೇ ಇರೋದಿಲ್ಲ ಎನ್ನುವ ಅರಿವೂ ಅವರಿಗಿದೆ. ಗಿಲ್ಲಿ ಹಾಗೂ ಕಾವ್ಯಾ ಉತ್ತಮ ಜೋಡಿಯಾಗ್ತಾರೆ ಅನ್ನೋ ವಿಚಾರ ಸೋಶಿಯಲ್‌ ಮೀಡಿಯಾ ಹಾಗೂ ಅಭಿಮಾನಿಗಳ ವಲಯದಲ್ಲಿ ಚರ್ಚೆಯಲ್ಲಿ ಇರುವಾಗಲೇ ಬಿಗ್‌ ಮನೆಯಲ್ಲಿ ಇವರಿಬ್ಬರ ನಡುವೆಯೇ ಎಂಗೇಜ್‌ಮೆಂಟ್‌ ವಿಚಾರ ಚರ್ಚೆಯಾಗಿದೆ.

ಬಿಗ್‌ಬಾಸ್‌ ಮನೆಯಲ್ಲಿ ಸೋಫಾ ಮೇಲೆ ಕುಳಿತಿರುವಾಗ ಇವರ ನಡುವೆ ತಮಾಷೆಯಾಗಿ ಚರ್ಚೆ ಆಗಿದೆ. ಮನೆಯವರೆಲ್ಲರ ಜೊತೆಯಲ್ಲಿ ಸೋಫಾದಲ್ಲಿ ಕುಳಿತಾಗ ಗಿಲ್ಲಿ, ಕಾವ್ಯಾಳ ಕೈಯಲ್ಲಿ ಇದ್ದ ಉಂಗುರವನ್ನು ತೆಗೆಯುತ್ತಾರೆ. ಇದಕ್ಕೆ ಕಾವ್ಯಾ ಸಿಡುಕಿದಾಗ, ನಾನೇ ತೆಗೆದಿದ್ದೇನೆ, ಉಂಗುರವನ್ನು ನಾನೇ ಹಾಕುತ್ತೇನೆ' ಎನ್ನುತ್ತಾರೆ.

ಹಾಗಂದರೆ ನಾನು ಈಗ ಈ ಉಂಗುರ ಹಾಕಿಬಿಟ್ಟರೆ, ಎಂಗೇಜ್‌ಮೆಂಟ್‌ ಆದ ರೀತಿಯಾ ಎಂದು ಪ್ರಶ್ನೆ ಮಾಡುತ್ತಾರೆ. ಅದಕ್ಕೆ ಕಾವ್ಯಾ ಹೌದು ಎನ್ನುತ್ತಾರೆ. ಸುಳ್ಳೇ ಹೇಳ್ತೀಯಾ ಅನ್ನುತ್ತಾರೆ. ಮತ್ತೇನು.. ಬರೀ ರಿಂಗ್‌ ಹಾಕಿಬಿಟ್ಟರೆ ಎಂಗೇಜ್‌ಮೆಂಟ್‌ ಆದ ಹಾಗೆ ಎನ್ನುತ್ತಾರೆ. ನಮ್ಮನೆಗಳಲ್ಲಿ ಹಾಗೆ ಇರೋದು. ರಿಂಗ್‌ ಎಕ್ಸ್‌ಚೇಂಜ್‌ ಮಾಡಿಕೊಂಡರೆ ಎಂಗೇಜ್‌ಮೆಂಟ್‌ ಅನ್ನುತ್ತಾರೆ. ನಿಮ್ಮನೆಯಲ್ಲಿ ಎರಡು ಮದುವೆ ಆಗಿದೆ ಅಷ್ಟೂ ಗೊತ್ತಿಲ್ವಾ ಎಂದು ಹೇಳುತ್ತಾರೆ. ಬಳಿಕ ಸ್ಪಂದನಾ ಅವರಲ್ಲೂ ಈ ಬಗ್ಗೆ ಕೇಳುತ್ತಾ ರಿಂಗ್‌ ಎಕ್ಸ್‌ಚೇಂಜ್‌ ಮಾಡಿಕೊಂಡ್ರೆ ಎಂಗೇಜ್‌ಮೆಂಟ್‌ ಆದಂತೆ ಅಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.

ಗಿಲ್ಲಿಗೆ ಗಿಫ್ಟ್‌ ನೀಡಿದ್ದ ಕಾವ್ಯಾ ಕುಟುಂಬ

ಇನ್ನು ಕಾವ್ಯಾ ಅವರ ಕುಟುಂಬ ಮನೆಗೆ ಬರುವ ಮುನ್ನವೇ ಮನೆಯವರು ಕಾವ್ಯಾ ಕುಟುಂಬದವರ ಜೊತೆ ಹೇಗೆಲ್ಲಾ ಮಾತನಾಡಬೇಕು ಅನ್ನೋದನ್ನೂ ಗಿಲ್ಲಿ ಪ್ಲ್ಯಾನ್‌ ಮಾಡಿದ್ದರು.ಗಿಲ್ಲಿ ಯಾವ ಥರದ ಹುಡುಗ ಅಂತ ಕೇಳಿ. ಕಾವ್ಯಾಗೆ ಮದುವೆ ಮಾಡಬೇಕು ಅಂತ ಇದ್ದೀರಂತೆ ಹೌದಾ ಅಂತ ಕೇಳಿ ಎಂದು ಪ್ಲ್ಯಾನ್‌ ಮಾಡಿದ್ದಾರೆ. ನಿಶ್ಚಿತಾರ್ಥಕ್ಕೆ ಯಾರು ಬರುತ್ತಾರೋ ? ಮದುವೆ ಮಾತುಕಥೆಗೆ ಯಾರು ಬರುತ್ತಾರೋ ಅಂತ ಕಾವ್ಯ ಅವರನ್ನೂ ರೇಗಿಸಿದ್ದರು.

ಇದಾದ ನಂತರ ರಾಖಿ ತೆಗೆದುಕೊಂಡು ಬರಬಹುದು. ರಕ್ಷಾ ಬಂಧನ ಆಗಬಹುದು ಎಂದು ಕಾವ್ಯಾ ಹೇಳಿದರು. ಅವರಿಬ್ಬರ ತಮಾಷೆ ಮಾತುಗಳು ವೈರಲ್‌ ಆಗಿದ್ದವು.

ಇನ್ನು ಕಾವ್ಯಾ ಅವರ ತಂದೆ ಬಿಗ್‌ಬಾಸ್‌ ಮನೆಗೆ ಬಂದಾಗ ಗಿಲ್ಲಿ ಅವರಿಗೆ ಪ್ರೀತಿಯಿಂದ ಬೆಳ್ಳಿಯ ಬ್ರಾಸ್ಲೆಟ್‌ಅನ್ನು ಗಿಫ್ಟ್‌ ಆಗಿ ನೀಡಿದ್ದರು. ಇದೂ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗಿ, ಕಾವ್ಯಾ ಅವರ ಕುಟುಂಬ ಗಿಲ್ಲಿಯನ್ನು ಅಳಿಯನನ್ನಾಗಿ ಮಾಡಿಕೊಳ್ಳಲು ರೆಡಿಯಾಗಿದೆ ಎಂದು ಬಿಂಬಿಸಿದ್ದರು.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಈ ವರ್ಷದ ಮಧುರ ಕ್ಷಣ ಯಾವುದು? ಅನುಶ್ರೀ ಪ್ರಶ್ನೆಗೆ…. ಫ್ಯಾನ್ಸ್ ಹೀಗಾ ಹೇಳೋದು!
ವಿಜಯಲಕ್ಷ್ಮಿ ದರ್ಶನ್ ಆರೋಪಕ್ಕೆ ಆಯುಕ್ತರ ಸ್ಪಷ್ಟನೆ; ಪೊಲೀಸರು ಎಲ್ಲರಿಗಾಗಿಯೂ ಇದ್ದಾರೆ, ತನಿಖೆ ವಿಳಂಬವಾಗಿಲ್ಲ!