ಇಂಥ ಗಂಡ ಯಾರಿಗೆ ಬೇಕು ... ಎಲ್ಲಾ ಬಿಟ್ಟು ಹೋಗ್ತೇನೆ... ಭಾಗ್ಯಳ ಬಾಯಲ್ಲಿ ಬಂದೇ ಬಿಡ್ತು ಭಯಾನಕ ಸತ್ಯ!

By Suchethana D  |  First Published Oct 19, 2024, 1:01 PM IST

ಇಂಥ ಗಂಡ ನನಗೆ ಬೇಡ... ಬಿಟ್ಟು ಹೋಗ್ತೇನೆ... ಭಾಗ್ಯಳ ಬಾಯಲ್ಲಿ ಬಂದೇ ಬಿಡ್ತು ಭಯಾನಕ ಸತ್ಯ! ಭಾಗ್ಯಲಕ್ಷ್ಮಿ ಸೀರಿಯಲ್​ ಪ್ರೊಮೋಗೆ ನೆಟ್ಟಿಗರ ಮೆಚ್ಚುಗೆ! 
 


ಭಾಗ್ಯಳಿಗೆ ಸತ್ಯ ಗೊತ್ತಾಗುವ ಸಮಯ ಬಂದೇ ಬಿಟ್ಟಿದೆ. ಶ್ರೇಷ್ಠಾಳನ್ನು ಮದುವೆಯಾಗ ಹೊರಟಿದ್ದ ತರುಣ್​ ಹೆಸರಿನವ ತರುಣ್​ ಅಲ್ಲ, ಬದಲಿಗೆ ತನ್ನ ಗಂಡ ತಾಂಡವ್​ ಎನ್ನಲು ತಿಳಿಯುವ ಕಾಲ ಸನ್ನಿಹಿತವಾಗಿದೆ. ಹೌದು. ಇನ್ನೇನು ಆ ಸತ್ಯ ತಿಳಿಯುವ ಹೊತ್ತು. ಮನೆಯವರೆಲ್ಲರೂ ಏಕಿಷ್ಟು ವಿಚಿತ್ರವಾಗಿ ಆಡುತ್ತಿದ್ದಾರೆ ಎಂದು ಭಾಗ್ಯ ಸತ್ಯ ತಿಳಿಯಲು ಇನ್ನಿಲ್ಲದ ಕಸರತ್ತು ಮಾಡಿದ್ದಳು.  ಆದರೂ ಆಕೆಗೆ ಗೊತ್ತಾಗಲೇ ಇಲ್ಲ.  ಎಲ್ಲರಿಗೂ ಸತ್ಯ ತಿಳಿದಿದ್ದರೂ ವಿಚಿತ್ರ ಎಂಬಂತೆ ಭಾಗ್ಯಳಿಗೆ ಮಾತ್ರ ಇನ್ನೂ ಸತ್ಯ ಗೊತ್ತಾಗಲಿಲ್ಲ. ಆ ಹುಡುಗ ತನ್ನ ಗಂಡ ತಾಂಡವ್​ನೇ ಇರಬೇಕು ಎಂಬ ಸಂದೇಹದಿಂದ ಆ ಸತ್ಯವನ್ನು ತಿಳಿಯಲು ಭಾಗ್ಯ ಇನ್ನಿಲ್ಲದಂತೆ ಪ್ರಯತ್ನ ಪಡುತ್ತಿದ್ದಾಳೆ. ಆದರೆ ಸತ್ಯ ಮಾತ್ರ ಗೊತ್ತಾಗಲಿಲ್ಲ. ಅತ್ತ ಶ್ರೇಷ್ಠಾಳನ್ನು ಕಟ್ಟಿ ಹಾಕಿ ಕುಸುಮಾ, ಪೂಜಾ ಎಲ್ಲರೂ ಸೇರಿ ಹಿಂಸೆ ಕೊಡುತ್ತಿರುವ ವಿಷಯ ತಾಂಡವ್​ಗೆ ಗೊತ್ತಾಗಿದೆ. ಎಲ್ಲರ ವಿರುದ್ಧ ಸೇಡು ತೀರಿಸಿಕೊಳ್ಳಲು ಶ್ರೇಷ್ಠಾ ಹವಣಿಸುತ್ತಿದ್ದಾಳೆ. ಆದರೆ ಇನ್ನೊಂದು ತಿಂಗಳು ತಡೆದುಕೋ. ಅಷ್ಟರಲ್ಲಿ ಅಮ್ಮ ತನ್ನ ಕೈಯಾರೇ ಡಿವೋರ್ಸ್​ ಕೊಡಿಸುತ್ತಾಳೆ ಎಂದು ಶ್ರೇಷ್ಠಾಳನ್ನು ಸಮಾಧಾನಪಡಿಸಿದ್ದಾನೆ ತಾಂಡವ್​. 

ಅಷ್ಟಕ್ಕೂ ಆತ ಹಾಗೆ ಹೇಳಲು ಕಾರಣವೂ ಇದೆ. ಅದೇನೆಂದರೆ, ಮದುವೆ ಮಂಟಪದಿಂದ  ತಾಂಡವ್​ನನ್ನು   ಎಳೆದುಕೊಂಡು ಬಂದಿದ್ದಳು ಕುಸುಮಾ ಒಂದು ತಿಂಗಳಿನಲ್ಲಿ ಭಾಗ್ಯಳನ್ನು ಬದಲಾಯಿಸುವ ಪಣ ತೊಟ್ಟಿದ್ದಾಳೆ.  ಭಾಗ್ಯ ನಿನಗೆ ಹೇಗೆ ಬೇಕೋ ಹಾಗೆ ಇರ್ತಾಳೆ. ಇವಳೇ ನನ್ನ ಹೆಂಡತಿ ಅನ್ನೋ ರೀತಿಯಲ್ಲಿ ಭಾಗ್ಯ ಬದಲಾಗ್ತಾಳೆ. ಭಾಗ್ಯಳನ್ನು ಬಿಟ್ಟು ಯಾರನ್ನೂ ನೀನು ನೋಡಲ್ಲ ಹಾಗೆ ಇರ್ತಾಳೆ ಎಂದೆಲ್ಲಾ ಹೇಳಿದ್ದಳು. ಅದೇ ರೀತಿ ಭಾಗ್ಯಳನ್ನು ಚೆನ್ನಾಗಿ ರೆಡಿ ಮಾಡಿದ್ದಳು. ಅರೆ ಕ್ಷಣ ಭಾಗ್ಯಳ ಸೌಂದರ್ಯ ನೋಡಿ ತಾಂಡವ್​ ಖುಷಿ ಪಟ್ಟರೂ ಕೊನೆಗೆ ಇನ್ನಿಲ್ಲದ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದ. ಗೂಬೆ, ಕತ್ತೆ ಎಂದಿದ್ದ. ಗೂಬೆಗೆ ಸೌಂದರ್ಯ ಮಾಡಿದರೆ ನವಿಲು ಆಗಲ್ಲ. ಮಾಡುವ ನಾಲ್ಕು ದೋಸೆ, ಚಪಾತಿಗೆ ಏಪ್ರಾನ್​ ಸಾಕು, ಇದೆಲ್ಲಾ ಯಾಕೆ ಎಂದು ನಿಂದಿಸಿದ್ದ.

Tap to resize

Latest Videos

undefined

ಸ್ಕ್ರಿಪ್ಟ್​ ಇಲ್ದೇ 10 ಗಂಟೆ ಷೋ ಮಾಡೋ ತಾಕತ್ತಿದೆ ಕಣ್ರೀ... ಕೊಂಕು ಮಾಡುವವರಿಗೆ ಅನುಶ್ರೀ ಕೊಟ್ಟ ತಿರುಗೇಟೇನು?

ಇವೆಲ್ಲವುಗಳಿಂದ ಭಾಗ್ಯ ನೊಂದುಕೊಂಡಿದ್ದಾಳೆ.  ಆದರೆ ಈ ರೀತಿ ಡ್ರೆಸ್​​ ಮಾಡಿದ್ದು ಯಾಕೆ ಎನ್ನುವ ಸತ್ಯ ಆಕೆಗೆ ಗೊತ್ತಾಗಲಿಲ್ಲ. ಆದರೆ ಸತ್ಯ ಹೇಳಲು ಮಾವ ಹೊರಟಾಗಲೇ ಮಧ್ಯೆ ಪ್ರವೇಶಿಸಿದ ಅತ್ತೆ ಕುಸುಮಾ ನಾನು ಸತ್ಯ ಹೇಳುತ್ತೇನೆ ಎಂದಿದ್ದಾಳೆ. ಆಗ ಆಕೆ ನೀನು ಒಂದು ವೇಳೆ ಆ ತರುಣ್​ ಹೆಂಡ್ತಿ ಜಾಗದಲ್ಲಿ ಇದ್ದಿದ್ರೆ... ಎನ್ನುತ್ತಿದ್ದಂತೆಯೇ ಕೋಪಗೊಂಡ ಭಾಗ್ಯ ಅತ್ತೆ.... ಎಂದು ಕಿರುಚಿದ್ದಾಳೆ. ಒಂದು ವೇಳೆ ನಿನ್ನ ಗಂಡನಿಗೆ ಬೇರೆ ಸಂಬಂಧ ಇದೆ ಎಂದು ಗೊತ್ತಾಗಿದ್ರೆ ಏನು ಮಾಡುತ್ತಿದ್ದಿ ಎಂದು ಪ್ರಶ್ನಿಸಿದ್ದಾಳೆ. ಅದಕ್ಕೆ ಭಾಗ್ಯ ಅಂಥ ದೊಡ್ಡ ಅನ್ಯಾಯ ಯಾರ ಕೈಯಲ್ಲಿಯೂ ಸಹಿಸಲು ಆಗುವುದಿಲ್ಲ ಎಂದಿದ್ದಾಳೆ. ಆಗ ಕುಸುಮಾ ನೀನಾಗಿದ್ರೆ ಏನು ಮಾಡ್ತಿದ್ದೆ ಎಂದು ಪ್ರಶ್ನಿಸಿದಾಗ ಎಲ್ಲರನ್ನೂ ಬಿಟ್ಟು ಹೋಗುತ್ತಿದ್ದೆ ಎಂದಿದ್ದಾಳೆ.ಹೆಂಡತಿಯಾದವಳು ಎಲ್ಲವನ್ನೂ ಸಹಿಸಿಕೊಳ್ತಾಳೆ, ಬಡತನ, ನೋವು ಎಲ್ಲವನ್ನೂ ಸಹಿಸಿಕೊಳ್ತಾಳೆ, ಆದ್ರೆ ಬೇರೆಯವಳ ಜೊತೆ ಹಂಚಿಕೊಳ್ಳಲ್ಲ ಎನ್ನುತ್ತಾಳೆ. 

ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ನೆಟ್ಟಿಗರಿಂದ ಭೇಷ್​ ಭಾಗ್ಯ ಎನ್ನುವ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ಅಸಲಿ ಜೀವನದಲ್ಲಿ ಇಂಥ ಗಂಡ ಇದ್ದರೆ ಆತನನ್ನು ಬಿಟ್ಟು ಬಾ ಎಂದು ಎಷ್ಟು ಮಂದಿ ಹೇಳುತ್ತಾರೋ ಗೊತ್ತಿಲ್ಲ, ಇಂಥ ಗಂಡನನ್ನು ಬಿಟ್ಟು ಬಂದ ಕಾರಣ ಹೆಣ್ಣಿಗೆ ಅದ್ಯಾವ ರೀತಿಯ ಅವಮಾನ, ಚುಚ್ಚು ಮಾತು, ಗಂಡ ಬಿಟ್ಟವಳು ಎಂದೆಲ್ಲಾ ಮೂದಲಿಸುತ್ತಾರೋ ಗೊತ್ತಿಲ್ಲ... ಆದರೆ ಸೀರಿಯಲ್​ನಲ್ಲಿ ಮಾತ್ರ ಭಾಗ್ಯಳ ಮೇಲೆ ಆಗುತ್ತಿರುವ ಅನ್ಯಾಯವನ್ನು ಕಣ್ಣಾರೆ ನೋಡಿರುವ ವೀಕ್ಷಕರು, ನೆಟ್ಟಿಗರು ಇಂಥ ಗಂಡನನ್ನು ಬಿಡುವ ಮಾತನಾಡಿರುವ ಭಾಗ್ಯಳ ಮೇಲೆ ಪ್ರೀತಿಯ ಧಾರೆ ಹರಿಸಿದ್ದಾರೆ. ಗುಡ್​​ ಡಿಸಿಷನ್​ ಎಂದಿದ್ದಾರೆ. ಆದರೆ ಅತ್ತೆ ಹೇಳುತ್ತಿರುವುದು ನಿಜಕ್ಕೂ ತನ್ನ ಗಂಡನೇ ಎಂದು ಗೊತ್ತಾದರೆ ಭಾಗ್ಯಳ ವರ್ತನೆ ಹೇಗಿರುತ್ತೆ ಎನ್ನುವುದು ಸದ್ಯಕ್ಕಿರುವ ಕುತೂಹಲ.
 

ಥೂ... ಈ ವಯಸ್ಸಲ್ಲಿ ಗರ್ಭಿಣಿನಾ ಎನ್ನೋರಿಗೆ ಸೀರಿಯಲ್​ ಮೂಲಕವೇ ನಿರ್ದೇಶಕರ ತಿರುಗೇಟು! ಭೇಷ್​ ಅಂತಿರೋ ನೆಟ್ಟಿಗರು

click me!