ತಾಯಿ ಸಾವಿಗೆ ನೀನೇ ಕಾರಣ; ಕಡ್ಡಿ ಮುರಿಯುವಂತೆ ಉತ್ತರ ಕೊಟ್ಟ Bigg Boss ಸ್ಫೂರ್ತಿ ಗೌಡ!

By Vaishnavi Chandrashekar  |  First Published Aug 9, 2022, 12:50 PM IST

 ಬಿಗ್ ಬಾಸ್ ಓಟಿಟಿ ಮನೆ ಪ್ರವೇಶಿಸಿದ ಸ್ಫೂರ್ತಿ ಗೌಡ ತಾಯಿಯನ್ನು ನೆನೆದು ಭಾವುಕರಾಗಿದ್ದಾರೆ. ತಾಯಿ ಸಾವಿಗೆ ಕಾರಣ ಯಾರು?


ವೂಟ್‌ ಸೆಲೆಕ್ಟ್‌ನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಬಿಗ್ ಬಾಸ್ ಓಟಿಟಿ ಸೀಸನ್ 1 ಕನ್ನಡ ಶೋ ನಡೆಯುತ್ತಿದೆ. ಮನೆಯಲ್ಲಿರುವ 16 ಸ್ಪರ್ಧಿಗಳು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಸಾಧನೆ ಮಾಡಿರುವವರು. ಅವರಲ್ಲಿ ಪ್ಯಾಟೆ ಹುಡುಗಿ ಹಳ್ಳಿ ಲೈಫ್‌ ಶೋನ ಸ್ಫೂರ್ತಿ ಗೌಡ ಕೂಡ ಒಬ್ಬರು. ಸದಾ ಮೌನವಾಗಿರುತ್ತೀರಾ ಯಾಕೆ ನಿಮಗೆ ಏನು ಸಮಸ್ಯೆ ಕಾಡುತ್ತಿದೆ ಎಂದು ಪದೇ ಪದೇ ಪ್ರಶ್ನೆ ಮಾಡುವವರಿಗೆ ನಾನು ಯಾರು ಎನ್ನುವ ಎಪಿಸೋಡ್‌ನಲ್ಲಿ ಸ್ಫೂರ್ತಿ ಉತ್ತರ ಕೊಟ್ಟಿದ್ದಾರೆ.

'ಮನೆಯಲ್ಲಿ ನನ್ನನ್ನು ತುಂಬಾನೇ ಮುದ್ಧಾಗ ಸಾಕಿದ್ದಾರೆ. ಟಿವಿ ಮುಂದೆ ಕೂತು ಊಟ ಮಾಡಿದ್ದರೂ ನಾನು ತಟ್ಟೆ ಎತ್ತಿಡುತ್ತಿರಲಿಲ್ಲ ಕೈ ಅಲ್ಲೇ ತೊಳೆದುಕೊಳ್ಳುತ್ತಿದ್ದೆ ಅಷ್ಟು ಚೆನ್ನಾಗಿ ಅಮ್ಮ ಸಾಕಿದ್ದರು. ಬರ್ತಾ ಬರ್ತಾ ಜೀವನ ಹೀಗೂ ಇದ್ಯಾ ಅಂತ ಗೊತ್ತಾಗಿದ್ದು ನನ್ನ ತಾಯಿ ಹಾಸಿಗೆ ಹಿಡಿದಾಗ ಅವರಿಗೆ ಥೈರಾಯ್ಡ್‌ ಕ್ಯಾನ್ಸರ್‌ ಇತ್ತು. ಥೈರಾಯ್ಡ್‌ ಕ್ಯಾನ್ಸರ್‌ ಅಂದ್ರೆ ಗಂಭೀರ ಅಂತ ಗೊತ್ತಿರಲಿಲ್ಲ ನನಗೆ ಅಷ್ಟು ಮೆಚ್ಯೂರಿಟಿ ಇರಲಿಲ್ಲ ನನಗೆ. ದಿನ ಕಳೆಯುತ್ತಿದ್ದಂತೆ ಅವರು ಮಾತನಾಡುವುದನ್ನು ನಿಲ್ಲಿಸಿದ್ದರು ನಡೆಯುವುದನ್ನು ನಿಲ್ಲಿಸಿದ್ದರು. ದುಡ್ಡಿಗೆ ಏನೂ ಕಷ್ಟ ಇರಲಿಲ್ಲ ಹ್ಯಾಪಿ ಫ್ಯಾಮಿಲಿ ಅಂತಾರಲ್ಲ ಹಾಗಿದ್ವಿ.  ಅಷ್ಟು ಚೆನ್ನಾಗಿ ಜೀವನ ಮಾಡುತಿದ್ವಿ' ಎಂದು ಸ್ಪೂರ್ತಿ ತಾಯಿ ನೆನೆದು ಮಾತನಾಡಿದ್ದಾರೆ.

Tap to resize

Latest Videos

8 ಸ್ಪರ್ಧಿಗಳ ಮೇಲೆ ಎಲಿಮಿನೇಷನ್​ ತೂಗುಗತ್ತಿ...ಸೋನು ಗೌಡ ಹೊರ ಹೋಗ್ಲಿ ಅಂತಿದ್ದಾರೆ ಒತ್ತಿ...ಒತ್ತಿ

'ತಾಯಿಗೆ ಈ ರೀತಿ ಆದ ಮೇಲೆ ನಾವು ರಸ್ತೆಗೆ ಬಂದ್ವಿ. ಆಗ ತಾಯಿ ಬೆಲೆ ಗೊತ್ತಾಗಿದ್ದು. ಪ್ಯಾಟೆ ಹುಡುಗಿ ಹಳ್ಳಿ ಲೈಫ್‌ ರಿಯಾಲಿಟಿ ಶೋನಲ್ಲಿ ಅವಕಾಶ ಸಿಕ್ಕಾಗ ನನ್ನ ತಾಯಿಗೆ ಆಪರೇಷನ್ ಆಯ್ತು. ಆ ಸಮಯದಲ್ಲಿ ಜನರು ಹೇಗೆ ಕಾಮೆಂಟ್ ಮಾಡಿದ್ದರು ಅಂದ್ರೆ ನಾನು ಇಂಡಸ್ಟ್ರಿಗೆ ಬಂದಿದಕ್ಕೆ ನನ್ನ ತಾಯಿಗೆ ಶಾಕ್ ಆಗಿ ಈ ಪರಿಸ್ಥಿತಿ ಬಂದಿದ್ದಾರೆ ಅಂತ. ಆ ಸಮಯದಲ್ಲಿ ನನ್ನ ತಾಯಿ ಸಾವಿಗೆ ನಾನೇ ಕಾರಣ ಅನ್ನೋ ಮಾತುಗಳು ಬಂತು ಆ ಮಾತುಗಳನ್ನ ನಾನು ಕೇಳಿಸಿಕೊಂಡಿರುವ ನನ್ನ ತಂದೆನೂ ಕೇಳಿಸಿಕೊಂಡಿದ್ದಾರೆ ಸುಮ್ಮನೆ ಇದ್ದೀವಿ ಅಷ್ಟೆ. ನನ್ನ ತಂದೆ ನನಗೆ ತುಂಬಾನೇ ಸಪೋರ್ಟ್‌ ಆಗಿ ನಿಂತರು. ಮನೆಯಲ್ಲಿ ಹೆಣ್ಣು ಎಷ್ಟು ಮುಖ್ಯ ಅನ್ನೋದು ನಮಗೆ ಈಗ ತಿಳಿಯುತ್ತಿದೆ. ಯಾವ ಮಕ್ಕಳು ಕೂಡ ತಾಯಿ ಸಾವಿಗೆ ನಾನೇ ಕಾರಣ ಅಂತ ಕೇಳಿಸಿಕೊಳ್ಳುವುದಕ್ಕೆ ಇಷ್ಟ ಪಡಲ್ಲ. ನನಗೆ ಈ ಸತ್ಯ ಈ ವಿಷಯವನ್ನು ಯಾರೊಂದಿಗೂ ಹಂಚಿಕೊಂಡಿಲ್ಲ ನಾನು ತುಂಬಾನೇ ಎಮೋಷನಲ್ ಹುಡುಗಿ ಆದರೆ ಒಂದು ವಿಚಾರ ನಾನು ಗಮನದಲ್ಲಿ ಇಟ್ಟುಕೊಂಡಿರುವುದು ಏನೆಂದರೆ ಯಾರು ಏನೇ ಇರಲಿ ನಾನು ತುಂಬಾ ಸ್ಟ್ರಾಂಗ್ ಅಗಿರಬೇಕು ಅಂತ ಹಾಗೆ ತೋರಿಸಿಕೊಳ್ಳುತ್ತೀನಿ ಆದರೆ ನಾನು ಹಾಗಿಲ್ಲ' ಎಂದು ಸ್ಫೂರ್ತಿ ಹೇಳಿದ್ದಾರೆ.

ಯಾರಿದು ಸ್ಫೂರ್ತಿ?

ಸ್ಫೂರ್ತಿ ಗೌಡ ಮೂಲತಃ ತೀರ್ಥಹಳ್ಳಿ ಅವರು. ನಾನು ಜಾಸ್ತಿ ಮಾತನಾಡುತ್ತೀನಿ ಜನರು ನನಗೆ ಹೊಂದಿಕೊಳ್ಳಬೇಕು. ಬಿಗ್ ಬಾಸ್ ಸೀಸನ್ 1 ಆರಂಭವಾಗುವಾಗ ನನ್ನ ತಂದೆಗೆ ಹೇಳುತ್ತಿದ್ದೆ ನಾನು ಕೂಡ ಒಂದು ದಿನ ಅಲ್ಲಿ ಹೋಗಬೇಕು ಈಗ ಕನಸು ನನಸಾಗಿದೆ. ಕೋಪ ಬಂದ್ರೆ ಕೋಪ ಮಾಡಿಕೊಳ್ಳುತ್ತೀನಿ ಸಂತೋಷ ಆದ್ರೆ ಸಂತೋಷ. ನನಗೆ ಮಲಗುವುದು ಅಂದ್ರೆ ತುಂಬಾ ಇಷ್ಟ ಮಧ್ಯಾಹ್ನ 12 ಅಥವಾ 1 ಗಂಟೆಗೆ ನಾನು ಎದ್ದೇಳುವುದು' ಎಂದೇಳಿ ಸ್ಫೂರ್ತಿ ತಮ್ಮನ್ನು ತಾವು ಪರಿಚಯ ಮಾಡಿಕೊಂಡರು.

click me!