8 ಸ್ಪರ್ಧಿಗಳ ಮೇಲೆ ಎಲಿಮಿನೇಷನ್​ ತೂಗುಗತ್ತಿ...ಸೋನು ಗೌಡ ಹೊರ ಹೋಗ್ಲಿ ಅಂತಿದ್ದಾರೆ ಒತ್ತಿ...ಒತ್ತಿ

By Ramesh B  |  First Published Aug 8, 2022, 11:20 PM IST

ಬಿಗ್‌ಬಾಸ್ ಒಟಿಟಿಯಲ್ಲಿ ಅದ್ಧೂರಿಯಾಗಿ ಶುರುವಾಗಿದ್ದು,  ಮೊದಲ ವಾರವೇ  ಕೆಲ ಸ್ಪರ್ಧಿಗಳಿಗೆ ಮೇಲೆ ಎಲಿಮಿನೇಷನ್ ತೂಗುಗತ್ತಿ ನೇತಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮೊದಲ ವಾರದಲ್ಲಿ ಯಾರು ದೊಡ್ಮನೆಯಿಂದ ಯಾರು ಹೊರಹೋಗಲಿದ್ದಾರೆ ಎನ್ನುವ ಕುತೂಹಲ ವೀಕ್ಷಕರಲ್ಲಿ ಮನೆ ಮಾಡಿದೆ.  


ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ಈ ಬಾರಿ ಒಟಿಟಿನಲ್ಲಿ ಪ್ರಸಾರವಾಗ್ತಿದೆ. ಈ ರಿಯಾಲಿಟಿ ಶೋಗೆ ಈಗಾಗಲೇ ಸ್ಪರ್ಧಿಗಳು ಎಂಟ್ರಿ ಕೊಟ್ಟಾಗಿದೆ. ಒಟ್ಟು 16 ಕಂಟೆಸ್ಟೆಂಟ್‌ಗಳು ದೊಡ್ಮನೆ ಪ್ರವೇಶ ಮಾಡಿದ್ದು, ಅದರಲ್ಲಿ ಎರಡನೇ ಸ್ಪರ್ಧಿಯಾಗಿ ಸೊಷಿಯಲ್ ಮಿಡಿಯಾ ಬೆಡಗಿ ಸೋನು ಶ್ರೀನಿವಾಸ್ ಗೌಡ ಬಿಗ್‌ಬಾಸ್‌ಯಲ್ಲಿದ್ದಾರೆ. 

ಈ ಬಾರಿ ಬಿಗ್​ ಬಾಸ್​ ಮನೆಯೊಳಗೆ ಕಾಲಿಟ್ಟಿರುವ ಸ್ಪರ್ಧಿಗಳ ಪೈಕಿ ಸೋನು ಶ್ರೀನಿವಾಸ್​ ಗೌಡ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ.  ಸೋನು ಗೌಡ ಅವರ ಬಿಗ್ ಬಾಸ್ ಎಂಟ್ರಿಗೆ ಅಪಸ್ವರ ಕೇಳಿರುತ್ತಿವೆ. ಅವರಿಗೇನು ಯೋಗ್ಯತೆ ಇದೆ? ಯಾವ ಅರ್ಹತೆ ಮೇಲೆ ಅವರಿಗೆ ಅವಕಾಶ ಕೊಡಲಾಗಿದೆ ಅಂತೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ. ಅಷ್ಟೇ ಅಲ್ಲದೇ ಸೋನು ಗೌಡ ಅವರನ್ನ ಮೊದಲ ವಾರವೇ ಹೊರಕಳುಹಿಸಬೇಕೆಂಬ ಕೂಗು ಕೇಳಿರುಬುರುತ್ತಿದೆ.

Tap to resize

Latest Videos

ಕೆಟ್ಟ ಮೇಲೆ ಬುದ್ಧಿ ಕಲಿತ ಸೋನು ಗೌಡ, ವಿಡಿಯೋ ಕಾಲ್ ಬಗ್ಗೆ ಎಚ್ಚರವಿರಲು ಹುಡುಗಿಯರಿಗೆ ಕಿವಿ ಮಾತು

ಹೊರಬಿತ್ತು ಎಲಿಮಿನೇಷನ್ ಪಟ್ಟಿ
ಯೆಸ್‌.... ಬಿಗ್‌ಬಾಸ್ ಆರಂಭದ ದಿನದ ಎಲಿಮಿನೇಷನ್ ಸದ್ದು ಮಾಡುತ್ತಿದೆ. ಇದ್ರಿಂದ ಕಂಟೆಸ್ಟೆಂಟ್‌ಗಳಿಗೆ ಮೊದಲ ವಾರದ ಎಲಿಮಿನೇಷನ್ ಭಯ ಶುರುವಾಗಿದೆ. ನಿಯಮದಂತೆ ಎಲಿಮಿನೇಷನ್ ಪಟ್ಟಿ ಹೊರಬಿದ್ದಿದ್ದು, 16 ಸ್ಪರ್ಧಿಗಳಲ್ಲಿ 8 ಜನ ಸ್ಪರ್ಧಿಗಳು ಈ ವಾರ ಸೇಫ್ ಆಗಿದ್ದಾರೆ. ಇನ್ನುಳಿದ ಸ್ಪರ್ಧಿಗಳು ಡೇಂಜರ್‌ ಝೋನ್‌ನಲ್ಲಿದ್ದಾರೆ.

ಚೈತ್ರಾ ಹಳ್ಳಿಕೇರಿ, ಅರ್ಜುನ್​ ರಮೇಶ್​, ಲೋಕೇಶ್​, ಸೋಮಣ್ಣ ಮಾಚಿಮಾಡ, ರಾಕೇಶ್​ ಅಡಿಗ, ಸಾನ್ಯಾ ಐಯ್ಯರ್, ಉದಯ್​ ಸೂರ್ಯ, ರೂಪೇಶ್​ ಶೆಟ್ಟಿ ಸದ್ಯಕ್ಕೆ ಸೇಫ್​ ಆಗಿದ್ದಾರೆ. ಇವರೆಲ್ಲ ತಮ್ಮ ಸ್ಥಾನ ಉಳಿಸಿಕೊಳ್ಳಲು ಇನ್ನಷ್ಟು ಭದ್ರಪಡಿಸಿಕೊಳ್ಳಲು ಉತ್ತಮವಾಗಿ ಆಟವಾಡಬೇಕಿದೆ. ಅಲ್ಲದೇ  ಕಡಿಮೆ ಟೈಮಲ್ಲಿ ವೀಕ್ಷಕರಿಂದ ಹೆಚ್ಚ ವೋಟ್​ ಪಡೆಯಲು ಪ್ರಯತ್ನಿಸಬೇಕಿದೆ.

ಅಬ್ಬಬ್ಬೋ....! ಮತ್ತೊಂದು ವಿಡಿಯೋ ಲೀಕ್.....ಆತಂಕದಲ್ಲಿ ಸೋನು ಗೌಡ

ಇನ್ನು ಸೋನು ಗೌಡ, ಸ್ಫೂರ್ತಿ ಗೌಡ, ನಂದಿನಿ, ಆರ್ಯವರ್ಧನ್, ಜಯಶ್ರೀ ಆರಾಧ್ಯಾ, ಜಶ್ವಂತ್, ಕಿರಣ್ ಯೋಗೇಶ್ವರ್ ಮತ್ತು ಅಕ್ಷತಾ ಕುಕ್ಕಿ ಎಲಿಮಿನೇಷನ್ ಪಟ್ಟಿಯಲ್ಲಿದ್ದು,  ಈ ಪೈಕಿ ಯಾರು ಬಿಗ್​ ಬಾಸ್​ ಮನೆಯಿಂದ ಮೊದಲು ಹೊರಬರುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

ಮುಖ್ಯವಾಗಿ ಸೋನು ಆಯ್ಕೆ ಆಗಿರುವ ಬಗ್ಗೆ ನೆಟ್ಟಿಗರಿಗೆ ಅಸಮಾಧಾನ ಇದೆ. ಅವರು ಬೇಗ ಎಲಿಮಿನೇಟ್​ ಆಗಲಿ ಎಂದು ತುಂಬ ಜನರು ಕಮೆಂಟ್​ ಮಾಡುತ್ತಿದ್ದಾರೆ. ಹಾಗಾದ್ರೆ, ಸೋನು ಶ್ರೀನಿವಾಸ್​ ಗೌಡ  ಅವರು ಮೊದಲ ವಾರವೇ ಬಿಗ್​ ಬಾಸ್​ ಮನೆಯಿಂದ ಹೊರ ನಡೆಯುತ್ತಾರಾ ಅಥವಾ ಬೇರೆ ಕಂಟೆಸ್ಟೆಂಟ್ ಆಚೆ ಹೋಗ್ತಾರಾ ಎನ್ನುವುದನ್ನ ತಿಳಿಯಲು ಈ ವಾರ ಕೊನೆಯವರೆಗೂ ಕಾಯಬೇಕಿದೆ.

ಒಟ್ಟಿನಲ್ಲಿ ಬಿಗ್‌ಬಾಸ್ ಒಟಿಟಿ ಸೀಸನ್‌ 1ರ ಮೊದಲ ವಾರದ ಮೊದಲ ಎಲಿಮಿನೇಷನ್ ಇಂಟ್ರಸ್ಟಿಂಗ್ ಆಗಿದೆ.

click me!