Postpartum ಡಿಪ್ರೆಶನ್‌ಗೆ ಒಳಗಾಗಿದ್ದ ಪುನೀತಾ ಆಚಾರ್ಯ; ಪತಿಗೆ ಮಾಡಿಕೊಂಡಿದ್ದು ಒಂದೇ ಮನವಿ!

By Vaishnavi ChandrashekarFirst Published Aug 9, 2022, 11:18 AM IST
Highlights

ಮದುವೆಯಾಗಿ ಮಕ್ಕಳು ಬಂದ ಮೇಲೆ ಹೆಣ್ಣು ಮಕ್ಕಳ ಜೀವನ ಹೇಗೆಲ್ಲಾ ಬದಲಾಗುತ್ತದೆ ಎಂದು ಮನದಾಳದ ಮಾತುಗಳನ್ನು ಹಂಚಿಕೊಂಡ ಆರ್‌ಜೆ....

ಕನ್ನಡ ಜನಪ್ರಿಯ ಆರ್‌ಜೆ ಪುನೀತಾ ಆಚಾರ್ಯ ಮತ್ತು ಶ್ರೀರಾಮ್ ಸೋಷಿಯಲ್ ಮೀಡಿಯಾದಲ್ಲಿ ಧೂಳ್ ಎಬ್ಬಿಸುತ್ತಿರುವ ಕಪಲ್‌ಗಳು. ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮೂಲಕ ಪುನೀತಾ ಮತ್ತು ಪುತ್ರಿ ಆರ್ಯಾ ಸೆಲೆಬ್ರಿಟಿಗಳಾದ್ದರು. ಇದೀಗ ಇಸ್ಮಾರ್ಟ್‌ ಜೋಡಿ ಶೋ ಮೂಲಕ ಪುನೀತಾ ಮತ್ತು ಶ್ರೀರಾಮ್‌ ಕಿರುತೆರೆ ವೀಕ್ಷಕರಿಗೆ ಹತ್ತಿರವಾಗುತ್ತಿದ್ದಾರೆ. ಮನದಾಳದ ಮಾತುಗಳನ್ನು ಹಂಚಿಕೊಳ್ಳುವ ಎಪಿಸೋಡ್‌ನಲ್ಲಿ ಹೆಣ್ಣುಮಕ್ಕಳು ಎದುರಿಸುವ Postpartum ಡಿಪ್ರೆಶನ್‌ ಬಗ್ಗೆ ಪುನೀತಾ ಮಾತನಾಡಿದ್ದಾರೆ.

ಪುನೀತಾ ಮಾತು:

'ಯಾರಿಗೆ ಜೀವನದಲ್ಲಿ ನೋವಿಲ್ಲ ಹೇಳಿ? ಅವಾಗವಾಗ ಡಿಪ್ರೆಶನ್‌ ಬೇಜಾರು ಆಗೋದು ಉಂಟು. ನಾನು ಕರಿಯರ್‌ ವುಮನೆ ಆಗಿದ್ದೆ, ನನ್ನದಂತ ಒಂದು ಕರಿಯರ್‌ ಇತ್ತು ನನ್ನ ಬಾಡಿ ಸಹ ಒಂದಾನೊಂದು ಕಾಲದಲ್ಲಿ ನೋಡಲು ಚೆನ್ನಾಗಿತ್ತು. ಮಗು ಹುಟ್ಟಿದ ಮೇಲೆ ಬಾಡಿಯಲ್ಲಿ ಬದಲಾವಣೆಗಳು ಆಯ್ತು ಹಾರ್ಮೋನ್‌ಗಳು ಬದಲಾಯಿತ್ತು. ನನ್ನ ಹಿಂದಿನ ಶೇಪ್‌ಗೆ ಬರಲು ಆಗಲಿಲ್ಲ ಅಂತ ಬೇಸರ ಆಯ್ತು, ಡಿಪ್ರೆಶನ್‌ಗೆ ಒಳಗಾದೆ ಲೈಫ್‌ ಬೇಡವೇ ಬೇಡ ಎನ್ನುವ ರೀತಿ ಇತ್ತು. ಕೆಲವು ದಿನಗಳ ಹಿಂದೆ ನನ್ನ ಗಂಡ ಮದುವೆ ಫೋಟೋ ನೋಡುವಾಗ ನೀನು ಎಷ್ಟು ಚಂದ ಇದ್ದೆ ಅಲ್ವಾ ನೀನು ಅಂದ್ರು, ಇದ್ದೆ ಅಲ್ವಾ ಅಂದ್ರೆ past ಆಯ್ತು ಈ ಚೆಂದ ಇಲ್ವಾ? ನಾವು ಸೆನ್ಸಿಟಿವ್ ಆಗಿದ್ದರೆ ಈ ವಿಚಾರದ ಬಗ್ಗೆ ಸ್ವಲ್ಪ ಜಾಸ್ತಿನೇ ಬೇಸರ ಅಗುತ್ತೆ. ಅವಾಗವಾಗ ಅದರ ಬಗ್ಗೆ ಜಗಳ ಆಗುತ್ತೆ' ಎಂದು ಪುನೀತಾ ಮಾತನಾಡಿದ್ದಾರೆ.

ಹೆಂಡ್ತಿ ಒಬ್ಬಳೇ ಅಳುತ್ತಿದ್ದಳು, 2 ಸಲ ಆಶ್ರಮಕ್ಕೆ ಸೇರಲು ಪ್ರಯತ್ನ ಪಟ್ಟಿದ್ದಾಳೆ: ನಟ ವಿನಯ್ ಭಾವುಕ ಮಾತು

'ಹೆಂಡತಿ ಆದ್ಮೇಲೆ ರೋಲ್‌ಗಳು ಬದಲಾಗುತ್ತದೆ ಮಗು ಹುಟ್ಟಿದಾಗ ಬದಲಾವಣೆ ಆಗುತ್ತೆ ಈ ಬದಲಾವಣೆಯಲ್ಲಿ ನನ್ನನ್ನು ನಾನು ಕಳೆದುಕೊಂಡಿರುವೆ. ನನಗೆ ಫೀಲ್ ಆಗುತ್ತದೆ. ನನ್ನ ಶ್ರೀರಾಮ್‌ ನಡುವೆ ಕೇವಲ 4 ತಿಂಗಳು ವಯಸ್ಸಿನ ವ್ಯತ್ಯಾಸ ಇರುವುದು ಹೀಗಾಗಿ ಜಗಳ ego ಕ್ಲಾಶ್ ಆಗುತ್ತದೆ, ಪತಿ ಯಾವಾಗಲೂ ಕಂಪ್ಲೇಂಟ್ ಮಾಡ್ತಾರೆ ನಾನು ಪ್ರೀತಿ ಮಾಡಿದ ಹುಡುಗಿ ಬೇರೆ ಈಗ ನೀನು ಇರುವುದು ಬೇರೆ ಅಂತ ಆದರೆ ಇದಕ್ಕೆ ಕಾರಣ ನೀವೇ. 21ನೇ ವಯಸ್ಸಿಗೆ ನನಗೆ ಆಗಿದ ಮೊದಲ ಪ್ರೀತಿ ನಿಮ್ಮದು ಅದೇ ನನ್ನ ಸೀರಿಯಸ್‌ ರಿಲೇಶನ್‌ಶಿಪ್, ಕಾಲೇಜ್ ಆದ ಮೇಲೆ ಸಣ್ಣ ಪುಟ್ಟ ಕಾರಣ ಕೊಟ್ಟು ಬ್ರೇಕಪ್ ಆಯ್ತು. ಅವತ್ತಿನಿಂದ ಇವತ್ತಿನವರೆಗೂ ನನ್ನ ಹಾರ್ಟ್‌ನ ಪೀಸ್‌ಗಳನ್ನು ಪಿಕ್ ಮಾಡಿ ಬ್ಯಾಂಡೇಡ್ ಹಾಕಿ ನನ್ನ ಲೈಫ್ ಮುಂದೆ ನಡೆಯುತ್ತಿದ್ದರಿಂದ ನೀವು ಕ್ಷಮೆ ಕೇಳಿ ಕೈ ಹಿಡಿಯುವೆ ಎಂದು ಹೇಳಿದಕ್ಕೆ ನಾನು ಮದುವೆಯಾದೆ. ಅವತ್ತು ನಿಮಗೆ ಬೇಡ ಅನಿಸಿದೆ ಈಗ ನೀವು ಅದೇ ಹೇಳಿದ್ದರೆ? ನೀವು ನನಗೆ ತುಂಬಾ ಸಪೋರ್ಟ್ ಮಾಡಿದ್ದೀರಾ ಆದರೆ ಇವತ್ತಿಗೂ ನೀವು ನನ್ನ 100% ಒಪ್ಪಿಕೊಂಡಿದ್ದೀರಾ ಇಲ್ವಾ ಅಂತ ಗೊತ್ತಿಲ್ಲ. ಆರ್ಯನ್ ಜೀವನ ಚೆನ್ನಾಗಿರಬೇಕು ಅಂತ ತ್ಯಾಗ ಮಾಡಿ ನನ್ನತನವನ್ನು ಕಳೆದುಕೊಂಡಿರುವೆ. ಮಕ್ಕಳು ಹುಟ್ಟಿದಾಗ ಹೆಣ್ಣು ಮಕ್ಕಳಲ್ಲಿ Postpartum ಡಿಪ್ರೆಶನ್‌ ಆಗುತ್ತೆ ಜೋರಾಗಿ ಅಳುವುದು ಯಾಕಾದರೂ ಬದುಕಿರುವೆ ಅನಿಸುತ್ತಿತ್ತು ನಿಮಗೆ ಇದೆಲ್ಲಾಇದ್ದಿದೆ ಮೂಡ್‌ ಸ್ವಿಂಗ್ ಅನಿಸುತ್ತದೆ ನಾನು ಹೇಳುತ್ತಿದ್ದೆ.ನನಗೆ ಯಾಕೋ ನೀವು ನನ್ನ ಬಾಡಿ ಬಗ್ಗೆ ಕಾಮೆಂಟ್ ಮಾಡಿದಾಗ ನಮ್ಮ ಸಂಬಂಧ ತುಂಬಾನೇ shallow ಅನಿಸುತ್ತದೆ' ಎಂದು ಪುನೀತಾ ಹೇಳಿದ್ದಾರೆ.

ಜೈ ಜಗದೀಶ್‌ಗೆ ನಾನು 2ನೇ ಪತ್ನಿ, ನನ್ನ ದೃಷ್ಠಿಯಲ್ಲಿ ನಾನೇ ಮೊದಲು: ಗೊಂದಲ ಬಿಚ್ಚಿಟ್ಟ ವಿಜಯಲಕ್ಷ್ಮಿ ಸಿಂಗ್

'ಎಲ್ಲರು ಹೇಳುತ್ತಾರೆ ಮಗು ಮಾಡ್ಕೋ ಮಗು ಮಾಡ್ಕೋ ಅಂತ ಮಗು ಹುಟ್ಟಿದ ಮೇಲೆ ಯಾರೂ ನಮ್ಮನ್ನು ತಯಾರಿ ಮಾಡುವುದಿಲ್ಲ. ಆರ್ಯಾ ಸಣ್ಣ ಇದ್ದಳು ಹಾಲು ಕುಡಿಯುತ್ತಿರಲಿಲ್ಲ ಆಗ ನನಗೆ ಟೆನ್ಶನ್ ಶಾಸ್ತಿ ಆಯ್ತು. ಬಾಣಂತಿ ಸಮಯದಲ್ಲಿ ಎದ್ದು ಕೆಲಸ ಮಾಡಬೇಕಿತ್ತು ಆಷ್ಟೆ ನನಗೆ ಏಳುವುದೇ ಕಷ್ಟ ಆಗುತ್ತಿತ್ತು ಯಾಕೆ ಲೈಫ್‌? ಮಗು ಇದೆ.....ಮಾತನಾಡಬೇಕು ಅನಿಸೋಲ್ಲ ಮನೆ ಕೆಲಸದಲ್ಲಿ ಇಂಟ್ರೆಸ್ಟ್‌ ಇಲ್ಲ ಹೇಳಿದ್ದರೂ ನನ್ನ ಗಂಡನಿಗೆ ಇದೆಲ್ಲಾ ಅರ್ಥ ಆಗುತ್ತಿರಲಿಲ್ಲ. ಬಾಡಿ ಇಮೇಜ್‌ ಬಗ್ಗೆ ಈಗಲೂ ನನಗೆ ಬೇಸರ ಇದೆ. ಆಗಷ್ಟೇ ಮನೆಗೆ ಮಗು ಬಂದಿದೆ ಆಕೆ ಬಧ್ರತೆ ಯೋಚನೆ ಮಾಡಿ ಅವರು ಕೆಲಸ ಮಾಡುವುದು ಜಾಸ್ತಿ ಮಾಡಿದ್ದರು ನನಗೆ ಅವರ ಸಪೋರ್ಟ್‌ ಬೇಕಿದ್ದಾಗ ಅವರು ಇರಲಿಲ್ಲ. ನನಗೆ ಎಮೋಷನಲ್ ಸಪೋರ್ಟ್‌ ಬೇಕು ಅಷ್ಟೆ. ನನ್ನ ಮಗಳನ್ನು ನಾನು ಸರಿಯಾಗಿ ಬೆಳೆಸುತ್ತಿದ್ದೀನಾ ಇಲ್ವೋ ಅನ್ನೋ ಭಯ ಶುರುವಾಗಿದೆ' ಎಂದಿದ್ದಾರೆ ಪುನೀತಾ. 

click me!