ತಟ್ಟೆ ಎಷ್ಟಗಲ ಇದ್ಯೋ ಅಷ್ಟೇ ಉಣ್ಣೋದು, ನನ್ನ ಯೋಗ್ಯತೆ ಎಷ್ಟೋ ಅಷ್ಟೇ ದುಡ್ಯೋದು..; ಕಿಚ್ಚ ಸುದೀಪ್

By Shriram Bhat  |  First Published Oct 16, 2024, 8:13 PM IST

'ತುಂಬಾ ಖುಷಿ ಆಗ್ತಾ ಇದೆ ಸರ್.. ಅದನ್ನ ಹೇಳೋದಕ್ಕೆ ಏನು ಅಂತ.. ' ಎಂದಿದ್ದಕ್ಕೆ ಸುದೀಪ್ 'ಹೊಸ ಅಧ್ಯಾಯ..' ಎಂದಿದ್ದಾರೆ. ನಿರೂಪಕಿ 'ಹೊಸ ಅಧ್ಯಾಯ ಅಂತ ಮತ್ತೆ ಶುರು ಮಾಡ್ತಾ ಇದ್ದೀರಾ?' ಎಂದು ಕೇಳಲು  'ಒನ್ ಥಿಂಗ್, ನಾನು ತುಂಬಾ ಎಥಿಕಲ್ ಪರ್ಸನ್..


ಕನ್ನಡದ ಪ್ಯಾನ್ ಇಂಡಿಯಾ ಸ್ಟಾರ್ ನಟ ಕಿಚ್ಚ ಸುದೀಪ್ ಅವರು ಸದ್ಯ ಬಿಗ್ ಬಾಸ್ ಸೀಸನ್-11ರ ಹೋಸ್ಟ್ ಆಗಿರುವುದು ಗೊತ್ತೇ ಇದೆ. ಬಿಗ್‌ಬಾಸ್‌ನ ಬರೋಬ್ಬರಿ ಹತ್ತು ಸೀಸನ್‌ಗಳ ನಿರೂಪಣೆಯನ್ನು ಅವರೊಬ್ಬರೇ ಮಗಿಸಿ ಇದೀಗ ಸುದೀಪ್ ಹನ್ನೊಂದನೇ ಆವೃತ್ತಿ ನಡೆಸುತ್ತಿರುವುದು ಸಣ್ಣ ಸಂಗತಿಯೇನೂ ಅಲ್ಲ. ಈ ಸಂದರ್ಭದಲ್ಲಿ ಸಹಜವಾಗಿ ಎಂಬಂತೆ, ಅವರ ಸಂಭಾವನೆಯ ಸಂಗತಿಯೂ ಕೆಲವರ ತಲೆ ಕೆಡಿಸಿದೆ. 

ಸುದೀಪ್ ಈ ಸೀಸನ್‌ಗೆ ಎಷ್ಟು ರೆಮ್ಯುನರೇಶನ್ ತೆಗೆದುಕೊಂಡಿರಬಹುದು ಎಂಬ ಲೆಕ್ಕಾಚಾರ ಕೆಲವರ ತಲೆಯಲ್ಲಿ ಓಡಿದೆ. ಅದಯ ಯೋಚನೆ ಹಂತ ದಾಟಿದ ಕೆಲವರಲ್ಲಿ ಒಬ್ಬರು ಎಂಬಂತೆ ಮಾಧ್ಯಮದ ಪ್ರತಿನಿಧಿಯೊಬ್ಬರು ಕಿಚ್ಚ ಸುದೀಪ್ ಅವರಲ್ಲಿ ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆದರೆ ನಟ ಸುದೀಪ್ ಅವರು ಎಂದಿನಂತೆ ಸಂಭಾವನೆ ಬಗ್ಗೆ ರಹಸ್ಯ ಕಾಪಾಡಿಕೊಂಡು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ. ಹಾಗಿದ್ದರೆ ಸುದೀಪ್ ಅವರಿಗೆ ಕೇಳಲಾದ ಪ್ರಶ್ನೆ ಹಾಗೂ ಕಿಚ್ಚ ಕೊಟ್ಟ ಉತ್ತರವೇನು ಎಂಬ ಬಗ್ಗೆ ಡೀಟೇಲ್ಸ್ ಇಲ್ಲಿದೆ ನೋಡಿ.. 

Tap to resize

Latest Videos

undefined

ತಮಿಳು ಚಿತ್ರರಂಗದಿಂದ ನಟ ವಿಷ್ಣುವರ್ಧನ್ ದೂರ ಉಳಿಯಲು ಯಾರು ಕಾರಣ? ಸೀಕ್ರೆಟ್ ರಿವೀಲ್..!

ರೆಮ್ಯುನರೇಶನ್ ಕೂಡ ಅಷ್ಟೇ ಖುಷಿಯಾಗಿ ಕೊಟ್ಟಿದಾರಾ ನಿಮ್ಗೆ ಅಂತ.. ಅಂತ ಕೇಳಿದ ಪ್ರಶ್ನೆಗೆ ನಟ ಕಿಚ್ಚ ಸುದೀಪ್ ಅವರು 'ನನ್ನ ತಟ್ಟೆ ಎಷ್ಟು ಅಗಲ ಇದ್ಯೋ ಅಷ್ಟೇ ನಾನು ಊಟ ಮಾಡೋದು, ನನ್ನ ಯೋಗ್ಯತೆ ಎಷ್ಟು ಇದ್ಯೋ ಅಷ್ಟೇ ದುಡ್ಯೋದಮ್ಮಾ..ನನ್ನ ಯೋಗ್ಯತೆಯೇನು ಅಂತ ನೀವೇ ಹೇಳೀ..' ಎಂದಿದ್ದಾರೆ. ಮುಂದುವರೆದು ಸಂದರ್ಶಕಿ 'ಹತ್ತಾಯ್ತಲ್ಲಾ ಸರ್, ಈಗ್ ಹನ್ನೊಂದನೇ ಸೀಸನ್ ಅಲ್ವಾ?' ಎನ್ನಲು ನಟ ಸುದೀಪ್ ಅವರು 'ನಿಮಗೆ ಬೇಜಾರು ಆಗ್ತಾ ಇದ್ಯಾ ಅಥವಾ ಖುಷಿ ಆಗ್ತಾ ಇದ್ಯಾ?' ಅಂತ ಕೇಳಿದ್ದಾರೆ. 

ಅದಕ್ಕೆ ನಿರೂಪಕಿ 'ತುಂಬಾ ಖುಷಿ ಆಗ್ತಾ ಇದೆ ಸರ್.. ಅದನ್ನ ಹೇಳೋದಕ್ಕೆ ಏನು ಅಂತ.. ' ಎಂದಿದ್ದಕ್ಕೆ ಸುದೀಪ್ 'ಹೊಸ ಅಧ್ಯಾಯ..' ಎಂದಿದ್ದಾರೆ. ಅದಕ್ಕೆ ಮತ್ತೆ ಪ್ರಶ್ನಿಸಿದ ನಿರೂಪಕಿ 'ಹೊಸ ಅಧ್ಯಾಯ ಅಂತ ಮತ್ತೆ ಶುರು ಮಾಡ್ತಾ ಇದ್ದೀರಾ?' ಎಂದು ಕೇಳಲು ನಟ ಸುದೀಪ್ ಅವರು 'ಒನ್ ಥಿಂಗ್, ನಾನು ತುಂಬಾ ಎಥಿಕಲ್ ಪರ್ಸನ್, ಅದ್ರಲ್ಲೇನೂ ಇಲ್ಲ.. 

ಆಫ್‌ಕೋರ್ಸ್ ನಾನು ಏನ್ ದುಡಿಬೇಕು ಅಂತಿದೀನೋ ಅದನ್ನ ನಾನು ಇಲ್ಲಿ ತಗೊಂಡಿದೀನಿ.. ಇಪ್ಪತ್ತೆಂಟ್ ವರ್ಷ ಇಂಡಸ್ಟ್ರಿಯಲ್ಲಿ ತಗೊಂಡಿದೀನಿ ಅಂದ್ರೆ ಚೆನ್ನಾಗಿಯೇ ದುಡಿತಾ ಇದೀನಿ ಅಂತ ತಾನೆ? ಬನ್ನಿ ಯಾವಾಗಾದ್ರೂ ಊಟಕ್ಕೆ..' ಎಂದು ಹೇಳಿ ಆ ಮಾತುಕತೆಗೆ ಫುಲ್‌ಸ್ಟಾಪ್ ಇಟ್ಟಿದ್ದಾರೆ ನಟ ಸುದೀಪ್. 

ಅಂಬರೀಷ್-ವಿಷ್ಣುವರ್ಧನ್ ಸಂಬಂಧ: ಬೇಡವೆಂದರೂ ರಟ್ಟಾಯ್ತು ಮುಚ್ಚಿಟ್ಟ ಗುಟ್ಟು!

ಒಟ್ಟಿನಲ್ಲಿ, ಬಿಗ್ ಬಾಸ್ ಕನ್ನಡ ಸೀಸನ್-11 ಶುರುವಾಗಿ ಒಂದೊಂದೇ ಎಲಿಮಿನೇಶನ್ ನಡೆಯುತ್ತಿದ್ದು, ಬಿಗ್ ಬಾಸ್ ಮನೆಯಿಂದ ಎಂದಿನಂತೆ ಒಬ್ಬೊಬ್ಬರಾಗಿ ಹೊರನಡೆಯುತ್ತಿದ್ದಾರೆ. ಹೊರನಡೆಯುವ ಮುಂದಿನ ಸರದಿ ಯಾರದ್ದು? ಯಾರು ಸೇಫ್ ಝೋನ್, ಯಾರು ಡೇಂಜರ್‌ ಜೋನ್‌ನಲ್ಲಿ ಇದ್ದಾರೆ ಎಂಬ ಕುತೂಹಲಕ್ಕೆ ದಿನವೂ ಈ ಶೋವನ್ನು ಹಲವರು ನೋಡುತ್ತಾರೆ. ಆದರೆ, ಫೈನಲೀ ಯಾರು ವಿನ್ನರ್ ಆಗಿ ಹಣ ಬಾಚ್ಕೋತಾರೆ ಎಂಬುದೇ ಎಲ್ಲರ ಕುತೂಹಲದ ಕೇಂದ್ರಬಿಂದು ಎಂಬುದು ಸೀಕ್ರೆಟ್ ಏನೂ ಅಲ್ಲ! 

click me!