ಸತ್ಯ ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್ ಎದುರಾಗಿದೆ. ವರ ಮಹಾಲಕ್ಷ್ಮೀ ಹಬ್ಬದ ದಿನ ಸತ್ಯ ಮಾಡಿದ ಪ್ರಸಾದಕ್ಕೆ ಕಾರ್ತಿಕ್ ಅಕ್ಕ ಉಪ್ಪು ಸುರಿದಿದ್ದಳು. ಆದರೆ ಸ್ವಾಮೀಜಿ, ಮನೆಯವರು ತಿನ್ನುವಾಗ ಅದರಿಂದ ಉಪ್ಪು ಮಂಗ ಮಾಯವಾಗಿತ್ತು. ಇದೆಲ್ಲ ಸಾಧ್ಯವಾದದ್ದು ಹೇಗೆ?
ಸತ್ಯ ಸೀರಿಯಲ್ ಜೀ ಕನ್ನಡದಲ್ಲಿ ಮೂಡಿಬರುತ್ತಿದೆ. ಇದರಲ್ಲಿ ಸತ್ಯಾ ಪಾತ್ರದಲ್ಲಿ ಗೌತಮಿ ಜಾಧವ್ ನಟಿಸಿದರೆ, ಆಕೆಯ ಗಂಡ ಕಾರ್ತಿಕ್ ಪಾತ್ರದಲ್ಲಿ ಸಾಗರ್ ಬಿಳಿಗೌಡ ನಟಿಸಿದ್ದಾರೆ. ಸಪ್ನಾ ಕೃಷ್ಣ ಈ ಸೀರಿಯಲ್‌ನ ನಿರ್ದೇಶಕಿ. ಈ ಸೀರಿಯಲ್ ನಾಯಕಿ ಸತ್ಯ ಗಟ್ಟಿಗಿಟ್ಟಿ ಹೆಣ್ಣುಮಗಳು. ಸತ್ಯದ ಪರವಾಗಿ ನಿಲ್ಲುವ ಎಲ್ಲವನ್ನೂ ಎದುರಿಸುವ ಛಲಗಾರ್ತಿ. ಅಪ್ಪ ತೀರಿಕೊಂಡ ನಂತರ ತಾನೇ ಮನೆಯ ಜವಾಬ್ದಾರಿ ಹೆಗಲ ಮೇಲೆ ಹೊತ್ತು ಮುನ್ನಡೆಸಿದವಳು. ಆದರೆ ಅನಿವಾರ್ಯ ಪರಿಸ್ಥಿತಿಯಲ್ಲಿ ಅವಳು ಮದುವೆ ಆದದ್ದು ಮಾತ್ರ ಅವಳನ್ನು ಇಷ್ಟ ಪಡದ ಕಾರ್ತಿಕ್‌ನನ್ನು. ಈ ಮದುವೆ ಕಾರ್ತಿಕ್ ಅಮ್ಮ ಸೀತಾಗೂ ಇಷ್ಟ ಇರಲಿಲ್ಲ. ಸೊಸೆ ಗಂಡುಬೀರಿ ಅನ್ನೋದು ಆಕೆಯ ಆರೋಪ. ಅದಕ್ಕಾಗಿ ಸೊಸೆಯ ಮೇಲೆ ಕ್ರೂರವಾಗಿ ನಡೆದುಕೊಳ್ಳುತ್ತಾಳೆ. ಕಲ್ಲು ಹೃದಯದವಳಾಗಿ ಅವಳನ್ನು ಖಂಡಿಸುತ್ತಲೇ ಇರುತ್ತಾಳೆ. ಆದರೆ ಸತ್ಯಾ ಮಾತ್ರ ಆಕೆಯ, ಮನೆಯವರ ಮನಸ್ಸು ಗೆಲ್ಲುವ ಪ್ರಯತ್ನದಲ್ಲಿದ್ದಾಳೆ. ಟಿಪ್ ಟಾಪ್ ಪ್ಯಾಂಟ್ ಶರ್ಟ್ ನಲ್ಲಿ ಕಮಾಲ್ ಮಾಡುತ್ತಿದ್ದ ಹುಡುಗಿ ಇದೀಗ ಗೌರಮ್ಮನಂತೆ ಕ್ರಾಪ್ ಮೇಲೆ ಸೀರೆಯುಟ್ಟು ಬದುಕೋದನ್ನು ರೂಢಿ ಮಾಡಿಕೊಂಡಿದ್ದಾಳೆ. ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆ ನಡೆದಾಗ ಅದಕ್ಕೆ ಪ್ರಸಾದವನ್ನೂ ಅವಳೇ ಮಾಡುತ್ತಾಳೆ. ಆದರೆ ಆ ಪ್ರಸಾದದಲ್ಲಿ ಅವಳನ್ನು ಕಂಡರಾಗದ ಕಾರ್ತಿಕ್ ಅಕ್ಕ ಉಪ್ಪು ಸುರಿಯುವಂತೆ ಮಾಡಿರುತ್ತಾಳೆ.
ಪ್ರಸಾದದ ವಿಚಾರದಲ್ಲಿ ಕಾರ್ತಿಕ್ ಅಕ್ಕನಿಂದ ವಿಘ್ನ ಆಗಬಹುದೇನೋ ಎಂಬ ಲೆಕ್ಕಾಚಾರ ಸತ್ಯಗೆ ಇತ್ತು ಎಂದು ಕಾಣಿಸುತ್ತದೆ. ಹೀಗಾಗಿಯೇ ಅವಳು ಕಾರ್ತಿಕ್ ಅಕ್ಕ ಪ್ರಸಾದಕ್ಕೆ ಉಪ್ಪು ಸುರಿಸಿದರೂ ಪರಿಣಾಮ ಆಗದಂತೆ ಮಾಡುತ್ತಾಳೆ. ಪರಿಣಾಮ ಎಲ್ಲರೂ ಸತ್ಯಾ ಮಾಡಿದ ಪ್ರಸಾದವನ್ನು ಮನಸಾರೆ ಹೊಗಳುತ್ತಾರೆ. ಈ ಬಗ್ಗೆ ಕಾರ್ತಿಕ್ ಅಕ್ಕ ಪ್ರಶ್ನಿಸಿದಾಗ, 'ಅಜ್ಜಿ ಬೇರೆ ಪ್ರಸಾದನ ಹೇಳಿಕೊಟ್ಟರು ಅವರು ಹೇಳಿದ ಹಾಗೆಯೇ ಪ್ರಸಾದ ಮಾಡಿದ್ದೀನಿ. ಆದರೆ ಅದರಲ್ಲಿ ಉಪ್ಪಿರಲ್ಲ' ಅಂತಾಳೆ ಸತ್ಯಾ. ಆಗ ಕಾರ್ತಿಕ್ ಅಕ್ಕ ಮುಖ ತಗ್ಗಿಸುವಂತೆ ಆಗುತ್ತದೆ. ಒಳ್ಳೆಯ ಉದ್ದೇಶ ಇಟ್ಟುಕೊಂಡು ಮಾಡಿದರೆ ಕೆಟ್ಟದಾಗಲ್ಲ ಎಂಬುದು ಈಗಲಾದರೂ ಅರ್ಥಾಯಿತ ನಿಮಗೆ ಎನ್ನುತ್ತಾಳೆ ಸತ್ಯ. ಪ್ರಸಾದ ಕೊಡಿ ಎಲ್ಲರಿಗೆ ಎಂದು ಅರ್ಚಕರು ಹೇಳುತ್ತಾರೆ. ಆಗ ರಾಯರು ಊರ್ಮಿಳಾ ಎಂದು ಹೇಳುತ್ತಾರೆ, ಆ ಕರೆಯನ್ನು ಅರ್ಥ ಮಾಡಿಕೊಂಡ ಊರ್ಮಿಳಾ ಪ್ರಸಾದ ಹಂಚಲು ಹೋಗುತ್ತಾಳೆ.
ಇದನ್ನೂ ಓದಿ: Kannadathi Breaking News: ಅಮ್ಮಮ್ಮಂಗೆ ಡಿಸ್‌ಚಾರ್ಜ್, ಮತ್ತೆ ರತ್ನಮಾಲಾ ದರ್ಶನ!
ಮನೆಗೆ ಗುರುಗಳು ಬಂದಿದ್ದಾರೆ. ಹೀಗಾಗಿ ರಾಯರು ಹೇಳುತ್ತಾರೆ, 'ಗುರುಗಳೇ ಪ್ರಸಾದ ಮೊದಲು ನೀವು ಸ್ವೀಕಾರ ಮಾಡಬೇಕು, ಯಾಕೆ ಎಂದರೆ ನನ್ನ ಸೊಸೆ ಮಾಡಿದ ಪ್ರಸಾದ ಅದು ನಿಮಗೆ ಇಷ್ಟವಾದರೆ ಆ ದೇವರು ಮೆಚ್ಚಿದ್ದಾರೆ ಎಂದರ್ಥ' ಅಂತ. ಪ್ರಸಾದವನ್ನು ಸ್ವೀಕರಿಸುವ ವೇಳೆ ಆಹಾ ಎನ್ನುತ್ತಾ ಪ್ರಸಾದ ಮೆಲ್ಲುತ್ತಾರೆ ಗುರುಗಳು. ಸತ್ಯಾಳನ್ನು ಇಷ್ಟಪಡದ ಕಾರ್ತಿಕ್ ಆಕೆ ಮಾಡಿದ ಪ್ರಸಾದವನ್ನು ಇಷ್ಟಪಡುತ್ತಾನೆ. ಅದು ಚೆನ್ನಾಗಿದೆ ಅಂತ ಅವನಿಗೆ ಹೇಳದಿರಲಾಗೋದಿಲ್ಲ. ಸತ್ಯಳ ಚಿಕ್ಕಮಾವನೂ ಸತ್ಯ ಮಾಡಿದ ಪ್ರಸಾದವನ್ನು ಹೊಗಳುತ್ತಾರೆ. ಸತ್ಯ ಮೊದಲನೇ ಬಾರಿ ನೀನು ಮಾಡಿದೆ ಎಂದರೆ ನಂಬೋಕೆ ಆಗುತ್ತಿಲ್ಲ, ಏಷ್ಟು ಚೆನ್ನಾಗಿ ಮಾಡಿದ್ದೀಯಾ ಎಂದು ಹೊಗಳುತ್ತಾರೆ. ಸತ್ಯ ಹೇಳುತ್ತಾಳೆ ನಮ್ಮ ಅಜ್ಜೀ ಹೇಳಿಕೊಟ್ಟಿದ್ದು ಹಾಗೆ ಮಾಡಿದೆ ಎನ್ನುತ್ತಾಳೆ. ಸೀತಮ್ಮನಿಗೂ ಪ್ರಸಾದ ಇಷ್ಟವಾಗುತ್ತದೆ. ಪ್ರಸಾದ ಇವಳೆ ಮಾಡಿದ್ದ ಅಥವಾ ಬೇರೆಯವರು ಮಾಡಿದ್ರಾ ಇದರಲ್ಲಿ ಏನೋ ಗಿಮಿಕ್ ಇದಿಯಾ ಎಂದು ಕಾರ್ತಿಕ್ ಯೋಚನೆ ಮಾಡುತ್ತಿರುತ್ತಾನೆ. ಆಗ ಸ್ವಾಮೀಜಿ ಹೇಳುತ್ತಾರೆ ಇಷ್ಟು ಜನರಿಗೆ ಪ್ರಸಾದ ಇಷ್ಟವಾದರೆ ಆ ದೇವರಿಗೆ ಇಷ್ಟವಾದಂತೆ. ಮನೆಯ ಮಹಾಲಕ್ಷ್ಮಿ ಶ್ರದ್ಧೆ ಭಕ್ತಿಯಿಂದ ಕೆಲಸ ಮಾಡಿದರೆ ಆ ದೇವರು ಒಳ್ಳೇದು ಮಾಡುತ್ತಾನೆ ಎಂದು ಹೇಳುತ್ತಾರೆ.
ಇದನ್ನೂ ಓದಿ: Bigg Boss OTT; ರಾತ್ರಿ 1 ಮೊಟ್ಟೆ ಕೊಟ್ಟಿದ್ರೆ ಏನಾಗ್ತಿತ್ತು, ಗುರೂಜಿಗೆ ಸೋನು ಗೌಡ ಸಖತ್ ಕ್ಲಾಸ್
ಇನ್ನೊಂದೆಡೆ ಸ್ವಾಮೀಜಿಗಳು, ಮನೆಗೆ ಮುಖ್ಯ ಯಾವುದು, ಆರೋಗ್ಯವಾ, ಸಂಪತ್ತಾ, ಪ್ರೀತಿಯಾ ಎಂಬ ಪ್ರಶ್ನೆಯನ್ನು ಮುಂದಿಟ್ಟಾಗ ಕಾರ್ತಿಕ್ ಆರೋಗ್ಯ ಮುಖ್ಯ ಅಂದರೆ, ಆತನ ಅಕ್ಕ ಸಂಪತ್ತು ಮುಖ್ಯ ಅನ್ನುತ್ತಾಳೆ. ಸ್ವಾಮೀಜಿ ಸತ್ಯಾ ಬಳಿ ಕೇಳಿದಾಗ, ಆಕೆ ಪ್ರೀತಿಯೇ ಮುಖ್ಯ. ಪ್ರೀತಿಯಿಂದ ಆರೋಗ್ಯ, ಸಂಪತ್ತು ಇಲ್ಲದಿದ್ದರೂ ಬದುಕು ಚೆನ್ನಾಗಿರುತ್ತೆ ಅನ್ನೋ ಉತ್ತರ ಕೊಡುತ್ತಾಳೆ. ಸತ್ಯಾಳ ಮಾತನ್ನು ಸ್ವಾಮೀಜಿಗಳೂ ಮೆಚ್ಚಿಕೊಳ್ಳುತ್ತಾರೆ.