ಉದಯ್ ಸೂರ್ಯ ಮತ್ತು ಆರ್ಯವರ್ಧನ್ ಗುರೂಜಿ ನಡುವೆ ದೊಡ್ಡ ಜಗಳವೇ ನಡೆದಿದೆ. ಇಬ್ಬರ ಜಗಳ ಇಡೀ ಬಿಗ್ ಬಾಸ್ ಅನ್ನೇ ಅಲ್ಲೋಲಾ ಕಲ್ಲೋಲಾ ಮಾಡಿದೆ. ಎರಡು ತಂಡಗಳು ಟಾಸ್ಕ್ ನಲ್ಲಿ ಭಾಗವಹಿಸಿವೆ. ಈ ವೇಳೆ ತಳ್ಳಿಕೊಂಡ ವಿಚಾರಕ್ಕೆ ಉದಯ್ ಮತ್ತು ಆರ್ಯವರ್ಧನ್ ನಡುವೆ ಜಗಳ ಆರಂಭವಾಗಿದೆ. ಉದಯ್ ಅವರನ್ನು ಎಳೆದು ಬಿಸಾಕಿದ ಆರ್ಯವರ್ಧನ್ ಬಳಿಕ ಜಗಳ ಶುರು ಮಾಡಿದರು. ಜಗಳ ಬಳಿಕ ತಾರಕಕ್ಕೇರಿತ್ತು.
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಒಟಿಟಿ ಮನೆ ಮೊದಲ ವಾರವೇ ಕಾವೇರಿದೆ. ಸ್ಪರ್ಧಿಗಳ ನಡುವೆ ಕಿತ್ತಾಟ, ಜಗಳ ಆರಂಭವಾಗಿದೆ. ಆಗಸ್ಟ್ 6ರಂದು ಬಿಗ್ ಬಾಸ್ ಒಟಿಟಿ ಗ್ರ್ಯಾಂಡ್ ಓಪನಿಂಗ್ ಆಗಿದೆ. ನಾನಾಕ್ಷೇತ್ರದಲ್ಲಿ ಗುರುತಿಸಿಕೊಂಡ ವ್ಯಕ್ತಿಗಳು ಈ ಬಾರಿಯ ಬಿಗ್ ಬಾಸ್ ಒಟಿಟಿಯಲ್ಲಿದ್ದಾರೆ. ಎಂದಿನಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಗ್ ಬಾಸ್ ನಡೆಸಿಕೊಡುತ್ತಿದ್ದು ಸ್ಪರ್ಧಿಗಳಿಗೆ ಅದ್ದೂರಿ ಸ್ವಾಗತ ನೀಡಿದ್ದಾರೆ. ಅಂದಹಾಗೆ ಬಿಗ್ ಬಾಸ್ ಒಟಿಟಿಯಲ್ಲಿ ಒಟ್ಟು 16 ಸ್ಪರ್ಧಿಗಳಿದ್ದಾರೆ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಸ್ಪರ್ಧಿಗಳು ತಮ್ಮ ಅಸಲಿ ಆಟ ಪ್ರಾರಂಭಿಸಿದ್ದಾರೆ. ಸ್ಪರ್ಧಿಗಳು ತಮ್ಮ ತಮ್ಮ ಸ್ಥಾನ ಗಟ್ಟಿಮಾಡಿಕೊಳ್ಳಲು ತನ್ನದೆ ಶೈಲಿಯಲ್ಲಿ ಆಟ ಆಡುತ್ತಿದ್ದಾರೆ. ಈಗಾಗಲೇ ಬಿಗ್ ಬಾಸ್ ಟಾಸ್ಕ್ ನೀಡಿದ್ದು ಸ್ಪರ್ಧಿಗಳು ನಾಮೇಲು ತಾಮೇಲು ಎಂದು ಟಾಸ್ಕ್ ಗಳಲ್ಲಿ ಭಾಗಿಯಾಗುತ್ತಿದ್ದಾರೆ. ಮೊದಲ ವಾರವೇ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಜಗಳ ಜೋರಾಗಿದೆ.
ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಟಾಸ್ಕ್ ನಲ್ಲಿ ಸ್ಪರ್ಧಿಗಳು ರೊಚ್ಚಿಗೆದ್ದಿದ್ದಾರೆ. ಗೆಲುವು ದಾಖಲಿಸಲು ಎಲ್ಲರೂ ಹೋರಾಡುತ್ತಿದ್ದಾರೆ. ಈ ನಡುವೆ ಉದಯ್ ಸೂರ್ಯ ಮತ್ತು ಆರ್ಯವರ್ಧನ್ ಗುರೂಜಿ ನಡುವೆ ದೊಡ್ಡ ಜಗಳವೇ ನಡೆದಿದೆ. ಇಬ್ಬರ ಜಗಳ ಇಡೀ ಬಿಗ್ ಬಾಸ್ ಅನ್ನೇ ಅಲ್ಲೋಲಾ ಕಲ್ಲೋಲಾ ಮಾಡಿದೆ. ಎರಡು ತಂಡಗಳು ಟಾಸ್ಕ್ ನಲ್ಲಿ ಭಾಗವಹಿಸಿವೆ. ಈ ವೇಳೆ ತಳ್ಳಿಕೊಂಡ ವಿಚಾರಕ್ಕೆ ಉದಯ್ ಮತ್ತು ಆರ್ಯವರ್ಧನ್ ನಡುವೆ ಜಗಳ ಆರಂಭವಾಗಿದೆ. ಉದಯ್ ಅವರನ್ನು ಎಳೆದು ಬಿಸಾಕಿದ ಆರ್ಯವರ್ಧನ್ ಬಳಿಕ ಜಗಳ ಶುರು ಮಾಡಿದರು. ಜಗಳ ಬಳಿಕ ತಾರಕಕ್ಕೇರಿತ್ತು. ಸಹ ಸ್ಪರ್ಧಿಗಳು ಇಬ್ಬರ ನಡುವಿನ ಜಗಳ ಬಿಡಿಸಿದರೂ ನಿಲ್ಲಿಸದೆ ಕಿತ್ತಾಡುತ್ತಿದ್ದರು. ಇಬ್ಬರು ಕೈ ಕೈ ಮಿಲಾಯಿಸುವ ಮಟ್ಟಕ್ಕೆ ತಲುಪಿದ್ದರು. ಉದಯ್ ಜೋರಾಗಿ ಕಿರುಚಿ ಆರ್ಯವರ್ಧನ್ ಗೆ ಮುಂದೆ ರೇಗಾಡಿದರು. ತಾನು ಕಮ್ಮಿ ಇಲ್ಲಿ ಎಂತುವಂತೆ ಆರ್ಯವರ್ಧನ್ ತಳ್ಳಿದ್ರೆ 25 ಅಡಿ ಆಚೆಗೆ ಹೋಗಿ ಬೀಳ್ತೀಯಾ ಎಂದು ವಾರ್ನಿಂಗ್ ಮಾಡಿದರು. ಅಷ್ಟೆಯಲ್ಲ ವಯಸ್ಸಾಗಿದೆ, ದಪ್ಪ ಇರಬಹುದು ಆದರೆ ಯಾವನಿಗೇನು ಕಮ್ಮಿ ಎಂದು ಆರ್ಯವರ್ಧನ್ ಹೇಳಿದರು.
Bigg Boss OTT; ರಾತ್ರಿ 1 ಮೊಟ್ಟೆ ಕೊಟ್ಟಿದ್ರೆ ಏನಾಗ್ತಿತ್ತು, ಗುರೂಜಿಗೆ ಸೋನು ಗೌಡ ಸಖತ್ ಕ್ಲಾಸ್
ಸದ್ಯ ಇಬ್ಬರ ಕಿತ್ತಾಟದ ಪ್ರೋಮೋ ರಿಲೀಸ್ ಆಗಿದೆ. ಆದರೆ ಸಂಪೂರ್ಣ ಎಪಿಸೋಡ್ ನೋಡಲು ವೂಟ್ ಗೆ ಹೋಗಬೇಕು. ಅಂದಹಾಗೆ ನೀರಿನಲ್ಲಿ ಕಲ್ಲು ಹುಡುಕುವ ಟಾಸ್ಕ್ ನಲ್ಲಿ ಸೋಮಣ್ಣ ಮಾಚಿಮಾಡ ಮತ್ತು ಆರ್ಯವರ್ಧನ್ ತಂಡ ಟೈ ಮಾಡಿಕೊಂಡಿತ್ತು. ಇದೀಗ ಕಂಬಿಯಿಂದ ತಪ್ಪಿಸಿಕೊಳ್ಳುವ ಟಾಸ್ಕ್ ನಲ್ಲಿ ಯಾರು ವಿನ್ ಆಗ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.
ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಷನ್‌ಗೆ ನಾಮಿನೇಷನ್ ಮಾಡಲಾಗಿದೆ. ಮೊದಲ ದಿನ ಬಿಗ್ ಮನೆಯಲ್ಲಿ ಎಲಿಮಿನೇಷನ್‌ಗೆ ನಾಮಿನೇಷನ್ ಅದ ಸ್ಪರ್ಧಿಗಳಲ್ಲಿ ಸೋನು ಗೌಡ, ಸ್ಫೂರ್ತಿ ಗೌಡ, ಆರ್ಯವರ್ಧನ್, ಜಶ್ವಂತ್, ಕಿರಣ್ ಮತ್ತು ಅಕ್ಷತಾ ಮೊದಲ ದಿನ ಬಿಗ್ ಬಾಸ್ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ. ಈ ಬಾರಿ ಇವರಲ್ಲಿ ಯಾರು ಬಿಗ್ ಬಾಸ್ ಒಟಿಟಿಯಿಂದ ಹೊರಹೋಗ್ತಾರೆ ಎನ್ನುವುದು ವಾರಂತ್ಯದಲ್ಲಿ ಗೊತ್ತಾಗಲಿದೆ.
Bigg Boss Ott: 2ನೇ ಹೆಂಡತಿ ಪರವಾಗಿ 1ನೇ ಹೆಂಡತಿಗೆ ಬಹಿರಂಗ ಕ್ಷಮೆ ಕೇಳಿದ ನಟ ಅರ್ಜುನ್!
ಬಿಗ್ ಬಾಸ್ ಒಟಿಟಿ ಮನೆಯಲ್ಲಿ ಒಟ್ಟು 16 ಸ್ಪರ್ಧಿಗಳಿದ್ದಾರೆ. ಆರ್ಯವರ್ಧನ್ ಗುರೂಜಿ, ಸೋನು ಗೌಡ, ಅರ್ಜುನ್, ಉದಯ್, ರಾಕೇಶ್ ಅಡಿಗ, ಸ್ಪೂರ್ತಿ ಗೌಡ, ಸಾನಿಯಾ ಐಯ್ಯರ್, ಜಯಶ್ರೀ ಆರಾಧ್ಯ, ಚೈತ್ರ ಹಳ್ಳಿಕೇರಿ, ರೂಪೇಶ್ ಶೆಟ್ಟಿ, ಲೋಕೇಶ್, ಸೋಮಣ್ಣ ಮಾಚಿಮಾಡ, ಕಿರಣ್, ಅಕ್ಷತಾ ಕುಕಿ, ನಂದಿನಿ ಮತ್ತು ಜಶ್ವಂತ್ ಇದ್ದಾರೆ.