ಹಿಟ್ಲರ್ ಕಲ್ಯಾಣದ ಎಡವಟ್ಟು ಸುಂದರಿ ಮಲೈಕಾ ವಸುಪಾಲ್‌

Suvarna News   | Asianet News
Published : Sep 25, 2021, 05:54 PM IST
ಹಿಟ್ಲರ್ ಕಲ್ಯಾಣದ ಎಡವಟ್ಟು ಸುಂದರಿ ಮಲೈಕಾ ವಸುಪಾಲ್‌

ಸಾರಾಂಶ

ಆಕ್ಟಿಂಗ್‌ ಕನಸಿನ ಹಿಂದೆ ಬಿದ್ದ ದಾವಣಗೆರೆ ಪೋರಿ ಎಡವಟ್ಟು ಸುಂದರಿಯಾದ ಕತೆ ನಿಮಗೊತ್ತಾ? ಹಿಟ್ಲರ್ ಕಲ್ಯಾಣ ಸೀರಿಯಲ್‌ ನಾಯಕಿ ಮಲೈಕಾ ವಸುಪಾಲ್‌ ಅವರ ಬಗ್ಗೆ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ.  

ಮಲೈಕಾ ವಸುಪಾಲ್‌!

ಹೀಗಂದ್ರೆ ಥಟ್ಟನೆ 'ಅದು ಮಲೈಕಾ ಅರೋರ ಅಲ್ವಾ?' ಅಂತ ಗೊಂದಲ ಆಗಬಹುದು. ಬಾಲಿವುಡ್‌ನ (Bollywood) ಸೆಕ್ಸೀ ಕ್ವೀನ್‌ ಮಲೈಕಾ ಅರೋರಾ (Malaika Arota) ಹೆಸರಿನ ಮೊದಲರ್ಧ ಎತ್ತಾಕ್ಕೊಂಡಿರೋ ಈ ಬ್ಯೂಟಿ, ಸೆಕ್ಸಿ ಅನ್ನೋದಕ್ಕಿಂತಲೂ ಇನ್ನೋಸೆಂಟ್‌ ಅನ್ನಬಹುದು. ಹಾಗಿದ್ರೆ ಇಷ್ಟೊತ್ತು ಹೇಳ್ತಿರೋದು ಯಾವ ಹುಡುಗಿ ಬಗ್ಗೆ ಅಂತ ತಲೆ ಕೆರ್ಕೊಳ್ಬೇಡಿ. ಈ ವಡವಟ್ಟು ಸುಂದ್ರಿಗೆ ಇಷ್ಟೂ ಇಂಟ್ರೊಡಕ್ಷನ್ ಕೊಡದಿದ್ರೆ ಹೇಗೆ.. ಇಲ್ಲಿ 'ಎಡವಟ್ಟು ಸುಂದರಿ' ಅಂದಾಕ್ಷಣ ಎಲ್ಲೋ ಕೇಳಿದ ಹಾಗಿದ್ಯಲ್ಲಾ ಅಂತ ನೀವು ಅಂದ್ಕೊಳ್ಳಬಹುದು. ಈಕೆ ಅದೇ ಲೀಲಾ ಅನ್ನೋ ಎಡವಟ್ಟು ಸುಂದರಿ. 

 

ಯಂಗ್ - ಅಡಲ್ಟ್ ಲವ್ ಸ್ಟೋರಿ (Young-adult love story)ಗೆ ಜನ ಫಿದಾ ಆಗ್ತಿರೋ ಕಾರಣ ಈ ಜಾನರ್ ನಲ್ಲೇ ಹೊಸ ಹೊಸ ಸೀರಿಯಲ್‌ಗಳು ಹೊರಬರ್ತಿವೆ. ಅದಕ್ಕೆ ಮತ್ತೊಂದು ಎಂಟ್ರಿ ಜೀ ಕನ್ನಡ (Zee Kannada)ದ ಧಾರಾವಾಹಿ ಹಿಟ್ಲರ್ ಕಲ್ಯಾಣ (Hitler Kalyana). ದಿಲೀಪ್ ರಾಜ್ (Dileep Raj) ಈ ಸೀರಿಯಲ್ ನಾಯಕ. ಜೊತೆ ಜೊತೆಯಲಿ ಸೀರಿಯಲ್‌ನಲ್ಲಿ ಅನಿರುದ್ಧ ಮಾಡಿರುವ ಆರ್ಯವರ್ಧನ್ ಪಾತ್ರದಂತೆ ಮಧ್ಯ ವಯಸ್ಕ ಪಾತ್ರ. ಜೊತೆಗೆ ದೊಡ್ಡ ಬ್ಯುಸಿನೆಸ್ ಮ್ಯಾನ್ (Business Man). ಅಲ್ಲಿ ಆರ್ಯವರ್ಧನ್ ಅನು ಸಿರಿಮನೆ ಮುಗ್ಧತೆಗೆ ಮನಸೋತರೆ, ಇಲ್ಲಿ ರಗ್ಡ್ ಹೀರೋ ಎಜೆಯನ್ನು ಸೆಳೆಯೋ ಯುವತಿ ಲೀಲಾ. ಸದಾ ಎಡವಟ್ಟು ಮಾಡೋ ಈ ಮುಗ್ಧ ಹುಡುಗಿ ಹಿಟ್ಲರ್‌ ಬಾಸ್, ಕಲ್ಲು ಮನಸ್ಸಿನ ಎಜೆಯನ್ನು ಹೇಗೆ ಕರಗಿಸ್ತಾಳೆ ಅನ್ನೋದು ಇಂಟೆರೆಸ್ಟಿಂಗ್ ವಿಷಯ.

ಸ್ಟಾರ್‌ ಸುವರ್ಣದಲ್ಲಿ ರವಿ ಬೆಳಗೆರೆ ಕಾದಂಬರಿ ಹೇಳಿ ಹೋಗು ಕಾರಣ

ಈ ಪಾತ್ರಕ್ಕೆ ಬೇಕಾದ ಹುಡುಗಿಯ ಆಯ್ಕೆ ಮಾಡೋಕೆ ಈ ಸೀರಿಯಲ್‌ ತಂಡ ಸಾಕಷ್ಟು ಹುಡುಕಾಟ ನಡೆಸಿತ್ತು. ಏಕೆಂದರೆ ಇಲ್ಲಿರುವ ಇನ್ನೊಂದು ಪಾತ್ರ ಮಧ್ಯ ವಯಸ್ಸಿನದಾಗಿರುವ ಕಾರಣ  ಜೊತೆಗೆ ಮುಖ್ಯಪಾತ್ರವೇ ಆಕರ್ಷಣೆಯ ಕೇಂದ್ರಬಿಂದು ಆಗುತ್ತದೆ. ಹೀಗಿರುವಾಗ ಬ್ಯೂಟಿಫುಲ್ ಆಗಿರುವ ಹುಡುಗಿಯನ್ನು ಆಯ್ಕೆ ಮಾಡದಿದ್ದರೆ ಸೀರಿಯಲ್ ಬಿದ್ಹೋಗೋ ಸಾಧ್ಯತೆ ಇದೆ.
 



ಇನ್ನೊಂದು ಕಡೆ ದಾವಣಗೆರೆಯ ಮಲೈಕಾ ಅನ್ನೋ ಆಕರ್ಷಕ ಹೆಸರಿಟ್ಟುಕೊಂಡಿರುವ ಸುಂದರಿಗೆ ಬಾಲ್ಯದಿಂದಲೂ ಆಕ್ಟಿಂಗ್ಅಂದ್ರೆ ಪ್ರಾಣ. ಆದರೆ ಮನೆಯವರಿಗೆ ಮಗಳ ಈ ಹುಚ್ಚಾಟಕ್ಕಿಂತ ಓದೋದೇ ಮುಖ್ಯ ಅನ್ನೋದು ಗೊತ್ತಿತ್ತು. ಅದಕ್ಕೆ ಮೊದಲು ಓದು, ಆಮೇಲೆ ಬೇಕಿದ್ರೆ ಹಾಬಿ ಥರ acting ಮಾಡಬಹುದು ಅಂತಾರೆ. ಏಕೆಂದರೆ ಆಕ್ಟಿಂಗ್ ಕೆರಿಯರ್‌ಅನ್ನು ನಂಬಿಕೊಂಡರೆ ಅದು ಎಷ್ಟು ಕಾಲ ಕೈ ಹಿಡಿಯುತ್ತೆ ಅಂತ ಹೇಳೋದು ಕಷ್ಟ. ಹೀಗಾಗಿ ಮೊದಲು ಮಗಳು ಅವಳ ಜೀವನ ನೋಡಿಕೊಳ್ಳುವಷ್ಟು ಶಿಕ್ಷಣ (Education) ಪಡೆಯಲಿ ಅನ್ನೋದು ಹೆತ್ತವರ ಮನದ ಇಂಗಿತ.

ಬೆಚ್ಚಿ ಬೀಳಿಸಿದ ಕನ್ನಡತಿ! ಭುವಿಯ ಹೊಸ ನಡೆಗೆ ಫಿದಾ ಆದ ಪ್ರೇಕ್ಷಕರು

ಹೀಗೆ ಅಪ್ಪ ಅಮ್ಮನ ಬಲವಂತಕ್ಕೆ ಓದಿದರೂ ಜಾಣೆಯಾದ ಮಲೈಕಾ ಇಂಜಿನಿಯರಿಂಗ್‌ ಪದವಿ ಪಡೀತಾರೆ. ಆಮೇಲೆ ತನ್ನ ಕನಸಿನ ಹಿಂದೆ ಬೀಳ್ತಾರೆ. ಚಂದದ ಪ್ರೊಫೈಲ್ ರೆಡಿ ಮಾಡಿ ಸಾಕಷ್ಟು ಸೀರಿಯಲ್ ತಂಡ ಸಂಪರ್ಕಿಸಿ ಅಡಿಶನ್ ಕೊಟ್ಟಿದ್ದೇ ಕೊಟ್ಟಿದ್ದು. ಅದಕ್ಕಾಗಿ ದಾವಣಗೆರೆಯಿಂದ ಬೆಂಗಳೂರಿಗೆ ಸದಾ ಓಡಾಟ. ಹೀಗೆ ಅಡಿಶನ್ ಗಾಗಿ ಹಲವು ಸುತ್ತಾಟ ನಡೆಸಿದ ಬಳಿಕ ಕೊನೆಗೂ ಆಯ್ಕೆ ಆದದ್ದು ಜೀ ಕನ್ನಡದ 'ಎಡವಟ್ಟು ಲೀಲಾ' ಪಾತ್ರಕ್ಕೆ. 'ಏನು ಹೇಳಿದರೂ ಎರಡನೇ ಬಾರಿ ಯೋಚಿಸದೇ ಟಪಕ್ಕನೆ ನಂಬಿ ಬಿಡುವ, ನಂಬಿದವರು ಬೀಳು ಅಂದರೆ ಬಿದ್ದು ಬಿಡುವಷ್ಟು ಮುಗ್ಧ ಹುಡುಗಿಯ ಹುಡುಕಾಟದಲ್ಲಿದ್ದೆವು. ಆಗ ನಮ್ಮ ಈ ಪಾತ್ರಕ್ಕೆ ಕರೆಕ್ಟ್ ಫೇಸ್ ಅನಿಸಿದ್ದು ಮಲೈಕಾ' ಅನ್ನೋದು ಈ ಸೀರಿಯಲ್ ನ ಹಿಟ್ಲರ್ ಅಲಿಯಾಸ್ ಎಜೆ ಅಂದರೆ ದಿಲೀಪ್ ರಾಜ್ ಅವರ ಮಾತು. ಈ ಸೀರಿಯಲ್‌ಗೆ ಬಂಡವಾಳ ಹಾಕಿರೋರೂ ಅವರೇ. 
ಸದ್ಯಕ್ಕೀಗ ಈ ಸೀರಿಯಲ್‌ಗೋಸ್ಕರ ಮಲೈಕಾ ದಾವಣಗೆರೆಯಿಂದ ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ. ಆಡಿಶನ್‌ಗಾಗಿ ಸಾಕಷ್ಟು ಅಲೆದಾಡಿದ್ದರೂ ಕೊನೇ ಕ್ಷಣದಲ್ಲಿ ಅವರು ಈ ಸೀರಿಯಲ್‌ನಲ್ಲಿ ನಟಿಸಲು ಒಲ್ಲೆ ಅಂದಿದ್ದರಂತೆ. ಆದರೆ ಈಗ ಸಿಕ್ತಿರೋ ಪಾಪ್ಯುಲಾರಿಟಿ ನೋಡಿ ಒಪ್ಕೊಳದೇ ಇದ್ದಿದ್ರೆ ಯಡವಟ್ಟಾಗ್ತಿತ್ತು ಅಂತ ಯೋಚಿಸ್ತಾರೆ ಯಡವಟ್ಟು ಲೀಲಾ ಅಲಿಯಾಸ್ ಮಲೈಕಾ ವಸುಪಾಲ್ (Malaika Vasupal). 

70 ಆದರೂ ಯಂಗ್ ಸತ್ಯ ಪಾತ್ರದಲ್ಲಿ ಕಾಣಿಸಿಕೊಂಡ ಗಿರಿಜಾ ಲೋಕೇಶ್‌ಗೆ ವೀಕ್ಷಕರು ಫಿದಾ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?