ಬೆಚ್ಚಿ ಬೀಳಿಸಿದ ಕನ್ನಡತಿ! ಭುವಿಯ ಹೊಸ ನಡೆಗೆ ಫಿದಾ ಆದ ಪ್ರೇಕ್ಷಕರು

Suvarna News   | Asianet News
Published : Sep 23, 2021, 05:23 PM ISTUpdated : Sep 24, 2021, 09:43 AM IST
ಬೆಚ್ಚಿ ಬೀಳಿಸಿದ ಕನ್ನಡತಿ! ಭುವಿಯ ಹೊಸ ನಡೆಗೆ ಫಿದಾ ಆದ ಪ್ರೇಕ್ಷಕರು

ಸಾರಾಂಶ

'ಕನ್ನಡತಿ' ಸೀರಿಯಲ್‌ನಲ್ಲಿ ಭುವಿ ಒಂದು ದಿನದ ಮಟ್ಟಿಗೆ ಎಂಡಿ ಸ್ಥಾನಕ್ಕೇರಿದ್ದಾಳೆ. ಇಂಗ್ಲೀಷ್‌ ಬರದೇ ಈಕೆ ಪೇಚಾಡುತ್ತಾಳೆ ಅಂದುಕೊಂಡ ಸಾನಿಯಾಗೆ ದಿಗ್ಭ್ರಮೆಯಾಗಿದೆ. ಕನ್ನಡತಿಯ ಇಂಟೆರೆಸ್ಟಿಂಗ್ ಚಾಪ್ಟರ್‌ಗೆ ವೀಕ್ಷಕರೂ ಫಿದಾ ಆಗಿದ್ದಾರೆ.  

ಕಲರ್ಸ್‌ ಕನ್ನಡದಲ್ಲಿ (Colors Kannada) ಕ್ಲಾಸ್‌ ಆಡಿಯನ್ಸ್ ಗೂ ಮಾಸ್‌ ಆಡಿಯನ್ಸ್ ಗೂ ಏಕಕಾಲಕ್ಕೆ ಇಷ್ಟವಾಗುತ್ತಿರುವ ಸೀರಿಯಲ್‌ 'ಕನ್ನಡತಿ' (Kannadathi). ಈಗ ಈ ಸೀರಿಯಲ್‌ ಇಂಟರೆಸ್ಟಿಂಗ್‌ ಘಟ್ಟಕ್ಕೆ ಬಂದು ನಿಂತಿದೆ. ಇಲ್ಲೀವರೆಗೆ ಭುವಿ, ಆಕೆಯ ಕನ್ನಡ, ಹರ್ಷ ಭುವಿಯ ನಡುವೆ ಹೇಳಿಯೂ ಹೇಳದಂತಿರುವ ಪ್ರೀತಿಯ ನಡುವೆಯೇ ಹರಿದಾಡುತ್ತಿದ್ದ ಕಥೆಗೆ ಹೊಸ ಆಯಾಮ ಸಿಕ್ಕಿದೆ. ಭುವಿ ಮೊದಲಿಂದಲೂ ತನ್ನ ಸ್ವಚ್ಛ ಕನ್ನಡಕ್ಕೆ ಹೆಸರುವಾಸಿ. ಆಕೆಯ ಮಾತಿನ ನಡುವೆ ಒಂದು ಇಂಗ್ಲೀಷ್ ಪದ ನುಸುಳೋದೂ ಇಲ್ಲ. ಕಾಲೇಜಿನಲ್ಲೂ, ಕೆಲಸದ ಜಾಗದಲ್ಲೂ, ವೀಕ್ಷಕರ ಮನಸ್ಸಲ್ಲೂ ಭುವಿ ಅಂದರೆ ಕನ್ನಡಕ್ಕೆ ಮತ್ತೊಂದು ಹೆಸರು ಅನ್ನೋ ಸ್ಥಿತಿ ಇದೆ. ಅಂಥಾ ಭುವಿ ಇದೀಗ ಪ್ರೇಕ್ಷಕರನ್ನು, ವಿಲನ್‌ ಸಾನಿಯಾಳನ್ನು ಬೆಚ್ಚಿಬೀಳಿಸುವಂಥಾ ಕೆಲಸವೊಂದನ್ನು ಮಾಡಿದ್ದಾಳೆ. ಸ್ವತಃ ರತ್ನಮಾಲಾ ಅವರೂ ಭುವಿಯ ಹೊಸ ವರಸೆ ಕಂಡು ಅಚ್ಚರಿ ಪಟ್ಟಿದ್ದಾರೆ. 

ಭುವಿಯನ್ನು ನಗೆ ಪಾಟಲಿಗೆ ಗುರಿ ಮಾಡಬೇಕು ಅನ್ನುವ ಉದ್ದೇಶದಿಂದ ಸಾನಿಯಾ ಹೊಸ ಆಟ ಶುರು ಮಾಡಿದ್ಲು. ಅದು ಏಕಾಏಕಿ ಒಂದು ದಿನ ಭುವಿಗೆ ಎಂಡಿ ಸೀಟು ಕೊಟ್ಟಿದ್ದು. ಅದನ್ನು ಭುವಿ ಸರಿಯಾಗಿ ನಿಭಾಯಿಸಿದ್ರೆ ಆಕೆಯ ಶಿಷ್ಯವೃತ್ತಿ ಮುಂದುವರಿಯುತ್ತೆ. ಒಂದು ವೇಳೆ ಆಕೆ ಕರೆಕ್ಟಾಗಿ ನಿಭಾಯಿಸದಿದ್ದರೆ ಆಕೆ ಕೆಲಸ ಬಿಡಬೇಕಾಗುತ್ತೆ. ಹಾಗೆ ಏಕ್‌ ದಿನ್‌ ಕಾ ಎಂಡಿ ಪೋಸ್ಟ್‌ಗೆ ಬಂದ ಭುವಿಗೆ ಸಿಕ್ಕ ಮೊದಲ ಕೆಲಸ ವಿವಿಧ ಸಂಸ್ಥೆಗಳ ಡೆಲಿಗೇಟ್ಸ್‌ ಜೊತೆಗೆ ಮೀಟಿಂಗ್‌. ಕನ್ನಡ ಬಾರದ ಇಂಗ್ಲೀಷ್‌ನಲ್ಲೇ ನಡೆಯುವ ಆ ಮೀಟಿಂಗ್‌ನಲ್ಲಿ ಭುವಿ ನಗೆಪಾಟಲಿಗೆ ಗುರಿಯಾಗೋದನ್ನೇ ಸಾನಿಯಾ ಕಾಯುತ್ತಿರುತ್ತಾಳೆ. ಆದರೆ ಅಲ್ಲಿ ಆದದ್ದೇ ಬೇರೆ. 
 

ಡಿವೋರ್ಸ್ ಫೈನಲ್ ಆದ್ರೆ ಭಾರೀ ಮೊತ್ತದ ಪರಿಹಾರ ಪಡೆಯಲಿದ್ದಾರೆ ಸಮಂತಾ

'ಶುಭೋದಯ.. ' ಅಂತ ಮಾತು ಶುರು ಮಾಡೋ ಭುವಿ, ಏಕಾಏಕಿ ಇಂಗ್ಲೀಷ್‌ನಲ್ಲಿ ಸಂಭಾಷಣೆ ಮುಂದುವರಿಸುತ್ತಾಳೆ. ಮಾಲಾ ಇನ್ಸಿಟಿಟ್ಯೂಶನ್‌ಗಳ ಕಾರ್ಯವೈಖರಿಯನ್ನು ಅಸ್ಖಲಿತ ಇಂಗ್ಲೀಷ್‌ನಲ್ಲಿ ವಿವರಿಸುತ್ತಾಳೆ. ಈಕೆಗೆ ಮೀಟಿಂಗ್‌ ಜವಾಬ್ದಾರಿ ಹೊರಿಸಿ ಮಜಾ ನೋಡಬೇಕೆಂದುಕೊಂಡಿದ್ದ ಸಾನಿಯಾಗೆ ಭರ್ಜರಿ ಮುಖಭಂಗ. ಭುವಿಗೆ ಇಂಗ್ಲೀಷ್ ಬರುತ್ತೆ ಅನ್ನೋ ಕಲ್ಪನೆಯೂ ಇಲ್ಲದ ಸಾನಿಯಾಗೆ ಆಕೆಯ ಪಟ ಪಟ ಇಂಗ್ಲೀಷ್‌ ಕಂಡು ಏನು ಮಾಡಲೂ ತೋಚದ ಸ್ಥಿತಿ. ಇದು ತನಗೆ ತಾನೇ ತಂದುಕೊಂಡು ಕೆಡುಕು ಅನ್ನೋದು ಸಾನಿಯಾಗೆ ಗೊತ್ತಾಗುವಾಗ ಹೊತ್ತಾಗಿರುತ್ತೆ. ಅಷ್ಟರಲ್ಲಿ ಸಾಕಷ್ಟು ಅವಮಾನ, ಆತಂಕ ಎಲ್ಲವೂ ಎದುರಾಗಿರುತ್ತೆ. 

ಲಾಭಕ್ಕಾಗಿ ಹಿಂದೂ ಸಂಪ್ರದಾಯದ ತಮಾಷೆ ಬೇಡ: ಆಲಿಯಾಗೆ ಕಂಗನಾ ಕ್ಲಾಸ್..!

ಇಂಗ್ಲೀಷ್ (English) ನಲ್ಲಿ ಮಾಲಾ ಸಂಸ್ಥೆಯ ಬಗ್ಗೆ ವಿವರಿಸಿ ಕನ್ನಡದಲ್ಲೂ ಒಂದಿಷ್ಟು ವಿವರಣೆ ಕೊಟ್ಟು, ಏನೇ ವಿಚಾರ ಅರ್ಥವಾಗದಿದ್ದರೂ ನಿಸ್ಸಂಕೋಚವಾಗಿ ತನ್ನ ಬಳಿ ಕೇಳಬಹುದು ಅಂತ ವಿನಯದಿಂದಲೇ ಹೇಳಿದ ಭುವಿ ವಿವಿಧ ಸಂಸ್ಥೆಗಳಿಂದ ಬಂದಿದ್ದ ಡೆಲಿಗೇಟ್ಸ್‌ ಮನ ಗೆಲ್ಲುವಲ್ಲಿ ಯಶಸ್ವಿ ಆಗುತ್ತಾಳೆ. ಇನ್ನೊಂದು ಮುಖ್ಯವಾದ ಅಂಶ ಅಂದರೆ ಭುವಿಯ ಈ ಕಾರ್ಯ ರತ್ನಮಾಲಾರ ಗಮನಕ್ಕೂ ಬರುವುದು. ಭುವಿಗೆ ತಿಳಿಯದಂತೆ ವೀಡಿಯೋ ಕಾಲ್ ಮೂಲಕ ಆಕೆಯ ಪ್ರೆಸೆಂಟೇಶನ್‌ ಅನ್ನು ರತ್ನಮಾಲಾ ನೋಡುತ್ತಾರೆ. ಭುವಿಯ ಆತ್ಮವಿಶ್ವಾಸ, ಆಕೆಯ ಪ್ರೆಸೆಂಟೇಶನ್‌ನಲ್ಲಿರುವ ಪ್ರಬುದ್ಧತೆಯನ್ನು ಅವರು ಮೆಚ್ಚುತ್ತಾರೆ. ತನ್ನ ಅಭಿಲಾಷೆ ಈಡೇರುವ ಸಮಯ ಹತ್ತಿರ ಬರುತ್ತಿರುವುದಕ್ಕೆ ಅವರಿಗೆ ಬಹಳ ಸಂತೋಷ ಆದಂತಿದೆ. ಇದೇ ಸಮಯಕ್ಕೆ ಅಮ್ಮಮ್ಮ ರತ್ನಮಾಲಾರನ್ನು ಭೇಟಿ ಮಾಡಲು ಬರುವ ಹರ್ಷನಿಗೂ ಭುವಿಯ ಇಂಗ್ಲೀಷ್ ಕಂಡು ಖುಷಿ ಆಗುತ್ತೆ. 
 

ಒಂದೇ ದಿನ ಎಂಡಿ ಸೀಟ್‌ನಲ್ಲಿ ಕುಳಿತು ಭುವಿ ತರೋ ಮತ್ತೊಂದು ಬದಲಾವಣೆ ಅಂದರೆ ಎಂಡಿಗೆ ಪ್ರತ್ಯೇಕ ಚೇಂಬರ್‌ ಬೇಡ ಅನ್ನೋದು. ಇದನ್ನು ಸಾನಿಮಾ ಮುಂದಿನ ದಿನಗಳಲ್ಲಿ ಅನುಸರಿಸೋದು ಕಷ್ಟ ಅನಿಸುತ್ತೆ. ಆದರೂ ಭುವಿಯ ಈ ಹೊಸ ಅವತಾರ ಸಾನಿಯಾಗೆ ತೀವ್ರ ಮುಖಭಂಗ ಮಾಡಿದೆ. ಕನ್ನಡತಿಯ ಇತ್ತೀಚಿನ ಸಂಚಿಕೆಗಳು ಕನ್ನಡಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಟಿಆರ್‌ಪಿ ರೇಟಿಂ್‌ನಲ್ಲೂ ಏರಿಕೆ ಆಗಿದೆ. 

ವಾಕಿಂಗ್ ಸ್ಟೈಲ್‌ಗೆ ಹಿಗ್ಗಾಮುಗ್ಗ ಟ್ರೋಲ್ ಆದ ಮಲೈಕಾ..!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?