ಬಿಗ್ ಬಾಸ್ ಓಟಿಟಿಯಲ್ಲಿ ಪ್ರೀತಿಗೆ ಬಿದ್ದ ನಟಿ ಶಮಿಶಾ ಇದೇ ಮೊದಲ ಬಾರಿ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ.
ಬಾಲಿವುಡ್ ಝೀರೋ ಫಿಗರ್ ಶಿಲ್ಪಾ ಶೆಟ್ಟಿ (Shilpa Shetty) ಸಹೋದರಿ ಶಮಿತಾ ಶೆಟ್ಟಿ ವೃತ್ತಿ ಜೀವನದಲ್ಲಿ ಕೆಳಗೆ ಬೀಳುತ್ತಿದ್ದ ಸಮಯದಲ್ಲಿಯೇ ಅವರನ್ನು ಕೈ ಹಿಡಿದು, ಎತ್ತಿ ಹಿಡಿದಿದ್ದು ಹಿಂದಿ ಬಿಗ್ ಬಾಸ್ ಓಟಿಟಿ (Bigg Boss OTT). ಜನರಿಗೆ ತಮ್ಮ ಮೇಲಿರುವ ಅಭಿಪ್ರಾಯವನ್ನು ಬದಲಾಯಿಸಬೇಕು, ತಾವು ಎಷ್ಟು ಸರಳ ಹುಡುಗಿ ಎಂದು ಅರ್ಥ ಮಾಡಿಸಬೇಕು ಎಂದು ಕರಣ್ ಜೋಹಾರ್ (Karan Johar) ನಿರೂಪಣೆಯಲ್ಲಿ ಮೂಡಿ ಬರುತ್ತಿದ್ದ ಬಿಬಿ ಓಟಿಟಿನಲ್ಲಿ ಶಮಿತಾ ಸ್ಪರ್ಧಿಸಿದ್ದರು.
ಬಿಬಿ ಓಟಿಟಿಯಲ್ಲಿ ಶಮಿತಾಳ (Shamitha Shetty) ಬಗ್ಗೆ ಜನರಿಗೆ ಇದ್ದ ಅಭಿಪ್ರಾಯ ಬದಲಾಗಿತ್ತು. ಇದಕ್ಕೆ ಒಂದು ರೀತಿಯ ಪ್ರಮುಖ ಕಾರಣವೇ ಆಕೆ ರಾಕೇಶ್ ಬಾಪಟ್ (Rakesh Bapat) ಜೊತೆ ಪ್ರೀತಿಯಲ್ಲಿ ಬಿದ್ದಿದ್ದು ಮತ್ತು ಆತ ಹೇಳಿದಂತೆ ಕೇಳಿದ್ದಕ್ಕೆ. ಅನೇಕ ಬಾರಿ ಶಮಿತಾ ಕೆಟ್ಟ ಪದಗಳನ್ನು ಬಳಸಿ ಮಾತನಾಡಿದಾಗ, ರಾಕೇಶ್‌ಗಾಗಿಯೇ ಬಾಯಿ ಮುಚ್ಚಿಕೊಂಡು ಸುಮ್ಮನಾಗಿದ್ದ ಘಟನೆಗಳು ಈಗಲೂ ವೀಕ್ಷಕರ ಕಣ್ಣ ಮುಂದಿದೆ. ಬಿಬಿ ಓಟಿಟಿಯಲ್ಲಿ ಇವರಿಬ್ಬರೂ ಹೆಚ್ಚಿಗೆ ಸೆನ್ಸೇಷನ್ ಕ್ರಿಯೇಟ್ ಮಾಡಿದರು, ಎಂದು Tvಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಸೀಸನ್ 15ಕ್ಕೆ (Bigg Boss 15) ನೇರವಾಗಿ ಸೆಲೆಕ್ಟ್ ಆದರು.
ತಂಗಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟಾಗ ತನಗೆ ಕೆಲಸ ಸಿಗುವುದಿಲ್ಲ ಎಂದು ಶಿಲ್ಪಾ ಶೆಟ್ಟಿ ಭಯಪಟ್ಟಿದರಂತೆ!ಓಟಿಟಿಯಿಂದ ಟಿವಿ ಬಿಗ್ ಬಾಸ್ ಶುರುವಾಗುವುದಕ್ಕೆ ಕೆಲವು ತಿಂಗಳುಗಳಿದ್ದವು. ಆಗ ಶಮಿತಾ ಮತ್ತು ರಾಕೇಶ್ ತಮ್ಮ ಪ್ರೀತಿಯನ್ನು ಬಾಹಿರಂಗವಾಗಿ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. ಕೈ ಕೈ ಹಿಡಿದುಕೊಂಡು ಓಡಾಡುತ್ತಿದ್ದರು. ಹೀಗಾಗಿ ಇಬ್ಬರೂ ಪಕ್ಕಾ ಗರ್ಲ್‌ಫ್ರೆಂಡ್- ಬಾಯ್‌ಫ್ರೆಂಡ್ (Girlfriend-Boyfriend) ಎಂದು ಸೀಸನ್ 15ರಲ್ಲಿ ಎಲ್ಲರಿಗೂ ತಿಳಿಯಿತು.
ಸೀಸನ್ 15 ಮುಗಿನ ನಂತರ ಶಮಿತಾ ಖಾಸಗಿ ಸಂದರ್ಶನದಲ್ಲಿ ತಮ್ಮ ಸಂಬಂಧದ ಬಗ್ಗೆ ಹಂಚಿಕೊಂಡಿದ್ದಾರೆ. ಕೆಲಸದಲ್ಲಿ ಸೆಟಲ್ ಆಗಿ ಮದುವೆ ಮಾಡಿಕೊಂಡು ಮಕ್ಕಳು ಮಾಡಿಕೊಳ್ಳುವ ಪ್ಲ್ಯಾನ್ ಬಗ್ಗೆ ಹೇಳಿ ಕೊಂಡಿದ್ದಾರೆ.
ಶಮಿತಾ ಮಾತು:
'ನಾನು ಬಿಗ್ ಬಾಸ್ ಸೀಸನ್ 15ರಲ್ಲಿದ್ದಾಗ ಜನರಿಗೆ ಪಾಸಿಟಿವ್ ಎನರ್ಜಿ ತುಂಬಿಸುತ್ತಿದ್ದೆ. ಏಕೆಂದರೆ ನಾನು manifestingನಲ್ಲಿ ನಂಬಿಕೆ ಇದೆ. ಈ ವರ್ಷ ನಾನು ಮದುವೆ ಮಾಡಿಕೊಳ್ಳಬೇಕು, ಎಂದು ಅಫರ್ಮೇಷನ್ (Affirmation) ಮಾಡಿಕೊಂಡಿರುವz. ಹೀಗಾಗಿ ಈ ಯೂನಿವರ್ಸ್ ಕೂಡ ಇದಕ್ಕೆ ಸಪೋರ್ಟ್ ಮಾಡಲಿದೆ. ಕೊರೋನಾ (Covid19) ಸಮಯದಲ್ಲಿ ನಾನು ಒಬ್ಬಂಟಿ ಎಂದು ಅರ್ಥ ಮಾಡಿಕೊಂಡೆ. ನಾನು ತುಂಬಾ ವರ್ಷಗಳಿಂದ ಸಿಂಗಲ್ ಆಗಿರುವೆ. ನನಗೆ ಬೇಕಾದ ದಾರಿಯಲ್ಲಿ ನಾನು ಜೀವನ ನಡೆಸುವೆ. ಪಾರ್ಟನರ್ ಜೊತೆಗಿರುವ ಜೀವvವನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೆ. ಆದರೀಗ ಒಬ್ಬರು ನನ್ನ ಜೊತೆಗಿದ್ದಾರೆ. ನೋಡೋಣ ಇದು ಎಲ್ಲಿ ತನಕ ನಡೆಯುತ್ತದೆ ಎಂದು. ಆದರೆ ಈ ವರ್ಷ ಸೆಟಲ್ ಆಗಿ ಮದುವೆ (Marriage) ಮಾಡಿಕೊಂಡು ಮಕ್ಕಳು ಮಾಡಿಕೊಳ್ಳುವ ಪ್ಲ್ಯಾನ್ ಮಾಡುತ್ತಿರುವೆ,' ಎಂದು ಶಮಿತಾ ಇ-ಟೈಮ್ಸ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
'ಬಿಗ್ ಬಾಸ್ ಮನೆಯಲ್ಲಿ ನಾನು ತುಂಬಾ ದಿನಗಳ ಕಾಲ ರಾಕೇಶ್ ಬಾಪಟ್‌ರಿಂದ ದೂರ ಉಳಿಯುತ್ತಿದ್ದೆ. ರಾಕೇಶ್ ನನ್ನ ಬಾಯ್‌ಫ್ರೆಂಡ್ ಹೌದಾ, ಅಲ್ವೋ ಎಂಬ ಪ್ರಶ್ನೆ ಮಾಡಿಕೊಳ್ಳುತ್ತಿದ್ದೆ. ನಾವು ಹೊರಗಿದ್ದಾಗಲೂ ನಾನು ಅನೇಕರಿಗೆ ರಾಕೇಶ್ ಬಗ್ಗೆ ಪ್ರಶ್ನೆ ಮಾಡಿದ್ದೆ, ಆತ ಈಗಲೂ ನನ್ನ ನೆನಪಿನಲ್ಲಿದ್ದಾನಾ ಅಥವಾ ಬೇರೆ ಹುಡುಗಿ ನೋಡಿಕೊಂಡಿದ್ದಾನಾ ಎಂದು. ಏಕೆಂದರೆ ಟಿವಿಯಲ್ಲಿ ಮಾತ್ರ ರಾಕೇಶ್ ನನ್ನನ್ನು ನೋಡಬೇಕಿತ್ತು. ಬೇರೆ ಯಾವ ರೀತಿ ಕಮ್ಯೂನಿಕೇಷನ್ (Communication) ಇರಲಿಲ್ಲ. ಹೊರ ಬಂದ ನಂತರ ತಿಳಿಯಿತು ಆತ ನನಗಾಗಿ ಕಾಯುತ್ತಿದ್ದಾನೆಂದು. ಹೀಗಾಗಿ ನಾವು ಒಬ್ಬರನ್ನೊಬ್ಬರು ತಿಳಿದುಕೊಳ್ಳಬೇಕಿದೆ. ಗೇಮ್ ಶೋನಲ್ಲಿ (Game Show) ಭೇಟಿ ಆಗುವುದಕ್ಕೂ ರಿಯಲ್ ಲೈಫ್ ಜೀವನ ನಡೆಸುವುದಕ್ಕೂ ವ್ಯತ್ಯಾಸವಿದೆ. ನಾವು ಪಾಸಿಟಿವ್ ಫ್ಯೂಚರ್ ಇಷ್ಟ ಪಡುತ್ತೇವೆ,' ಎಂದು ಶಮಿತಾ ಹೇಳಿದ್ದಾರೆ.