
ಮೀಟೂ ಆರೋಪ ಬಾಲಿವುಡ್, ಸ್ಯಾಂಡಲ್ ವುಡ್ ಆಯ್ತು, ಈಗ ಬಿಗ್ ಬಾಸ್ ಮನೆಯಲ್ಲೂ ಕೇಳಿ ಬಂದಿದೆ. ಬಿಗ್ ಬಾಸ್ ಹಿಂದಿ ಸೀಸನ್ 13ರ ಸ್ಪರ್ಧಿ ಸಿದ್ದಾರ್ಥ್ ಶುಕ್ಲಾ ಸದಾ ಸ್ಪರ್ಧಿಗಳ ಜೊತೆ ಜಗಳ ಮಾಡುತ್ತಾರೆಂದು ಮನೆಯಿಂದ ಹೊರ ಹಾಕಲು ಸಾಮಾಜಿಕ ಜಾಲತಾಣದಲ್ಲಿ ಹಿಂದಿ ವೀಕ್ಷಕರು #MeToo ಅಭಿಯಾನ ಶುರು ಮಾಡಿಕೊಂಡಿದ್ದಾರೆ.
ಬುಧವಾರ ನಡೆದ 'ಸ್ನೇಕ್ ಆ್ಯಂಡ್ ಲ್ಯಾಡರ್' ಟಾಸ್ಕ್‌ನಲ್ಲಿ ತಂಡಗಳು ತಮ್ಮ ಏಣಿಯನ್ನು ಎದುರಾಳಿಯಿಂದ ಕಾಪಾಡಿಕೊಳ್ಳಬೇಕಿತ್ತು. ಆದರೆ ಪಾರಾಸ್ ಅಕ್ಬರ್ ಸಿದ್ದಾರ್ಥ್ ಏಣಿಯನ್ನು ಮುರಿದು ಹಾಕುತ್ತಾರೆ ಇದರಿಂದ ಕೋಪಗೊಂಡ ಸಿದ್ದಾರ್ಥ್ ಇನ್ನಿತ್ತರ ಸ್ಪರ್ಧಿಗಳ ಏಣಿಯನ್ನೂ ಮುರಿದು ಹಾಕುತ್ತಾರೆ.
BB7:'ಫೋನ್ ಮಾಡ್ಲಿಲ್ಲ, ಆ್ಯಕ್ಸಿಡೆಂಟ್ ಆಯ್ತು' ಪ್ರೇಯಸಿಗೆ ಕ್ಷಮೆ ಕೇಳಿದ ಶೈನ್ ಶೆಟ್ಟಿ!
ಮಹಿರಾ ಏಣಿಯನ್ನು ಮುರಿಯಲು ಸಿದ್ದಾರ್ಥ್ ಮುಂದಾದಾಗ ಇಬ್ಬರು ಒಬ್ಬರನ್ನೊಬ್ಬರು ನೂಕಾಡುತ್ತಾರೆ ಇದರಂದ ಕೋಪಗೊಂದ ಪಾರಾಸ್ ಹಾಗೂ ದೇವ್ ಟಾಸ್ಕ್ ಅರ್ಧಕ್ಕೆ ನಿಲ್ಲಿಸಿ ಮನೆಯೊಳಗೆ ಹೋಗುತ್ತಾರೆ ಆದರೆ 5 ಹೆಣ್ಣು ಮಕ್ಕಳು ಕುಗ್ಗದೆ ಏಣಿ ನಿರ್ಮಿಸಿ ರಕ್ಷಿಸಲು ಮುಂದಾಗುತ್ತಾರೆ.
BB7: ಜೈ ಜಗದೀಶ್ 'ನಾನ್‌ಸೆನ್ಸ್ ಅಲ್ಲ': ಅಪ್ಪನ ಬಗ್ಗೆ ಮಗಳ ಬ್ಯಾಟಿಂಗ್!
ಈ ವೇಳೆ ದೇವೋಲೀನಾ ಸಿದ್ದಾರ್ಥ್ ಮೇಲೆ ಮೀಟೂ ಆರೋಪ ಮಾಡುತ್ತಾ, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಕೆಟ್ಟದಾಗಿ ಮುಟ್ಟುವುದನ್ನು ನಾನು ಖಂಡಿಸುತ್ತೇನೆಂದು ಹೇಳಿದ್ದಾರೆ. ಇದನ್ನು ಗಮನಿಸಿದ ನೆಟ್ಟಿಗರು ಸಿದ್ದಾರ್ಥ್ ಹೆಣ್ಣುಮಕ್ಕಳೊಂದಿಗೆ ವರ್ತಿಸುತ್ತಿರುವ ರೀತಿ ತಪ್ಪು ಎಂದು ಆರೋಪ ಮಾಡಿದರೆ ಇನ್ನು ಕೆಲವರು ಸಿದ್ಧಾರ್ಥ್ ಮೇಲೆ ಹೆಣ್ಣು ಮಕ್ಕಳು ಫೇಕ್ ಫೆಮಿನಿಸಂ ತೋರಿಸುತ್ತಿದ್ದಾರೆ ಎಂದು ಎರಡು ರೀತಿಯ ವಾದಗಳು ಕೇಳಿ ಬರುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.