
ಬಿಗ್ ಬಾಸ್ ಮನೆಯಲ್ಲಿ ಒಂದು ಸೇಬಿನ ಕತೆ,,, ಸೇಬು ಹಣ್ಣು ತಿಂದಿದ್ದಕ್ಕೆ ಜಗಳವೋ..ಜಗಳ.. ಚೈತ್ರಾ ಕೊಟ್ಟೂರು ಮತ್ತು ಕಿರಿಕ್ ಪಾರ್ಟಿ ಚಂದನ್ ನಡುವೆ ವಾಕ್ಸಮರವೇ ನಡೆದು ಹೋಯಿತು.
ಕಪ್ಪು ಚುಕ್ಕಿ ಟಾಸ್ಕ್ ಬಗ್ಗೆ ಯಾರು ತಲೆಯನ್ನೇ ಕೆಡಿಸಿಕೊಳ್ಳಲಿಲ್ಲ. ಅಡುಗೆ ಮನೆಯ ಜವಾಬ್ದಾರಿ ವಹಿಸಿಕೊಂಡಿದ್ದ ಸುಜಾತಾ ಬೆಳಗ್ಗೆನೇ ನಿನ್ನೆ ಸೇಬು ಹಣ್ಣು ತಿಂದವರು ಯಾರು ಎಂದು ಪ್ರಶ್ನೆ ಮಾಡಿದರು? ಇದಕ್ಕೆ ಚೈತ್ರಾ ಕೊಟ್ಟೂರು ಎಂಬ ಉತ್ತರ ಬಂದಿತು. ಕರೆದು ಕೇಳಿದರೆ ಚೈತ್ರಾ ನಾನೊಬ್ಬನೇ ಅಲ್ಲ ಅದನ್ನು ಚಂದನ್ ಅವರಿಗೂ ಕೊಟ್ಟು.. ಎಲ್ಲರಿಗೂ ಕೊಟ್ಟು ತಿಂದೆ ಎಂದರು.
ಮೊದಲ ಹೆಂಡತಿ ನೆನೆದು ಕಣ್ಣೀರಿಟ್ಟ ಜೈಜಗದೀಶ್
ಇದೊಂದೆ ಸಂಗತಿ ಮನೆಯಲ್ಲಿ ದೊಡ್ಡ ರಂಪಾಟ ಸೃಷ್ಟಿ ಮಾಡಿತು. ಚೈತ್ರಾ ಕೊಟ್ಟೂರು ಬೆಳಗಿನ ತಿಂಡಿ ಬಿಟ್ಟು ಕುಳಿತರು. ಮತ್ತೆ ಒಂದು ಹಂತದಲ್ಲಿ ಮಾತನಾಡಲು ಬಂದ ಚಂದನ್ ಮೇಲೆ ರೇಗಾಡಿಯೇ ಬಿಟ್ಟರು. ಈ ವೇಳೆ ಅತ್ತ ಕರೆಯಿಂದ ಜೈಜಗದೀಶ್ ಸಹ ಯಾರು ಜೋರಾಗಿ ಗಲಾಟೆ ಮಾಡುವವರು? ಎಂದು ಗದರಿದರು.
ಆದರೆ ಇಷ್ಟಕ್ಕೆ ಸೇಬು ಕತೆ ಮುಗಿಯಲಿಲ್ಲ. ಮನೆಯಲ್ಲಿ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು ಸೇಬು ಹಣ್ಣಿನ ಕತೆಯನ್ನು ಅಲ್ಲಿಗೆ ಬಿಡಲೇ ಇಲ್ಲ. ನನ್ನನ್ನೇ ಬೇಕು ಅಂಥ ಟಾರ್ಗೆಟ್ ಮಾಡಲಾಗುತ್ತಿದೆ, ನನ್ನ ನೆರವಿಗೆ ಯಾರೂ ಬರುತ್ತಿಲ್ಲ ಎಂದು ಚೈತ್ರಾ ಕೊಟ್ಟೂರು ಅಳಲು ತೋಡಿಕೊಂಡರು.
ಈ ನಡುವೆ ಬಿಗ್ ಬಾಸ್ ಕಪ್ಪು ಚುಕ್ಕೆ ಟಾಸ್ಕ್ ನ ಮೂರನೇ ಹಂತವನ್ನು ನೀಡಿದರು. ಮನೆಯಲ್ಲಿ ಸ್ಟಿಕರ್ ಗಳಿದ್ದು ಅದನ್ನು ಹುಡಕಬೇಕು ಎಂದು ತಿಳಿಸಲಾಯಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.