ದುಡ್ಡಿದೆ ಅಂತ ಕಪ್ಪಿರೋನ ಮದ್ವೆಯಾದ್ಯಾ ಎಂದವರಿಗೆ Sonyaa Saamoor ಛಾಟಿ!

Suvarna News   | Asianet News
Published : Jan 07, 2022, 05:07 PM IST
ದುಡ್ಡಿದೆ ಅಂತ ಕಪ್ಪಿರೋನ ಮದ್ವೆಯಾದ್ಯಾ ಎಂದವರಿಗೆ Sonyaa Saamoor ಛಾಟಿ!

ಸಾರಾಂಶ

ಮದುವೆಯಾಗಿ ಎರಡು ವರ್ಷಗಳ ನಂತರ ದಾಂಪತ್ಯ ಜೀವನ ಹೇಗಿದೆ ಎಂದು ರಿವೀಲ್ ಮಾಡಿದ ಕಿರುತೆರೆ ನಟಿ ಸೋನ್ಯಾ...

ನಜರ್ ಮತ್ತು ಕಸೌಟಿ ಜಿಂದಗಿ ಕೇ ಹಿಂದಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದಿರುವ ನಟಿ ಸೋನ್ಯಾ (Sonyaa Saamoor) ಮತ್ತು ಹರ್ಷ (Harsha) ಎರಡನೇ ವಿವಾಹ ವಾರ್ಷಿಕೋತ್ಸವವನ್ನು (Wedding Anniversary) ಸರಳವಾಗಿ ಆಚರಿಸಿಕೊಂಡಿದ್ದಾರೆ. ಈ ವೇಳೆ ಇ-ಟೈಮ್ಸ್‌ ಟಿವಿ ಜೊತೆ ಮಾತನಾಡಿರುವ ನಟಿ ಮದುವೆಯಿಂದ ಎದುರಿಸಿದ ಅವಮಾನಗಳು, ಟ್ರೋಲ್‌ಗಳ ಬಗ್ಗೆ ಮಾತನಾಡಿದ್ದಾರೆ. 

'ಮದುವೆ (Marriage) ಆದ್ಮೇಲೆ ನಾನು ಗಮನಿಸಿರುವ ಪ್ರಕಾರ ನೀವು ಒಳ್ಳೆಯ ವ್ಯಕ್ತಿಗಳನ್ನು ಮದುವೆಯಾದರೆ ದಿನವೂ ಲೈಫ್ ಬ್ಯೂಟಿಫುಲ್ ಆಗಿರುತ್ತದೆ. ಒಂದು ದಿನ ಮಾತ್ರವಲ್ಲ. ನನ್ನ ಪತಿ ಜೊತೆ ನನಗೆ ಲೈಫ್‌ ಒಂದು adventure ಇದ್ದಂತೆ. ದಿನವೂ ಎಂಜಾಯ್ ಮಾಡುತ್ತೇವೆ.ಎಲ್ಲರೂ ಹೇಳುವ ರೀತಿ ರೈಟ್‌ ವ್ಯಕ್ತಿಯನ್ನು ಮದುವೆಯಾದರೆ ಜೀವನದಲ್ಲಿ ದಿನವೂ ಸೆಲೆಬ್ರೇಟ್ ಮಾಡಬಹುದು,' ಎಂದು ಸೋನ್ಯಾ ಮದುವೆ ಜರ್ನಿ ಬಗ್ಗೆ ಮಾತನಾಡಿದ್ದಾರೆ. 

ಫ್ಯಾಮಿಲಿ ಟೈಂ:
'ಮದುವೆ ಆದಾಗಿನಿಂದ ಯಾವ ಬದಲಾವಣೆಯೂ ಆಗಿಲ್ಲ. ಮದುವೆಗೂ ಮುನ್ನವೇ ನನಗೆ ಜವಾಬ್ದಾರಿಗಳಿತ್ತು. ನಾನು ಎಲ್ಲವನ್ನೂ ಬ್ಯಾಲೆನ್ಸ್ ಮಾಡುತ್ತೇನೆ. ಫ್ಯಾಮಿಲಿ (Family) ಅಂದ್ರೆ ನನಗೆ ತುಂಬಾನೇ ಇಷ್ಟ. ಕೆಲವರಿಗೆ ಒಬ್ಬರೇ ಇರುವುದು ಅಂದ್ರೆ ಇಷ್ಟ. ಆದರೆ ನನಗೆ ಫ್ಯಾಮಿಲಿ ಜೊತೆಗಿರಬೇಕು. ನನ್ನ ಅತ್ತೆ-ಮಾವ (In Laws) ನನ್ನ ಸ್ನೇಹಿತರ ರೀತಿ ಇದ್ದಾರೆ.ಇದು ಮಾಡಬೇಕು ಅದು ಮಾಡಬೇಕು ಎಂಬ ಗೊಂದಲವಿಲ್ಲ. ಈ ವಿಚಾರದಲ್ಲಿ ನಾನು ಪುಣ್ಯ ಮಾಡಿರುವೆ. ಅವರೇ ನನ್ನ ಬಗ್ಗೆ ಹೆಚ್ಚಿನ ಕಾಳಜಿ ಇಟ್ಟು ನೋಡಿಕೊಳ್ಳುತ್ತಿದ್ದಾರೆ,' ಎಂದು ಸೋನ್ಯಾ ಹೇಳಿದ್ದಾರೆ.

ನಿರೂಪಕಿ Anupama Gowda ವರ್ಕೌಟ್‌, ದಿನಚರಿ ಹೀಗಿರುತ್ತಂತೆ!

ಪತಿ ಜೊತೆ ಜಗಳ:
'ನಾವು ತುಂಬಾನೇ ಜಗಳ (Fight) ಆಡುತ್ತೀವಿ. ಸಂಬಂಧ ಗಟ್ಟಿಯಾಗಿರಬೇಕು ಅಂದ್ರೆ ಜಗಳ ಆಡಬೇಕು, ವಾದಗಳು ಇರಬೇಕು. ಆಗಲೇ ನೀವು ನೀವಾಗಿರಲು ಸಾಧ್ಯ. ನೀವು ನೀವಾಗಿಲ್ಲ ಅಂದ್ರೆ ಮದುವೆ ಹೇಗೆ ವರ್ಕ್ ಅಗುತ್ತೆ ಹೇಳಿ? ನನ್ನ ವ್ಯಕ್ತಿತ್ವ ಬೇರೆ. ಹಾಗೇ ನಾನು ಬೆಳೆದಿರುವ ರೀತಿಯೂ ಬೇರೆ. ಹರ್ಷ ಬೇರೆ ರೀತಿ ಬೆಳೆದಿದ್ದಾರೆ, ಅವರು ಬೇರೆ ಕಡೆಯವರು. ನಿಜ ಹೇಳಬೇಕು ಅಂದ್ರೆ, ಏನೇ ಆಗಲಿ ನಾವಿಬ್ಬರು ಫಿಕ್ಸ್ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತೇವೆ. ಅದನ್ನು ಎಳೆದುಕೊಂಡು ಮಾತು ಬಿಡುವುದಿಲ್ಲ. ನಾವೂ ಎಲ್ಲಾ ಕಪಲ್‌ಗಳ ರೀತಿನೇ. ಏನೇ ಆದರೂ ನಾವು ಹೇಳಿಕೊಳ್ಳುವುದು ಒಂದೇ ' I Love You and I dont Want to Loose You' ಎಂದು. 

ಪತಿಯಿಂದ ಪಾಠ:
'ಹರ್ಷ ಜೀವನದಲ್ಲಿ ನನಗೆ ತಾಳ್ಮೆ ಹೇಳಿ ಕೊಟ್ಟಿದ್ದಾರೆ. ನನಗೆ ಕೆಲವೊಂದು ವಿಚಾರಗಳು ಇದೇ ರೀತಿ ನಡೆಯಬೇಕು ಎಂದು ಇದೆ. ಹರ್ಷ ನನ್ನನ್ನು ತುಂಬಾನೇ ನಂಬುತ್ತಾರೆ. ಹಾಗೇ ನಾವು ಯಾವುದೇ ದ್ವೇಷ ಇಟ್ಟುಕೊಳ್ಳುವುದಿಲ್ಲ. ರಿಲೇಷನ್‌ಶಿಪ್‌ನಲ್ಲಿದ್ದಾಗ ನಾವು ಮಾತನಾಡದೇ ಇರಬಹುದು. ಆದರೆ ಮದುವೆ ಆದಾಗ ದ್ವೇಷ ಮಾಡಲು ಮನಸ್ಸು ಬರುವುದಿಲ್ಲ. ನಾನು ಡೇಟ್ ಮಾಡುವ ಸಮಯದಲ್ಲಿ ಹರ್ಷ ದ್ವೇಷ ಮಾಡುತ್ತಿದ್ದರು. ಮದುವೆ ಆದ ಮೇಲೆ ಮಾಡುವುದಿಲ್ಲ,' ಎಂದು ನಟಿ ಹೇಳಿದ್ದಾರೆ.

ಇಂಟರ್ನೆಟ್‌ಗೆ ಬೆಂಕಿ ಹಚ್ಚಿದ ಕಾಜೋಲ್‌ Thigh-slit ರೆಡ್‌ ಬಾಡಿಕಾನ್ ಗೌನ್‌ ಹಾಟ್‌ ಲುಕ್‌!

ಟ್ರೋಲಿಗರಿಗೆ ಉತ್ತರ:
'ನಮ್ಮನ್ನು ತುಂಬಾನೇ ಟ್ರೋಲ್ ಮಾಡುತ್ತಾರೆ. ನಾವಿಬ್ಬರು ನೋಡಲು ತುಂಬಾನೇ ಡಿಫರೆಂಟ್ ಆಗಿದ್ದೀವಿ. 'ನೀನು ನೋಡಲು ಚೆನ್ನಾಗಿದ್ಯಾ, ಯಾಕೆ ಇವನನ್ನು ಆಯ್ಕೆ ಮಾಡಿಕೊಂಡೆ, ನಿನಗೆ ಹಣ ಮುಖ್ಯಾ ಅಲ್ವಾ?' ಎಂದು ಪ್ರಶ್ನೆ ಮಾಡಿದ್ದಾರೆ. ಫೋಟೋ ಹಾಕಿದ್ದರೆ ಆಕೆ ಬ್ಯೂಟಿಫುಲ್. ಹುಡುಗ ನೋಡಲು ಓಕೆ ಓಕೆ ಎಂದಿದ್ದಾರೆ. ಹರ್ಷ ಜೊತೆ ನನ್ನ compatibility 100% ಇದೆ. ಇದನ್ನು ನೋಡಿ ಜನರು ಟ್ರೋಲ್ ಮಾಡುವುದಿಲ್ಲ. ಬಣ್ಣ ನೋಡಿ ಮಾಡುತ್ತಾರೆ. ಜನರು ಮಾಡುವ ಕಾಮೆಂಟ್‌ನ ನೋಡಿ ನಾವಿಬ್ಬರೂ ನಗುತ್ತೇವೆ. ಟ್ರೋಲ್ ಮಾಡುವವರು ಜೀವನದಲ್ಲಿ ಸೋತವರು. ಮಾಡಲು ಏನೂ ಕೆಲಸ ಇರುವುದಿಲ್ಲ. ಹೀಗಾಗಿ ಅವರು ಬೇರೆಯವರ ಬಗ್ಗೆ ಮಾತನಾಡಿಕೊಳ್ಳುತ್ತಾರೆ. ಒಳ್ಳೆಯ ವಿಚಾರ ಕ್ರಿಯೇಟ್ ಮಾಡಲು ಅವರಿಗೆ ಚಾನ್ಸ್‌ ಕೊಡಿ. ಏನೂ ಮಾಡುವುದಕ್ಕೆ ಬರೋಲ್ಲ,' ಎಂದು ಸೋನ್ಯಾ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?