Story of Kannadathi: ಹರ್ಷನ ದಾರಿ ತಪ್ಪಿಸೋ ಪ್ಲಾನ್‌ ಭುವಿಗೆ ಗೊತ್ತಾಗೇ ಬಿಡ್ತು, ಕನ್ನಡತಿ ಕತೆ ಮುಂದೇನಾಗುತ್ತೆ!

Suvarna News   | Asianet News
Published : Dec 10, 2021, 03:56 PM IST
Story of Kannadathi: ಹರ್ಷನ ದಾರಿ ತಪ್ಪಿಸೋ ಪ್ಲಾನ್‌ ಭುವಿಗೆ ಗೊತ್ತಾಗೇ ಬಿಡ್ತು, ಕನ್ನಡತಿ ಕತೆ ಮುಂದೇನಾಗುತ್ತೆ!

ಸಾರಾಂಶ

ಕನ್ನಡತಿಯಲ್ಲೀಗ ರಾಣಿಗಡಕ್ಕೆ ಹೋಗುವ ಬಗ್ಗೆ ಚರ್ಚೆ ನಡೀತಿದೆ. ಸೆಮಿನಾರ್‌ ನೆಪದಲ್ಲಿ ಫ್ಲೈಟ್‌ನಲ್ಲಿ ಹರ್ಷ ಭುವಿ ರಾಣಿಗಢಕ್ಕೆ ಹೋಗಬೇಕಿದೆ. ಆದರೆ ಹರ್ಷ ಪ್ಲಾನೇ ಬೇರೆ ಇದೆ. ಈ ಗುಟ್ಟು ಭುವಿಗೆ ಗೊತ್ತಾಗಿದೆ. ಮುಂದಿನ ಕತೆ ಏನಾಗುತ್ತೆ ಗೊತ್ತಾ..?  

ಕಲರ್ಸ್ ಕನ್ನಡ (Colors Kannada) ವಾಹಿನಿ (TV Channel) ಯಲ್ಲಿ ಪ್ರಸಾರವಾಗುತ್ತಿರುವ 'ಕನ್ನಡತಿ' (Kannadathi) ಸೀರಿಯಲ್ ಇದೀಗ 500 ಎಪಿಸೋಡ್‌ ಪೂರೈಸಿದ ಸಂಭ್ರಮದಲ್ಲಿದೆ. ಆರಂಭದಿಂದಲೂ ಸಾಕಷ್ಟು ಕುತೂಹಲ ಕೆರಳಿಸುವಂತಿದ್ದ ಈ ಸೀರಿಯಲ್‌ಗೆ ಆಡಿಯನ್ಸ್ ಸಂಖ್ಯೆಯೂ ಹೆಚ್ಚಿದೆ. ಅದರಲ್ಲೂ ಓಟಿಟಿಯಲ್ಲಿ ಈ ಸೀರಿಯಲ್‌ ಅಪಾರ ಪ್ರೇಕ್ಷಕರನ್ನು ಪಡೆದುಕೊಂಡಿದೆ. ಈ ಮೂಲಕ ಓಟಿಟಿಯ ನಂ.1 ಸೀರಿಯಲ್‌ ಅಂತಲೂ ಕರೆಸಿಕೊಳ್ತಾ ಇದೆ.

ಮತ್ತೊಂದು ವಿಷ್ಯ ಅಂದರೆ ಸಾಮಾನ್ಯವಾಗಿ ಸೀರಿಯಲ್‌ ಅಂದರೆ ಮಧ್ಯಮ ವರ್ಗದ ಅಷ್ಟೇಲೂ ಓದಿಲ್ಲದ ಹೆಣ್ಮಕ್ಕಳು ನೋಡೋ ಅತ್ತೆ ಸೊಸೆ ಜಗಳ ಕತೆ ಅನ್ನೋ ಫೀಲಿಂಗ್‌ ಕೆಲವು ವರ್ಷಗಳ ಹಿಂದಿನವರೆಗೆ ಇತ್ತು. ಆದರೆ ಈಗೀಗ ಬರುತ್ತಿರುವ ಸೀರಿಯಲ್‌ಗಳ ಕತೆಯ ರೂಪ ಬದಲಾಗಿದೆ. ಹೆಚ್ಚಿನೆಲ್ಲ ಸೀರಿಯಲ್‌ಗಳು ರೊಮ್ಯಾಂಟಿಕ್‌ ಆಗಿ ಪ್ರೀತಿ ಪ್ರೇಮದ ಸುತ್ತಲೇ ಸುತ್ತುತ್ತವೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಸೀರಿಯಲ್‌ನಲ್ಲಿ ಕ್ಯೂಟ್‌ ಲವ್‌ ಸ್ಟೋರಿ (Love story) ಪ್ರಧಾನವಾಗಿದ್ದರೂ ಅದರಾಚೆಗೆ ಇನ್ನೇನೋ ಇದೆ.

Viharika Wedding: ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ನನ್ನರಸಿ ರಾಧೆ' ನಟಿ!

ಮಾಲಾ ಕೆಫೆಯ ಸಿಇಓ ಹರ್ಷ, ಮಧ್ಯಮ ವರ್ಗದ ತಾಯಿ ಕಳೆದುಕೊಂಡು ಮಲತಾಯಿಯ ಜೊತೆಗೆ ಬೆಳೆಯೋ ಭುವಿ, ಇವರಿಬ್ಬರ ಮಧ್ಯದ ಪ್ರೇಮ ಕಹಾನಿ ಹಾಗೂ ಸಸ್ಪೆನ್ಸ್ ಅಂಶಗಳನ್ನೊಳಗೊಂಡ ಸೀರಿಯಲ್‌ ಇದು. ಈ ಸೀರಿಯಲ್‌ಗಾಗಿ ಹಸಿರುಪೇಟೆ ಅನ್ನೋ ಊರೊಂದರ ಸೃಷ್ಟಿಯಾಗಿದೆ. ಆ ಊರಿನ ಹುಡುಗಿ ಭುವಿ. ಆಕೆಗೆ ರತ್ನಮಾಲಾ ಪರಿಚಯ ಆಗೋದು, ಅವರ ಮಗ ಅನ್ನೋದರ ಅರಿವಿಲ್ಲದೇ ಹರ್ಷನ ಪರಿಚಯ ಆಗೋದು, ಆ ಸ್ನೇಹ ಗಾಢವಾಗುತ್ತಾ ಮತ್ತೊಂದು ಲೆವೆಲ್‌ಗೆ ಹೋಗೋದೆಲ್ಲ ಹಳೇ ಕತೆ. ಹೊಸ ಕತೆಯಲ್ಲಿ ಹರ್ಷ ಭುವಿಗೆ ಪ್ರೊಪೋಸ್‌ ಮಾಡಿ ಆಗಿದೆ. ಅಲ್ಲೀವರೆಗೆ ಹರ್ಷನ ಇಷ್ಟದ ಹುಡುಗಿ ತಾನೋ ಅಥವಾ ಇನ್ಯಾರೋ ಅನ್ನೋ ಅನುಮಾನದಲ್ಲಿದ್ದ ಭುವಿ ಹರ್ಷ ಪ್ರೊಪೋಸ್‌ ಮಾಡಿದ ಕ್ಷಣದಲ್ಲಿ ತಬ್ಬಿಬ್ಬಾಗುತ್ತಾಳೆ. ಹರ್ಷನನ್ನು ತನ್ನ ಜೀವಕ್ಕಿಂತ ಹೆಚ್ಚು ಇಷ್ಟ ಪಡುವ ತನ್ನ ಕ್ಲೋಸ್‌ ಫ್ರೆಂಡ್ ವರೂಧಿನಿಯ ನೆನಪಾಗುತ್ತೆ. ತಾನು ಹರ್ಷನ ಜೊತೆಗೆ ಓಡಾಡಿದ್ರೆ ಆಕೆಯನ್ನು ಹೇಗೆ ಎದುರಿಸಲಿ ಅನ್ನುವ ನೋವಲ್ಲಿ, ಹರ್ಷನ ಪ್ರಸ್ತಾಪ ಇಷ್ಟ ಇದ್ದರೂ ಭುವಿ ಇನ್ನೂ ತನ್ನ ನಿರ್ಧಾರವನ್ನು ಹೇಳಿಲ್ಲ.

ಆದರೆ ಹರ್ಷನಿಗೆ ಆಕೆಯ ಮನದಲ್ಲಿರುವುದು ಗೊತ್ತಾಗಿದೆ. ಆಕೆಯಿಂದ ಪಾಸಿಟಿವ್ ರೆಸ್ಪಾನ್ಸ್‌ನ ನಿರೀಕ್ಷೆಯಲ್ಲಿ ಆತನಿದ್ದಾನೆ. ಈ ನಡುವೆ ರಾಣಿ ಗಢದ ಪ್ರಸ್ತಾಪ ಬಂದಿದೆ. ಚಳಿ, ಚೆಂದದ ಪರಿಸರದಿಂದ ಕೂಡಿರುವ ಆ ಊರಲ್ಲೊಂದು ಸೆಮಿನಾರ್‌. ಅದಕ್ಕೆ ಹರ್ಷನ ಜೊತೆಗೆ ಸಾನಿಯಾ ಹೋಗುವ ಪ್ಲಾನ್ ಮೊದಲಿತ್ತು. ಆಮೇಲೆ ಅದು ವರೂಧಿನಿಗೆ ಶಿಫ್ಟ್ ಆಯ್ತು. ಈಗ ಭುವಿ ಹೋಗೋದು ಅಂತಾಗಿದೆ. ಆದರೆ ಇದಕ್ಕೂ ಮೊದಲೇ ಹರ್ಷ ಭುವಿಯನ್ನು ರಾಣಿ ಗಡಕ್ಕೆ ಕರೆದಿದ್ದಾನೆ. ಆದರೆ ವರೂಧಿನಿಯ ನೆವದಲ್ಲಿ ಭುವಿ ಇದನ್ನು ತಿರಸ್ಕರಿಸಿದ್ದಾಳೆ.

Priyanka Mehandi Photos: ಕಿರುತೆರೆ ನಟಿ ಪ್ರಿಯಾಂಕಾ ಚಿಂಚೋಳಿ ಮೆಹೆಂದಿ ಸಂಭ್ರಮ!

ಅಮ್ಮಮ್ಮ ಹೇಳಿದಾಗ ಭುವಿ ರಾಣಿಗಡಕ್ಕೆ ಹೋಗೋದಕ್ಕೆ ಒಪ್ಪಿದ್ದಾಳೆ. ಆದರೆ ಮತ್ತೊಂದು ಕಡೆ ಹರ್ಷ ರೋಡ್‌ ಟ್ರಿಪ್ (Road plan) ಪ್ಲಾನ್ ಮಾಡಿದ್ದಾನೆ. ಅದಕ್ಕೆ ಭುವಿಯನ್ನು ಕರೆದುಕೊಂಡು ಹೋಗುವ ಪ್ಲಾನ್ ಆತನದು. ಹೀಗಾಗಿ ರಾಣಿಗಡಕ್ಕೆ ಹೋಗುವ ಫ್ಲೈಟ್‌ ತಪ್ಪಿಸಬೇಕು ಅನ್ನೋದು ಆತನ ಮನದಿಂಗಿತ. ಅದನ್ನು ಭುವಿಯ ತಂಗಿ ಬಿಂದು ಬಳಿ ಹೇಳಿದ್ದಾನೆ. ಬಿಂದು ಏನೇನೋ ಸರ್ಕಸ್ ಮಾಡಿ ಫ್ಲೈಟ್ ಲೇಟಾಗಿ ಹೊರಡ್ತಿದೆ ಅಂದು ಅಕ್ಕನ ಹಾದಿ ತಪ್ಪಿಸಿದ್ದಾಳೆ. ಅಷ್ಟರಲ್ಲಿ ಭುವಿಗೆ ಫ್ಲೈಟ್ ಕರೆಕ್ಟ್‌ ಟೈಮಿಗೇ ಹೊರಡುವ ಮೆಸೇಜ್‌ ಬಂದಿದೆ.

ಇತ್ತ ಹರ್ಷ ಬಿಂದು ಜೊತೆಗೆ ಫ್ಲೈಟ್‌ ತಪ್ಪಿಸಿರುವ ಕನ್ಫರ್ಮೇಶನ್ ಮಾಡುತ್ತಿರುವಾಗಲೇ ರೂಮಿಗೆ ಭುವಿ ಎಂಟ್ರಿ ಕೊಟ್ಟಿದ್ದಾಳೆ. ತಂಗಿ ಬಿಂದು ಸುಳ್ಳು ಹೇಳುತ್ತಿರುವುದು ಆಕೆಗೆ ಗೊತ್ತಾಗಿದೆ. ಮುಂದೆ ಆಕೆ ಏನು ಮಾಡ್ತಾಳೆ ಅನ್ನೋದೇ ಸಸ್ಪೆನ್ಸ್. ಹರ್ಷನ ರೋಡ್‌ ಟ್ರಿಪ್ ಪ್ಲಾನ್ ಕ್ಯಾನ್ಸಲ್ ಆಗುತ್ತಾ, ಸತ್ಯ ತಿಳಿದ ಭುವಿಯ ರಿಯಾಕ್ಷನ್ ಏನಿರಬಹುದು ಇತ್ಯಾದಿ ಅಂಶಗಳು ಕುತೂಹಲ ಹೆಚ್ಚಿಸಿವೆ. ಮುಂದಿನ ಸಂಚಿಕೆಯಲ್ಲಿ ಇದಕ್ಕೆಲ್ಲ ಉತ್ತರ ಸಿಗಲಿದೆ. 

Playback Singer SPB, A Flashback ! : ಒಂದು ನೆನಪು ಗ್ರ್ಯಾಂಡ್ ಫಿನಾಲೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?