
ಕನ್ನಡತಿ ಧಾರವಾಹಿ ಸದ್ಯ ಇಂಟ್ರೆಸ್ಟಿಂಗ್ ಆಗಿ ಮುಂದುವರಿಯುತ್ತಿದೆ. ಗೆಳತಿ ಜೈಲಿಗೆ ಹೋದ ಮೇಲಂತೂ ಭುವಿ ಮತ್ತು ಹರ್ಷ ಇನ್ನಷ್ಟು ಆಪ್ತರಾಗುತ್ತಿದ್ದಾರೆ. ಇಬ್ಬರೂ ಜೊತೆಗೇ ಇರುವಂತಹ ಘಟನೆಗಳೂ ನಡೆದು ಭುವಿ ಹರ್ಷನ ಪ್ರೀತಿಯಲ್ಲಿ ಬೀಳ್ತಾಳಾ..?
ಜನಪ್ರಿಯ ಧಾರವಾಗಿ ಕನ್ನಡತಿಯಲ್ಲಿ ಇಷ್ಟೂ ದಿನ ಹರ್ಷ ಭುವಿಗೆ ಹೊತ್ತು ಗೊತ್ತಿಲ್ಲದೆ ಫೋನ್ ಮಾಡ್ತಿದ್ರೆ ಈಗ ಭುವಿಯ ಟರ್ನ್. ಹರ್ಷ ಫೋನ್ ಮಾಡಿಲ್ಲ, ಮೆಸೇಜ್ ಮಾಡಿಲ್ಲ ಅಂತ ಭುವಿಯೇ ಮುಂದಾಗಿ ಫೋನ್ ಮಾಡ್ತಿದ್ದಾಳೆ.
ನೀಲಿ ಬಟ್ಟೆ ಧರಿಸಿದ್ರೆ ನೋವೇ ಇಲ್ಲ ಎಂದ್ರು ರಂಜನಿ..!
ವರುಧಿನಿಯನ್ನು ಜೈಲಿನಿಂದ ಹೊರತರು ಪ್ರಯತ್ನಿಸುತ್ತಿರುವ ಭುವಿ ಲಾಯರ್‌ನನ್ನು ಗೊತ್ತು ಮಾಡಿ ಮಾತನಾಡಿ ಆಗಿದೆ. ಇದೇ ವಿಚಾರವನ್ನು ಭಾರೀ ಸಂಕೋಚಪಟ್ಟು ಹಾಗೂ ಹೀಗೂ ಹರ್ಷನಿಗೆ ಹೇಳಿದ್ದಾಯ್ತು.
ಅಂತೂ ವರುಧಿನಿ ನೆಪದಲ್ಲಿ ಹರ್ಷನಿಗೆ ಕಾಲ್ ಮಾಡುವಂತಾಗಿದೆ ಭುವಿ. ಒಂಚೂರು ರೊಮ್ಯಾಂಟಿಕ್, ಹುಸಿ ಕೋಪ ಸೇರಿಕೊಂಡು ಹರ್ಷ ಭುವಿಯ ಪ್ರೀತಿಯ ಪಯಣ ನಿಧಾನವಾಗಿ ಸಾಗ್ತಾ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.