ಮೂರು ತಿಂಗಳ ಅಪಘಾತ ಈಗ ಬೆಳಕಿಗೆ, ಕಿರುತೆರೆ ನಟಿ ಲಕ್ಷ್ಮಿ ಸಿದ್ಧಯ್ಯ ಅಷ್ಟೊಂದು ಪವರ್ ಪುಲ್?
ತಮ್ಮ ಸ್ಕೂಟರ್‌ಗೆ ಕಾರು ಡಿಕ್ಕಿ ಹೊಡೆದಿದ್ದನ್ನು ಪ್ರಶ್ನಿಸಿದ್ದಕ್ಕೆ ಹುಡುಗರನ್ನು ಕರೆತಂದು ದೌರ್ಜನ್ಯ ನಡೆಸಿದ್ದಾರೆ ಎಂದು ಕಿರುತೆರೆಯ ಖ್ಯಾತ ನಟಿ ಲಕ್ಷ್ಮೀ ಸಿದ್ದಯ್ಯ ವಿರುದ್ಧ ಇಬ್ಬರು ಯುವತಿಯರು ಗಂಭೀರ ಆರೋಪ ಮಾಡಿದ್ದಾರೆ.
ಈ ಕೃತ್ಯ ನಡೆದು ಮೂರು ತಿಂಗಳು ಕಳೆದಿದ್ದು, ಇದುವರೆಗೆ ಯಾವುದೇ ರೀತಿ ಕಾನೂನು ಕ್ರಮ ಜರುಗಿಸದೆ ನಟಿ ಎಂಬ ಕಾರಣಕ್ಕೆ ಲಕ್ಷ್ಮೀ ಅವರನ್ನು ಜ್ಞಾನಭಾರತಿ ಠಾಣೆ ಇನ್ಸ್‌ಪೆಕ್ಟರ್ ಎಸ್.ರವಿ ಬೆಂಬಲಿಸುತ್ತಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಆದರೆ ಆರೋಪವನ್ನು ನಿರಾಕರಿಸಿರುವ ನಟಿ ಲಕ್ಷ್ಮೀ ಸಿದ್ದಯ್ಯ ಅವರು, ನಾನು ಸೆಲೆಬ್ರಿಟಿ ಎಂದಯು ತಿಳಿದು ಹಣಕ್ಕಾಗಿ ಯುವತಿಯರು ಈ ರೀತಿ ಮಾಡುತ್ತಿರಬಹುದು ಎಂದು ಕಿಡಿಕಾರಿದ್ದಾರೆ.
ಖಾಸಗಿ ಕಂಪನಿ ಉದ್ಯೋಗಿಗಳಾದ ಮಾಧುರಿ ಮತ್ತು ಐಶ್ವರ್ಯ ಸಂತ್ರಸ್ತರಾಗಿದ್ದು, ಈ ಪ್ರಕರಣದಲ್ಲಿ ನಟಿ ಲಕ್ಷ್ಮೀ ಜಾಮೀನು ಪಡೆದಿದ್ದಾರೆ.
'ಸಂತೂರ್ ಮಮ್ಮಿ' ಲಕ್ಷ್ಮೀ ಬಾರಮ್ಮ’ ಕಲ್ಪನಾ ಪೋಟೋಗಳಿವು!
ಏನಿದು ಪ್ರಕರಣ?:
‘ನಾವು ಕೆಲಸ ಮುಗಿಸಿಕೊಂಡು ಡಿಸೆಂಬರ್ 6 ರಂದು ಮನೆಗೆ ಮರಳುತ್ತಿದ್ದೆವು. ಆಗ ಜ್ಞಾನಭಾರತಿ ಬಳಿ ನಮ್ಮ ಸ್ಕೂಟರ್‌ಗೆ ಅತಿವೇಗವಾಗಿ ಕಾರು ಡ್ರೈವ್ ಮಾಡಿಕೊಂಡು ಬಂದು ಲಕ್ಷ್ಮೀ ಸಿದ್ದಯ್ಯ ಡಿಕ್ಕಿ ಹೊಡೆಸಿದ್ದರು. ಪ್ರಶ್ನಿಸಿದ್ದಕ್ಕೆ ಅವರು ಗಲಾಟೆ ಮಾಡಿದ್ದರು’ ಎಂದು ಮಾಧುರಿ ಹೇಳಿದ್ದಾರೆ.
‘ನನ್ನ ಮೊಬೈಲ್ ಕಿತ್ತುಕೊಂಡು ಹೋದರು. ಈ ಬಗ್ಗೆ ನಾವು ದೂರು ನೀಡಿದರೂ ಪೊಲೀಸರು ಸ್ವೀಕರಿಸಲಿಲ್ಲ. ಅಂದು ರಾತ್ರಿವರೆಗೆ ಪೊಲೀಸ್ ಠಾಣೆಯಲ್ಲೇ ಇದ್ದು ಕೊನೆಗೆ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದೆವು. ಬಳಿಕ ನ್ಯಾಯಾಲಯದ ಆದೇಶವಾಗಿ ಒಂದು ವಾರದ ನಂತರ ಎಫ್‌ಐಆರ್ ದಾಖಲಾಯಿತು’ ಎಂದು ಕಿಡಿಕಾರಿದ್ದಾರೆ.
ಎಫ್‌ಐಆರ್ ದಾಖಲಾದ ನಂತರವೂ ಪೊಲೀಸರು ತನಿಖೆ ನಡೆಸಲಿಲ್ಲ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ನಮ್ಮ ಮೇಲೆ ಪೊಲೀಸರು ಜೋರು ಮಾಡಿದ್ದಾರೆ. ಅಷ್ಟರಲ್ಲಿ ಲಕ್ಷ್ಮೀ ಸಿದ್ದಯ್ಯ ನಿರೀಕ್ಷಣಾ ಜಾಮೀನು ಪಡೆದರು. ನನ್ನ ಮೊಬೈಲ್ ಕಸಿದುಕೊಂಡು ಹೋಗಿರುವುದ್ದಕ್ಕೆ ಸಾಕ್ಷಿ ಕೊಡುವಂತೆ ಪೊಲೀಸರು ಕೇಳಿದ್ದಾರೆ. ಆಗ ನಾನು ಟ್ರಾಫಿಕ್ ಜಂಕ್ಷನ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದರೆ ಗೊತ್ತಾಗಲಿದೆ ಎಂದಿದ್ದಕ್ಕೆ ನನ್ನ ಮೇಲೆ ಇನ್ಸ್‌ಪೆಕ್ಟರ್ ರವಿ ಗಲಾಟೆ ಮಾಡಿದರು ಎಂದು ಆರೋಪಿಸಿದ್ದಾರೆ.
15ನೇ ವಯಸ್ಸಿಗೇ ಗರ್ಭಿಣಿಯಾಗಿದ್ದ 'ಸಿಂಹಾದ್ರಿಯ ಸಿಂಹ' ಮೀನಾ! ಇಂಟರೆಸ್ಟಿಂಗ್ ವಿಷ್ಯ ಇದೀಗ ಬಯಲಿಗೆ...
ನಮ್ಮ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಕೆಲವೇ ಕ್ಷಣಗಳಲ್ಲಿ ಆರೇಳು ಹುಡುಗರನ್ನು ಲಕ್ಷ್ಮೀ ಕರೆಸಿದರು. ಅದರಲ್ಲಿ ಆನಂದ್ ಕುಮಾರ್ ಎಂಬಾತ ಸಿಕ್ಕಾಪಟ್ಟೆ ಜೋರು ಮಾಡಿದ. ನನಗೆ ತಲೆಕೆಟ್ಟರೆ ಏನ್ ಬೇಕಾದರೂ ಮಾಡುತ್ತೇನೆ ಎಂದು ಆತ ಧಮ್ಕಿ ಹಾಕಿದ. ಈ ಬಗ್ಗೆ ಜ್ಞಾನಭಾರತಿ ಠಾಣೆಗೆ ದೂರು ನೀಡಿದರೆ ಸರಿಯಾಗಿ ಸ್ಪಂದಿಸಲಿಲ್ಲ. ಮೂರು ತಿಂಗಳಿಂದ ಠಾಣೆಗೆ ಅಲೆಯುತ್ತಿದ್ದೇವೆ. ಕನಿಷ್ಠ ಪಕ್ಷ ಗೌರವಿಲ್ಲದೆ ಇನ್ಸ್‌ಪೆಕ್ಟರ್ ರವಿ ನಡೆಸಿಕೊಳ್ಳುತ್ತಿದ್ದಾರೆ. ಮೊಬೈಲ್ ಬಗ್ಗೆ ಕೇಳಿದರೆ ನಾನೇ ಕೊಡಿಸುತ್ತೇನೆ. ಯಾವುದಾದರೂ ಕೇಸ್‌ನಲ್ಲಿ ಜಪ್ತಿಯಾದ ಮೊಬೈಲ್ ಕೊಡುತ್ತೇನೆ ಎಂದು ರವಿ ಹೇಳಿದ್ದಾರೆ. ಪೊಲೀಸರು ಕಾನೂನು ಪ್ರಕಾರ ಕ್ರಮ ಜರುಗಿಸುತ್ತಿಲ್ಲ. ಲಕ್ಷ್ಮೀ ಸಿದ್ದಯ್ಯ ಸೆಲೆಬ್ರಿಟಿ ಎಂದ ಪಕ್ಷಪಾತವಾಗಿ ಪೊಲೀಸರು ನಡೆಸುತ್ತಿದ್ದಾರೆ. ರವಿ ಅವರು ಸಾರ್ವಜನಿಕರ ಪರವಾಗಿ ನಡೆದುಕೊಳ್ಳಬೇಕು ಎಂದು ಐಶ್ವರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಕ್ಸ್
ದುಡ್ಡಿಗಾಗಿ ಸುಳ್ಳು ಆರೋಪ:ಲಕ್ಷ್ಮೀ ಸಿದ್ದಯ್ಯ
‘ನಾನು ಯಾವ ಸ್ಕೂಟರ್‌ಗೂ ಕಾರು ಗುದ್ದಿಸಿಲ್ಲ. ನನ್ನ ಕಾರಿನ ಮುಂದೆ ಅವರಾಗಿಯೇ ಬಂದು ಸ್ಕೂಟರ್ ನಿಲ್ಲಿಸಿ ಕಿರಿಕ್ ಮಾಡಿದ್ದರು. ಈಗ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅಂದು ನನ್ನ ಕಾರಿಗೂ ಡ್ಯಾಮೇಜ್ ಆಗಿದೆ. ಚಲಿಸುವ ಕಾರಿನ ಮುಂದೆ ಸಡನ್ನಾಗಿ ಬಂದು ಸ್ಕೂಟರ್ ನಿಲ್ಲಿಸಿದರೆ ಕಾರು ಟಚ್ ಆಗಲ್ವಾ. ಚಿಕ್ಕ ವಯಸ್ಸಿನ ಯುವತಿಯರು ಎಷ್ಟು ಸುಳ್ಳು ಹೇಳುತ್ತಿದ್ದಾರೆ’ ಎಂದು ನಟಿ ಲಕ್ಷ್ಮೀ ಸಿದ್ದಯ್ಯ ತಿರುಗೇಟು ನೀಡಿದ್ದಾರೆ.
ಜ್ಞಾನಭಾರತಿ ರಸ್ತೆಯಲ್ಲಿ ಸಾಮಾನ್ಯವಾಗಿ ಸಂಜೆ 5.30ರ ಸುಮಾರಿಗೆ ಸಂಚಾರ ದಟ್ಟಣೆ ಇರುತ್ತದೆ. ಹೀಗಿರುವಾಗ ಹೇಗೆ ನಾನು ವೇಗವಾಗಿ ಓಡಿಸಲು ಸಾಧ್ಯ? ಇನ್ನು ಅಂದು ಶೂಟಿಂಗ್ ಸಲುವಾಗಿ ಹೋಗುತ್ತಿದ್ದೆ. ಯಾರಾದರೂ ಕುಡಿದುಕೊಂಡು ಶೂಟಿಂಗ್‌ಗೆ ಹೋಗಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಈಗ ಪ್ರಕರಣ ಕೋರ್ಟ್‌ನಲ್ಲಿದೆ. ನಾನು ನ್ಯಾಯಾಲಯದಲ್ಲೇ ಉತ್ತರಿಸುತ್ತೇನೆ. ಏನೇನೋ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರಿಂದ ತಿರುಗಿ ನಾನು ಮಾತನಾಡಿದ್ದೇನೆ. ಸಿಟ್ಟಿನ ಭರದಲ್ಲಿ ನಾನು ಮಾತನಾಡಿದ್ದೇನೆ. ಅವರು ಹೆಣ್ಣು ಮಕ್ಕಳು. ಗೌರವವಿಲ್ಲದಂತೆ ನಾನು ನಡೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾನು ಕೈ ತಿರುಚಿ ರಕ್ತ ಬರುವಂತೆ ಹೊಡೆದೆ, ಕಪಾಳಕ್ಕೆ ಹೊಡೆದೆ, ನಾನು ತೂರಾಡಿಕೊಂಡು ಕಾರು ಡ್ರೈವ್ ಮಾಡುತ್ತಿದ್ದೆ ಎಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಪೊಲೀಸರು ಕಾನೂನು ಪ್ರಕಾರ ಕ್ರಮ ಜರುಗಿಸಿದ್ದಾರೆ. ಆ ದಿನ ನನ್ನ ಮನೆಗೆ ವಿಚಾರಣೆ ಸಲುವಾಗಿ ಪೊಲೀಸರು ಬಂದಿದ್ದರು. ಆ ವೇಳೆ ನಾನು ಶೂಟಿಂಗ್ ಸಲುವಾಗಿ ಶೃಂಗೇರಿಯಲ್ಲಿದ್ದೆ. ಆ ಯುವತಿಯರು ಸುಳ್ಳು ಹೇಳುತ್ತಿದ್ದಾರೆ. ನಾನು ಸೆಲೆಬ್ರಿಟಿ ಎಂದು ದುಡ್ಡಿಗೆ ಹೀಗೆಲ್ಲ ಮಾಡುತ್ತಿರಬಹುದು ಎಂದು ಲಕ್ಷ್ಮೀ ಸಿದ್ದಯ್ಯ ಆರೋಪಿಸಿದ್ದಾರೆ.