ಸರ್ಕಾರಿ ಶಾಲೆಗಳನ್ನು ಅಂದಗಾಣಿಸೋ ಅನು ಅಕ್ಕನಿಗೆ ಸ್ತ್ರೀ ಅವಾರ್ಡ್​: ಕೆಚ್ಚೆದೆಯ ಕನ್ನಡತಿ ಮಾತು ಕೇಳಿ...

By Suvarna NewsFirst Published Mar 8, 2024, 10:03 PM IST
Highlights

 ಸರ್ಕಾರಿ ಶಾಲೆಯ ಕಟ್ಟಡಗಳಿಗೆ ಬಣ್ಣ ಬಳಿಯುವ ಮೂಲಕ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರೋ ಅನು ಅಕ್ಕ ಅವರಿಗೆ ಸ್ತ್ರೀ ಅವಾರ್ಡ್​ ಸಿಕ್ಕಿದ್ದು, ಅವರ ಮಾತು ಕೇಳಿ...
 

ತಮ್ಮ ಸಮಾಜಮುಖಿ ಕೆಲಸದ ಮೂಲಕವೇ ನಾಡಿನ ತುಂಬೆಲ್ಲ ಪರಿಚಿಯತರಾಗಿರುವವರು ಅನು ಅಕ್ಕ. ಲಕ್ಷಾಂತರ ಸಾಲ ಪಡೆದು, ಆ ಸಾಲದ ಹಣದಿಂದಲೇ ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ ಇವರು.  ಕೆಚ್ಚೆದೆಯ ಕನ್ನಡತಿ ಎಂದೇ ಕರೆಸಿಕೊಳ್ಳುವ ಈ ಯುವತಿ ತಮ್ಮದೇ ತಂಡ ಕಟ್ಟಿಕೊಂಡು, ಸರ್ಕಾರಿ ಶಾಲೆಗಳನ್ನು ಅಂದಗಾಣಿಸುತ್ತಾರೆ. ಸೋಷಿಯಲ್​ ಮೀಡಿಯಾಗಳಲ್ಲಿ ವಿಡಿಯೋ ಮಾಡುವ ಮೂಲಕ ಸಕತ್​ ಫೇಮಸ್​ ಆಗಿದ್ದಾರೆ. ಸರ್ಕಾರಿ ಶಾಲೆ ಉಳಿಸಿ ಎನ್ನುತ್ತ ರಾಜ್ಯದ ಬಹುತೇಕ ಶಾಲೆಗಳಿಗೆ ಬಣ್ಣ ಹಚ್ಚುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ರಾಜ್ಯಾದ್ಯಂತ ಸಂಚರಿಸಿ ನೂರಾರು ಶಾಲೆಗಳಿಗೆ ಬಣ್ಣ ಬಳಿದಿದ್ದಾರೆ.  ಮಾಸಿದ ಶಾಲೆಗಳನ್ನು ಗುರುತಿಸಿ, ಅವುಗಳನ್ನು ಅಂದಗಾಣಿಸಿ, ಮಕ್ಕಳಿಗೆ ಶಿಕ್ಷಣದ ಅರಿವು ಮೂಡಿಸುವುದು ತಮ್ಮ ತಂಡದ ಉದ್ದೇಶ ಎನ್ನುವುದು ಅವರ ಮಾತು.

ಇದೀಗ ಇಂಥ ಅನು ಅಕ್ಕ ಅವರಿಗೆ ಮಹಿಳಾ ದಿನಾಚರಣೆಯ ನಿಮಿತ್ತ ಜೀ ಕನ್ನಡ ವಾಹಿನಿ ಸ್ತ್ರೀ ಅವಾರ್ಡ್​ 2024 ಅನ್ನು ನೀಡಿ ಗೌರವಿಸಿದೆ. ಈ ಸಂದರ್ಭದಲ್ಲಿ ಕೆಲವೊಂದು ಮನದಾಳದ ಮಾತುಗಳನ್ನು ಜನರ ಮುಂದೆ ತೆರೆದಿಟ್ಟಿದ್ದಾರೆ ಅನು ಅಕ್ಕ. ಜಾಸ್ತಿ ಆಸೆ ಇಟ್ಟುಕೊಂಡಾಗ ಕಷ್ಟ ಫೀಲ್​ ಆಗುತ್ತೆ. ನಾರ್ಮಲ್​ ಜನಗಳ ರೀತಿ ಬದುಕಬೇಕು ಎಂದಾಗ ಆರೋಗ್ಯಕರವಾಗಿಯೇ ಇರುತ್ತೇವೆ. ನಮಗಿಂತ ದೊಡ್ಡವರ ಜೊತೆ ಹೋಲಿಕೆ ಮಾಡಿಕೊಂಡಾಗ ಅನಾರೋಗ್ಯಕರ ಉಂಟಾಗುತ್ತದೆ ಎನ್ನುವುದು ಅನು ಅಕ್ಕ ಮಾತು. ಅವೇರ್​ನೆಸ್​ ಪ್ರೋಗ್ರಾಮ್​ ಮಾಡ್ತಿರೋದ್ರಿಂದ ಜನರಿಗೆ ಗೊತ್ತಾಗಲೇಬೇಕು ಎನ್ನುವುದು ನನ್ನ ಧ್ಯೇಯ. ಕೆಲವರು ಹೇಳ್ತಾರೆ, ಒಂದು ಕೈಯಿಂದ ಮಾಡಿದ್ದು, ಇನ್ನೊಂದು ಕೈಗೆ ಗೊತ್ತಾಗಬಾರದು ಅಂತ. ನಾನು ಯಾರಿಗೂ ದುಡ್ಡು ಕೊಡುತ್ತಿಲ್ಲವಲ್ಲ. ಕ್ಯಾಮೆರಾ ಮುಂದೆ ತೋರಿಸಿಕೊಳ್ಳದೇ ಇರುವ ಹಲವಾರು ಕೆಲಸಗಳನ್ನುಮಾಡಿದ್ದೇನೆ. ಅದನ್ನು ಯಾರೊಂದಿಗೂ ಹೇಳಿಕೊಂಡಿಲ್ಲ. ಆದರೆ ಸರ್ಕಾರಿ ಶಾಲೆಗಳಿಗೆ ಸುಣ್ಣ-ಬಣ್ಣ ಮಾಡುವುದು ಎಲ್ಲರಿಗೂ ಸ್ಫೂರ್ತಿಯಾಗಬೇಕು ಎನ್ನುವುದು ಅನು ಅಕ್ಕ ಅನಿಸಿಕೆ. 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

ಶ್ರೀರಸ್ತು-ಶುಭಮಸ್ತು ತುಳಸಿಗೆ ಮನಮೆಚ್ಚಿದ ನಾಯಕಿ ಅವಾರ್ಡ್‌: ಸುಧಾರಾಣಿ ಕುರಿತು ಇಂಟರೆಸ್ಟಿಂಗ್ ಮಾಹಿತಿ

ಶಾಲೆಗಳಿಗೆ ಕ್ಲೀನ್ ಮಾಡುವುದು, ಚರಂಡಿ ಸ್ವಚ್ಛ ಮಾಡುವುದನ್ನು ನೋಡಿದಾಗ ಜನರು ಅಸಹ್ಯ ಪಟ್ಟುಕೊಳ್ಳುವುದು ಇದೆ. ಆದರೆ ಅದು ಕೂಡ ಕಾರ್ಯ. ಅದು ಎಲ್ಲರಿಗೂ ಪ್ರೇರಣೆಯಾಗಬೇಕು ಎಂದಿದ್ದಾರೆ. ಇದೇ ವೇಳೆ ನನ್ನ ಬಗ್ಗೆ ಹೇಳುವವರು ಕ್ಲೀನ್​ ಮಾಡಬೇಕು ಎಂದೇನೂ ಇಲ್ಲ. ಆದರೆ ಅವರು ಆದಷ್ಟು ಸಹಾಯ ಮಾಡಿ ಪೀಠೋಪಕರಣ ಕೊಟ್ಟರೆ ಸಾಕು. ಅದು ತುಂಬಾ ಉಪಕಾರ ಆಗುತ್ತದೆ ಎಂದಿದ್ದಾರೆ. 

ಅಂದಹಾಗೆ ಅಕ್ಕ ಅನು ಮೂಲತಃ ರಾಯಚೂರು ಜಿಲ್ಲೆಯವರು.   ಸಿಂಧನೂರು ತಾಲೂಕಿನ ಚಿಕ್ಕಬೇರಗಿ ಗ್ರಾಮದವರು.  ಅನುಕರುಣೆ ಪ್ರತಿಷ್ಠಾನ ಹೆಸರಿನ ಸಂಸ್ಥೆ ತೆರೆದಿರುವ ಅಕ್ಕ ಅನು ಅದಕ್ಕೆ ಸಂಸ್ಥಾಪಕರಾಗಿದ್ದಾರೆ. 2018ರಲ್ಲಿ ಆರಂಭವಾದ ಇವರ ಈ ಸರ್ಕಾರಿ ಶಾಲೆ ಉಳಿಸಿ ಅಭಿಯಾನ ಇಂದಿಗೆ ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಸಂಚರಿಸಿದೆ. ಈವರೆಗೂ ರಾಜ್ಯದ 120ಕ್ಕೂ ಅಧಿಕ ಶಾಲೆಗಳಿಗೆ ಬಣ್ಣ ಬಳಿದಿದ್ದಾರೆ. ತಮ್ಮ  ಸಂಸ್ಥೆ ಮೂಲಕ ಸರ್ಕಾರಿ ಕನ್ನಡ ಶಾಲೆ ಉಳಿಸಿ, ಸ್ವಚ್ಛ ಭಾರತ್ ಅಭಿಯಾನವನ್ನು ಕೆಲಸ ಆರಂಭಿಸಿದ್ದಾರೆ. ಇದರ ಪ್ರಸಾರ ಇದೇ ಭಾನುವಾರ 10ನೇ ತಾರೀಖು ಪ್ರಸಾರವಾಗಲಿದೆ.  
 

ಡ್ರೋನ್‌ ಪ್ರತಾಪ್‌ ಅಮ್ಮನ ಕಣ್ಣೀರು: ಕಾಗೆ ಹಾರಿಸೋದು ಇನ್ನಾದ್ರೂ ಬಿಡಪ್ಪ ಎಂದ ನೆಟ್ಟಿಗರು

click me!