ರಾಧಿಕಾ ಸೀರಿಯಲ್‌ಗೆ ಬಂದ ಹೊಸ ನಾಯಕಿ ಇವರೇ ನೋಡಿ!

Published : May 15, 2023, 03:13 PM IST
ರಾಧಿಕಾ ಸೀರಿಯಲ್‌ಗೆ ಬಂದ ಹೊಸ ನಾಯಕಿ ಇವರೇ ನೋಡಿ!

ಸಾರಾಂಶ

ಕಾವ್ಯಾ ಶಾಸ್ತ್ರಿ ಯಾವ ಕಾರಣವನ್ನೂ ಹೇಳದೇ 'ರಾಧಿಕಾ' ಸೀರಿಯಲ್‌ನಿಂದ ಹೊರಬಂದಿದ್ದಾರೆ. ಇದೀಗ ರಾಧಿಕಾ ಸೀರಿಯಲ್ಲಿಗೆ ಹೊಸ ನಾಯಕಿಯ ಅಗಮನವಾಗಿದೆ. ಆಕೆ ಯಾರು?

ಕನ್ನಡ ಸೀರಿಯಲ್ ಕ್ಷೇತ್ರದಲ್ಲಿ ಏನೇನೋ ಬದಲಾವಣೆಗಳಾಗುತ್ತಿವೆ. ಕೆಲವೊಂದು ಸೀರಿಯಲ್‌ಗಳು ಮುಕ್ತಾಯವಾಗುತ್ತಿವೆ. ಮತ್ತೆ ಕೆಲವು ಸೀರಿಯಲ್‌ಗಳ ಪಾತ್ರಗಳಲ್ಲಿ ಬದಲಾವಣೆ ಆಗುತ್ತಿದೆ. ಜೀ ಕನ್ನಡದ 'ಜೊತೆ ಜೊತೆಯಲಿ' ಸೀರಿಯಲ್ ಕೊನೆ ಹಂತ ತಲುಪಿದೆ. ಕಲಾವಿದರ ಡೇಟ್ ಸಮಸ್ಯೆಯಿಂದ ಈ ಸೀರಿಯಲ್‌ಅನ್ನು ಅನಿವಾರ್ಯವಾಗಿ ನಿಲ್ಲಿಸಬೇಕಾಗಿ ಬಂದಿದೆ ಎಂದು ಧಾರಾವಾಹಿ ತಂಡ ಹೇಳಿಕೆ ನೀಡಿತ್ತು. ಈ ಹಿಂದೆ ಈ ಸೀರಿಯಲ್‌ನ ನಾಯಕ ಅನಿರುದ್ಧ ಅವರಿಗೂ ಟೀಮ್‌ಗೂ ಹೊಂದಾಣಿಕೆಯಾಗದೆ ಅವರೂ ಇದರಿಂದ ಹೊರಬಂದಿದ್ದರು. ಇನ್ನೊಂದೆ ನಮ್ಮ ಲಚ್ಚಿ ಸೀರಿಯಲ್‌ನಿಂದ ದೀಪಿಕಾ ಪಾತ್ರಧಾರಿ ಸಾರಾ ಅಣ್ಣಯ್ಯ ಹೊಸ ನಡೆದಿದ್ದರು. ಅವರ ಪಾತ್ರಕ್ಕೆ ಐಶ್ವರ್ಯಾ ಸಿಂಧೋಗಿ ಬಂದರು. ಇದೀಗ ಉದಯ ಟಿವಿಯಲ್ಲಿ ಪ್ರಸಾರವಾಗ್ತಿರೋ 'ರಾಧಿಕಾ' ಸೀರಿಯಲ್ ಸರದಿ. ಇದರಲ್ಲಿ ನಾಯಕಿಯಾಗಿ ನಟಿಸುತ್ತಿದ್ದವರು ಕಾವ್ಯಾ ಶಾಸ್ತ್ರಿ. ಅವರು ತಾನು ಈ ಸೀರಿಯಲ್ಲಿನಿಂದ ಹೊರಬರುತ್ತಿರುವುದಾಗಿ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು.

ಹೇಳಿ ಕೇಳಿ ನಾಯಕಿ ಪಾತ್ರ. ಅದರಲ್ಲೂ ಹೆಚ್ಚು ತೂಕ ಇರುವ ಪಾತ್ರ. ಇಂಥಾ ಪಾತ್ರಕ್ಕೆ ಹೊಸ ಕಲಾವಿದರನ್ನು ಹುಡುಕಿ ಕರೆತರೋದು ಸೀರಿಯಲ್ ಟೀಮ್‌ನವರಿಗೆ ದೊಡ್ಡ ಚಾಲೆಂಜ್. ಸದ್ಯಕ್ಕೆ 'ರಾಧಿಕಾ' ಸೀರಿಯಲ್ ಟೀಮ್ ಹೊಸ ನಾಯಕಿಯನ್ನು ಇಂಟ್ರಡ್ಯೂಸ್ ಮಾಡ್ತಿದೆ. ಈಕೆ ಯಾರು, ಈ ಹಿಂದೆ ಯಾವ ಸೀರಿಯಲ್‌ನಲ್ಲಿ ಮಾಡ್ತಿದ್ರು ಅನ್ನೋ ಕುತೂಹಲ ಇದ್ದರೆ ಅದಕ್ಕೆ ಇಲ್ಲಿದೆ ಉತ್ತರ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪೌರಾಣಿಕ ಧಾರಾವಾಹಿ 'ಉಧೋ ಉಧೋ ಶ್ರೀ ರೇಣುಕಾ ಯಲ್ಲವ್ವ'ದಲ್ಲಿ ರಾಣಿ ಇಂದುಮತಿಯಾಗಿ ಅಭಿನಯಿಸುತ್ತಿರುವ ತೇಜಸ್ವಿನಿ ಶೇಖರ್ ಇನ್ನು ಮುಂದೆ ರಾಧಿಕಾಳಾಗಿ ಕಿರುತೆರೆ ವೀಕ್ಷಕರನ್ನು ರಂಜಿಸಲಿದ್ದಾರೆ. ಹೌದು ತೇಜಸ್ವಿನಿ ಶೇಖರ್ ರಾಧಿಕಾ ಪಾತ್ರದಲ್ಲಿ ಮಿಂಚಲಿದ್ದಾರೆ.

 

ಅಷ್ಟಕ್ಕೂ ಈ ಹುಡುಗಿ ಯಾರು ಅನ್ನೋ ಪ್ರಶ್ನೆ ಇರಬಹುದು. ಹಾಗೆ ನೋಡಿದರೆ ತೇಜಸ್ವಿನಿ ಎಂದಿಗೂ ನಟಿಯಾಗಬೇಕು ಎಂದು ಬಯಸಿದವರಲ್ಲ. ಬದಲಿಗೆ ಅಚಾನಕ್ ಆಗಿ ದೊರೆತ ಅವಕಾಶ ಆಕೆಯನ್ನು ನಟಿಯಾಗಿಸಿದ್ದು ಮಾತ್ರವಲ್ಲದೇ ಈಗ ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ತನ್ನ ಪ್ರತಿಭೆ ಮೆರೆಯುವಂತೆ ಮಾಡಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸೌಭಾಗ್ಯವತಿ' ಧಾರಾವಾಹಿಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟವರು ತೇಜಸ್ವಿನಿ ಶೇಖರ್.

Nisha Ravikrishna : ಗಟ್ಟಿಮೇಳದ ರೌಡಿ ಬೇಬಿಗೆ ಲವ್ವಾಗಿದ್ಯಾ? ಯಾರು ಆ ಅದೃಷ್ಟಶಾಲಿ ಹುಡುಗ..

'ಸೌಭಾಗ್ಯವತಿ' ಧಾರಾವಾಹಿಯ ನಂತರ 'ಮಧುಬಾಲಾ', 'ಮಹಾನದಿ' ಧಾರಾವಾಹಿಗಳಲ್ಲಿ ನಟಿಸಿದ್ದ ತೇಜಸ್ವಿನಿ ಶೇಖರ್ ವಿಲನ್(Villain) ಆಗಿಯೂ ಕಿರುತೆರೆಯಲ್ಲಿ ಗುರುತಿಸಿಕೊಂಡಾಕೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನೀಲಿ' ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಇವರು ನಟಿಸಿ ಸೈ ಎನಿಸಿಕೊಂಡಿದ್ದಾರೆ. ಭಕ್ತಿಪ್ರಧಾನ ಧಾರಾವಾಹಿಯಲ್ಲೂ(Serial) ನಟನೆ ಆ ಬಳಿಕ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸಂಘರ್ಷ' ಧಾರಾವಾಹಿಯಲ್ಲಿ ಜಿಲ್ಲಾಧಿಕಾರಿ ಇಂದಿರಾ ಪಾತ್ರಕ್ಕೆ ಜೀವ ತುಂಬಿದ್ದರು. ತೇಜಸ್ವಿನಿ ಸದ್ಯ ಅದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಕ್ತಿ ಪ್ರಧಾನ ಧಾರಾವಾಹಿ 'ಶ್ರೀ ಉಧೋ ಉಧೋ ರೇಣುಕಾ ಯಲ್ಲವ್ವ' ಧಾರಾವಾಹಿಯಲ್ಲಿ ರಾಣಿ ಇಂದುಮತಿಯಾಗಿ ಅಭಿನಯಿಸುತ್ತಿದ್ದಾರೆ.

ಸದ್ಯ 'ಉಧೊ ಉಧೋ ಶ್ರೀ ರೇಷುಕಾ ಯಲ್ಲವ್ವ'ದ ಇಂದುಮತಿಯಾಗಿ ಕಿರುತೆರೆಯಲ್ಲಿ(Small screen) ಬ್ಯುಸಿಯಾಗಿರುವ ತೇಜಸ್ಬಿನಿ ಇನ್ನು ಮುಂದೆ ರಾಧಿಕಾ ಆಗಿ ಕಿರುತೆರೆ ವೀಕ್ಷಕರನ್ನು ರಂಜಿಸಲು ತಯಾರಾಗಿದ್ದಾರೆ. ಈಕೆಯ ಪ್ರತಿಭೆ ಕೇವಲ ಕಿರುತೆರೆಗೆ ಮಾತ್ರ ಸೀಮಿತವಾಗಿಲ್ಲ. ಹಿರಿತೆರೆಯಲ್ಲೂ ಮಿಂಚಲು ಈ ನಟಿ ಸಿದ್ಧತೆ ನಡೆಸಿದ್ದಾರೆ. 'ಲಾಂಗ್ ಡ್ರೈವ್' ಅನ್ನೂ ಸಿನಿಮಾಕ್ಕೆ ಈಕೆ ನಾಯಕಿ.

ಸಾಮಾನ್ಯವಾಗಿ ಪಾತ್ರಗಳು ಬದಲಾದಾಗ(Change) ಅದರಲ್ಲೂ ಮುಖ್ಯ ಪಾತ್ರಗಳು ಬದಲಾದಾಗ ಹೊಸ ಪಾತ್ರಗಳನ್ನು ವೀಕ್ಷಕರು ಒಪ್ಪಿಕೊಳ್ಳೋದು ಕಷ್ಟವಿದೆ. ಆದರೆ ವರ್ಷಾನುಗಟ್ಟಲೆ ನಡೆಯೋ ಸೀರಿಯಲ್‌ನಲ್ಲಿ ಕಲಾವಿದರ ಬದಲಾವಣೆ ಈಚೀಚೆಗೆ ತೀರಾ ಸಾಮಾನ್ಯವಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ
ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ