ಲೆಕ್ಕಾಚಾರದ ರಹಸ್ಯ ಹೊರಬಿದ್ದಿದೆ.. ಇನ್ನು ಗಿಲ್ಲಿ ಆಟ ನಡೆಯೋದು ಡೌಟ್.. ಗಿಲ್ಲಿ ಆಗ್ತಾರಾ ಔಟ್..?!

Published : Jan 05, 2026, 10:35 AM IST
Gilli nata bigg boss

ಸಾರಾಂಶ

ಗಿಲ್ಲಿ ಕಾವ್ಯಾ ಜೊತೆ ಲವ್ ಎಪಿಸೋಡ್ ಶುರುಮಾಡಿದ್ದು ಕೂಡ ಸದಾ ಕ್ಯಾಮೆರಾ ತನ್ನ ಕಡೆಗೆ ಇರಬೇಕು ಅನ್ನೋ ಲೆಕ್ಕಾಚಾರದಲ್ಲೇ. ಸೋ ಪಕ್ಕಾ ಲೆಕ್ಕಾ ಹಾಕಿ ಆಟ ಆಡ್ತಿರೋ ಗಿಲ್ಲಿ ಸೀಕ್ರೆಟ್​ನ ಕಿಚ್ಚ ರಿವೀಲ್ ಮಾಡಿದ್ದಾರೆ. ಇನ್ಮುಂದೆ ಗಿಲ್ಲಿ ಆಟ ನಡೆಯೋದು ಡೌಟ್..?

ಗಿಲ್ಲಿ ರಹಸ್ಯ ಹೊರಬಿತ್ತು.. ಮುಂದೇನು ಕಥೆ?

ಈ ಬಾರಿ ಬಿಗ್ ಬಾಸ್ ವಿನ್ನರ್ ರೇಸ್​​ನಲ್ಲಿ ಮುಂಚೂಣೆಯಲ್ಲಿರೋದು ಗಿಲ್ಲಿ ನಟ. ಆದ್ರೆ ಗಿಲ್ಲಿ (Gilli Nata) ಹಿಂದಿನ ಬಿಗ್ ಬಾಸ್ ಸೀಸನ್​​ಗಳನ್ನ ನೋಡಿ ಹೀಗೆನೇ ಆಟ ಆಡಬೇಕು ಅಂತ ಸ್ಪ್ರಿಪ್ಟ್ ರೆಡಿಮಾಡಿಕೊಂಡು ಬಂದಿದ್ದಾನಾ..? ಸಹಸ್ಪರ್ಧಿಗಳನ್ನ ತನ್ನ ತಾಳಕ್ಕೆ ತಕ್ಕಂತೆ ಕುಣಿಸ್ತಾ ಇದ್ದಾನಾ..? ಖುದ್ದು ಕಿಚ್ಚ ಸುದೀಪ್ ಆ ಗುಟ್ಟನ್ನ ರಟ್ಟು ಮಾಡಿದ್ದಾರೆ.

ಗಿಲ್ಲಿ ಆಟದ ಗುಟ್ಟು ರಟ್ಟು ಮಾಡಿದ ಕಿಚ್ಚ

ಈ ಬಾರಿಯ ಬಿಗ್ ಬಾಸ್ ಕನ್ನಡದಲ್ಲಿ ಎಲ್ಲರಿಗಿಂತ ಹೆಚ್ಚು ಹೈಲೈಟ್ ಆಗಿ ಕಪ್ ಗೆಲ್ಲೋ ರೇಸ್​ನಲ್ಲಿ ಮುಂಚೂಣಿಯಲ್ಲಿರೋದು ಒನ್ ಌಂಡ್ ಓನ್ಲಿ ಗಿಲ್ಲಿ ನಟ. ಒಂದು ಬನಿಯನ್ ತೊಟ್ಟುಕೊಂಡು, ಎಲ್ಲರ ಕಾಲೆಳೆದುಕೊಂಡು ಕಾಮಿಡಿ ಮಾಡಿಕೊಂಡಿದ್ದ ಈ ಹೈದ ಫಿನಾಲೆಗೆ ಬಂದಾಗಿದೆ. ಅಷ್ಟೇ ಅಲ್ಲ ಕಪ್ ಗೆಲ್ಲೋ ರೇಸ್​ನಲ್ಲೂ ಗಿಲ್ಲಿನೇ ಟಾಪ್ ನಲ್ಲಿದ್ದಾನೆ.

ಆದ್ರೆ ಗಿಲ್ಲಿದು ಸ್ಪ್ರಿಪ್ಟೆಡ್ ಆಟನಾ..? ಈತ ಹಿಂದಿನ ಸೀಸನ್​ಗಳನ್ನ ನೋಡಿಕೊಂಡು ಬಂದು, ಹೀಗೆ ಆಟ ಆಡಿದ್ರೆ ತನಗೆ ಸ್ಕ್ರೀನ್ ಸ್ಪೇಸ್ ಸಿಗುತ್ತೆ.. ಹೀಗೆ ಸೀನ್ ಕ್ರಿಯೇಟ್ ಮಾಡಿದ್ರೆ ತಾನು ಹೈಲೈಟ್ ಆಗ್ತೀನಿ ಅಂತ ಕಥೆ ಚಿತ್ರಕಥೆ ಹೆಣೆದುಕೊಂಡು ಬಂದಿದ್ದಾನಾ..? ಅದನ್ನ ಖುದ್ದು ಕಿಚ್ಚ ಕಳೆದ ವಾರದ ಪಂಚಾಯತಿಯಲ್ಲಿ ಬಾಯಿ ಬಿಡಿಸಿದ್ದಾರೆ.

ಪ್ರಥಮ್ + ಹನುಮಂತ = ಗಿಲ್ಲಿ ನಟ..!

ಹೌದು ಪ್ರಥಮ್ ಮತ್ತು ಹನುಮಂತನ ಗೇಮ್ ಪ್ಲಾನ್ ಗಳನ್ನ ಅರಿದು ಕುಡಿದು ಗಿಲ್ಲಿ ಆಟ ಆಡ್ತಿದ್ದಾನೆ ಅನ್ನೋದನ್ನ ಸುದೀಪ್ ಮನೆಮಂದಿಗೆ ಮನದಟ್ಟು ಮಾಡಿಸಿದ್ದಾರೆ. ಅಷ್ಟೇ ಅಲ್ಲ ಗಿಲ್ಲಿ ಜಪ ಮಾಡ್ತಿದ್ದ ಫ್ಯಾನ್ಸ್​​ಗೂ ಇವನು ನೀವಂದುಕೊಂಡಷ್ಟು ಮುಗ್ದ ಅಲ್ಲ ಅಂತ ಅರ್ಥ ಮಾಡಿಸಿದ್ದಾರೆ.

ಕಥೆ-ಚಿತ್ರಕಥೆ-ನಿರ್ದೇಶನ : ಗಿಲ್ಲಿ ನಟ..!

ಈ ಇಡೀ ಸೀಸನ್​ ನುದ್ದಕ್ಕೂ ಬೇರೆಯವರು ಕ್ಯಾಪ್ಟನ್ ಆಗಿದ್ದಾಗ ಗಿಲ್ಲಿ, ಮನೆಗೆಲಸ ಮಾಡದೇ ಆಟ ಆಡಿಸಿದ್ದ. ಅದೇ ತಾನು ಕ್ಯಾಪ್ಟನ್ ಆದಾಗ ಅಶ್ವಿನಿ ಮೇಲೆ ಜೋರು ಮಾಡಿ ರಣರಂಗ ಮಾಡಿದ್ದ. ಒಟ್ನಲ್ಲಿ ಯಾರೇ ಕ್ಯಾಪ್ಟನ್ ಆದ್ರೂ ಗಿಲ್ಲಿ ಕ್ಯಾಮೆರಾ ತನ್ನೆಡೆಗೆ ತಿರುಗುವಂತೆ ಮಾಡಿಕೊಳ್ತಾ ಇದ್ದ. ಕ್ಯಾಪ್ಟನ್ ಆದ ಮೇಲಂತೂ ಕೇಳೊದುಂಟೇ ಗಿಲ್ಲಿದೇ ಆರ್ಭಟ.

ಬರೀ ಈ ವಾರವಷ್ಟೇ ಅಲ್ಲ ಈ ಇಡೀ ಸೀಸನ್​ನುದ್ದಕ್ಕೂ ಗಿಲ್ಲಿ ದೊಡ್ಮನೆ ಕ್ಯಾಮೆರಾಗಳು ತನ್ನತ್ತಲೇ ಫೋಕಸ್ ಆಗುವಂತೆ ಮಾಡಿಕೊಂಡು ಬಂದಿದ್ದಾನೆ. ಅದು ಕಾಮಿಡಿನೇ, ಜಗಳಾನೋ, ಪ್ರೇಮಾಯಣವೋ ಒಟ್ನಲ್ಲಿ ಗಿಲ್ಲಿ ಪಾತ್ರ ಇರುತ್ತೆ. ಈ ಸೀಸನ್​ನುದ್ದಕ್ಕೂ ಅತಿಹೆಚ್ವು ಪ್ರೋಮೋಗಳು ಬಂದಿರೋದು ಗಿಲ್ಲಿ ಮೇಲೆನೇ.

100 ದಿನ ಆಟ.. ಗಿಲ್ಲಿ ಸ್ಕ್ರಿಪ್ಟ್ ಕಂಠಪಾಠ..!

ಹೌದು ನೂರು ದಿನಗಳ ಆಟ ಹೇಗೆ ಆಡಬೇಕು ಅಂತ ಗಿಲ್ಲಿ ಕಂಠಪಾಟ ಮಾಡಿಕೊಂಡು ಬಂದಿದ್ದಾನಂತೆ. ಪ್ರಥಮ್ ನಂತೆ ಕಿರಿಕಿರಿ ಮಾಡ್ತಾ, ಕಂಡಕಂಡವರ ಜೊತೆಗೆ ಕಿರಿಕ್ ಮಾಡಿಕೊಂಡಿದ್ರೆ ಸದಾ ಕ್ಯಾಮೆರಾ ತನ್ನತ್ತ ಇರುತ್ತೆ ಅನ್ನೋದನ್ನ ಗಿಲ್ಲಿ ಅರ್ಥ ಮಾಡಿಕೊಂಡಿದ್ದಾನೆ.

ಪ್ರಥಮ್​ ಆವೇಶ.. ಹನುಮಂತನ ವೇಷ..!

ಹೌದು ಪ್ರಥಮ್​ನಂತೆ ಕಿತ್ತಾಟ ಆಡೋದ್ರ ಜೊತೆಗೆ ಹನುಮಂತನ ತರಹ ಸರಳ ವೇಷ ಹಾಕಿಕೊಳ್ಳೋದನ್ನ ಫಾರ್ಮುಲಾ ಮಾಡಿಕೊಂಡಿದ್ದಾನೆ ಗಿಲ್ಲಿ ನಟ. ಪ್ರಥಮ್ ಬಿಗ್ ಬಾಸ್ ಸೀಸನ್-4 ವಿನ್ನರ್ ಆದ್ರೆ, ಹನುಮಂತ ಸೀಸನ್ 11 ವಿನ್ನರ್.. ಈ ಇಬ್ಬರನ್ನ ಫಾಲೋ ಮಾಡಿದ್ರೆ ಸಾಕು ಸೀಸನ್ 12 ವಿನ್ನರ್ ಆಗಬಹುದು ಅನ್ನೋದು ಗಿಲ್ಲಿ ಲೆಕ್ಕಾಚಾರ.

ಗಿಲ್ಲಿ ಕಾವ್ಯಾ ಜೊತೆ ಲವ್ ಎಪಿಸೋಡ್ ಶುರುಮಾಡಿದ್ದು ಕೂಡ ಸದಾ ಕ್ಯಾಮೆರಾ ತನ್ನ ಕಡೆಗೆ ಇರಬೇಕು ಅನ್ನೋ ಲೆಕ್ಕಾಚಾರದಲ್ಲೇ. ಸೋ ಪಕ್ಕಾ ಲೆಕ್ಕಾ ಹಾಕಿ ಆಟ ಆಡ್ತಿರೋ ಗಿಲ್ಲಿ ಸೀಕ್ರೆಟ್​ನ ಕಿಚ್ಚ ರಿವೀಲ್ ಮಾಡಿದ್ದಾರೆ.

ಬಿಗ್​ ಬಾಸ್ ನಲ್ಲಿ ಕೊನೆಯ ಒಂದು ವಾರದ ಆಟ ಬಾಕಿ ಇದೆ. ಈ ಗುಟ್ಟು ರಟ್ಟಾದ ಮೇಲೂ ಮನೆಮಂದಿ ಗಿಲ್ಲಿಗೆ ಸ್ಕೋರ್ ಮಾಡೋದಕ್ಕೆ ಕೊಡ್ತಾರಾ..? ಕೊನೆಹಂತದಲ್ಲೂ ಜನ ಗಿಲ್ಲಿ ಕೈ ಹಿಡಿತಾರಾ..? ಗೊತ್ತಿಲ್ಲ..! ಒಟ್ನಲ್ಲಿ ಗಿಲ್ಲಿ ಸ್ಕ್ರಿಪ್ಟ್ ಇಲ್ಲಿತನಕ ವರ್ಕ್ ಆಗಿದೆ. ಆದ್ರೆ ಕೊನೆವರೆಗೂ ಅದು ಗಿಲ್ಲಿ ಕೈ ಹಿಡಿಯುತ್ತಾ..? ಈತನನ್ನ ವಿನ್ನರ್ ಆಗಿಸುತ್ತಾ ಕಾದುನೋಡಬೇಕಿದೆ.

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ತಳ್ಳಾಟ, ನೂಕಾಟ, ಕಿತ್ತಾಟ; ಇದು ರಕ್ಷಿತಾ ಶೆಟ್ಟಿ Vs ರಾಶಿಕಾ ಶೆಟ್ಟಿ; ಜಗಳದಲ್ಲಿ ಯಾರು ಸರಿ?
BBK 12: ಕೊನೆಗೂ ಸುದೀಪ್ ಮುಂದೆಯೇ ಸತ್ಯ ಒಪ್ಪಿಕೊಂಡ ಗಿಲ್ಲಿ ನಟ