ಭಜನೆ ವೇಳೆ ಖ್ಯಾತ ಕಿರುತೆರೆ ನಟಿಗೆ ಆವೇಶ; ಕಿರುಚೋದು, ಕೂಗೋದು ನೋಡಿ ದೇವಿ ಮೈಮೇಲೆ ಬಂದಳು ಎಂದ ವೀಕ್ಷಕರು!

Published : Jan 04, 2026, 01:12 PM IST
sudha chandran

ಸಾರಾಂಶ

ಭಕ್ತಿ ಪರವಶತೆಯಿದ್ದಾಗ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅನುಭವ ಆಗುವುದು. ಅಂತೆಯೇ ಕಿರುತೆರೆ ನಟಿಯೋರ್ವರಿಗೆ ಭಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಆವೇಶ ಬಂದಿದೆ. ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್‌ ಆಗ್ತಿದೆ.

ಖ್ಯಾತ ಕಿರುತೆರೆ ನಟಿ ಸುಧಾ ಚಂದ್ರನ್ ಅವರಿಗೆ ಆವೇಶ ಬಂದಿರುವ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನಿಜಕ್ಕೂ ಅವರಿಗೆ ಏನಾಯ್ತು ಎಂದು ವೀಕ್ಷಕರು ಗೊಂದಲಪಟ್ಟುಕೊಂಡಿದ್ದಾರೆ, ಪ್ರಶ್ನೆಯಿದೆ.

ಸುಧಾ ಚಂದ್ರನ್‌ ಅವರಿಗೆ ಏನಾಯ್ತು?

ಭಜನಾ ಕಾರ್ಯಕ್ರಮವೊಂದರಲ್ಲಿ ಸುಧಾ ಚಂದ್ರನ್‌ ಅವರು ಭಾಗವಹಿಸಿದ್ದರು. ಆ ವೇಳೆ ಈ ಕಿರುತೆರೆ ನಟಿ ವಿಚಿತ್ರವಾಗಿ ವರ್ತಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆಗ ಸಾಕಷ್ಟು ಜನರು ಅವರನ್ನು ಹಿಡಿದುಕೊಂಡರು, ಸಮಾಧಾನ ಮಾಡಲು ಪ್ರಯತ್ನಿಸಿದರು. ಅಷ್ಟೇ ಅಲ್ಲದೆ ಸುಧಾ ಕೂಡ ತಮಗೆ ಆಗುತ್ತಿರುವ ಹಿಂಸೆಯನ್ನು ಕಂಟ್ರೋಲ್‌ ಮಾಡಲು ಒದ್ದಾಡಿದ್ದು ಕೂಡ ಗೊತ್ತಾಗಿದೆ.

ಸುಧಾ ಚಂದ್ರನ್‌ ಅವರನ್ನು ಮೂವರು ವ್ಯಕ್ತಿಗಳು ಹಿಡಿದುಕೊಳ್ಳಲು ಪ್ರಯತ್ನಿಸುತ್ತಿದ್ದರೂ, ನಟಿ ತನ್ನ ಸುತ್ತ ಮುತ್ತ ಇದ್ದವರ ಮುಂದೆ ಕಿರುಚುತ್ತಿರುವುದು ಕಾಣಿಸುತ್ತಿದೆ. ಸರಳವಾಗಿದ್ದ ಸುಂದರವಾದ ಬಿಳಿ, ಕೆಂಪು ಬಣ್ಣದ ಸೀರೆಯನ್ನು ಧರಿಸಿದ್ದ ಸುಧಾ ಅವರು ತಮ್ಮ ಹಣೆಗೆ "ಜೈ ಮಾತಾ ದಿ" ಎಂದು ಬರೆದಿದ್ದ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದರು.

ಆರಂಭದಲ್ಲಿ ಆವೇಶ ಬಂದವರಂತೆ ಕಂಡ ಸುಧಾ ಅವರು ಹೂವು ಕೊಡಿ ಎಂದು ಕೇಳಿದ್ದಾರೆ. ಅಲ್ಲಿ ನೃತ್ಯ ಮಾಡುವವರಿಗೆ ಹೂವು ಕೊಟ್ಟಿದ್ದಾರೆ. ಅದಾದ ಬಳಿಕ ನಿಲ್ಲಲು ಆಗದೆ, ಕೂರಲು ಆಗದೆ ಕಿರುಚಿದ್ದಾರೆ. ಇದಕ್ಕೂ ಮುನ್ನ ಅವರು ಭಜನೆ ಹಾಡುತ್ತಾ. ನೃತ್ಯ ಮಾಡುತ್ತ ಭಾರಪರವಶವಾಗಿದ್ದ ವಿಡಿಯೋಗಳು ವೈರಲ್‌ ಆಗಿದ್ದವು.

ಯಾರು ಯಾರು ಏನು ಹೇಳಿದರು?

ಈ ವಿಡಿಯೋ ನೋಡಿ ಅನೇಕರಿಗೆ ಏನಾಗಿದೆ ಎಂಬ ಪ್ರಶ್ನೆ ಎದ್ದಿದೆ. ಇನ್ನೂ ಕೆಲವರು, ಭಾವಪರವಶರಾಗಿದ್ದಾರೆ, ದೈವಿಕ ಶಕ್ತಿ ಆವರಿಸಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, "ಯಾರನ್ನೂ ನೋಡಿ ನಾವು ನಗಬಾರದು, ಅದು ತಪ್ಪು. ಪ್ರತಿಯೊಬ್ಬರಿಗೂ ಕೂಡ ತಮ್ಮದೇ ಆದ ಒಂದು ಧರ್ಮವಿದೆ. ನೀವು ನಗುತ್ತೀರಾ ಅಂದರೆ ದೇವರು ಈ ಜಗತ್ತಿನಲ್ಲಿ ಬೇರೆ ವಿಷಯಗಳನ್ನು ನೀಡಿದ್ದಾನೆ” ಎಂದು ಹೇಳಿದ್ದಾರೆ.

ಕಾಮೆಂಟ್‌ನಲ್ಲಿ ನಗುತ್ತಿರುವವರಿಗೆ ಬಹುಶಃ ಇದೇನು ಎಂದು ತಿಳಿದಿಲ್ಲ, ಮಾತಾ ರಾಣಿ ತನ್ನ ನಿಜವಾದ ಭಕ್ತರಲ್ಲಿ ಪ್ರವೇಶ ಮಾಡುತ್ತಾಳೆ. ಸುಧಾ ಮೈಮೇಲೆ ಕೂಡ ಮಾತಾ ರಾಣಿ ಬಂದಿದ್ದಾಳೆ. ಜೈ ಮಾತಾ ದಿ" ಎಂದು ಹೇಳಿದ್ದಾರೆ.

"ಇದು ನಿಜಕ್ಕೂ ಪರ್ಸನಲ್‌ ವಿಷಯವಾಗಿದ್ದು, ಸಾರ್ವಜನಿಕವಾಗಿ ಹಂಚಿಕೊಳ್ಳಬಾರದಿತ್ತು" ಎಂದು ಬರೆದಿದ್ದಾರೆ.

ಒಂದು ವಿಡಿಯೋದಲ್ಲಿಯಂತೂ ಸುಧಾ ಅವರು ನಿಯಂತ್ರಣ ತಪ್ಪಬಾರದು, ಬೀಳಬಾರದು ಎಂದು ಉಳಿದವರು ಅವರನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಆದರೆ ಅವರು ಸಿಕ್ಕಾಪಟ್ಟೆ ಅಳುತ್ತಿದ್ದಾರೆ. ಇನ್ನೊಮ್ಮೆ ಅವರು ಭಕ್ತಿಯಲ್ಲಿ ಮೈಮರೆತಿರುವುದು ಕಂಡಿದೆ.

ಸುಧಾ ಚಂದ್ರನ್‌ ಯಾರು?

ಸುಧಾ ಚಂದ್ರನ್ ಖ್ಯಾತ ಭರತನಾಟ್ಯ ಕಲಾವಿದೆ, ಕಿರುತೆರೆ ನಟಿ. 'ಕಹಿ ಕಿಸಿ ರೋಜ್' ಧಾರಾವಾಹಿಯಲ್ಲಿ 'ರಮೋಲಾ ಸಿಕಂದ್' ಎನ್ನುವ ಪಾತ್ರ ಮಾಡಿ ಜನಪ್ರಿಯತೆ ಗಳಿಸಿದ್ದರು. 'ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ', 'ನಾಗಿನ್' ಫ್ರಾಂಚೈಸಿ, 'ಮಾತಾ ಕಿ ಚೌಕಿ', 'ಯೇ ಹೈ ಮೊಹಬ್ಬತೇನ್', 'ಕಲಿಯುಗ್ ಮೇ ಭಕ್ತಿ ಕಿ ಶಕ್ತಿ' ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸುಧಾ ಅವರು ಬಾಲಿವುಡ್ ಸೇರಿದಂತೆ ಕೆಲ ಪ್ರಾದೇಶಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 1993ರಿಂದ ಒಂದಾದ ಮೇಲೆ ಒಂದರಂತೆ ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಒಲವಿನ ಆಸರೆ, ಬಿಸಿಲು ಬೆಳದಿಂಗಳು ಮುಂತಾದ ಕನ್ನಡ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಅಂದಹಾಗೆ ಅಪಘಾತದಿಂದಾಗಿ ಅವರು ಒಂದು ಕಾಲು ಕಳೆದುಕೊಂಡಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare: ಅಪ್ಪನ ತಲೆಗೆ ಹುಳು ಬಿಟ್ಟ ಮಿಂಚು- ಮಲ್ಲಿ ಸರ ಕದಿಯಲು ರೌಡಿ ಬಿಟ್ಟ ಕಿಲಾಡಿ ಪಿಎ!
- 2 ಡಿಗ್ರಿ ಚಳಿಯಲ್ಲಿ ಗಂಡನ ಜೊತೆ ಜಾಲಿ ಮೂಡಲ್ಲಿ ಕನ್ನಡ ಕಿರುತೆರೆಯ ದೆವ್ವ