
ತೆರೆಯ ಮೇಲೆ ಒಂದು ದೃಶ್ಯವನ್ನು ತೋರಿಸುವಾಗ ಅದರ ಹಿಂದೆ ನಟ-ನಟಿಯರು ಎಷ್ಟೆಲ್ಲಾ ಸರ್ಕಸ್ ಮಾಡಿರುತ್ತಾರೆ. ಎಷ್ಟೋ ಸಂದರ್ಭದಲ್ಲಿ ಜೀವಕ್ಕೆ ಅಪಾಯ ತಂದುಕೊಂಡಿರುವ ಉದಾಹರಣೆಗಳೂ ಸಾಕಷ್ಟು ಇವೆ. ಅದರಲ್ಲಿಯೂ ಆ್ಯಕ್ಷನ್ ದೃಶ್ಯಗಳನ್ನು ಮಾಡುವಾಗ ನಟ-ನಟಿಯರಿಗೆ ಗಂಭೀರ ಸ್ವರೂಪದ ಗಾಯಗಳಾಗುವ ಸುದ್ದಿಗಳೂ ಆಗ್ಗಾಗ್ಗೆ ಬರುತ್ತಲೇ ಇರುತ್ತವೆ. ಆದರೆ ಒಂದು ಚಿತ್ರ ಯಶಸ್ಸು ಆಗಬೇಕಾದರೆ ನಟರು ಇವೆಲ್ಲಾ ಮಾಡುವುದು ಅನಿವಾರ್ಯವೇ. ಇಷ್ಟು ಮಾಡಿದ ಮೇಲೂ ಚಿತ್ರ ಯಶಸ್ವಿ ಆಗಿಯೇ ಆಗುತ್ತದೆ ಎಂದೂ ಹೇಳುವುದು ಕಷ್ಟ. ಇದು ಸಿನಿಮಾದ ಮಾತಾದರೆ, ಇಂದು ಸೀರಿಯಲ್ಗಳೂ ಯಾವ ಸಿನಿಮಾಕ್ಕೂ ಕಮ್ಮಿ ಏನಿಲ್ಲ. ಸಿನಿಮಾಗಳ ಮಾದರಿಯಲ್ಲಿಯೇ ದೃಶ್ಯಗಳ ಶೂಟಿಂಗ್ ನಡೆಯುತ್ತದೆ.
ಅಂಥದ್ದೇ ಒಂದು ಶೂಟಿಂಗ್ನ ದೃಶ್ಯವೊಂದು ಈಗ ವೈರಲ್ ಆಗಿದೆ. ಇದರಲ್ಲಿ ನಾಯಕಿಗೆ ಅಪಘಾತವಾಗುವ ದೃಶ್ಯವಿದೆ. ಎದುರುಗಡೆಯಿಂದ ವಾಹನವೊಂದು ಬರುತ್ತದೆ. ಆ ವಾಹನಕ್ಕೆ ನಾಯಕಿ ಗುದ್ದುತ್ತಾಳೆ. ಆಗ ಹಾರಿ ಬೀಳುವುದು ಈ ದೃಶ್ಯ. ಇದರಲ್ಲಿ ನಾಯಕಿಗೆ ಹಗ್ಗವನ್ನು ಕಟ್ಟಲಾಗಿದೆ (ಇದು ಪ್ರಸಾರಗೊಂಡಾಗ ಹಗ್ಗ ಕಾಣಿಸುವುದಿಲ್ಲ. ನಾಯಕಿಯೇ ಮೇಲೆ ಹಾರಿದಂತೆ ಕಾಣಿಸುತ್ತದೆ ಅಷ್ಟೇ). ವಾಹನ ಬಂದು ನಿಂತಿದೆ. ಅದಕ್ಕೆ ನಾಯಕಿ ಗುದ್ದಿದ್ದಾಳೆ. ಗುದ್ದಿ ಹಾರಿದ್ದಾಳೆ. ಹಾರುವ ಸಮದಯಲ್ಲಿ ಸೇಫ್ಟಿ ದಾರದ ಸಹಿತವೇನೋ ಹಾರಿದ್ದಾಳೆ ನಿಜ. ಆದರೆ ಆ ಹಾರಿದ ರಭಸಕ್ಕೆ ನಟಿ ಮತ್ತೊಮ್ಮೆ ಅದೇ ವೇಗದಲ್ಲಿ ಮುಂದೆ ಬಂದು ಎದುರಿಗೆ ಇದ್ದ ವಾಹನಕ್ಕೆ ಗುದ್ದಿಬಿಟ್ಟಿದ್ದಾಳೆ. ಜೋರಾಗಿ ಕಿರುಚಿಕೊಂಡಿದ್ದಾಳೆ.
ಕೂಡಲೇ ಅಲ್ಲಿದ್ದ ಸಿಬ್ಬಂದಿ ಆಕೆಯ ಸಹಾಯಕ್ಕೆ ಬಂದು ಹಗ್ಗ ಬಿಚ್ಚಿದ್ದಾರೆ. ಸ್ವಲ್ಪ ಹೆಚ್ಚೂ ಕಡಿಮೆ ಆಗಿದ್ದರೂ, ಗುದ್ದಿದ ರಭಸಕ್ಕೆ ನಟಿಯ ತಲೆಗೆ ಏನಾದರೂ ಏಟು ಬಿದ್ದಿದ್ದರೆ ಇಲ್ಲವೇ ಆ ಗುದ್ದಿದ ಭಯಕ್ಕೆ ಏನಾದರೂ ಹೆಚ್ಚೂ ಕಡಿಮೆ ಆಗುವ ಸಾಧ್ಯತೆ ಕೂಡ ಇತ್ತು. ಆದರೆ ನಟಿಗೆ ಸ್ವಲ್ಪ ಗಾಯಗಳಾದಂತೆ ಕಾಣಿಸುತ್ತಿದೆ (ವಿಡಿಯೋ ಲಿಂಕ್ ಕೊನೆಯಲ್ಲಿ ಇದೆ). ಈ ಅಪಘಾತದ ಶೂಟಿಂಗ್ ನೋಡಿದರೆ ತೆರೆಯ ಹಿಂದೆ ನಟ-ನಟಿಯರು ಎಷ್ಟೊಂದು ಸರ್ಕಸ್ ಮಾಡುತ್ತಾರೆ ಎನ್ನುವುದನ್ನು ನೋಡಬಹುದು. ಒಂದು ಸಿನಿಮಾ ಅಥವಾ ಸೀರಿಯಲ್ ಎಷ್ಟರಮಟ್ಟಿಗೆ ಸಕ್ಸಸ್ ಆಗುತ್ತದೆಯೆಂದು ಹೇಳುವುದು ಕಷ್ಟ. ಹಾಗೆಂದು ಯಾವುದೇ ನಿರ್ದೇಶಕರು ತಮ್ಮ ಸರ್ವ ಪ್ರಯತ್ನವನ್ನೂ ಮಾಡಲೇಬೇಕು. ಅದಕ್ಕಾಗಿಯೇ ವೀಕ್ಷಕರಿಗೆ ಇಷ್ಟವಾಗುವಂಥ ಹೊಸ ಹೊಸ ರೋಚಕತನವನ್ನು ತೋರಿಸಲಾಗುತ್ತದೆ. ವೀಕ್ಷಕರಿಗೆ ರೋಚಕತೆ ಮುಂದಿಡಲು ಇಂಥ ಕೆಲವು ಕಠಿಣ ದೃಶ್ಯಗಳಿಗೆ ನಟ-ನಟಿಯರು ಒಗ್ಗಿಕೊಳ್ಳಲೇಬೇಕು. ಅವರಿಗೆ ಈ ರೀತಿಯ ಶೂಟಿಂಗ್ ಮಾಡುವಾಗ ಎಲ್ಲ ರೀತಿಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆಯಾದರೂ ಇಂಥ ಆ್ಯಕ್ಷನ್ ಶೂಟಿಂಗ್ ಮಾಡುವುದು ಸುಲಭದ ಮಾತಲ್ಲ ಎನ್ನುವುದೂ ಅಷ್ಟೇ ದಿಟ.
ಕೆಲ ದಿನಗಳ ಹಿಂದೆ ಕಾಯಲ್ ಎನ್ನುವ ತಮಿಳು ಸೀರಿಯಲ್ನ ಶೂಟಿಂಗ್ ದೃಶ್ಯದಲ್ಲಿ ನಟಿಯೇ ಖುದ್ದಾಗಿ . ಅಪಘಾತವೊಂದರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು ಅದರ ವಿಡಿಯೋ ವೈರಲ್ ಆಗಿತ್ತು. ಇದನ್ನು ನೋಡಿದರೆ ನಿಜಕ್ಕೂ ಮೈ ಜುಂ ಎನ್ನುವುದು ಗ್ಯಾರೆಂಟಿ. ಇದರಲ್ಲಿ ನಟಿ ಅಪಘಾತಗೊಳ್ಳುವ ದೃಶ್ಯವಿದ್ದು, ಅದನ್ನುಯಾವ ರೀತಿ ಶೂಟ್ ಮಾಡಲಾಗಿದೆ ಎನ್ನುವುದನ್ನು ನೋಡಬಹುದು. ನಟಿಗೆ ಹಗ್ಗ ಕಟ್ಟಿ ಹೇಗೆ ನೇತು ಹಾಕಲಾಗಿದೆ ಎನ್ನುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ನಂತರ ಆ ಹಗ್ಗವನ್ನು ಕಾಣದಂತೆ ಮಾಡಲಾಗುತ್ತದೆ. ಅಪಘಾತವಾದಾಗ ಡಿಕ್ಕಿಯ ರಭಸಕ್ಕೆ ಗಾಳಿಯಲ್ಲಿ ತೇಲಿಹೋಗಿ ಬೀಳುವ ದೃಶ್ಯವನ್ನು ಹೇಗೆ ಮಾಡಲಾಗುತ್ತದೆ ಎನ್ನುವುದನ್ನು ಇದರಲ್ಲಿ ತೋರಿಸಲಾಗಿದೆ. ಶರ್ಮಾ ಪ್ರವೀಣ್ ಎನ್ನುವವರು ಇದರ ವಿಡಿಯೋ ಶೇರ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.