
ಹರಕೆ ಫಲಿಸಿತು ಪೂಜೆ ಫಲ ಕೊಡ್ತು. ಆಸೆ ಈಡೇರಿತು. ಕನಸು ನನಸಾಯ್ತು. ಇಟ್ಟ ಗುರಿ ತಲುಪಾಯ್ತು. ಮುಳ್ಳಿನ ಹಾದಿ ಕಣ್ಮರೆ ಆಯ್ತು. ನಿರೀಕ್ಷಿಸದ ಗೆಲುವು ಸಿಕ್ಕಾಯ್ತು. ಇದೆಲ್ಲವೂ ಆಗಿದ್ದು ಒಬ್ಬ ಹಳ್ಳಿ ಹೈದ ಗಿಲ್ಲಿ ಬದುಕಲ್ಲಿ. ಆರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ರೂ ಗಿಲ್ಲಿಗೆ ಗೆಲುವು ಸಿಕ್ಕೇ ಇರಲಿಲ್ಲ. ಆದ್ರೆ ಈಗ ನಲ್ಲಿ ಮೂಳೆ ಸ್ಟಾರ್ ಬಿಗ್ಬಾಸ್ ಆಗೇ ಬಿಟ್ಟಿದ್ದಾನೆ. ಹಾಗಾದ್ರೆ ಗಿಲ್ಲಿಯ ಗೆಲುವಿನ ಹಾದಿ ಹೇಗಿತ್ತು. ನಿಜಕ್ಕೂ ಇದು ಸಾಧ್ಯ ಆಗಿದ್ದು ಹೇಗೆ? ನೋಡೋಣ ಬನ್ನಿ.
ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಸಕ್ಸಸ್ಫುಲ್ ತೆರೆ ಬಿದ್ದಿದೆ. ಕನ್ನಡದ ಬಿಗ್ಬಾಸ್ ಇತಿಹಾಸದಲ್ಲೇ ಮಳವಳ್ಳಿ ಹೈದ ಗಿಲ್ಲಿ ದಾಖಲೆ ಬರೆದಿದ್ದಾರೆ. ಬಿಗ್ಬಾಸ್ನ 12 ಸೀಸನ್ಗಳಲ್ಲೇ ಅತಿ ಹೆಚ್ಚು ಜನರ ಪ್ರೀತಿ ಪಡೆದ ಸ್ಪರ್ಧಿ ಅಂದ್ರೆ ಅದು ಗಿಲ್ಲಿ ಅಂತ ಪ್ರೂವ್ ಆಗಿದೆ. ಹೀಗಾಗೆ ಟಕ್ಕರೆ ಟಕ್ಕರೆ ತಮಟೆ ಏಟು. ಗಿಲ್ಲಿ ನಟ ಅಲ್ಟಿಮೇಟು ಅನ್ನೋ ಗಾನ ಬಜಾನ ನಡೀತಾ ಇದೆ.
ಗಿಲ್ಲಿ ನಟ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ದಿನದಿಂದಲೇ ಬಿಗ್ಬಾಸ್ ಪ್ರಿಯರಿಗೆ ಇಷ್ಟವಾಗುತ್ತಾ ಹೋದ್ರು. ಯಾರೇ ಬಂದ್ರು, ಯಾರೇ ಹೋದ್ರು, ಗಿಲ್ಲಿ ನಟನ ಖದರ್ ಮಾತ್ರ ಕಮ್ಮಿಯಾಗ್ಲಿಲ್ಲ. ಗಿಲ್ಲಿಯ ಮೋಡಿ ಮಾಯೆಗೆ ಬಿಗ್ಬಾಸ್ನ ಸಹ ಸ್ಪರ್ಧಿಗಳ ಮನೆವ್ರೇ ಮರುಳಾಗಿದ್ರು, ಇನ್ನು ಪ್ರೇಕ್ಷಕ ಗಿಲ್ಲಿಯನ್ನ ಇಷ್ಟ ಪಡದೇ ಬಿಡ್ತಾರಾ? ಸೋ ಈ ಭಾರಿ ಗಿಲ್ಲಿ ಗೆಲ್ಲೋಕೆ ಮುಖ್ಯ ಕಾರಣ ಆತನ ವ್ಯಕ್ತಿತ್ವ.
ಮಳವಳ್ಳಿಯ ಈ ನಲ್ಲಿ ಮೂಳೆ ಸ್ಟಾರ್ ಬಿಗ್ಬಾಸ್ ಆಗೋಕೆ ಕಾರಣ ಸರಳ ಬದುಕು ಸುಂದರ ಕನಸು ಕಟ್ಟಿಕೊಂಡಿದ್ದು, ಹತ್ತಾರು ಕ್ಯಾಮೆರಾ ಇದೆ. ಜನ ನೋಡುತ್ತಿರುತ್ತಾರೆ ಅನ್ನೋ ಯಾವ್ದೇ ಮುಜುಗರ ಇಲ್ಲದೇ ರಿಯಲ್ ಲೈಫ್ನಲ್ಲಿ ತಾನು ಹೇಗೆ ಇದ್ನೋ ಹಾಗೆ ಬಿಗ್ಬಾಸ್ ಮನೆಯಲ್ಲೂ ಇದ್ದು ಗೆದ್ದು ಬಿಟ್ಟ ಗಿಲ್ಲಿ.
ಗಿಲ್ಲಿ ನಟನ ಮತ್ತೊಂದು ಟ್ಯಾಲೆಂಟ್ ಅಂದ್ರೆ ಹಾಸ್ಯ. ಬಿಗ್ಬಾಸ್ ಮನೆಗೆ ಎಂಟ್ರಿ ಕೊಡೋ ಮೊದಲೇ ತನ್ನ ಕಾಮಿಡಿಯಿಂದ ಫೇಮಸ್ ಆಗಿದ್ದ ಗಿಲ್ಲಿ, ಒಂಟಿ ಮನೆಗೆ ಎಂಟ್ರಿ ಕೊಟ್ಟ ಮೇಲೂ ಅದೇ ಫಾರ್ಮುಲಾವನ್ನ ಬಳಸಿದ್ರು. 112 ದಿನವೂ ಕಾಮಿಡಿ ಕಂಟೆಂಟ್ ಕೊಟ್ಟಿದ್ದ ಗಿಲ್ಲಿ, ಸಹ ಸ್ಪರ್ಧಿಗಳ ಮೇಲೆ ಸವಾರಿ ಮಾಡಿದ್ದ. ಇದೇ ಗಿಲ್ಲಿ ಗೆಲುವಿಗೆ ಪ್ರಮುಖ ಕಾರಣ ಆಯ್ತು.
ಹಾಗೆ ನೋಡಿದ್ರೆ ಫಿಸಿಕಲ್ ಟಾಸ್ಕ್‌ಗಳಲ್ಲಿ ಸಹ ಸ್ಪರ್ಧಿಗಳಿಗೆ ಹೋಲಿಸಿದ್ರೆ ಗಿಲ್ಲಿ ಪ್ರದರ್ಶನ ಝೀರೋ. ಬಟ್ ಬರೀ ಎಂಟರ್‌ಟೈನ್‌ಮೆಂಟ್ ಮೂಲಕ ಗಿಲ್ಲಿ ವೀಕ್ಷಕರ ಮನಸ್ಸು ಗೆದ್ದ. ಅಭಿಮಾನಿ ಬಳಗ ಸೃಷ್ಟಿಸಿಕೊಂಡ. ಅಷ್ಟೆ ಅಲ್ಲ ತನ್ನ ಜಂಟಿ ಕಾವ್ಯ ವಿಷಯದಲ್ಲಿ ಗಿಲ್ಲಿ ಮಾತು ಬದಲಿಸಲಿಲ್ಲ. ಅಲ್ಲಿಗೆ ಟಕರೆ ಟಕರೆ ತಮಟೆ ಏಟು. ಗಿಲ್ಲಿ ನಟ ಅಲ್ಟಿಮೇಟು ಅಂತ ಜನ ನಿರ್ಧರಿಸಿಯೇ ಬಿಟ್ರು.
ಗಿಲ್ಲಿಯ ಮುಗ್ದತೆ. ಹಾಸ್ಯ ಪ್ರಜ್ಞೆ. ಹಲವರ ಹೃದಯ ಗೆದ್ರೆ, ಕೆಲವರು ಗಿಲ್ಲಿ ಬಗ್ಗೆ ಕೊಂಕು ಮಾತನಾಡಿದ್ದು ಇದೆ. ಗಿಲ್ಲಿ ಗೆಲ್ಲಲು ಸಾಧ್ಯವೇ ಇಲ್ಲ. ಗಿಲ್ಲಿ ಗೆದ್ದರೆ ಅರ್ಧ ಮೀಸೆ ಗಡ್ಡ ಬೋಳಿಸುತ್ತೇನೆ ಅಂತ ಅಬ್ದುಲ್ ರಜಾಕ್ ಅನ್ನೋ ವ್ಯಕ್ತಿ ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದ, ಈಗ ಗಿಲ್ಲಿ ಗೆದ್ದ ಅಬ್ದುಲ್ ರಜಾಕ್ ಅದರ್ಧ ಮೀಸೆ ಗಡ್ಡ ಬೋಳಿಸಿಕೊಂಡ.
ನಲ್ಲಿ ಮೂಳೆ ಸ್ಟಾರ್ ಊರಲ್ಲಿ ಅದ್ಧೂರಿ ಹಬ್ಬ!
ಗಿಲ್ಲಿ ನಟ ಫೇಮಸ್ ಆಗಿದ್ದೇ ಹುಟ್ಟೂರಿನಿಂದ. ನಲ್ಲಿ ಮೂಳೆಯನ್ನೇ ಇಟ್ಟುಕೊಂಡು ಹಾಸ್ಯ ಮಾಡುತ್ತಾ ಫೇಮಸ್ ಆಗಿದ್ದ ಗಿಲ್ಲಿ ಈಗ ಒಂದು ಹೆಜ್ಜೆ ಮುಂದೆ ಹೋಗಿ ಬಿಗ್ಬಾಸ್ ಆಗಿದ್ದಾನೆ. ಹೀಗಾಗಿ ಊರ ಮಗನ ಸಂಭ್ರಮದಲ್ಲಿ ಗಿಲ್ಲಿಯ ಇಡೀ ಊರೇ ಭಾಗಿ ಆಗಿತ್ತು. ಗಿಲ್ಲಿ ಹುಟ್ಟೂರು ಮಂಡ್ಯದ ಮಳವಳ್ಳಿಯ ದಡದಪುರದಲ್ಲಿ ಅದ್ಧೂರಿ ಸ್ವಾಗತ ಮಾಡಿ ಗಿಲ್ಲಿಯನ್ನ ಮೆರವಣಿಗೆ ಮಾಡಿದ್ರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.