
ಬೆಂಗಳೂರು: ನಲ್ಲಿ ಮೂಳೆ ಸ್ಟಾರ್ ಗಿಲ್ಲಿ ನಟ ಈಗ ಕರ್ನಾಟಕದಾದ್ಯಂತ ಮನೆ ಮಾತಾಗಿದ್ದಾರೆ. ಮಂಡ್ಯದ ಮಳವಳ್ಳಿಯ ಈ ಮಾಲೀಕ ಈಗ ಬಿಗ್ಬಾಸ್ ಸೀಸನ್ 12 ರ ಟ್ರೋಫಿ ಒಡೆಯ. ಎಲ್ಲೆಲ್ಲೂ ಗಿಲ್ಲಿ ಗತ್ತು ಗಮ್ಮತ್ತಿನದ್ದೇ ಮಾತುಕಥೆ ನಡೀತಿದೆ. ಬಿಗ್ಬಾಸ್ ಗೆದ್ದ ಖುಷಿ ಸಂಭ್ರಮದ ಕಡಲಲ್ಲಿ ಗಿಲ್ಲಿಗೆ ಮದುವೆಯ ಆಫರ್ ಒಂದು ತೇಲಿ ಬಂದಿದೆ. ಹಾಗಾದ್ರೆ ಗಿಚ್ಚ ಗಿಲಿಗಿಲಿ ಗಿಲ್ಲಿಗೆ ಮ್ಯಾರೇಜ್ ಆಫರ್ ಕೊಟ್ಟ ಆ ಹುಡುಗಿ ಯಾರು? ಬಿಗ್ಬಾಸ್ ಗೆದ್ದ ತಕ್ಷಣ ಗಿಲ್ಲಿ ಮದುವೆಗೆ ಮನೆವ್ರು ರೆಡಿಯಾದ್ರಾ? ಇಲ್ಲಿದೆ ನೋಡಿ ಎಕ್ಸ್‌ಕ್ಲೂಸಿವ್ ಸ್ಟೋರಿ.
ಗಿಲ್ಲಿ ನಟ ಈಗ ಸ್ಟಾರ್. ನಳ್ಳಿ ಮೂಳೆ ಕಥೆಯನ್ನ ಇಟ್ಕೊಂಡು ಸೋಷಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿದ್ದ ಗಿಲ್ಲಿ ತನ್ನ ಸ್ವಂತ ಪ್ರತಿಭೆಯಿಂದಲೇ ಕಿರುತೆರೆಯಲ್ಲಿ ಗುರುತಿಸಿಕೊಂಡ ಹುಡುಗ. ಯಾವ ಗುರು ಶಿಷ್ಯರ ಸಂಬಂಧ ಬೆಳೆಸಿಕೊಳ್ಳದೇ ತನ್ನ ಕಲೆಗೆ ತಾನೇ ಗುರುವಾಗಿ ಕಾಮಿಡಿ ಶೋಗಳನ್ನ ಮಾಡುತ್ತಿದ್ದ ಗಿಲ್ಲಿ ಈಗ ಬಿಗ್ ಬಾಸ್ ಗೆದ್ದು ಗುಲ್ಲೋ ಗುಲ್ಲು ಮಾಡುತ್ತಿದ್ದಾರೆ. ಗಿಲ್ಲಿ ನಟ ಬಿಗ್ಬಾಸ್ ಕಿರೀಟವನ್ನ ಮುಡಿಗರಿಸಿಕೊಂಡಿದ್ದೇ ತಡ. ಮುಂದೇನು ಅಂತ ಕೇಳಿದ್ರೆ ಮ್ಯಾರೇಜ್ ಸ್ಟೋರಿ ಊರಲ್ಲೆಲ್ಲಾ ಬಿಚ್ಚಿಕೊಳ್ತಾ ಇದೆ.
ಯೆಸ್, ಒಂಟಿಮನೆ ವಾರಸ್ದಾರ ಗಿಲ್ಲಿ ಇಟ್ಟ ಗುರಿ ತಲುಪಿದ್ದಾನೆ. ಝೀರೋಯಿಂದ ಬಿಗ್ಬಾಸ್ ಹೀರೋ ಆಗಿರೋ ಗಿಲ್ಲಿ ಬಳಿ ಈಗ ಎಲ್ಲವೂ ಇದೆ. ಹಣ, ಅಂತಸ್ತು, ಗೌರವ, ಪ್ರತಿಭೆ ಒಟ್ಟೊಟ್ಟಿಗೆ ಗಿಲ್ಲಿಯಲ್ಲಿ ತಾಂಡವವಾಡುತ್ತಿದೆ. ಈ ಹಳ್ಳಿ ಹೈದನ ಮದುವೆ ಆದ್ರೆ ಫ್ಯೂಚರ್ ಗಟ್ಟಿ ಇರುತ್ತೆ ಅಂತ ಹಲವು ಆಫರ್ಗಳು ಗಿಲ್ಲಿಯನ್ನ ಹುಡುಕಿ ಹುಡುಕಿ ಬರೋದಕ್ಕೆ ಶುರುವಾಗಿದೆ.
ಗಿಲ್ಲಿ ಗೆಲುವಿನ ಮೆಟ್ಟಿಲು ಏರುತ್ತಿದ್ದಂತೆ ಮಗನ ಮದುವೆ ಬಗ್ಗೆ ಅಪ್ಪ ಅಮ್ಮನಿಗೆ ಚಿಂತೆ ಶುರುವಾಗಿದೆ. ಈ ಹೈದ್ನಿಗೆ ಯಾರನಪ್ಪಾ ಕಟ್ಟೋದು ಅಂತ ಯೋಚ್ನೆ ಮಾಡುತ್ತಿದ್ದಾರೆ ಗಿಲ್ಲಿ ಪೋಷಕರು. ಗಿಲ್ಲಿ ಕಾವ್ಯ ಜೋಡಿ ಕರ್ನಾಟಕದ ಮನೆ ಮಾತಾಗಿದೆ. ಇವರಿಬ್ರು ಒಂದಾದ್ರೆ ಸುಂದರ ಸಂಸಾರ ಆಗುತ್ತೆ ಅನ್ನೋ ಆಸೆ ಗಿಲ್ಲಿ ಫಾಲೋವರ್ಸ್ ಗೆ ಇದೆ. ಹೀಗಾಗೆ ಮಗನ ಮದ್ವೆ ಬಗ್ಗೆ ಮನ ಬಿಚ್ಚಿ ಮಾತಾಡಿರೋ ಗಿಲ್ಲಿ ತಾಯಿ ಸವಿತಮ್ಮ ಅವನು ಇಷ್ಟ ಪಟ್ಟ ಹುಡುಗಿಯನ್ನ ಕಟ್ಟುತ್ತೇವೆ ಎಂದಿದ್ದಾರೆ.
ಗಿಲ್ಲಿನ ಕಾವ್ಯನ ಮದ್ವೆ ಮಾಡ್ಸೇ ಮಾಡುತ್ತೇವೆ ಅಂತ ಫ್ಯಾನ್ಸ್ ಪಣ ತೊಟ್ಟಿದ್ದಾರೆ. ಗಿಲ್ಲಿಗಾಗಿ ಕಾವು ಮನೆಗೆ ಹೋಗಿ ಹೆಣ್ಣು ಕೇಳುತ್ತೇವೆ. ನಾವು ಬನ್ನೂರ್ ಕುರಿ ನಲ್ಲಿ ಮೂಳೆ ಬಾಡೂಟ ಮಾಡೇ ಮಾಡುತ್ತೇವೆ ಅಂತೆಲ್ಲಾ ಮಾತಾಡುತ್ತಿದ್ದಾರೆ. ಆದ್ರೆ ಈ ಬೆಸ್ಟ್ ಪೇರ್ ಮದ್ವೆ ಆಗ್ತಾರಾ.? ಅಥವಾ ಫ್ರೆಂಡ್ಸ್ ಆಗಿ ಇರುತ್ತಾರಾ? ಗೊತ್ತಿಲ್ಲ. ಬಟ್ ಒಟ್ಟಿಗೆ ಸಿನಿಮಾವಂತೂ ಮಾಡುತ್ತಾರೆ ಅನ್ನೋದು ಕನ್ಫರ್ಸ್..
ಗಿಲ್ಲಿ ನಟ ಸಿನಿಮಾ ರಂಗದಲ್ಲಿ ಕಾಮಿಡಿಯನ್ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ. ದರ್ಶನ್‌ರ ಡೆವಿಲ್ ಸಿನಿಮಾ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಗಿಲ್ಲಿ ಬಣ್ಣ ಹಚ್ಚಿದ್ದಾರೆ. ಗಿಲ್ಲಿಯ ಸೂಪರ್ ಹಿಟ್ ಅನ್ನೋ ಕಾಮಿಡಿ ಥ್ರಿಲ್ಲರ್ ಸಿನಿಮಾ ತೆರೆಗೆ ಬರೋದಕ್ಕೆ ರೆಡಿಯಾಗಿದೆ. ಇದರ ಮಧ್ಯೆ ಈ ನಲ್ಲಿ ಮೂಳೆ ಸ್ಟಾರ್ ಹಾಗು ಕಾವು ಸಿನಿಮಾಗೂ ಕತೆಗಳು ರೆಡಿಯಾಗ್ತಿವೆಯಂತೆ..
ಗಿಲ್ಲಿ ಕಾವ್ಯ ಜೊತೆ ಜಂಟಿಯಾಗಿ ಬಿಗ್ಬಾಸ್ ಮನೆ ಒಳಗೆ ಹೋದಾಗ್ಲೆ ಈ ಜೋಡಿ ಸೂಪರ್ ಇದೆ. ಇಬ್ರು ಫಿನಾಲೆಗೆ ಬರ್ತಾರೆ ಅಂತ ಪ್ರೇಕ್ಷಕ ಮಹಾಪ್ರಭು ಇಬ್ಬರ ಹಣೆಬರಹ ಬರೆದಿಟ್ಟಿದ್ದ. ಅದರಂತೆ ಫಿನಾಲೆ ಫೈನಲಿಸ್ಟ್ ಆಗಿ ಕಾವ್ಯ ಗಿಲ್ಲಿ ಬಂದ್ರು. ಅಷ್ಟರಲ್ಲಾಗ್ಲೆ ಈ ಜೋಡಿ ಮದುವೆ ಆಗ್ಲೇ ಬೇಕು ಅಂತ ಹೊರಗಿದ್ದ ಇಬ್ಬರ ಫ್ಯಾನ್ಸ್ ಹೋದಲ್ಲೆಲ್ಲಾ ಸ್ಟೇಟ್ಮೆಂಟ್ ಪಾಸ್ ಮಾಡುತ್ತಿದ್ರು. ಈಗ್ಲೂ ಆದೇ ಆಸೆಯಲ್ಲೇ ಇದ್ದಾರೆ. ಆದ್ರೆ ಇದಕ್ಕೆ ಕಾವ್ಯ ಒಪ್ತಾರಾ? ಗಿಲ್ಲಿ ಆಸೆ ಈಡೇರುತ್ತಾ ಗೊತ್ತಿಲ್ಲ?
ಒಟ್ನಲ್ಲಿ ಗಿಲ್ಲಿ ಈಗ ಸ್ಟಾರ್. ಈ ಸ್ಟಾರ್ನ ಕಟ್ಟಿಕೊಳ್ಳು ಆ ಅದೃಷ್ಟವಂತೆ ಯಾರು ಅನ್ನೋದೇ ಈಗ ನಡೀತಾ ಹಾಟ್ ಟ್ರೆಂಡಿಂಗ್ ಟಾಪಿಕ್ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.