
ಬಿಗ್‌ಬಾಸ್‌ನಲ್ಲಿ ಈ ಬಾರಿ ಒನ್ ಮ್ಯಾನ್ ಶೋ. ಗಿಲ್ಲಿ ನಟನ ದರ್ಬಾರ್ ಎಷ್ಟು ಜೋರಾಗಿದೆ ಎಂದರೆ, ಕಳೆದ ಎರಡು ವಾರಗಳಿಂದ ಇಡೀ ಮನೆ ಅವರ ವಿರುದ್ಧವೇ ತಿರುಗಿಬಿದ್ದಿದೆ. ಆತ್ಮೀಯ ಸ್ನೇಹಿತೆ ಕಾವ್ಯಾಳನ್ನು ನಂಬೋ ಹಾಗಿಲ್ಲ. ಸ್ನೇಹಿತ ಎನಿಸಿಕೊಂಡ ಮ್ಯೂಟಂಟ್ ರಘು ಈಗ ಗಿಲ್ಲಿ ಕಂಡರೆ ವೈಲೆಂಟ್ ಆಗಿರೋದು ಕಾಣ್ತಿದೆ. ಇನ್ನು ವಂಶದ ಕುಡಿ ಅಂದ್ಕೊಂಡು ಹೇಳ್ಕೊಂಡು ತಿರುಗಾಡ್ತಿದ್ದ ರಕ್ಷಿತಾ ಈಗಾಗಲೇ ಎರಡು ಬಾರಿ ಗಿಲ್ಲಿಯನ್ನು ನಾಮಿನೇಟ್ ಮಾಡಿಯಾಗಿದೆ. ಹೀಗಿರುವ ಹೊತ್ತಲ್ಲಿ ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟ ಯಾರನ್ನು ನಂಬೋದು ಅನ್ನೋ ಗೊಂದಲದಲ್ಲಿಯೇ ಇದ್ದಾರೆ.
ಬಿಗ್‌ಬಾಸ್ ಆರಂಭವಾದ ವಾರದಿಂದ ಗಿಲ್ಲಿ-ಕಾವ್ಯಾ ಜೋಡಿ ಫೇವರಿಟ್ ಆಗಿತ್ತು. ಆದರೆ, ಕಾವ್ಯಾ ಮಾತ್ರ ಒಂದು ಹಂತದಲ್ಲಿ ಎಲ್ಲವನ್ನೂ ಸಹಿಸಿಕೊಂಡು ಈಗ ಗಿಲ್ಲಿಯಲ್ಲಿ ಬೇಕಂತಲೆ ಅವಾಯ್ಡ್ ಮಾಡ್ತಾ ಇರೋ ರೀತಿ ಕಾಣ್ತಿದೆ. ಆದರೆ, ಗಿಲ್ಲಿಗೆ ಮಾತ್ರ ಇದ್ಯಾವುದು ಗೊತ್ತಾಗುತ್ತಿಲ್ಲ. ಇಂದಿಗೂ ಕೂಡ ಕಾವ್ಯಾ ತನ್ನ ಸ್ನೇಹಿತೆ ಅಂತಲೇ ಆಟ ಮುಂದುವರಿಸಿದ್ದಾನೆ. ಬದುಕಿನಲ್ಲಿ ಯಾರಿಗೆ ನಾವು ಬೇಡವಾಗುತ್ತೇವೋ ಅವರಿಂದ ದೂರ ಹೋಗಬೇಕು ಎಂದು ಜೀ ಕನ್ನಡ ವೇದಿಕೆಯಲ್ಲಿ ಅವರೇ ಆಡಿದ್ದ ಮಾತನ್ನು ಗಿಲ್ಲಿಗೆ ಅಭಿಮಾನಿಗಳು ಮತ್ತೆ ನೆನಪಿಸಿದ್ದಾರೆ.
ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಯಲ್ಲಿ ಗಗನಾಳನ್ನು ರೇಗಿಸುತ್ತಲೇ ಮಾತನಾಡಿದ್ದ ಗಿಲ್ಲಿ, 'ಲೈಫು ಕಲರ್‌ಫುಲ್ ಆಗಿರಬೇಕು ಅಂದ್ರೆ ಏನ್ ಮಾಡ್ಬೇಕು' ಅಂತಾ ಜಡ್ಜ್‌ಗಳಿಗೆ ಪ್ರಶ್ನೆ ಮಾಡುತ್ತಾರೆ. ಕೊನೆಗೆ ಅದಕ್ಕೆ ಉತ್ತರ ಕೂಡ ನೀಡುವ ಗಿಲ್ಲಿ, 'ಲೈಫ್ ಅನ್ನೋ ವರ್ಡ್‌ನ ಕಲರ್ ಕಲರ್ ಸ್ಕೆಚ್ ಪೆನ್ ಅಲ್ಲಿ ಬರೆಯಬೇಕು' ಅಂತಾ ಹೇಳೋ ಮಾತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ಬಿಗ್‌ಬಾಸ್ ಮನೆಯಲ್ಲಿ ತಮ್ಮ ಆಟವನ್ನು ಕಲರ್ ಕಲರ್ ಮಾಡಿಕೊಳ್ಳುವ ಹಾದಿಯಲ್ಲಿ ಗಿಲ್ಲಿ ನಟನಿಗೆ ಹೆಜ್ಜೆ ಹೆಜ್ಜೆಗೂ ಕಷ್ಟಗಳೇ ಎದುರಾಗುತ್ತಿವೆ.
ಅದೇ ವೇದಿಕೆಯಲ್ಲಿ ಗೆಟ್‌ಲಾಸ್ಟ್ ಎಂದ ಎಂದ ಗಗನಾಗೆ, 'ನೀನು ನನ್ನ ಗೆಟ್‌ಲಾಸ್ಟ್ ಅಂದುಬಿಟ್ಯಾ? ಬ್ಯಾಡ ಬಿಡು ಹೋಗ್ಲಿ. ಅಕ್ಕಾ ನಮ್ ಲೈಫು ಹೆಂಗೆ ಗೊತ್ತಕ್ಕ..'ಬಂದವರಿಗೆ ದಾರಿಕೊಡಿ, ಹೋಗೋರಿಗೆ ದಾರಿಬಿಡಿ..ಅಷ್ಟೇ..ಬಾಯ್' ಎಂದು ಹೇಳಿ ಹೋಗುತ್ತಾರೆ. ಆದ್ರೆ ಅವರು ಹೇಳಿದ್ದ ಇದೇ ಮಾತನ್ನು ಬಿಗ್‌ಬಾಸ್‌ನಲ್ಲಿ ಕಾವ್ಯಾ ವಿಚಾರದಲ್ಲಿ ಮಾಡಲು ವಿಫಲರಾಗಿದ್ದಾರೆ. ಇನ್ನು ವಿಚಾರ ಎಂದರೆ, ಇದೇ ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಯಲ್ಲಿ ಕಾವ್ಯಾ ಕೂಡ ಸ್ಪರ್ಧಿಯಾಗಿದ್ದರು.
ಈ ವಿಡಿಯೋಗೆ ಸಾಕಷ್ಟು ಮಂದು ಕಾಮೆಂಟ್ ಮಾಡಿದ್ದು, ಗಿಲ್ಲಿಯಿಂದಲೇ ಗಗನ ಫೇಮಸ್ ಆಗಿದ್ದು, ಈಗ ಗಿಲ್ಲಿ ಬಗ್ಗೆಯೇ ಒಂದೊಂತರ ಮಾತನಾಡುತ್ತಿದ್ದಾಳೆ ಎಂದು ಬರೆದಿದ್ದಾರೆ. 'ಭಾರ ಇಲ್ಲದ ಮನೆ ಯಾವ್ದು ??? ಲೈಫ್ ಕಲರ್ ಫುಲ್ ಏರಬೇಕಾದ್ರೆ ಏನ್ ಮಾಡ್ಬೇಕು ??? ಸೂಪರ್ ಉತ್ತರ ಹಾಸ್ಯ ಭರಿತ ಸಕ್ಕತ್ ಇಷ್ಟ ವಾದದು ನೈಸ್ ಗಿಲ್ಲಿ.ನಟ ಬ್ರದರ್' ಎಂದು ಮತ್ತೊಬ್ಬರು ಬರೆದಿದ್ದಾರೆ. 'ಗಿಲ್ಲೀ.. ಗಿಲ್ಲೀ.. ನಿನ್ನ ಹೆಸರು ಕಿವಿಗೆ ಬೀಳದ ದಿನಗಳೇ ಇಲ್ಲವಾಗ್ತಿವೆಯಲ್ಲಾ..' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.