ಮೋಹಿನಿ ಥರ ಓಡಾಡ್ತಿರೋ ಮೋಹನ್​ನ ಹಿಡಿದು ನಿಲ್ಲಿಸ್ತೀರಾ? ಗಿಚ್ಚಿ ಗಿಲಿಗಿಲಿಯಿಂದ ನಿಮಗಿದೋ ಚಾಲೆಂಜ್​!

By Suvarna News  |  First Published Mar 17, 2024, 4:07 PM IST

ಕಲರ್ಸ್​ ಕನ್ನಡ ವಾಹಿನಿಯ ಗಿಚ್ಚಿ ಗಿಲಿಗಿಲಿ ಮೋಹನ್​ರನ್ನು ನೆರಳಿನ ಮೇಲೆ ನಿಲ್ಲಿಸುವುದು ನಿಮ್ಮ ಕೆಲಸ. ಟ್ರೈ ಮಾಡುವಿರಾ? 
 


ಕಲರ್ಸ್​ ಕನ್ನಡ ಚಾನೆಲ್​ನಲ್ಲಿ ಎಲ್ಲರನ್ನೂ ನಕ್ಕು ನಗಿಸುತ್ತಿರುವ ಗಿಚ್ಚಿ ಗಿಲಿಗಿಲಿ 3ನೇ ಸೀಸನ್​ ಕಳೆದ ಫೆಬ್ರುವರಿ 3ರಿಂದ ಆರಂಭವಾಗಿದ್ದು, ವಾರಾಂತ್ಯದಲ್ಲಿ ಜನರನ್ನು ನಕ್ಕಿ ನಗಿಸುತ್ತಿದ್ದಾರೆ ಕಲಾವಿದರು. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ, ಹಲವಾರು ಕಲಾವಿದರು ಜನರನ್ನು ಮೋಡಿಗೊಳಿಸುತ್ತಿದ್ದಾರೆ.  ನಟಿ ಶ್ರುತಿ ಹಾಗೂ ಹಾಸ್ಯನಟ ಸಾಧು ಕೋಕಿಲ  ಕಾಮಿಡಿ ನಟ ಕೋಮಲ್ ತೀರ್ಪುಗಾರರಾಗುವ ಮೂಲಕ ಈ ಷೋಗೆ ಇನ್ನಷ್ಟು ಕಳೆ ಕಟ್ಟಿದ್ದಾರೆ. ಈ ಷೋ ಮೂಲಕ  ಸಾಕಷ್ಟು ಪ್ರತಿಭೆಗಳು ಚಿತ್ರರಂಗಕ್ಕೆ ಸಿಕ್ಕಿದ್ದಾರೆ ಎನ್ನುವುದು ವಿಶೇಷ.  

ಇದೀಗ ಕಲರ್ಸ್​ ಕನ್ನಡ ವಾಹಿನಿ ವಿಡಿಯೋ ಒಂದನ್ನು ಶೇರ್​ ಮಾಡಿದೆ. ಇಲ್ಲಿ ನೀವು ಮಾಡಬೇಕಿರುವುದು ಇಷ್ಟೇ. ಇಲ್ಲಿ ವಿಡಿಯೋ ಒಂದನ್ನು ಶೇರ್​ ಮಾಡಲಾಗಿದೆ. ಅದರಲ್ಲಿ ಮೋಹಿನಿಯಂತೆ ತಿರುಗಾಡುತ್ತಿರುವ ಮೋಹನ್​ ಅವರನ್ನು ಇಲ್ಲಿ ಕಾಣಿಸುತ್ತಿರುವ ನೆರಳಿನ ಚಿತ್ರದ ಮೇಲೆ ಸರಿಯಾಗಿ ಇರಿಸುವುದು ನಿಮಗಿರುವ ಚಾಲೆಂಜ್​. ನೀವು ಈ ಚಾಲೆಂಜ್​ನಲ್ಲಿ ಸಕ್ಸಸ್​ ಆದರೆ ಅದರ ಸ್ಕ್ರೀನ್​ಷಾಟ್​ ಅನ್ನು ಕಳುಹಿಸುವಂತೆ ಕಲರ್ಸ್​ ಕನ್ನಡ ವಾಹಿನಿ ಕೇಳಿಕೊಂಡಿದೆ. ಇದಾಗಲೇ ನೂರಾರು ಮಂದಿ ಟ್ರೈ ಮಾಡಿದ್ದು ಹಲವರು ಸಕ್ಸಸ್​ ಕೂಡ ಆಗಿದ್ದಾರೆ. ಇಲ್ಲಿರುವ ವಿಡಿಯೋ ನೋಡಿ ನೀವೂ ಟ್ರೈ ಮಾಡ್ಬೋದಾ ಎಂದು ವಾಹಿನಿ ಪ್ರಶ್ನಿಸಿದೆ.

Tap to resize

Latest Videos

undefined

ಅಂಕಲ್​ನ ಮದ್ವೆಯಾಗಲು ಇಷ್ಟೆಲ್ಲಾ ಕಷ್ಟ ಯಾಕ್​ ಚಿನ್ನಾ, ನಾನು ಮದ್ವೆಯಾಗ್ತೀನಿ ಬಾ ಎನ್ನೋದಾ ಫ್ಯಾನ್ಸ್​!

ಇನ್ನು ಗಿಚ್ಚಿ ಗಿಲಿಗಿಲಿ ಕುರಿತು ಹೇಳುವುದಾದರೆ, ಜನಪ್ರಿಯ ಕಾಮಿಡಿಯನ್‌ಗಳಾದ ಹುಲಿ ಕಾರ್ತಿಕ್‌, ಶಿವು, ಚಿಲ್ಲರ್‌ ಮಂಜು, ಚಂದ್ರಪ್ರಭಾ, ಮಾನಸ, ಪ್ರಶಾಂತ್‌, ನಂದೀಶ್‌ ಮಡಿವಾಳ ಎಂದಿನಂತೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ.  'ಕನ್ನಡ ಕೋಗಿಲೆ' ಸಂಗೀತ ಕಾಯಕ್ರಮದಲ್ಲಿ ಜನಪ್ರಿಯರಾಗಿದ್ದ ಹಾಡುಗಾರ ಕರಿಬಸವ, 'ನನ್ನಮ್ಮ ಸೂಪರ್‌ಸ್ಟಾರ್‌' ನ ಪುನೀತಾ, 'ಮಜಾ ಟಾಕೀಸ್‌'ನ ಮೋಹನ್‌, ದೀಕ್ಷಾ, ಖುಷಿ, ಮಧುಮತಿ- ಹೀಗೆ ಮಜರಂಜನೆಯ ರಸದೌತಣ ನೀಡುವಂಥಾ ತಂಡವೇ ಇಲ್ಲಿ ಎಲ್ಲರಿಗೂ ರಸದೌತಣ ಉಣಬಡಿಸುತ್ತಿದೆ.
 
‌ಈ ಬಾರಿಯ ಬಿಗ್‌ಬಾಸ್‌ನ ಹೈಲೈಟ್‌ಗಳಲ್ಲಿ ಒಬ್ಬರಾಗಿದ್ದ ಕಾಮಿಡಿಯನ್‌ ತುಕಾಲಿ ಸಂತೋಷ್‌ ತಮ್ಮ ಪತ್ನಿ ಮಾನಸ ಅವರೊಂದಿಗೆ ಸೇರಿ ಗಿಚ್ಚಿ ಗಿಲಿಗಿಲಿಯಲ್ಲಿ ಕಾಮಿಡಿ ಮಾಡುತ್ತಿದ್ದಾರೆ.  ಜೊತೆಗೆ ಬಿಗ್‌ಬಾಸ್‌ ಸೀಸನ್‌ ಎಂಟರ ವಿಜೇತ, ಮಜಾಭಾರತ, ಕಾಮಿಡಿ ಟಾಕೀಸ್‌ ಮುಂತಾದ ಕಾಯಕ್ರಮಗಳ ಮೂಲಕ ಮಿಂಚಿರುವ ಮಂಜು ಪಾವಗಡ ಒಂದೆರಡು ವರ್ಷಗಳ ಬ್ರೇಕ್‌ನ ನಂತರ ಗಿಚ್ಚಿಗಿಲಿಗಿಲಿಗೆ ಮರಳಿದ್ದಾರೆ. ಬಿಗ್‌ಬಾಸ್ ಸೀಸನ್‌ ಒಂಬತ್ತರಲ್ಲಿ ರಂಜಿಸಿದ್ದ  ಮಜಾಭಾರತ ಮತ್ತು ಗಿಚ್ಚಿಗಿಲಿ ಕಲಾವಿದ ವಿನೋದ್‌ ಗೊಬ್ಬರಗಾಲ ಕೂಡ ಸಕತ್​ ಕಾಮಿಡಿ ಮಾಡುತ್ತಿದ್ದಾರೆ. ಈ ಬಾರಿಯ ಹೈಲೈಟ್​ ಆಗಿರುವ ಬಿಗ್​ಬಾಸ್​ನ ಡ್ರೋನ್​ ಪ್ರತಾಪ್​.  ಇದಾಗಲೇ ಹಲವಾರು ಭಾಗಗಳಲ್ಲಿ ಇವರು ಕಾಣಿಸಿಕೊಂಡಿದ್ದಾರೆ. 

ಸೈಫ್​ ಪುತ್ರಿ ಸಾರಾ ಹೊಟ್ಟೆಯ ಮೇಲೆ ಸುಟ್ಟಗಾಯ! ಎದೆಗುಂದದೇ ಮಾರ್ಜಾಲ ನಡಿಗೆ ಮಾಡಿದ ನಟಿಗೆ ಜೈಜೈಕಾರ...

click me!