ಗಂಡುಬೀರಿಯಿಂದ ಗೃಹಿಣಿ... ಇನ್ಮುಂದೆ ಇನ್ಸ್​ಪೆಕ್ಟರ್​... ಸತ್ಯ ಬದುಕಿನ ಹೊಸ ಅಧ್ಯಾಯ- ಹೀಗಿದೆ ಲುಕ್​!

Published : Mar 17, 2024, 11:42 AM ISTUpdated : Mar 17, 2024, 11:43 AM IST
ಗಂಡುಬೀರಿಯಿಂದ ಗೃಹಿಣಿ... ಇನ್ಮುಂದೆ ಇನ್ಸ್​ಪೆಕ್ಟರ್​... ಸತ್ಯ ಬದುಕಿನ ಹೊಸ ಅಧ್ಯಾಯ- ಹೀಗಿದೆ ಲುಕ್​!

ಸಾರಾಂಶ

ಎಲ್ಲಾ ಅಡೆತಡೆಗಳನ್ನು ದಾಟಿ ಸತ್ಯ ಪೊಲೀಸ್​ ಇನ್ಸ್​ಪೆಕ್ಟರ್​ ಆಗಿದ್ದು, ಅದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಹೀಗಿದೆ ನೋಡಿ ಹೊಸ ಲುಕ್​...  

ಎಲ್ಲಾ ಅಡೆತಡೆಗಳನ್ನು ಎದುರಿಸಿ ಸತ್ಯ ಪೊಲೀಸ್​ ಅಧಿಕಾರಿಯಾಗುತ್ತಿದ್ದಾಳೆ. ಈಕೆ ಪೊಲೀಸ್​ ಪರೀಕ್ಷೆ ಬರೆದು ಪಾಸಾದರೂ ಅತ್ತ ಸೀತಮ್ಮನಿಗೆ ಯಾಕೋ ಪೊಲೀಸ್​​ ಕೆಲಸಕ್ಕೆ ಸೊಸೆಯನ್ನು ಸೇರಿಸುವ ಮನಸ್ಸು ಇಲ್ಲ. ಆದರೂ ಎಲ್ಲರನ್ನೂ ಒಪ್ಪಿಸಿ ಸತ್ಯ ಇದನ್ನು ಚಾಲೆಂಜ್​ ಆಗಿ ತೆಗೆದುಕೊಂಡಿದ್ದಳು. ತನ್ನ ತಂದೆಗೆ ಕೊಟ್ಟ ಮಾತನ್ನು ಉಳಿಸಿಕೊಂಡು ಪೊಲೀಸ್​ ಅಧಿಕಾರಿಯಾಗುವ ಪಣ ತೊಟ್ಟಿದ್ದಳು. ಬದುಕಿನಲ್ಲಿ ಹಲವಾರು ಏಳು ಬೀಳು ಕಂಡಿದ್ದ ಸತ್ಯ, ಪೊಲೀಸ್​ ಅಧಿಕಾರಿಯಾಗುವ ಕನಸು ಹೊತ್ತು ತರಬೇತಿಗೆ ಸೇರಿದಾಗಲೂ ಕೀರ್ತನಾಳ ಕಿರಿಕ್​ನಿಂದ ಪಟ್ಟ ಹಿಂಸೆ ಅಷ್ಟಿಷ್ಟಲ್ಲ. ಆದರೂ ಎಲ್ಲವನ್ನೂ ಎದುರಿಸಿ ನಿಂತಿದ್ದಾಳೆ. ಅಪ್ಪನ ಕನಸನ್ನು ನನಸು ಮಾಡಲು ರೆಡಿಯಾಗಿದ್ದಾಳೆ. ಈಗ ಸತ್ಯಳ ಬದುಕಿನ ಎರಡನೆಯ ಅಧ್ಯಾಯ ಶುರುವಾಗುತ್ತಿದೆ. ಗಂಡುಬೀರಿಯಿಂದ ಗೃಹಿಣಿ... ಈಗ ಪೊಲೀಸ್​ ಅಧಿಕಾರಿಯಾಗಿ ಇನ್ಸ್​ಪೆಕ್ಟರ್​ ಆಗಿ ಸತ್ಯ ಮಿಂಚುತ್ತಿದ್ದಾಳೆ. ಅದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ.

ಸತ್ಯಳ ಬದುಕಿನ ಇನ್ನೊಂದು ಅಧ್ಯಾಯ... ಇದೀಗ ಇನ್ಸ್​ಪೆಕ್ಟರ್​ ಸತ್ಯ ಎಂದು ಈ ಪ್ರೊಮೋದಲ್ಲಿ ತೋರಿಸಲಾಗಿದೆ. ಇದಾಗಲೇ ಕೆಲವು ದಿನಗಳ ಹಿಂದೆ ಸತ್ಯ ಪೊಲೀಸ್​ ಇನ್ಸ್​ಪೆಕ್ಟರ್​ ಆಗಿ ನಟಿಸಲು ಸಾಕಷ್ಟು ಶ್ರಮ ವಹಿಸಿದ್ದ ಪ್ರೊಮೋ ಬಿಡುಗಡೆಯಾಗಿತ್ತು. ತೆರೆಯ ಮೇಲೆ ಒಂದು ದೃಶ್ಯವನ್ನು ತೋರಿಸುವಾಗ ಅದರ ಹಿಂದೆ ನಟ-ನಟಿಯರು ಎಷ್ಟೆಲ್ಲಾ ಸರ್ಕಸ್​ ಮಾಡಿರುತ್ತಾರೆ. ಎಷ್ಟೋ ಸಂದರ್ಭದಲ್ಲಿ ಜೀವಕ್ಕೆ ಅಪಾಯ ತಂದುಕೊಂಡಿರುವ ಉದಾಹರಣೆಗಳೂ ಸಾಕಷ್ಟು ಇವೆ. ಅದರಲ್ಲಿಯೂ ಆ್ಯಕ್ಷನ್​ ದೃಶ್ಯಗಳನ್ನು ಮಾಡುವಾಗ ನಟ-ನಟಿಯರಿಗೆ ಗಂಭೀರ ಸ್ವರೂಪದ ಗಾಯಗಳಾಗುವ ಸುದ್ದಿಗಳೂ ಆಗ್ಗಾಗ್ಗೆ ಬರುತ್ತಲೇ ಇರುತ್ತವೆ. ಆದರೆ ಒಂದು ಚಿತ್ರ ಯಶಸ್ಸು ಆಗಬೇಕಾದರೆ ನಟರು ಇವೆಲ್ಲಾ ಮಾಡುವುದು ಅನಿವಾರ್ಯವೇ. ಇಷ್ಟು ಮಾಡಿದ ಮೇಲೂ ಚಿತ್ರ ಯಶಸ್ವಿ ಆಗಿಯೇ ಆಗುತ್ತದೆ ಎಂದೂ ಹೇಳುವುದು ಕಷ್ಟ. ಇದು ಸಿನಿಮಾದ ಮಾತಾದರೆ, ಇಂದು ಸೀರಿಯಲ್​ಗಳೂ ಯಾವ ಸಿನಿಮಾಕ್ಕೂ ಕಮ್ಮಿ ಏನಿಲ್ಲ. ಸಿನಿಮಾಗಳ ಮಾದರಿಯಲ್ಲಿಯೇ ದೃಶ್ಯಗಳ ಶೂಟಿಂಗ್​ ನಡೆಯುತ್ತದೆ.

ಸತ್ಯ ಸೀರಿಯಲ್​ನಲ್ಲಿ ಪೊಲೀಸ್​ ಪಾತ್ರಕ್ಕೆ ಇಷ್ಟು ಕಷ್ಟಪಟ್ಟಿದ್ದಾರಾ ನಟಿ? ತೆರೆಯ ಹಿಂದಿನ ವಿಡಿಯೋ ರಿಲೀಸ್​

ಅದೇ ರೀತಿ ಇನ್ಸ್​ಪೆಕ್ಟರ್​ ಆಗಲು ಹೊರಟಿದ್ದ ಸತ್ಯ ನಿಜಕ್ಕೂ ಪೊಲೀಸ್​  ಟ್ರೇನಿಂಗ್​ ಪಡೆದಿದ್ದು,  ಇದರ  ಚಿತ್ರೀಕರಣವನ್ನು ಯಾವ ರೀತಿಯಲ್ಲಿ ಮಾಡಲಾಗಿದೆ ಎಂಬ ಬಗ್ಗೆ ಈ ವಿಡಿಯೋದಲ್ಲಿ ಶೇರ್​ ಮಾಡಲಾಗಿತ್ತು. ಇದು ಸೀರಿಯಲ್​ ಆದರೂ ನಿಜವಾದ ಪೊಲೀಸ್​ ಟ್ರೇನಿಂಗ್​ ರೀತಿಯಲ್ಲಿ ಸತ್ಯಳಿಗೆ ತರಬೇತಿ ನೀಡಲಾಗಿದೆ. ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಶೇರ್​ ಮಾಡಿದ್ದು, ಫ್ಯಾನ್ಸ್​ ಅಚ್ಚರಿಗೊಂಡಿದ್ದರು. ಒಂದು ಸೀರಿಯಲ್​ಗೂ ಇಷ್ಟೆಲ್ಲಾ ಕಷ್ಟಪಡಬೇಕಾ? ತಮ್ಮ ಪಾತ್ರಕ್ಕೆ ಜೀವ ತುಂಬಲು ಇಷ್ಟೊಂದು ಶ್ರಮ ವಹಿಸಬೇಕಾ ಎಂದು ಕೇಳಿದ್ದರು. 

ಅಂದಹಾಗೆ, ಸತ್ಯ ಸೀರಿಯಲ್​ನಲ್ಲಿ ಸತ್ಯಾ ಆಗಿ ನಟಿಸುತ್ತಿರುವ ನಟಿಯ ನಿಜವಾದ ಹೆಸರು ಗೌತಮಿ ಜಾಧವ್. ಗೌತಮಿ ಜಾಧವ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಜೀ ಕನ್ನಡದ ಸತ್ಯ ಧಾರಾವಾಹಿಯ ಟಾಮ್ ಬಾಯ್ ಪಾತ್ರದ ಮೂಲಕ ಗೌತಮಿ ಕರ್ನಾಟಕದ ಮನೆಮಾತಾಗಿದ್ದಾರೆ.  ಬೆಂಗಳೂರಿನಲ್ಲಿ 1993 ಆಗಸ್ಟ್ 22 ರಂದು ಜನಿಸಿದ ಗೌತಮಿ ಅವರು, ಕನ್ನಡದ ಖ್ಯಾತ ಸಿನಿಮಾ ಛಾಯಾಗ್ರಾಹಕ ಅಭಿಷೇಕ್ ಕಾಸರಗೋಡ್ ಅವರನ್ನು ವಿವಾಹವಾಗಿದ್ದಾರೆ. ಗೌತಮಿ ನಟಿಸಿದ ಮೊದಲ ಚಿತ್ರ 2018 ರಲ್ಲಿ ತೆರೆಕಂಡ ಕಿನಾರೆ. ನಂತರ ಆದ್ಯ ಚಿತ್ರದಲ್ಲಿ ನಟಿಸಿದ್ದಾರೆ. ಕೆಲ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ.

ಇದೇ 20ರಂದು ಉರ್ಫಿಯಿಂದ ಎಲ್ಲರಿಗೂ ಭರ್ಜರಿ ಉಡುಗೊರೆ! ವಿಡಿಯೋ ವೈರಲ್​- ಬಿಸಿಬಿಸಿ ಚರ್ಚೆ ಶುರು!


PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?