
ಭಾಗ್ಯ ಮತ್ತು ತಾಂಡವ್ ಅವರ ಮದುವೆಯ ವಾರ್ಷಿಕೋತ್ಸವವನ್ನು ಮಕ್ಕಳು ಅದ್ಧೂರಿಯಾಗಿ ಮಾಡುತ್ತಿದ್ದಾರೆ. ಹೇಗಾದರೂ ಮಾಡಿ ಅಪ್ಪ-ಅಮ್ಮನನ್ನು ಒಂದು ಮಾಡಬೇಕು ಅಂದುಕೊಂಡಿರೋ ಮಗ ಗುಂಡ ಮತ್ತು ಮಗಳು ತನ್ವಿ ಅದ್ಧೂರಿಯಾಗಿ ಮಾಡಲು ರೆಡಿ ಮಾಡಿಕೊಂಡಿದ್ದಾರೆ. ತಾಂಡವ್ಗೋ ಧರ್ಮ ಸಂಕಟ. ಅತ್ತ ಶ್ರೇಷ್ಠಾಳನ್ನು ಬಿಡುವ ಹಾಗಿಲ್ಲ. ಇತ್ತ ಮಕ್ಕಳಿಗಾಗಿ ಪತ್ನಿ ಭಾಗ್ಯಳನ್ನು ದೂರ ಮಾಡುವಂತಿಲ್ಲ. ಒಲ್ಲದ ಮನಸ್ಸಿನಿಂದ ತಾಂಡವ್ ಮಕ್ಕಳಿಗಾಗಿ ವಾರ್ಷಿಕೋತ್ಸವಕ್ಕೆ ಒಪ್ಪಿಕೊಂಡಿದ್ದಾನೆ. ಮಕ್ಕಳ ಖುಷಿಗೆ ಇದು ಅವನಿಗೆ ಅನಿವಾರ್ಯ ಕೂಡ. ಅವನ ಒಲ್ಲದ ಮನಸ್ಸು ಭಾಗ್ಯಳಿಗೂ ತಿಳಿಯದ್ದು ಏನಲ್ಲ. ಆದರೂ ಅವಳೂ ಮಕ್ಕಳ ಖುಷಿಗಾಗಿ ಎಲ್ಲವೂ ಸರಿಯಾಗಿದೆ ಎನ್ನುವಂತೆ ಆ್ಯಕ್ಟ್ ಮಾಡುತ್ತಿದ್ದಾಳೆ.
ಎಲ್ಲರೂ ಖುಷಿಯಾಗಿರುವುದನ್ನು ನೋಡಿದ ಭಾಗ್ಯಳ ಅಮ್ಮ, ಈ ಖುಷಿಗೆ ಯಾರ ಕಣ್ಣೂ ಬೀಳದಿರಲಿಲ್ಲ ಎನ್ನುತ್ತಿದ್ದಂತೆಯೇ ಶ್ರೇಷ್ಠಾಳ ಎಂಟ್ರಿಯಾಗಿದೆ. ಮದುವೆ ವಾರ್ಷಿಕೋತ್ಸವಕ್ಕೆಂದು ಮನೆಯಲ್ಲಿ ಹಾಕಿರೋ ಹೂವಿನ ಹಾರ ಅಪಶಕುನದಂತೆ ಬಿದ್ದು ಹೋಗಿದೆ. ಅಷ್ಟಕ್ಕೂ ಅದೇನು ತಾನಾಗಿಯೇ ಬಿದ್ದು ಹೋಗಲಿಲ್ಲ. ತೋರಣ ನೋಡಿ ಉರಿದುಕೊಂಡಿರುವ ಶ್ರೇಷ್ಠಾ, ಹೂವಿನ ತೋರಣವನ್ನು ಕಿತ್ತು ಹಾಕಿದ್ದಾಳೆ. ಇದನ್ನು ಆರಂಭದಲ್ಲಿ ನೋಡಿದ ಭಾಗ್ಯಳ ಅಮ್ಮ ಸುನಂದಾಗೆ ಶಾಕ್ ಆಗಿದೆ. ಶ್ರೇಷ್ಠಾ ಮತ್ತು ತಾಂಡವ್ ಮದುವೆಯಾಗಲಿದ್ದಾರೆ ಎನ್ನುವ ಸತ್ಯ ತಿಳಿಯದಿದ್ದರೂ ಇಬ್ಬರ ನಡುವೆ ಏನೋ ಆಗುತ್ತಿದೆ, ಶ್ರೇಷ್ಠಾಳಿಂದ ತನ್ನ ಮಗಳ ಬದುಕು ಹಾಳಾಗುತ್ತಿದೆ ಎನ್ನುವ ಸತ್ಯ ಅವಳಿಗೆ ಗೊತ್ತು. ಇದೇ ಕಾರಣಕ್ಕೆ, ಕೋಪದಿಂದ ಅವಳು ಶ್ರೇಷ್ಠಾಳಿಗೆ ಬೈದಿದ್ದಾಳೆ. ನಾವು ಇಷ್ಟೊಂದು ತಯಾರಿ ನಡೆಸಿದ್ದೇವೆ ಆದರೆ ಹಾಳು ಮಾಡಿದ್ದದೇಕೆ ನೀನು ನಮ್ಮ ಮನೆಗೆ ಮತ್ತೆ ಬಂದೆ ಏಕೆ ಎಂದೆಲ್ಲಾ ಬೈದಿದ್ದಾಳೆ.
ಬೆಂಗಳೂರಿನಲ್ಲಿಯೇ ನಟಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೆರಿಗೆ? ಏನಿದು ಹೊಸ ವಿಷ್ಯ?
ಇನ್ನು ಕುಸುಮಾ ಸುಮ್ಮನೇ ಇರ್ತಾಳಾ? ಅವಳಿಗೆ ಶ್ರೇಷ್ಠಾಳ ಕಂತ್ರಿ ಬುದ್ಧಿ ಗೊತ್ತು. ಅದೇ ಕಾರಣಕ್ಕೆ, ಒಂದು ಕೈಯಲ್ಲಿ ಹೂವಿನ ಬುಟ್ಟಿ ಇನ್ನೊಂದರಲ್ಲಿ ಮಾವಿನ ಎಲೆ ತಂದಿದ್ದಾಳೆ. ಅದನ್ನು ಶ್ರೇಷ್ಠಾಳಿಗೆ ತೋರಿಸುತ್ತಾ, ಏನ್ ನೋಡ್ತಾ ಇದ್ದೀಯಾ? ನೀನು ಒಳಗಡೆ ಬರುವ ಹಾಗೆ ಇಲ್ಲ. ನನ್ನ ಕೈಯಲ್ಲಿ ಇದೆಯಲ್ಲ ಈ ಹೂವುಗಳಿಂದ ಹಾರ ಮಾಡಬೇಕು, ಇನ್ನೊಂದು ಕೈಯಲ್ಲಿ ಇರುವ ಮಾವಿನ ಎಲೆಗಳಿಂದ ತೋರಣ ಮಾಡಬೇಕು. ಇಷ್ಟೆಲ್ಲ ಕೆಲಸವನ್ನು ಚಪ್ಪಲಿ ತೆಗೆದೇ ಮಾಡಬೇಕು. ಇಷ್ಟು ಮಾಡಿ ಆದ ಮೇಲೆ ಒಳಗೆ ಬರಬೇಕು. ಇಲ್ಲದಿದ್ದರೆ ಇಲ್ಲ ಎಂದಿದ್ದಾಳೆ. ಇಲ್ಲಾಂದ್ರೆ ಹಾಗೆ ವಾಪಸ್ ಹೋಗ್ತಾ ಇರು ಎಂದಿದ್ದಾಳೆ.
ಇದನ್ನು ಕೇಳಿ ಶ್ರೇಷ್ಠಾಳಿಗೆ ತಲೆ ತಿರುಗಿದಂತೆ ಆಗಿದೆ. ಆದರೂ ಸಹಿಸಿಕೊಳ್ಳದೇ ವಿಧಿಯಿಲ್ಲ. ಒಳಗೆ ತನ್ನ ಪ್ರಿಯಕರ ಪತ್ನಿ, ಮಕ್ಕಳ ಜೊತೆ ಇರುವಾಗ ಇನ್ನು ತನ್ನ ಬೇಳೆ ಬೇಯುವುದಿಲ್ಲ ಎನ್ನುವುದು ಈಕೆಗೆ ಗೊತ್ತು. ಕಾವಲಿಗೆ ಬೇರೆ ಇರೋದು ಸಾಮಾನ್ಯಳಲ್ಲ, ಖುದ್ದು ಕುಸುಮಾ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಭಾಗ್ಯಲಕ್ಷ್ಮಿ ಅಭಿಮಾನಿಗಳು ಶ್ರೇಷ್ಠಾಳ ಪರ ನಿಂತಿದ್ದಾರೆ! ನಿನ್ನ ಮುಖ ನೋಡಲು ಆಗಲ್ಲ ಕಣೆ. ನೀನೆಷ್ಟು ಮುದ್ದಾಗಿ ಇದ್ಯಾ? ನಿನಗೆ ಆ ಇಬ್ಬರು ಮಕ್ಕಳ ಅಪ್ಪ ಯಾಕೆ ಬೇಕು ಎನ್ನುತ್ತಿದ್ದಾರೆ. ಅಂಕಲ್ ಸಹವಾಸ ಬಿಡು, ನಾನು ಮದ್ವೆಯಾಗ್ತೇನೆ ಬಾ ಎಂದು ಅಭಿಮಾನಿಯೊಬ್ಬ ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಕುಸುಮಾಗೆ ಭೇಷ್ ಭೇಷ್ ಎನ್ನುತ್ತಿದ್ದರೆ, ಶ್ರೇಷ್ಠಾಳಿಗೆ ಸರಿಯಾಗಿ ಆಯ್ತು ಎನ್ನುತ್ತಿದ್ದಾರೆ. ಮತ್ತೆ ಕೆಲವರು ತಾಂಡವ್ಗೆ ಮುಂದೆ ಇದೆ ಮಾರಿ ಹಬ್ಬ ಎನ್ನುತ್ತಿದ್ದಾರೆ.
ಪುನೀತ್ ರಾಜ್ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿದ ಬಿಗ್ಬಾಸ್ ನಮ್ರತಾ ಗೌಡ: ಶ್ಲಾಘನೆಗಳ ಮಹಾಪೂರ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.