ಅಮ್ಮಮ್ಮನ ಕಾಫಿ ಅಂಗಡಿ ರೆಡಿ ಆಯ್ತು! ಕನ್ನಡತಿ ಕೊನೆ ಹೇಗಿರುತ್ತೆ?

Published : Jan 30, 2023, 01:07 PM IST
ಅಮ್ಮಮ್ಮನ ಕಾಫಿ ಅಂಗಡಿ ರೆಡಿ ಆಯ್ತು! ಕನ್ನಡತಿ ಕೊನೆ ಹೇಗಿರುತ್ತೆ?

ಸಾರಾಂಶ

ಕನ್ನಡತಿ ಸೀರಿಯಲ್‌ನ ಕೊನೆಯ ಎಪಿಸೋಡ್ ಈ ವಾರ ಪ್ರಸಾರವಾಗಲಿದೆ. ಸದ್ಯಕ್ಕೀಗ ಹರ್ಷ ತನ್ನದೇ ಸ್ಟೈಲಲ್ಲಿ ಅಪ್ಪಟ ದೇಸಿ ಶೈಲಿಯಲ್ಲಿ ಅಮ್ಮಮ್ಮನ ಕಾಫಿ ಅಂಗಡಿ ರೆಡಿ ಮಾಡಿದ್ದಾನೆ. ಆದರೆ ಈ ನಡುವೆ ದೊಡ್ಡ ವಿಘ್ನ ಎದುರಾಗಿದೆ. ಇನ್ನೊಂದೆಡೆ ಕನ್ನಡತಿ ಕೊನೆ ಹೇಗಿರಬಹುದು ಅನ್ನೋ ಕುತೂಹಲವೂ ಹೆಚ್ಚಾಗಿದೆ.

ಕನ್ನಡತಿ ಸೀರಿಯಲ್‌ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದೆ. ಒಂದು ಬೇಸರದ ಸಂಗತಿ ಅಂದರೆ ಈ ಸೀರಿಯಲ್‌ ಇದೇ ವಾರ ಮುಕ್ತಾಯವಾಗಲಿದೆ. ಸಾಕಷ್ಟು ಜನಪ್ರಿಯತೆ ಪಡೆದ ಈ ಸೀರಿಯಲ್‌ ಇದೀಗ ಕೊನೆಯ ಹಂತ ತಲುಪಿದ್ದು ಕೊನೆ ಏನಾಗಲಿದೆಯೋ ಅನ್ನೋ ಕುತೂಹಲ ಎಲ್ಲರಲ್ಲಿದೆ. ಇದೀಗ ಮತ್ತೊಂದು ಟ್ವಿಸ್ಟ್ ಕೊನೆಯಲ್ಲಿ ಬರುತ್ತಿದೆ. ಇದು ಮತ್ತೆ ಯಾವ ತಿರುವು ಪಡೆದುಕೊಳ್ಳಲಿದೆಯೋ ಅನ್ನೋ ಕುತೂಹಲವಿದೆ. ಒಂದು ಕಡೆ ಹಣದ ಬ್ಯಾಗ್ ಜೊತೆಗೆ ಬರಬೇಕಾದ ಸಾನ್ಯಾ ಪತ್ತೆ ಇಲ್ಲ. ಅವಳ ಮೇಲೆ ನಂಬಿಕೆ ಇಟ್ಟ ಭುವಿಯ ನಂಬಿಕೆ ಹುಸಿಯಾಗುವಂಥ ಬೆಳವಣಿಗೆಗಳು ನಡೆಯುತ್ತವೆ. ಇನ್ನೊಂದೆಡೆ ಅಮ್ಮಮ್ಮನಿಗಾಗಿ ಹರ್ಷ 'ಅಮ್ಮಮ್ಮನ ಕಾಫಿ ಅಂಗಡಿ' ಅನ್ನೋ ಅಚ್ಚಗನ್ನಡದ ದೇಸಿ ಮಾದರಿಯ ರೆಸ್ಟೊರೆಂಟ್‌ ಭವ್ಯವಾಗಿ ತಲೆ ಎತ್ತಿದೆ. ಅದನ್ನು ನೋಡುವ ಕನಸಿನೊಂದಿಗೆ ಬಂದ ಭುವಿ ಮತ್ತು ಮನೆಯವರಿಗೆ ನಂಬಿಕೆ ಹುಸಿಯಾಗುವಂಥಾ ಸಂಗತಿ ನಡೆಯುವ ಲಕ್ಷಣ ಕಾಣುತ್ತಿದೆ.

ಕಾಫಿ ಶಾಪ್‍ನ್ನು ಕನ್ನಡದಲ್ಲಿ ತೆರೆಯಬೇಕು ಎಂಬುದು ಭುವಿ ಮತ್ತು ಅಮ್ಮಮ್ಮನ ಆಸೆಯಾಗಿತ್ತು. ಆದ್ರೆ ಹರ್ಷನಿಗೆ ಇಷ್ಟ ಇರಲಿಲ್ಲ. ಅಧಿಕಾರ ಭುವಿ ಕೈಗೆ ಬಂದ ಮೇಲೆ ಅಮ್ಮನ ಆಸೆಯಂತೆ ಎಲ್ಲವೂ ನಡೆಯಬೇಕು ಎಂಬುದು ಮನದ ಇಂಗಿತ. ಇದನ್ನು ಹರ್ಷನಿಗೆ ಭುವಿ ಹೇಳಿದ್ಲು. ಈ ವಿಚಾರವಾಗಿ ಹರ್ಷ ಮತ್ತು ಭುವಿ ಮಧ್ಯೆ ಮನಸ್ತಾಪ ಉಂಟಾಗಿತ್ತು. ಆದ್ರೂ ಹರ್ಷ ಅಮ್ಮ ಮತ್ತು ಹೆಂಡ್ತಿ ಆಸೆಯಂತೆ ಕನ್ನಡದಲ್ಲೇ ಕಾಫಿ ಅಂಗಡಿ ತೆರೆದಿದ್ದಾನೆ. ಅಚ್ಚ ದೇಸಿ ಶೈಲಿಯ 'ಅಮ್ಮಮ್ಮನ ಕಾಫಿ ಅಂಗಡಿ' ಭವ್ಯವಾಗಿ ತಲೆ ಎತ್ತಿದೆ.

Kannadathi Serial: ಕನ್ನಡತಿ ಮುಕ್ತಾಯಕ್ಕೆ ಕ್ಷಣಗಣನೆ, ವಿಲನ್ ಸಾನಿಯಾ ಬದಲಾಗಾಯ್ತು!

ಕಾಫಿ ಶಾಪ್‌ ತೆರೆಯಲು ಹಣ ಬೇಕಿದೆ. ತನಗೆ ಹಣವೇ ಬೇಕು ಎಂದು ಸಂಬಂಧಪಟ್ಟವರು ಕೇಳಿದ್ದಾರೆ. ಅದಕ್ಕೆ ಸಾನಿಯಾ ಹಣವನ್ನು ತುಂಬಿಕೊಂಡು ಹೊರಟಿದ್ದಾಳೆ. ಸುಚಿ ಕೇಳಿದ್ರೆ, ಈ ವಿಷ್ಯ ಭುವಿಗೆ ಹೇಳ್ತೇನೆ. ನೀನು ತಲೆಕೆಡಿಸಿಕೊಳ್ಳಬೇಡ ಎಂದಿದ್ದಾಳೆ. ಸಾನಿಯಾ ನಿಜವಾಗ್ಲೂ ಬದಲಾದ್ಲಾ? ಇಲ್ಲ ಹಣ ತೆಗೆದುಕೊಂಡು ಎಸ್ಕೇಪ್ ಆಗ್ತಾಳಾ ಎಂಬ ಪ್ರಶ್ನೆ ಇದೆ. ಆದರೆ ಹಣ ಬೇಕು ಅಂದವರು ಕಾಯುತ್ತಲೇ ಇದ್ದಾರೆ.

ಇನ್ನೊಂದೆಡೆ ನನಗೆ ಹರ್ಷ ಬೇಕೇ ಬೇಕು. ತಾನು ಹರ್ಷನನ್ನೇ ಮದುವೆ ಆಗ್ತೇನೆ ಎಂದು ಹಠ ಹಿಡಿದಿದ್ದಾಳೆ ವರೂ. ಅದಕ್ಕೆ ಹರ್ಷ ವರೂಧಿನಿಗೆ ಕ್ಲಾಸ್ ತೆಗೆದುಕೊಂಡಿದ್ದಾನೆ. ನಾನು ಡಿವೋರ್ಸ್(Divorce) ಕೊಟ್ರೂ ಭುವಿಯನ್ನೇ ಪ್ರೀತಿ ಮಾಡೋವುದು. ನಾನು ನಿಮಗೆ ಯಾವತ್ತೂ ಸಿಗಲ್ಲ. ಸಿಕ್ರೆ ನನ್ನ ದೇಹ ಸಿಗಬಹುದು, ನನ್ನ ಮನಸ್ಸು ಸಿಗಲ್ಲ ಎಂದು ಹರ್ಷ ಹೇಳಿದ್ದಾನೆ. ಅದಕ್ಕೆ ವರು ಕಣ್ಣೀರಿಡುತ್ತಾ, ಬೇಸರ ಮಾಡಿಕೊಂಡಿದ್ದಾಳೆ. ಇನ್ನೊಂದೆಡೆ ಆಕೆಯನ್ನು ಇಷ್ಟಪಡುವ ಡಿವೋರ್ಸ್ ಲಾಯರ್ ಆಕೆಯ ಮುಂದೆ ತನ್ನ ಮನದಿಂಗಿತ ಹೇಳಲು ಮುಂದಾಗ್ತಿದ್ದಾನೆ. ಮದುವೆಯೇ ಆಗೋದಿಲ್ಲ ಅಂತಿದ್ದ ಆತನಿಗೆ ವರೂ ಇಷ್ಟವಾಗಿದ್ದಾಳೆ. ಆದರೆ ವರೂ ಮಾತ್ರ ಹರ್ಷನೇ ಎಂದಿಗೂ ತನ್ನ ಹೀರೋ (Hero)ಅಂತಿದ್ದಾಳೆ.

Guppedantha Manasu: ಕನ್ನಡತಿ ರೀತಿಯೇ ಈಗ ಈ ತೆಲುಗು ಸೀರಿಯಲ್‌ ಮೇಲೆ ವೀಕ್ಷಕರ ಸಿಟ್ಟು!

ಈ ವಾರ ಕೊನೆ ಹಂತದ ಎಪಿಸೋಡ್‌ಗಳು ಪ್ರಸಾರವಾಗಲಿವೆ. ಇನ್ನು ನಾಲ್ಕು ದಿನಗಳಲ್ಲಿ ಈ ಸೀರಿಯಲ್‌ ಮುಕ್ತಾಯವಾಗಲಿದೆ ಅನ್ನೋದೇ ಈ ಸೀರಿಯಲ್ ಫ್ಯಾನ್ಸ್‌ಗೆ(Fans) ಬಹಳ ಬೇಸರ ತರಿಸೋ ಸಂಗತಿ. ಮುಂದೆ ಅಂತರ್‌ ಪಟ ಅನ್ನೋ ಸೀರಿಯಲ್‌ ಈ ಸೀರಿಯಲ್‌(Serial) ನಡೆಯುತ್ತಿದ್ದ ಸಮಯದಲ್ಲಿ ಪ್ರಸಾರವಾಗಲಿದೆ. ಫೆ.೩ಕ್ಕೆ ಕೊನೆಯ ಸಂಚಿಕೆ ಪ್ರಸಾರವಾಗಲಿದೆ. ಸೀರಿಯಲ್‌ ಕೊನೆಯಲ್ಲಿ ಎಲ್ಲ ಸುಖಾಂತ್ಯವಾಗಲಿದೆ. ಅಮ್ಮಮ್ಮನ ಕನಸಿನ ಕಾಫಿ ಮನೆ ಭುವಿಯ ಲೈಫಲ್ಲೂ ಸುವಾಸನೆ ತರಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಕಿಚ್ಚ ಸುದೀಪ್‌ ಇದ್ರೂ ಕ್ಯಾರೆ ಎನ್ನಲಿಲ್ಲ. ಅಸಭ್ಯ ಎಂದು ಕಿತ್ತಾಡ್ಕೊಂಡ ರಜತ್‌, ಧ್ರುವಂತ್!
ಕಡಲು,ಸೂರ್ಯ ಹಾಗೂ ನನ್ನ ಕಿರಣಾ… ಪತಿ ಜೊತೆ ಶ್ವೇತಾ ಚೆಂಗಪ್ಪ ಸ್ಪೆಷಲ್ ಡೇಟ್