ನನ್ನ ಬಳಿ ಬರುವಾಗ ಹುಷಾರ್! ಬ್ಯಾಗಲ್ಲಿ ಪೆಪ್ಪರ್ ಸ್ಪ್ರೇ- ಚಾಕು ಇರುತ್ತೆ ಎಂದ ಕಿರುತೆರೆ ನಟಿ ಅಮೃತಾ ರಾಮಮೂರ್ತಿ

By Vaishnavi Chandrashekar  |  First Published Feb 6, 2023, 4:29 PM IST

ಪರ್ಸನಲ್‌ ಬ್ಯಾಗಲ್ಲಿ ಏನೆಲ್ಲಾ ಇದೆ ಎಂದು ರಿವೀಲ್ ಮಾಡಿದ ಕಿರುತೆರೆ ನಟಿ ಅಮೃತಾ ರಾಮಮೂರ್ತಿ. ಯೂಟ್ಯೂಬ್ ವಿಡಿಯೋಗಳು ಸಖತ್ ವೈರಲ್....
 


ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕೆಂಡಸಂಪಿಗೆ ಧಾರಾವಾಹಿಯಲ್ಲಿ ಅಮೃತಾ ರಾಮಮೂರ್ತಿ ನಟಿಸುತ್ತಿದ್ದಾರೆ. ಈಗಾಗಲೆ 10ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಮಿಂಚಿರುವ ಅಮೃತಾ ತಮ್ಮದೇ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಅಮ್ಮ ಮಾಡಿದ ಅಡುಗೆ, ಕಾಟನ್ ಸೀರೆ ಶಾಪಿಂಗ್, ಡ್ರೆಸ್‌ ಮಟೀರಿಯಲ್ ಶಾಪಿಂಗ್, ಮೇಕಪ್ ಕಲೆಕ್ಷನ್ ಹೀಗೆ ಒಂದೊಂದೇ ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಿದ್ದಾರೆ. ನೆಟ್ಟಿಗರು ಪದೇ ಪದೇ ತಮ್ಮ ಬ್ಯಾಗಲ್ಲಿ ಏನಿದೆ ತೋರಿಸಿ ಎಂದು ಡಿಮ್ಯಾಂಡ್ ಮಾಡುತ್ತಿರುತ್ತಾರೆ ಹೀಗಾಗಿ Whats in my Bag ವಿಡಿಯೋ ಅಪ್ಲೋಡ್ ಮಾಡಿದ್ದಾರೆ. 

'ನನ್ನ ಬ್ಯಾಗಲ್ಲಿ ಏನಿದೆ ಎಂದು ಎಕ್ಸ್‌ಪ್ಲೋರ್ ಮಾಡಿ ಹೇಳುತ್ತೀನಿ. ಇದು ನನ್ನ ಪರ್ಸನಲ್ ಬ್ಯಾಗ್ ಆಗಿರುವ ಕಾರಣ ಸಣ್ಣಗಿದೆ ಶೂಟಿಂಗ್ ಬ್ಯಾಗ್ ದೊಡ್ಡದಿರುತ್ತದೆ ಅದರಲ್ಲಿ ಏನಿರುತ್ತದೆ ಎಂದು ಮತ್ತೊಂದು ವಿಡಿಯೋ ಮಾಡಿ ಹೇಳುವೆ' ಎಂದು ಅಮೃತಾ ವಿಡಿಯೋ ಆರಂಭಿಸಿದ್ದಾರೆ. 

Tap to resize

Latest Videos

ಮನೆಯಲ್ಲಿ ಅಪ್ಪ ಸರಿಯಾಗಿದ್ದರೆ ಸಿನಿಮಾ ಮಾಡ್ತಿರಲಿಲ್ಲ; ಹೆಣ್ಣು ಮಕ್ಕಳಿಗೆ ಮೊದಲು ಗೌರವ ಕೊಡಿ ಎಂದ ನಟಿ ಮಾಧುರಿ

ಅಮೃತಾ ಬ್ಯಾಗ್ ಓಪನ್ ಮಾಡುತ್ತಿದ್ದಂತೆ ಎರಡು ಲಿಪ್‌ಸ್ಟಿಕ್‌ ಸಿಗುತ್ತದೆ 'ಇದೇನಪ್ಪಾ? ಮೊದಲು ಲಿಪ್‌ಸ್ಟಿಕ್‌ ಸಿಕ್ಕಿದೆ. ಹೆಣ್ಣು ಮಕ್ಕಳ ಬ್ಯಾಗ್ ಅಂದ್ರೆ ಲಿಪ್‌ಸ್ಟಿಕ್‌ ಇದೇ ಇರುತ್ತದೆ. ಪಿಂಕ್ ಶೇಡ್‌ ಲಿಪ್‌ಸ್ಟಿಕ್‌ ಇರುತ್ತದೆ. ನನ್ನ ಮಗಳ ಎರಡು ರಬರ್‌ಬ್ಯಾಂಡ್‌ಗಳು ಇರುತ್ತದೆ. ಸ್ವಲ್ಪ ದಿನಗಳಿಂದ ಜುಮುಕಿ ಇದೆ. ನನ್ನ ತುಟಿ ಬೇಗ ಡ್ರೈ ಆಗುವ ಕಾರಣ ಲಿಪ್‌ ಬಾಮ್‌ ಇರುತ್ತದೆ. ಏನೂ ಮೇಕಪ್ ಬೇಡ ಅಂದಾಗ ಕಣ್ಣು ಕಪ್ಪು ಲಿಪ್‌ಸ್ಟಿಕ್‌ ಹಾಕೊಂಡ್ರೆ ಆಯ್ತು' ಎಂದು ಅಮೃತಾ ಮಾತನಾಡಿದ್ದಾರೆ. 

'ಬ್ಯಾಗಲ್ಲಿ ಪರ್ಸನಲ್‌ ಡೈರಿ ಇರುತ್ತದೆ..ಏನೂ ಪರ್ಸನಲ್ ವಿಚಾರಗಳು ಬರೆದಿರುವುದಿಲ್ಲ ಇದರಲ್ಲಿ ಶೂಟಿಂಗ್ ಡೇಟ್‌ ಮತ್ತು todo list ಇರುತ್ತದೆ. ಇತ್ತೀಚಿಗೆ ನನಗೆ ಮರೆವು ಶುರುವಾಗಿದೆ ಅದಿಕ್ಕೆ ಬರೆಯುವೆ. ಪಿಂಕ್ ಬಣ್ಣದ ಪರ್ಸ್‌ ಇರುತ್ತದೆ, ಪರ್ಸನ್‌ನಲ್ಲಿ ನಾನು ಸದಾ ಒಂದು ಮಾತ್ರೆ ಇಡುವೆ ಮರೆತು ಹೋಗಬಾರದು ಎಂದು. ಅಪರೂಪಕ್ಕೆ ಗುರು ಬಣ್ಣ ಹಾಕುವುದು ಹಾಗಬೇಕು ಅನಿಸಿದಾಗ ಜೊತೆಗೆ ಇರಬೇಕು ಅದಿಕ್ಕೆ ಬ್ಯಾಗಲ್ಲಿ ಒಂದು ಉಗುರು ಬಣ್ಣ ಇರುತ್ತದೆ. ಒಂದು ಹ್ಯಾಂಡ್‌ವಾಷ್ ಇರುತ್ತದೆ. ಒಂದು ಹೇರ್‌ಬ್ಯಾಂಡ್‌, ಸ್ಯಾನಿಟೈಸಿಂಗ್ ವೈಪ್ಸ್‌, ವೆಟ್‌ ವೈಪ್ಸ್‌. ಪ್ರತಿಯೊಂದು ಬ್ಯಾಗಲೂ ನಾನು ಬಾಡಿ ಲೋಷನ್‌ ಇರುತ್ತದೆ. ಪುಟ್ಟ ಮಕ್ಕಳ ಮಿನರಲ್‌ ಸನ್‌ಕ್ರೀಮ್‌ನ ನಾವು ಬಳಸಬಹುದು ಅದನ್ನು ನಾನು ಬಳಸುವುದು. ಸನ್‌ಕ್ರೀಮ್‌ ಬಳಸಿಲ್ಲ ಅಂದ್ರೆ ಪಿಗ್‌ಮೆಂಟ್ ಆಗುತ್ತದೆ.' ಹೇಳಿದ್ದಾರೆ. 

ನಾನು ಪ್ರೆಗ್ನೆಂಟ್ ಅನ್ನೋದು ನನಗೆ ಗೊತ್ತಿಲ್ಲ, ಪಾಳು ಬಂಗಲೆಗೆ ಹೋಗಬೇಕು; ನಿವೇದಿತಾ ಕೊಟ್ಟ ಉತ್ತರಕ್ಕೆ ನೆಟ್ಟಿಗರು ಶಾಕ್

'ಬಾಡಿ ಮಿಸ್ಟ್‌ ಇರುತ್ತದೆ ವಿಕ್ಟೋರಿಯ ಬ್ರ್ಯಾಂಡ್ ತುಂಬಾನೇ ಇಷ್ಟ. ಪರ್ಫ್ಯೂಮ್ ಬಳಸುವ ವ್ಯಕ್ತಿ ನಾನಲ್ಲ ಆದರೆ ಕೆಲವೊಂದು ಸೆಲೆಕ್ಟ್‌ ಮಾಡುವೆ. ಗಿಡಗಳ ಬೇಸ್‌ ಆಗಿರುವ ಹೈಜಿನ್‌ ವೈಪ್ಸ್‌. ಮೈಗ್ರೇನ್ ಇರುವುದರಿಂದ ರೋಲ್‌ ಆನ್ ಬಳಸುವೆ ಆದರೂ ಕಡಿಮೆ ಆಗಿಲ್ಲ ಅಂದ್ರೆ ಮಾತ್ರೆ ತೆಗೆದುಕೊಳ್ಳುವೆ. ಉಗುರು ಶೇಪ್ ಮಾಡುವುದು. ಹಾಡು ಕೇಳುವುದಕ್ಕೆ ಬೇಕು ಅಂತ ಏರ್‌ಪಾಡ್ಸ್‌ ಮತ್ತು ಫೋನ್‌ ಇರುತ್ತದೆ. ಒಂದು ಕಣ್ಣಿನ ಮಾಸ್ಕ್‌ ಮತ್ತೊಂದು ಫೇಸ್‌ ಮಾಸ್ಕ್‌. ತಪ್ಪದೆ ಪೆಪ್ಪರ್‌ ಸ್ಪ್ರೇ ಮತ್ತು ಚಾಕು ಇರುತ್ತದೆ ನನ್ನ ಬಳಿ ಬರುವಾಗ ತುಂಬಾ ಯೋಚನೆ ಮಾಡಿ. ಹೆಣ್ಣು ಮಕ್ಕಳು ಬ್ಯಾಗಲ್ಲಿ ಸದಾ ಪೆಪ್ಪರ್ ಸ್ಪ್ರೇ ಮತ್ತು ಚಾಕು ಇರಬೇಕು ...ಸೆಲ್ಫ್‌ ಡಿಫೆನ್ಸ್‌ಗೆ ಬೇಕಾಗುತ್ತದೆ ಬಳಸದಿದ್ದರೂ ಬ್ಯಾಗಲ್ಲಿ ಇರಬೇಕು' ಎಂದು ಪೂರ್ತಿ ಬ್ಯಾಗ್ ಕಾಲಿಯಾಗಿರುವುದನ್ನು ತೋರಿಸಿದ್ದಾರೆ.

click me!